ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

NWKRTC Karavali tour package; ಸಮಯ, ದರದ ಮಾಹಿತಿ

|
Google Oneindia Kannada News

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ವಾಕರಸಾಸಂ) ಕರಾವಳಿ ಪ್ರವಾಸಿ ತಾಣಗಳ ವೀಕ್ಷಣೆಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಇದು ವಾರಾಂತ್ಯದ ಪ್ಯಾಕೇಜ್ ಆಗಿದ್ದು, ಪ್ರತಿ ಶನಿವಾರ ಮತ್ತು ಭಾನುವಾರ ಸಂಚಾರ ನಡೆಸಬಹುದಾಗಿದೆ.

ಕರಾವಳಿ ಪ್ರವಾಸಿ ತಾಣಗಳ ವೀಕ್ಷಣೆಗೆ ಸಹಕಾರಿಯಾಗಲು ಈ ವಿಶೇಷ ಟೂರ್ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಇದರಲ್ಲಿ ವಯಸ್ಕರಿಗೆ ಪ್ರಯಾಣ ದರ 300 ರೂ. ಮತ್ತು ಮಕ್ಕಳಿಗೆ (12 ವರ್ಷದೊಳಗೆ) 250 ರೂ. ದರ ನಿಗದಿ ಮಾಡಲಾಗಿದೆ.

NWKRTC; ತಿರುಪತಿ, ಧರ್ಮಸ್ಥಳಕ್ಕೆ ವೇಗದೂತ ಬಸ್‌, ಸಮಯ ತಿಳಿಯಿರಿ NWKRTC; ತಿರುಪತಿ, ಧರ್ಮಸ್ಥಳಕ್ಕೆ ವೇಗದೂತ ಬಸ್‌, ಸಮಯ ತಿಳಿಯಿರಿ

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉತ್ತರ ಕನ್ನಡ ವಿಭಾಗ ಈ ಪ್ಯಾಕೇಜ್ ಘೋಷಣೆ ಮಾಡಿದೆ. ಕುಮಟಾದಿಂದ ಆರಂಭವಾಗುವ ಪ್ಯಾಕೇಜ್ ಗೋಕರ್ಣದಲ್ಲಿ ಅಂತ್ಯವಾಗಲಿದೆ.

Breaking; ವಿಶೇಷ ಬಸ್ ಪಾಸ್ ಘೋಷಣೆ ಮಾಡಿದ NWKRTC Breaking; ವಿಶೇಷ ಬಸ್ ಪಾಸ್ ಘೋಷಣೆ ಮಾಡಿದ NWKRTC

 NWKRTC Saturday And Sunday Karavali Tour Package Fare And Destination

ಕುಮಟಾ, ಗೋಕರ್ಣ, ಅಪ್ಸರಕೊಂಡ, ಮಿರ್ಜಾನ ಕೋಟೆ, ಇಡಗುಂಜಿ, ಮುರುಡೇಶ್ವರ, ಇಕೋ ಬೀಚ್ ಹೊನ್ನಾವರ, ಗೋಕರ್ಣ ಮುಂತಾದ ಪ್ರದೇಶಗಳು ಈ ಪ್ಯಾಕೇಜ್‌ನಲ್ಲಿ ಸೇರಿವೆ.

NWKRTC ಕರಾವಳಿ ಟೂರ್ ಪ್ಯಾಕೇಜ್; ದರ, ಮಾರ್ಗ NWKRTC ಕರಾವಳಿ ಟೂರ್ ಪ್ಯಾಕೇಜ್; ದರ, ಮಾರ್ಗ

ಸಮಯ ಮತ್ತು ಸ್ಥಳ; ಪ್ರತಿ ಶನಿವಾರ ಮತ್ತು ಭಾನುವಾರದ ಈ ಪ್ಯಾಕೇಜ್ ಇರಲಿದೆ. ಪ್ರಾರಂಭ ಸ್ಥಳ ಕುಮಟಾದಿಂದ ಬಸ್ 7.30ಕ್ಕೆ ಹೊರಡಲಿದೆ. ಗೋಕರ್ಣದ ಮಹಾಬಲೇಶ್ವರ ದೇವಾಲಯಕ್ಕೆ, ಶ್ರೀ ಗಣಪತಿ ದೇವಾಲಯಕ್ಕೆ 8.15ಕ್ಕೆ ಬಸ್ ತಲುಪಲಿದೆ. ಅಲ್ಲಿಂದ 9.45ಕ್ಕೆ ಮಿರ್ಜಾನ ಕೋಟೆಗೆ ಸಾಗಲಿದೆ.

