ಶ್ರೀಶೈಲ ಮಲ್ಲಿಕಾರ್ಜುನನ ಜಾತ್ರೆಗೆ ಹೋಗುವ ಭಕ್ತರಿಗೆ ಸಿಹಿಸುದ್ದಿ ನೀಡಿದ KKRTC ಮತ್ತು NWKRTC
ಬೆಂಗಳೂರು, ಏಪ್ರಿಲ್. 01: ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ಶ್ರೀಶೈಲದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಏಪ್ರಿಲ್ 6 ರಿಂದ 10 ರವರೆಗೆ ಐದು ದಿನಗಳ ಯುಗಾದಿ ಮಹೋತ್ಸವ ನಡೆಯಲಿದೆ. ಯುಗಾದಿ ಹಬ್ಬದಂದು ಹೊಸ ವರ್ಷದ ಆರಂಭವಾಗಲಿದೆ. ಇದೇ ವೇಳೆ ಕರ್ನಾಟಕದಿಂದಲೂ ಲಕ್ಷಾಂತರ ಮಂದಿ ಭಕ್ತಾದಿಗಳು ಹೊರಡಲಿದ್ದಾರೆ.
ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯದ ಉತ್ಸವದ ಸಮಯದಲ್ಲಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ದೇವಾಲಯದ ಅಧಿಕಾರಿಗಳು ತಾತ್ಕಾಲಿಕ ಶೆಡ್‌ಗಳು, ಟೆಂಟ್‌ಗಳು, ನೀರಿನ ವ್ಯವಸ್ಥೆ ಮತ್ತು ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಮಾಡಿದ್ದಾರೆ. ಹಾಗೆಯೇ ರಾಜ್ಯದಿಂದ ದೇವಸ್ಥಾನಕ್ಕೆ ಹೊರಡುವ ಭಕ್ತಾದಿಗಳಿಗೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಎನ್‌ಡಬ್ಲ್ಯುಕೆಆರ್‌ಟಿಸಿ) ಮತ್ತು , ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್‌ಟಿಸಿ) ಸಿಹಿ ಸುದ್ದಿ ನೀಡಿದೆ.

ಕೆಕೆಆರ್‌ಟಿಸಿ: ಯುಗಾದಿ ಹಬ್ಬದ ಪ್ರಯುಕ್ತ ಶ್ರೀಶೈಲಂಗೆ ವಿಶೇಷ ಬಸ್
ಶ್ರೀಶೈಲ ಮಲ್ಲಿಕಾರ್ಜುನ ದೇವಾಲಯಕ್ಕೆ ತೆರಳಿರುವ ಭಕ್ತರಿಗೆ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದಿಂದ ಏಪ್ರಿಲ್ 01 ರಿಂದ ಏಪ್ರಿಲ್ 11 ರ ವರೆಗೆ ವಿಶೇಷ ಸಾರಿಗೆ ಸೌಕರ್ಯವನ್ನು ಒದಗಿಸಲಾಗಿದೆ. ಬಳ್ಳಾರಿ, ಮೋಕಾ, ಕುರುಗೋಡು, ಕಂಪ್ಲಿ, ಎಮ್ಮಿಗನೂರು, ಸಿರುಗುಪ್ಪ, ತೆಕ್ಕಲಕೋಟೆ, ಹಳೇಕೋಟೆ, ತೋರಣಗಲ್ಲು, ಸಂಡೂರು ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಯುಗಾದಿ ಹಬ್ಬದಂದು ಜರುಗಲಿರುವ ಶ್ರೀ ಭ್ರಮರಾಂಬಾ ಮಲ್ಲಿಕಾರ್ಜುನ ಸ್ವಾಮಿಯ ವಿಶೇಷ ದರ್ಶನಕ್ಕಾಗಿ ತೆರಳುತ್ತಿದ್ದಾರೆ.
