Get Updates
Get notified of breaking news, exclusive insights, and must-see stories!

One Day Trip: ಬೆಂಗಳೂರಿನಿಂದ ಚಿಕ್ಕಬಳ್ಳಾಪುರದ ಕಡೆಗೆ ಯಾವೆಲ್ಲಾ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು..

ಶನಿವಾರ ಮತ್ತು ಭಾನುವಾರ ಬರುತ್ತೆ ಅಂದ್ರೆ ಸಾಕು ಯಾವುದಾದರು ಸ್ಥಳಗಳಿಗೆ ಭೇಟಿ ನೀಡಲು ಮನಸ್ಸಾಗುತ್ತದೆ. ಈ ಬ್ಯುಸಿ ಲೈಫ್‌ನಲ್ಲಿ ಉದ್ಯಾನ ನಗರಿ ಬೆಂಗಳೂರಿನಿಂದ ಕೊಂಚವಾದರೂ ದೂರ ಹೋಗಿ ಬರಬೇಕು ಅಂತ ಅನ್ನಿಸೋದರಲ್ಲಿ ಅನುಮಾನವೇ ಇಲ್ಲ. ಒಂದು ದಿನವಾದರೂ ನಮಗೆ ಹತ್ತಿರದಲ್ಲಿರುವ ಸ್ಥಳಗಳಿಗೆ ಭೇಟಿ ನೀಡಲು ಮನಸ್ಸು ಹಾತೊರಿಯುತ್ತದೆ. ಕೆಲಸದ ಒತ್ತಡದಿಂದ ಕೊಂಚ ರಿಲ್ಯಾಕ್ಸ್ ಆಗಲು ನೀವಂದುಕೊಂಡಿದ್ದರೆ ಬೆಂಗಳೂರಿಗೆ ನೂರು ಕಿಲೋ ಮೀಟರ್ ಹತ್ತಿರವಿರುವ ಸ್ಥಳಗಳಿಗೆ ಭೇಟಿ ನೀಡಬಹುದು. ಅಂತಹ ಸ್ಥಳಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ.

ದಿನದ ಒಂದು ಭಾಗ ಬಿಸಿಲು ಮತ್ತೊಂದು ಭಾಗ ಮಳೆ ಮತ್ತು ಚಳಿ. ಈ ಬೆಂಗಳೂರಿನ ವಾತಾವರಣ ಯಾವಾಗ ಹೇಗೆ ಬದಲಾಗುತ್ತದೆ ಎಂದು ಹೇಳಲು ಆಗುವುದೇ ಇಲ್ಲ. ಸುರಿದರೆ ಜೋರು ಮಳೆ, ಇದ್ದರೆ ಹೆಚ್ಚು ಬಿಸಿಲು ಇರುತ್ತದೆ. ಈಗಷ್ಟೇ ಮುಂಗಾರು ಆಗಮನವಾಗಿರುವುದರಿಂದ ನೀವುಗಳು ಒನ್ ಡೇ ಟ್ರಪ್‌ಗಾಗಿ ಟ್ರಕ್ಕಿಂಗ್ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಆರೋಗ್ಯಕ್ಕೆ ಪೂರಕವಾದ ಹಾಗೂ ಹೊಸ ಅನುಭವವನ್ನು ನೀಡುತ್ತದೆ. ಮುಂಗಾರು ಮಳೆ ಆರಂಭವಾಗಿರುವ ಈ ಸಮಯದಲ್ಲಿ ಮನಸ್ಸಿಗೆ ಮುದ ನೀಡುವ ಸ್ಥಳಗಳಿಗೆ ಭೇಟಿ ನೀಡಬಹುದು. ಅಂತಹ ಪ್ರವಾಸಿ ತಾಣಗಳಲ್ಲಿ ಸ್ಕಂದಗಿರಿ ಕೂಡ ಒಂದು.

One Day Trip: Which tourist spots can be visited from Bengaluru towards Chikkaballapur?