11.15ಕ್ಕೆ ಬಸ್ ಅಪ್ಸರಕೊಂಡ ತಲುಪಲಿದೆ. 12.30ಕ್ಕೆ ಇಡಗುಂಜಿ ಮಹಾಗಣಪತಿ ದೇವಾಲಯಕ್ಕೆ ಸಾಗಲಿದೆ. ಅಲ್ಲಿಂದ 14:00 ಮುರಡೇಶ್ವರ ದೇವಾಲಯ ಮತ್ತು ಬೀಚ್‌ಗೆ ತಲುಪಲಿದೆ. ಅಲ್ಲಿಂದ ಇಕೋ ಬೀಚ್ ಮತ್ತು ಶರಾವತಿ ಕಾಂಡ್ಲಾ ಮ್ಯಾಂಗ್ರೋವ ಬೋರ್ಡ ವಾಕ್ ಹೊನ್ನಾವರಕ್ಕೆ 16:00 ಗಂಟೆಗೆ ತಲುಪಲಿದೆ. ಈ ಬಸ್ ಗೋಕರ್ಣಕ್ಕೆ 19:00 ಗಂಟೆಗೆ ಸಾಗಲಿದೆ.

ಈ ಪ್ರವಾಸಿ ಪ್ಯಾಕೇಜ್ ಮೂಲಕ ಸಂಚಾರ ನಡೆಸಲು ಆನ್‌ಲೈನ್ ಮೂಲಕ ಟಿಕೆಟ್ ಬುಕ್ ಮಾಡಬಹುದಾಗಿದೆ. ಇದಕ್ಕಾಗಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್‌ಗೆ ಭೇಟಿ ನೀಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಕರೆ ಮಾಡಲು ದೂರವಾಣಿ ಸಂಖ್ಯೆಗಳು 7760991726/ 9482629870/ 9353131842.

ವೇಗದೂತ ಬಸ್ ಸಂಚಾರ; ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗ ಧಾರ್ಮಿಕ ಸ್ಥಳಗಳಿಗೆ ತೆರಳುವ ಭಕ್ತರ ಅನುಕೂಲಕ್ಕಾಗಿ ವೇಗದೂತ ಬಸ್‌ಗಳನ್ನು ಓಡಿಸಲಿದೆ.
ಹಾವೇರಿ ಜಿಲ್ಲೆಯಿಂದ ಧಾರ್ಮಿಕ/ ಪ್ರೇಕ್ಷಣೀಯ ಸ್ಥಳಗಳಿಗೆ ಸಂಚಾರ ನಡೆಸುವ ಬಸ್‌ಗಳ ವಿವರಗಳನ್ನು ನಿಗಮ ನೀಡಿದೆ.

ಈ ಬಸ್‌ಗಳು ಹಾವೇರಿ, ಹಾನಗಲ್, ಹಿರೇಕೆರೂರು, ಸವಣೂರು, ಬ್ಯಾಡಗಿ ಹೀಗೆ ಜಿಲ್ಲೆಯ ವಿವಿಧ ಸ್ಥಳಗಳಿಂದ ಸಂಚಾರ ನಡೆಸಲಿವೆ. ಧರ್ಮಸ್ಥಳ, ತಿರುಪತಿ, ಮೈಸೂರು, ಬಾದಾಮಿ, ವಿಶಾಲಗಡ ಸೇರಿದಂತೆ ವಿವಿಧ ಸ್ಥಳಗಳಿಗೆ ಬಸ್ ಸಂಚಾರ ನಡೆಸಲಿವೆ.

English summary
North Western Karnataka Road Transport Corporation (NWKRTC) announced special t𝗼𝘂𝗿 p𝗮𝗰𝗸𝗮𝗴𝗲 for Karavali sightseeing on Saturday and Sunday. Here are the fare and destinations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X