ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Mumbai-Surathkal train; ವಿಶೇಷ ರೈಲು ವೇಳಾಪಟ್ಟಿ, ನಿಲ್ದಾಣಗಳು

ಜನರ ಬಹಳ ದಿನಗಳ ಬೇಡಿಕೆಗೆ ಕೇಂದ್ರಿಯ ರೈಲ್ವೆ ಒಪ್ಪಿಗೆ ನೀಡಿದೆ. ಮುಂಬೈ ಮತ್ತು ಸುರತ್ಕಲ್ ನಡುವೆ ವಿಶೇಷ ಸಾಪ್ತಾಹಿಕ ರೈಲು ಸಂಚಾರ ಫೆಬ್ರವರಿ 3ರಿಂದ ಆರಂಭವಾಗಲಿದೆ.

|
Google Oneindia Kannada News

ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಕೊಂಕಣ ರೈಲ್ವೆ ಸ್ಪಂದಿಸಿದೆ. ಕೇಂದ್ರಿಯ ರೈಲ್ವೆ ವಲಯದ ಜೊತೆ ಸೇರಿ ಮುಂಬೈ-ಸುರತ್ಕಲ್ ನಡುವೆ ವಿಶೇಷ ಸಾಪ್ತಾಹಿಕ ರೈಲನ್ನು ಓಡಿಸಲಿದೆ. ಫೆಬ್ರವರಿ 3ರಿಂದ ಈ ರೈಲು ಸೇವೆ ಆರಂಭವಾಗಲಿದೆ.

ಮುಂಬೈನ ಲೋಕಮಾನ್ಯ ತಿಲಕ್ ಹಾಗೂ ಸುರತ್ಕಲ್ ನಡುವೆ ಈ ರೈಲು ಸಂಚಾರ ನಡೆಸಲಿದೆ. ಈ ಮಾರ್ಗದಲ್ಲಿ ರೈಲು ಸಂಖ್ಯೆ 02453 ಮತ್ತು 01454 ರೈಲುಗಳು ಸಂಚಾರ ನಡೆಸಲಿವೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.

Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ? Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ?

ರೈಲು ನಂಬರ್ 02453 ಲೋಕಮಾನ್ಯ ತಿಲಕ್-ಸುರತ್ಕಲ್ ರೈಲು ಫೆಬ್ರವರಿ 3 ರಿಂದ ಮಾರ್ಚ್ 31ರ ತನಕ ಪ್ರತಿ ಶುಕ್ರವಾರ ರಾತ್ರಿ 10.15ಕ್ಕೆ ಮುಂಬೈನಿಂದ ಹೊರಡಲಿದೆ. ಮರುದಿನ ಮಧ್ಯಾಹ್ನ 3.30ಕ್ಕೆ ಸುರತ್ಕಲ್ ತಲುಪಲಿದೆ.

ಮೈಸೂರು-ಗೋವಾ ನಡುವೆ ಎಕ್ಸ್‌ಪ್ರೆಸ್ ರೈಲು ಆರಂಭಿಸಲು ಬೇಡಿಕೆ ಮೈಸೂರು-ಗೋವಾ ನಡುವೆ ಎಕ್ಸ್‌ಪ್ರೆಸ್ ರೈಲು ಆರಂಭಿಸಲು ಬೇಡಿಕೆ

Mumbai Surathkal Train From February 3rd Schedule

ರೈಲು ನಂಬರ್ 01454 ಸುರತ್ಕಲ್-ಮುಂಬೈ ರೈಲು ಫೆಬ್ರವರಿ 4 ರಿಂದ ಏಪ್ರಿಲ್ 1ರ ತನಕ ಸಂಚಾರ ನಡೆಸಲಿದೆ. ರೈಲು ಶನಿವಾರ ಸಂಜೆ 7.40ಕ್ಕೆ ಸುರತ್ಕಲ್‌ನಿಂದ ಹೊರಟು, ಮರುದಿನ ಮಧ್ಯಾಹ್ನ 2.25ಕ್ಕೆ ಮುಂಬೈ ತಲುಪಲಿದೆ ಎಂದು ಪ್ರಕಟಣೆ ತಿಳಿಸಿದೆ.

ಮಂಗಳೂರು-ವಿಜಯಪುರ ರೈಲು ಮಾರ್ಗ ಬದಲಾವಣೆಗೆ ವಿರೋಧ ಮಂಗಳೂರು-ವಿಜಯಪುರ ರೈಲು ಮಾರ್ಗ ಬದಲಾವಣೆಗೆ ವಿರೋಧ

ಈ ರೈಲು ಥಾಣೆ, ಪನ್ವೇಲ್, ರೋಹಾ, ಖೇಡ್, ಸಂಗಮೇಶ್ವರ ರೋಡ್, ರತ್ನಗಿರಿ, ಕಂಕವಲ್ಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ಥೀವಿಂ, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಗೋಕರ್ಣ, ಕುಮಟಾ, ಮುರುಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಮೂಲ್ಕಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ.

ಈ ವಿಶೇಷ ರೈಲು 2 ಟು ಟಯರ್ ಎಸಿ, 3 ತ್ರಿ ಟಯರ್ ಎಸಿ, ಎಂಟು ಸ್ಲೀಪರ್ ಬೋಗಿ ಸೇರಿದಂತೆ ಒಟ್ಟು 17 ಬೋಗಿ ಒಳಗೊಂಡಿದೆ.

English summary
Central railway will run weekly train between Mumbai and Surathkal, Mangaluru. Here are the train schedule and stop details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X