ಸ್ಕಂದಗಿರಿ

ಬೆಂಗಳೂರಿನಿಂದ ಕೇವಲ 70ಕಿ.ಮೀ. ದೂರದಲ್ಲಿರುವ ಸ್ಕಂದಗಿರಿ ಪರ್ವತ ಕೋಟೆಯಾಗಿದೆ. ಇದು ಚಾರಣಕ್ಕೆ ಅತ್ಯಾದ್ಬುತ ಸ್ಥಳವಾಗಿದೆ. ಅರಣ್ಯದ ಮಧ್ಯೆ ನಡೆಯುವ ಈ ಚಾರಣ ಥ್ರಿಲ್ ಆಗಿರುತ್ತದೆ. ಅನ್ವೇಷಕರಿಗೆ ಇಷ್ಟವಾಗುವಂತ ಸ್ಥಳವಾಗಿದೆ. ಬೆಳಗಿನ ಜಾವ ಇಲ್ಲಿ ಸೂರ್ಯಸ್ತವನ್ನು ನೋಡಬಹುದು. ಜೊತೆಗೆ ಇಲ್ಲಿ ಮೋಡಗಳ ಮೇಲೆ ನಡೆದ ಅನುಭವವಾಗುತ್ತದೆ. ಇದಲ್ಲದೆ ಇಲ್ಲಿ ಪಾಪಗ್ನಿ ಮಠವನ್ನು ನೋಡಬಹುದು. ಇದು ಬೆಟ್ಟದ ಬುಡದಲ್ಲಿ ನೆಲೆಸಿದೆ.

ಸ್ಕಂದಗಿರಿಯಲ್ಲಿ ಪ್ರಶಾಂತ ಹಾಗೂ ಭವ್ಯವಾದ ವಾತಾವರಣವಿರುತ್ತದೆ. ಬ್ರಿಟಿಷರ ಕಾಲದಲ್ಲಿ ಕಟ್ಟಿದ ಕೋಟೆ ಸದ್ಯ ಪಾಳು ಬಿದ್ದ ಅವಶೇಷಗಳು ಇಲ್ಲಿ ಕಾಣಲು ಸಿಗುತ್ತದೆ. ಬೆಟ್ಟದ ಮೇಲೆ ಈ ಭವ್ಯವಾದ ನೋಟವನ್ನು ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಬೆಂಗಳೂರಿನಿಂದ ಸ್ಕಂದಗಿರಿಗೆ ಹೋಗಲು ರಸ್ತೆ ಮಾರ್ಗವನ್ನು ಅವಲಂಬಿಸಬೇಕಾಗುತ್ತದೆ. ಇಲ್ಲವಾದಲ್ಲಿ ನಿಮ್ಮ ಸ್ವಂತ ವಾಹನವಿದ್ದರೂ ಈ ಸ್ಥಳಕ್ಕೆ ಹೋಗಬಹುದು.

One Day Trip: Which tourist spots can be visited from Bengaluru towards Chikkaballapur?

ಆವಳ ಬೆಟ್ಟ

ಸಾಮಾನ್ಯವಾಗಿ ಅವಲ ಬೆಟ್ಟದ ಬಗ್ಗೆ ಕೇಳದೇ ಇರಬಹುದು. ಯಾಕೆಂದರೆ ಈ ಸ್ಥಳದ ಬಗ್ಗೆ ಅಷ್ಟಾಗಿ ಯಾರಿಗೂ ಮಾಹಿತಿ ಇಲ್ಲ. ಇದು ಬೆಂಗಳೂರಿನಿಂದ 110ಕಿ.ಮೀ ದೂರದಲ್ಲಿದೆ. ಇದು ಮನೋಹರವಾದ ದೃಶ್ಯಗಳನ್ನು ಹೊಂದಿದೆ. ಇದು ಅತ್ಯಂತ ಸುಂದರವಾದ ಬೆಟ್ಟಗಳಲ್ಲಿ ಒಂದಾಗಿದೆ. ಮುಂಗಾರು ಅಂದರೆ ಪ್ರವಾಸಿಗರಿಗೆ ಮಂತ್ರಮುಗ್ಧರನ್ನಾಗಿಸುವ ಕಾಲ. ಇದು ಸದ್ಯ ಆರಂಭವಾಗಿದೆ. ಬೆಂಗಳೂರಿನಿಂದ ಅವಳ ಬೆಟ್ಟಕ್ಕೆ ಹೋಗುವವರೆಗೂ ನೀವು ಅನೇಕ ಬೆಟ್ಟಗಳನ್ನು ದರ್ಶಿಸುತ್ತಾ ಸಾಗಬಹುದು.

