KSRTC: ಕೇರಳಕ್ಕೆ ಕರ್ನಾಟಕ ಸಾರಿಗೆಯ ಐಷಾರಾಮಿ ಬಸ್‌ಗಳ ಸೇವೆ-ದಿನಾಂಕ, ಸಮಯ, ಮಾರ್ಗಗಳ ವಿವರ ತಿಳಿಯಿರಿ
ಬೆಂಗಳೂರು, ಮೇ, 31: ಕರ್ನಾಟಕ ರಾಜ್ಯದ ರಸ್ತೆ ಸಾರಿಗೆ ನಿಗಮನ (KSRTC) ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಹಾಗೂ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಹಲವು ಮಾರ್ಗಗಳಿಗೆ ಹೆಚ್ಚುವರಿ ಬಸ್‌ಗಳನ್ನು ಬಿಡುತ್ತಲೇ ಬಂದಿದೆ. ಇದೀಗ ನಿಗಮವು ದೇವರನಾಡು ಅಂತಲೇ ಪ್ರಸಿದ್ಧಿ ಪಡೆದಿರುವ ಕೇರಳಕ್ಕೆ ವಿಶೇಷ ಬಸ್ ಸೇವೆ ಆರಂಭಿಸಲು ನಿರ್ಧರಿಸಿದೆ. ಹಾಗಾದರೆ ಈ ಸೇವೆ ಯಾವಾಗಿನಿಂದ ಆರಂಭ ಹಾಗೂ ಮಾರ್ಗಗಳ ವಿವರವನ್ನು ಇಲ್ಲಿ ತಿಳಿಯಿರಿ.
ಕರ್ನಾಟಕ ಆರ್‌ಟಿಸಿಯು ಕೇರಳಕ್ಕೆ ಹೆಚ್ಚಿನ ಮಲ್ಟಿ-ಆಕ್ಸೆಲ್ ಸ್ಲೀಪರ್ ಎಸಿ ಬಸ್ ಸೇವೆಯನ್ನು ಪ್ರಾರಂಭಿಸಲು ನಿರ್ಧರಿಸಿದೆ. "ಅಂಬಾರಿ ಉತ್ಸವ" ಬಸ್‌ಗಳು ಎರ್ನಾಕುಲಂಗೆ ಸೇವೆಯನ್ನು ನಿರ್ವಹಿಸುತ್ತವೆ ಮತ್ತು ಅಂಬಾರಿ ಡ್ರೀಮ್ ಕ್ಲಾಸ್ ಬಸ್‌ಗಳು ಕೊಟ್ಟಾಯಂ ಮತ್ತು ಅಲಪ್ಪುಳ ಮಾರ್ಗಗಳಲ್ಲಿ ಓಡುತ್ತವೆ. ನಿಗಮವು ತನ್ನ ಹೊಸ ಬಸ್‌ಗಳನ್ನು ಸ್ವೀಕರಿದಾಗ ಸೇವೆಗಳು ಒಂದು ತಿಂಗಳಲ್ಲಿ ಪ್ರಾರಂಭಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಪ್ರಸ್ತುತ ಇದೀಗ ವೋಲ್ವೋದ ಅಂಬಾರಿ ಮಾದರಿಯ ಬಸ್‌ಗಳು ಎರ್ನಾಕುಲಂ ಮತ್ತು ತ್ರಿಶೂರ್‌ಗೆ ಸೇವೆಯನ್ನು ನೀಡುತ್ತಿವೆ. ಇನ್ನು ಅಲಪ್ಪುಳ ಮತ್ತು ಕೊಟ್ಟಾಯಂ ಮಾರ್ಗಗಳಲ್ಲಿ ಸೆಮಿ ಸ್ಲೀಪರ್ ಐರಾವತ ಕ್ಲಬ್ ಕ್ಲಾಸ್ ಬದಲಿಗೆ ಸ್ಲೀಪರ್ ಬಸ್‌ಗಳನ್ನು ಬಿಡಲಾಗಿದೆ. ಅಲ್ಲದೆ, ಅಂಬಾರಿ ಡ್ರೀಮ್ ಕ್ಲಾಸ್ ಮಾದರಿಯ 40 ಹೊಚ್ಚಹೊಸ ಬಸ್‌ಗಳನ್ನು ಕರ್ನಾಟಕ ಆರ್‌ಟಿಸಿ ಈಗಾಗಲೇ ಆರ್ಡ್‌ರ್ ಮಾಡಲಾಗಿದ್ದು, ಇವುಗಳಲ್ಲಿ 20 ಈಗಾಗಲೇ ಈ ವರ್ಷದ ಫೆಬ್ರವರಿಯಲ್ಲಿ ಸೇವೆಯನ್ನು ಪ್ರಾರಂಭಿಸಿವೆ.
