Nipah Virus: ಕೇರಳದಲ್ಲಿ ನಿಫಾ ವೈರಸ್ ಆತಂಕ; ಕರ್ನಾಟಕ ಆರೋಗ್ಯ ಇಲಾಖೆಯಿಂದ ಮಹತ್ವದ ಸುತ್ತೋಲೆ
ಬೆಂಗಳೂರು, ಜುಲೈ. 26: ಕೇರಳದಲ್ಲಿ ನಿಫಾ ವೈರಸ್ ಪ್ರಕರಣ ಆತಂಕ ಹೆಚ್ಚು ಮಾಡಿದೆ. ಜುಲೈ 21 ರಂದು ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ವರದಿಯಾದ ನಿಫಾ ಸೋಂಕಿತನ ಸಾವಿನ ನಂತರ, ಕರ್ನಾಟಕದ ಆರೋಗ್ಯ ಇಲಾಖೆಯು ಮುನ್ನೆಚ್ಚರಿಕೆಯಾಗಿ ಸುತ್ತೋಲೆ ಹೊರಡಿಸಿದೆ.
ನೆರೆ ರಾಜ್ಯದಲ್ಲಿಯೇ ನಿಫಾ ವೈರಸ್ ಪ್ರಕರಣ ಪತ್ತೆಯಾಗಿರುವ ಕಾರಣ ಕೇರಳಕ್ಕೆ ತೆರಳುವ ಪ್ರವಾಸಿಗರಿಗೆ ಪ್ರವಾಸದ ಸಲಹೆಯನ್ನು ನೀಡಿದೆ. ಕೇರಳದ ಪೀಡಿತ ಪ್ರದೇಶಗಳಿಗೆ ಅನಿವಾರ್ಯವಲ್ಲದ ಹೊರತು ಜನರು ಪ್ರಯಾಣಿಸುವುದನ್ನು ತಪ್ಪಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

ನಿಫಾ ವೈರಸ್ ಏಕಾಏಕಿ ವರದಿಯಾದಾಗಲೆಲ್ಲಾ ಕೇರಳದಿಂದ ಗಡಿಯಾಚೆಗಿನ ಸೋಂಕು ಹರಡುವಿಕೆಯನ್ನು ಪರಿಶೀಲಿಸಲು ಕರ್ನಾಟಕವು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮಲಪ್ಪುರಂನಲ್ಲಿ ಈ ಸೋಂಕಿನಿಂದ ಸಾವನ್ನಪ್ಪಿದ 14 ವರ್ಷದ ಬಾಲಕನ ಸಂಬಂಧಿಕರಿಗೆ ನಡೆಸಿದ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದ್ದು ಭಯಪಡುವ ಅಗತ್ಯವಿಲ್ಲ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.
ನಿಫಾ ವೈರಸ್ ಜೊತೆಗೆ ಮೃತ ಬಾಲಕನಲ್ಲಿ ತೀವ್ರವಾದ ಎನ್ಸೆಫಾಲಿಟಿಸ್ ಸಿಂಡ್ರೋಮ್ ಲಕ್ಷಣಗಳು ಕಂಡು ಬಂದಿದ್ದವು. ಈ ಸೋಂಕು ಮನುಷ್ಯರಿಂದ ಮನುಷ್ಯನಿಗೆ ಹರಡುವ ಸಾಧ್ಯತೆಯು ತುಂಬಾ ಕಡಿಮೆಯಾಗಿದೆ. ಈ ಕ್ಷಣದಲ್ಲಿ ಭಯಪಡುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮವಾಗಿ, ಕೇರಳದ ಪೀಡಿತ ಪ್ರದೇಶಗಳಿಗೆ (ಮಲ್ಲಪುರಂ ಜಿಲ್ಲೆ) ನಿಫಾ ವೈರಸ್ ಸೋಂಕಿನಿಂದ ಸುರಕ್ಷಿತವೆಂದು ಘೋಷಿಸುವವರೆಗೂ ಪ್ರಯಾಣವನ್ನು ತಪ್ಪಿಸಬಹುದು" ಎಂದು ಆರೋಗ್ಯ ಇಲಾಖೆ ತಿಳಿಸಿದೆ.
"ಈ ಹಿಂದೆ ಕೇರಳದಲ್ಲಿ ನಿಪಾಹ್ ಏಕಾಏಕಿ ವರದಿಯಾಗಿದ್ದರೂ, 2023 ರಲ್ಲಿ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಸಂಭವಿಸಿದ ಇತ್ತೀಚಿನ ಒಂದು ಪ್ರಕರಣವಿದೆ. ಆದರೆ, ಇಲ್ಲಿಯವರೆಗೆ ಕರ್ನಾಟಕದಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಗಮನಿಸಬೇಕಾದ ಅಂಶವಾಗಿದೆ" ಎಂದು ಹೇಳಿಕೆಯಲ್ಲಿ ಸೇರಿಸಲಾಗಿದೆ.

ನೆಮ್ಮದಿ ತಂದ 16 ಜನರ ನೆಗೆಟಿವ್ ವರದಿ
ಮಲಪ್ಪುರಂನಲ್ಲಿ ನಿಫಾ ವೈರಸ್‌ಗೆ ಬಲಿಯಾದ ಬಾಲಕನ ಸಂಪರ್ಕಕ್ಕೆ ಬಂದ 16 ಜನರ ಪರೀಕ್ಷಾ ಫಲಿತಾಂಶಗಳು ನೆಗೆಟಿವ್ ಬಂದಿದೆ ಎಂದು ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ನಿಫಾ ವೈರಸ್ ಎಂದು ಪರೀಕ್ಷಿಸಲಾದ 58 ಮಾದರಿಗಳಲ್ಲಿ 16 ನೆಗೆಟಿವ್ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.
ಆನ್‌ಲೈನ್ ಮೂಲಕ ಮಲಪ್ಪುರಂ ಕಲೆಕ್ಟರ್ ಕಾನ್ಫರೆನ್ಸ್ ಹಾಲ್‌ನಲ್ಲಿ ನಡೆದ ನಿಫಾ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ನಂತರ "ಇವರೆಲ್ಲರೂ ಕಡಿಮೆ ಅಪಾಯದ ವರ್ಗಕ್ಕೆ ಸೇರಿದವರು" ಎಂದು ಆರೋಗ್ಯ ಸಚಿವರು ಘೋಷಿಸಿದ್ದಾರೆ. ಆದರೆ, ಬಾಲಕನ ಸಂಪರ್ಕ ಪಟ್ಟಿಯಲ್ಲಿ 472 ಜನರಿದ್ದಾರೆ. 21 ಮಂದಿ ಮಂಜೇರಿ ಮತ್ತು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ ಎಂದು ಸಚಿವರು ಸೂಚಿಸಿದರು.
ಆಸ್ಪತ್ರೆಗಳಲ್ಲಿ ದಾಖಲಾಗಿರುವವರಲ್ಲಿ 17 ಮಂದಿ ಸಂಪರ್ಕ ಪಟ್ಟಿಯಲ್ಲಿರುವವರು. ಮಂಜೇರಿ ಮತ್ತು ಕೋಯಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ದಾಖಲಾದ ಒಟ್ಟು ರೋಗಿಗಳ ಸಂಖ್ಯೆ 21 ಕ್ಕೆ ತಲುಪಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.












Click it and Unblock the Notifications