ಆವಳ ಬೆಟ್ಟ ಸುಂದರ ಪ್ರವಾಸಿ ತಾಣವಾಗಿರದೆ ಒಂದು ಪುಣ್ಯ ಕ್ಷೇತ್ರವಿರುವ ತಾಣ ಕೂಡ ಹೌದು. ಇದನ್ನು ಧೆನುಗಿರಿ ಲಕ್ಷ್ಮೀ ನರಸಿಂಹ ಕ್ಷೇತ್ರ ಎಂದು ಕೂಡ ಕರೆಯುತ್ತಾರೆ. ಈ ಬೆಟ್ಟಕ್ಕೆ ಹೋಗಲು ಮೆಟ್ಟಿಗಲು ಸೌಲಭ್ಯ ಕೂಡ ಇದೆ. ಬೆಟ್ಟದಲ್ಲಿ ಪವಿತ್ರ ದೇವಾಲಯವಿದ್ದು, ಬೆಟ್ಟದ ಮೇಲಿನಿಂದ ವಿಶಾಲವಾದ ಪ್ರದೇಶವನ್ನು ವೀಕ್ಷಿಸಬಹುದು. ಮತ್ತೊಂದು ವಿಚಾರ ಅಂದರೆ ಇದು ಕೊಳವನ್ನು ಹೊಂದಿದೆ. ಪ್ರಾಕೃತಿಕ ಸೊಬಗನ್ನು ಈ ಬೆಟ್ಟ ಹೊಂದಿದ್ದು ಇಲ್ಲಿ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯವಿದೆ. ಬೆಟ್ಟದ ಶಿಖರದ ದೊಡ್ಡದಾದ ಕಲ್ಲು ಆವಳ ಬೆಟ್ಟದ ಆಕರ್ಷಣೆಗಳಲ್ಲಿ ಒಂದು. ಟ್ರೆಕ್ಕಿಂಗ್ ಹೋಗಲು ಇದು ಅತ್ಯಂತ ಸುಲಭ ಹಾಗೂ ಸುಂದರ ತಾಣ ಎನ್ನಬಹುದು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿರುವ ಆವಳ ಬೆಟ್ಟವು ಪೆರೆಸಂದ್ರ ಎಂಬ ಗ್ರಾಮದ ಬಳಿ ಇದೆ. ಇಲ್ಲಿಗೆ ತಲುಪಲು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಏಳನ್ನು ಬಳಸಬಹುದು. ಇಲ್ಲಿಂದ ಹದಿನೈದು ಕಿ.ಲೋ ಮೀಟರ್ ಸಾಗಿ ಎಡ ತಿರುವು ಪಡೆದು ಸಾಗಬೇಕು. ಮಂಡಿಕಲ್ ಎಂಬ ಹಳ್ಳಿ ತಲುಪಿ ಅಲ್ಲಿಂದ ಅವಲಬೆಟ್ಟಕ್ಕೆ ಹೋಗಬಹುದು. ಮಂಡಿಕಲ್ ಗ್ರಾಮಕ್ಕೆ ಬಸ್‌ ವ್ಯವಸ್ಥೆ ಇದೆ.

One Day Trip: Which tourist spots can be visited from Bengaluru towards Chikkaballapur?

ಗುಡಿಬಂಡೆ ಚಾರಣ

ಗುಡಿಬಂಡೆ ಬೆಂಗಳೂರಿಗೆ ಹತ್ತಿರದಲ್ಲಿರುವ ಒಂದು ಸುಂದರ ತಾಣವಾಗಿದೆ. ಇದು ಕಲ್ಲಿನ ಕೋಟೆ, ಅದ್ಭುತ ನೋಟಗಳು ಮತ್ತು ಇತಿಹಾಸಕ್ಕೆ ಹೆಸರುವಾಸಿಯಾಗಿದೆ. ಗುಡಿಬಂಡೆ 17 ನೇ ಶತಮಾನದ ಕೋಟೆಯಾಗಿದೆ. ಗುಡಿಬಂಡೆಯ ತುದಿ ತಲುಪುವುದು ಅಷ್ಟೇನೂ ಕಷ್ಟವಲ್ಲದ್ದರಿಂದ ಕುಟುಂಬದ ಪ್ರತಿಯೊಬ್ಬರೂ ಇಲ್ಲಿಗೆ ಭೇಟಿ ನೀಡಬಹುದು. ಇಲ್ಲಿ ಚೋಳ ರಾಜರ ಅವಧಿಯಲ್ಲಿ ಲಕ್ಷ್ಮಿ ವೆಂಕಟ ರಾಮಸ್ವಾಮಿ ದೇವಾಲಯವನ್ನು ನಿರ್ಮಿಸಲಾಗಿದೆ. ಜೊತೆಗೆ ರಾಜರ ಕಾಲದಲ್ಲಿ ತಪ್ಪಿಸಿಕೊಳ್ಳುವ ಉದ್ದೇಶಕ್ಕಾಗಿ ಮಾಡಿದ ಗುಪ್ತ ಮಾರ್ಗಗಳ ಸಂಕೀರ್ಣ ಜಾಲವನ್ನು ನೋಡಬಹುದಾಗಿದೆ.