ಅಷ್ಟೆ ಅಲ್ಲದೆ, ಕೇರಳ ಆರ್‌ಟಿಸಿ ಸ್ವಿಫ್ಟ್ ಬೆಂಗಳೂರಿನಿಂದ ಎಂಟು ಗಜರಾಜ ಎಸಿ ಸ್ಲೀಪರ್ ಮಾದರಿಯ ಬಸ್ ಸೇವೆಗಳನ್ನು ನೀಡಲಾಗುತ್ತುದೆ. ಈ ಪೈಕಿ ತಿರುವನಂತಪುರ ಮತ್ತು ಎರ್ನಾಕುಲಂಗೆ ತಲಾ ನಾಲ್ಕು ಬಸ್‌ಗಳನ್ನು ನಿಗದಿಪಡಿಸಲಾಗಿದೆ. ತಿರುವನಂತಪುರಕ್ಕೆ ಸೀಟರ್ ಕಮ್ ಸ್ಲೀಪರ್ ಮಾದರಿಯ ಎಸಿ ಮತ್ತಿ ನಾನ್ ಎಸಿ ಬಸ್ ಸೇವೆಗಳನ್ನು ಒದಗಿಸುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬೆಂಗಳೂರಿನಿಂದ ವಿಶೇಷ ಸಾಪ್ತಾಯಿಕ ರೈಲು ಸೇವೆ: ಭಾರತೀಯ ರೈಲ್ವೆಯು ಪ್ರಯಾಣಿಕರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಗಾಗ ವಿಶೇಷ ರೈಲುಗಳನ್ನು ಬಿಡುತ್ತಲೇ ಬಂದಿದೆ. ಅದರಲ್ಲೂ ಇದೀಗ ಬೇಸಿಗೆ ಹಿನ್ನೆಲೆ ಹಲವೆಡೆ ಇದನ್ನು ವಿಸ್ತರಣೆ ಮಾಡಲಾಗಿದ್ದು, ಬೆಂಗಳೂರಿನಿಂದ ಈ ಮಾರ್ಗಕ್ಕೆ ವಿಶೇಷ ರೈಲಿ ಬಿಡಲಾಗಿದೆ. ಹಾಗಾದರೆ ಸಮಯ, ದಿನಾಂಕ, ಮಾರ್ಗಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಈಸ್ಟ್ ಕೋಸ್ಟ್ ರೈಲ್ವೇಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಸಂಬಲ್‌ಪುರ-ಎಸ್‌ಎಂವಿಟಿ ಬೆಂಗಳೂರು ಮಾರ್ಗದಲ್ಲಿ ವಿಶೇಷ ದರದಲ್ಲಿ ಬೇಸಿಗೆ ವಿಶೇಷ ಸಾಪ್ತಾಹಿಕ ರೈಲುಗಳನ್ನು ನಿರ್ವಹಿಸಲು ಮುಂದಾಗಿದೆ. ಹಾಗಾದರೆ ಯವ್ಯಾವಾಗ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ನಂ 08321 ಸಂಬಲ್‌ಪುರ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಯಿಕ ವಿಶೇಷ ರೈಲು ಕಟಪಾಡಿ ಮೂಲಕ ಜೂನ್ 13, 20 ಮತ್ತು 27 ಈ ಮೂರು ದಿನವೂ ಸಂಜೆ 6:45ಕ್ಕೆ ಸಂಬಲ್‌ಪುರದಿಂದ ಹೊರಡಲಿದ್ದು, ಮರುದಿನ ರಾತ್ರಿ 11:30ಕ್ಕೆ ಎಸ್‌ಎಂವಿಟಿ ಬೆಂಗಳೂರು ತಲುಪಲಿದೆ ಎಂದು ತಿಳಿಸಿದೆ.
ಇನ್ನು ನಂ 08322 ಎಸ್‌ಎಂವಿಟಿ ಬೆಂಗಳೂರು-ಸಂಬಲ್‌ಪುರ ಸಾಪ್ತಾಯಿಕ ವಿಶೇಷ ರೈಲು ಕಟಪಾಡಿ ಮೂಲಕ ಜೂನ್ 1, 8, 15 22 ಮತ್ತು 29ರಂದು ಬೆಳಗ್ಗೆ 1:15ಕ್ಕೆ ಎಸ್‌ಎಂವಿಟಿ ಬೆಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಗ್ಗೆ 6:30ಕ್ಕೆ ಸಂಬಲ್‌ಪುರವನ್ನು ತಲುಪುತ್ತದೆ ಎಂದು ತಿಳಿಸಿದೆ.












Click it and Unblock the Notifications