Mangaluru airport: ಮಂಗಳೂರು ಏರ್‌ಪೋರ್ಟ್‌ನಿಂದ ಹೊಸ ದಾಖಲೆ, ಏನದು?- ಇಲ್ಲಿದೆ ಮಾಹಿತಿ
ಮಂಗಳೂರು, ನವೆಂಬರ್, 20: ದೀಪಾವಳಿ ಹಬ್ಬ ಹಿನ್ನೆಲೆ ನವೆಂಬರ್ 12ರಿಂದಲೇ ನಗರ ಪ್ರದೇಶಗಳಿಂದ ಜನರು ತಮ್ಮ ತಮ್ಮ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಹಬ್ಬ ಮುಗಿದ ಬಳಿಕ ನಗರ ಪ್ರದೇಶಗಳಿಗೆ ರೈಲಿನಲ್ಲಿ ಹಿಂತಿರುಗಿದವರ ಪ್ರಯಾಣಿಕರ ಸಂಖ್ಯೆ ತುಸು ಹೆಚ್ಚಾಗಿದೆ. ಅದರಲ್ಲೂ ವಿಮಾನದಲ್ಲಿ ಪ್ರಯಾಣ ಮಾಡಿದವರ ಸಂಖ್ಯೆಯೂ ಹೆಚ್ಚಾಗಿದೆ. ಹಾಗೆಯೇ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತೊಂದು ನೂತನ ದಾಖಲೆಯನ್ನು ನಿರ್ಮಾಣ ಮಾಡಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನವೆಂಬರ್ 19ರಂದು 26 ವಿಮಾನಗಳ ಆಗಮನ ಮತ್ತು 25 ವಿಮಾನಗಳ ನಿರ್ಗಮನಗಳ ಮೂಲಕ 7,399 ಪ್ರಯಾಣಿಕರು ಪ್ರಯಾಣಿಸಿ ಈ ದಾಖಲೆ ನಿರ್ಮಾಣ ಮಾಡಿದ್ದಾರೆ. 26 ಆಗಮನಗಳಲ್ಲಿ 3,527 ಮತ್ತು ನಿರ್ಗಮನದಲ್ಲಿ 3,872 ಪ್ರಯಾಣಿಕರು ಸೇರಿದ್ದಾರೆ. ಇದು ಅಕ್ಟೋಬರ್ 31, 2020ರಿಂದ ವಾಣಿಜ್ಯ ಕಾರ್ಯಾಚರಣೆ ವಿಮಾನ ನಿಲ್ದಾಣವು ಕಾರ್ಯಾಚರಣೆ ನಡೆಸಿ ಅತಿ ಹೆಚ್ಚು ದೈನಂದಿನ ಪ್ರಯಾಣಿಕರು ಆಗಿದ್ದಾರೆ.

ನವೆಂಬರ್ 2021ರ ನಂತರ ವಿಮಾನ ನಿಲ್ದಾಣವು 7,000 ಪ್ರಯಾಣಿಕರ ದೈನಂದಿನ ನಿರ್ವಹಣೆಯ ಗಡಿಯನ್ನು ದಾಟಿರುವುದು ಇದೇ ಮೊದಲಾಗಿದೆ. ವಿಮಾನಯಾನ ಸಂಸ್ಥೆಗಳಾದ ಇಂಡಿಗೊ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅತಿ ಹೆಚ್ಚು ಪ್ರಯಾಣಿಕರನ್ನು ನಿರ್ವಹಸಿದ ಕೀರ್ತಿಗೆ ಪಾತ್ರಗ ಆಗಿದೆ.
ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ಲೋಡ್ ಅಂಶವು 79% ಆಗಿದ್ದರೆ, ನಿರ್ಗಮಿಸುವ ವಿಮಾನಗಳಲ್ಲಿ ಇದು 91%ಕ್ಕೆ ಏರಿಕೆ ಆಗಿದೆ. ಮಂಗಳೂರು-ಪುಣೆ ವಲಯದಲ್ಲಿ ವಿಮಾನ ಪುನರಾರಂಭ ಮತ್ತು ನೆರೆಯ ಜಿಲ್ಲೆಯ ಪ್ರಮುಖ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವು ದಿನದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಲು ಕಾರಣ ಆಗಿದೆ.
2021ರ ನವೆಂಬರ್ 27ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 7,084 ಪ್ರಯಾಣಿಕರು ಈ #GatewayToGoodnessಬಳಸಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಹಿಂದೆ ನವೆಂಬರ್ 6, 2021 ಮತ್ತು ನವೆಂಬರ್ 20, 2021ರಂದು ಕ್ರಮವಾಗಿ 7,168 ಪ್ರಯಾಣಿಕರು ಮತ್ತು 7,304 ಪ್ರಯಾಣಿಕರು ಈ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ.
2022-23ರ ಹಣಕಾಸು ವರ್ಷದಲ್ಲಿ ಈ ವಿಮಾನ ನಿಲ್ದಾಣವು ದಿನಕ್ಕೆ ಸರಾಸರಿ 5,200 ಪ್ರಯಾಣಿಕರನ್ನು ನಿರ್ವಹಿಸಿದೆ. ಚಳಿಗಾಲದ ವೇಳಾಪಟ್ಟಿ ಜಾರಿಗೆ ಬಂದ ಅಕ್ಟೋಬರ್ 29ರಿಂದ ವಿಮಾನ ಸಂಚಾರ ಚಲನೆಯಲ್ಲಿನ ಹೆಚ್ಚಳವು ಮೇಲಿನ ಸಂಖ್ಯೆಗಳಿಗೆ ಕಾರಣ ಆಗಿದೆ. ದೇಶಾದ್ಯಂತ ಹಬ್ಬದ ಋತುವಿನಲ್ಲಿ ವ್ಯಾಪಾರ ಮತ್ತು ವಿರಾಮ ಪ್ರಯಾಣವು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕ್ರಮೇಣ ಹೆಚ್ಚುತ್ತಿರುವ ಜನಸಂದಣಿಗೆ ಕಾರಣ ಆಗಿದೆ.
ಈ ವಿಮಾನ ನಿಲ್ದಾಣವು ಪ್ರಸ್ತುತ ಕ್ರಮವಾಗಿ 9 ದೇಶೀಯ ಮತ್ತು 7 ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕವನ್ನು ಒದಗಿಸುತ್ತದೆ ಎಂದು ವಿಮಾನ ನಿಲ್ದಾಣದ ಪತ್ರಿಕಾ ಪ್ರಕಟಣೆ ತಿಳಿಸಿದೆ.












Click it and Unblock the Notifications