17 ನೇ ಶತಮಾನದಲ್ಲಿ ಮಳೆ ನೀರನ್ನು ಕೊಯ್ಲು ತಂತ್ರಜ್ಞಾನ ಅಳವಡಿಸಿಕೊಂಡಿದ್ದ ಕೋಟೆಯಲ್ಲಿ 19 ಕಲ್ಲು ಕೊಳಗಳು ಒಂದಕ್ಕೊಂದು ಸಂಪರ್ಕ ಹೊಂದಿ ಒಟ್ಟಿಗೆ ಮೂರು ಲಕ್ಷ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿವೆ. ಗುಡಿಬಂಡೆ ಬಳಿ ಯಾವುದೇ ಅಂಗಡಿಗಳು ಅಥವಾ ಸೌಲಭ್ಯಗಳು ಲಭ್ಯವಿಲ್ಲ. ನೀರಿನಂತಹ ಅಗತ್ಯ ವಸ್ತುಗಳನ್ನು ಜೊತೆಗೆ ಒಯ್ಯುವುದು ಉತ್ತಮ. ಗುಡಿಬಂಡೆ ಮತ್ತು ಹತ್ತಿರದ ಆಕರ್ಷಣೆಗಳು ಬೆಂಗಳೂರಿನಿಂದ ವಾರಾಂತ್ಯದ ಪ್ರವಾಸಕ್ಕೆ ಸೂಕ್ತವಾಗಿವೆ.

ಹತ್ತಿರ: ಭೋಗನಂದೀಶ್ವರ ದೇವಸ್ಥಾನ (45 ಕಿ.ಮೀ), ಅವಲಬೆಟ್ಟ (20 ಕಿ.ಮೀ), ದಂಡಿಗನಹಳ್ಳಿ ಅಣೆಕಟ್ಟು (40 ಕಿ.ಮೀ), ಘಾಟಿ ಸುಬ್ರಮಣ್ಯ ದೇವಸ್ಥಾನ (55 ಕಿ.ಮೀ), ಮುದ್ದೇನಹಳ್ಳಿ (40 ಕಿ.ಮೀ) ಮತ್ತು ನಂದಿ ಬೆಟ್ಟಗಳು (62 ಕಿ.ಮೀ) ಗುಡಿಬಂಡೆ ಜೊತೆಗೆ ಭೇಟಿ ನೀಡಬಹುದಾದ ಹತ್ತಿರದ ಪ್ರವಾಸಿ ತಾಣಗಳಾಗಿವೆ.

ಗುಡಿಬಂಡೆಯನ್ನು ತಲುಪುವುದು ಹೇಗೆ? ಗುಡಿಬಂಡೆ ಬೆಂಗಳೂರಿನಿಂದ 92 ಕಿ.ಮೀ ಮತ್ತು ಬೆಂಗಳೂರು ವಿಮಾನ ನಿಲ್ದಾಣದಿಂದ 70 ಕಿ.ಮೀ ದೂರದಲ್ಲಿದೆ. ಗೌರಿಬಿದನೂರು ಹತ್ತಿರದ ನಗರ ಮತ್ತು ರೈಲ್ವೆ ನಿಲ್ದಾಣವಾಗಿದೆ (ಗುಡಿಬಂಡೆಯಿಂದ 30 ಕಿ.ಮೀ) ಅಲ್ಲಿಂದ ಗುಡಿಬಂಡೆ ತಲುಪಲು ಟ್ಯಾಕ್ಸಿ ಬಾಡಿಗೆಗೆ ಪಡೆಯಬಹುದು.

One Day Trip: Which tourist spots can be visited from Bengaluru towards Chikkaballapur?

ಆದಿ ಯೋಗಿ ಶಿವನ ಮೂರ್ತಿ- ಚಿಕ್ಕಬಳ್ಳಾಪುರ

ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಶಿವನ ಪ್ರತಿಮೆಯನ್ನು ಚಿಕ್ಕಬಳ್ಳಾಪುರದ ಕೌರನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳ ಜಾಲಾರಿ ನರಸಿಂಹ ಸ್ವಾಮಿ ದೇವಾಲಯದ ನರಸಿಂಗದೇವರ ಬೆಟ್ಟದ ತಪ್ಪಲಿನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಶೀರ್ಘದಲ್ಲೇ ಇದು ಲೋಕಾಪರ್ಣೆಯಾಗಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+