ಭಕ್ತಾಧಿಗಳ ಅನುಕೂಲಕ್ಕಾಗಿ ಏಪ್ರಿಲ್ 01 ರಿಂದ ಏಪ್ರಿಲ್ 11 ರ ವರೆಗೆ ವಿಶೇಷ ಸಾರಿಗೆ ಸೌಕರ್ಯವನ್ನು ಒದಗಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಬಳ್ಳಾರಿ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‍ಬಾನ್ ಅವರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಬಳ್ಳಾರಿ-1ನೇ ಘಟಕ ವ್ಯವಸ್ಥಾಪಕರ ಮೊ.7760992163, ಬಳ್ಳಾರಿ-2ನೇ ಘಟಕ ವ್ಯವಸ್ಥಾಪಕರ ಮೊ.7760992164, ಸಿರುಗುಪ್ಪ ಘಟಕ ವ್ಯವಸ್ಥಾಪಕರ ಮೊ.7760992165, ಕುರುಗೋಡು ಘಟಕ ವ್ಯವಸ್ಥಾಪಕರ ಮೊ.9606483671, ಸಂಡೂರು ಘಟಕ ವ್ಯವಸ್ಥಾಪಕರ ಮೊ.7760992309ಗೆ ಸಂಪರ್ಕಿಸಬಹುದು.
ಎನ್‌ಡಬ್ಲ್ಯುಕೆಆರ್‌ಟಿಸಿ ಚಿಕ್ಕೋಡಿ ವಿಭಾಗದಿಮದ ವಿಶೇಷ ಬಸ್
ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ "ಚಂದ್ರಮಾನ ಯುಗಾದಿ ಹಬ್ಬದ ನಿಮಿತ ಏಪ್ರಿಲ್ 03 ರಿಂದ ಏಪ್ರಿಲ್ 11ರ ವರೆಗೆ ಜರುಗಲಿರುವ ಸುಕ್ಷೇತ್ರ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ಜಾತ್ರಾ ಮಹೋತ್ಸವ ಅಂಗವಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಚಿಕ್ಕೋಡಿ ವಿಭಾಗದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ.
ಚಿಕ್ಕೋಡಿ, ಅಥಣಿ, ರಾಯಬಾಗ, ನಿಪ್ಪಾಣಿ, ಸಂಕೇಶ್ವರ, ಹುಕ್ಕೇರಿ, ಹಾಗೂ ಗೋಕಾಕ ಕೇಂದ್ರ ಬಸ್ ನಿಲ್ದಾಣಗಳಿಂದ ಶ್ರೀಶೈಲ ಶ್ರೀ ಮಲ್ಲಿಕಾರ್ಜುನ ದರ್ಶನ ಪಡೆಯುವ ಭಕ್ತಾಧಿಗಳ ಅನುಕೂಲಕ್ಕಾಗಿ ಶ್ರೀಶೈಲಕ್ಕೆ ವಿಶೇಷ ಬಸ್ಸಿನ ಸೌಕರ್ಯ ಕಲ್ಪಿಸಲಾಗುತ್ತದೆ. ಭಕ್ತಾಧಿಗಳ ವಿನಂತಿ ಮೇರೆಗೆ ಒಂದೇ ಗ್ರಾಮದಿಂದ 50 ಜನ ಪ್ರಯಾಣಿಸಲು ಬಯಸಿದಲ್ಲಿ, ಅಂತಹ ಗ್ರಾಮಗಳಿಂದ ನೇರವಾಗಿ ಸುಕ್ಷೇತ್ರ ಶ್ರೀಶೈಲಕ್ಕೆ ವಿಶೇಷ ಬಸ್ಸಿನ ವ್ಯವಸ್ಥೆಯನ್ನು ಸಹ ಮಾಡಲಾಗುವುದು.
ವಿಶೇಷ ಸೂಚನೆ: ಒಂದು ಊರಿನಿಂದ 50 ಜನ ಪ್ರಯಾಣಿಕರು ಒಟ್ಟಾಗಿ ಬಂದರೆ ಸಾಂದರ್ಬಿಕ ಒಪ್ಪಂದದ ಮೇರೆಗೆ ಸುಕ್ಷೇತ್ರ ಶ್ರೀಶೈಲ ಮಲ್ಲಿಕಾರ್ಜುನನ ದರ್ಶನದ ಜೋತೆಗೆ ಕೂಡಲಸಂಗಮ, ಬದಾಮಿ, ಶಿವಯೋಗಿ ಮಂದಿರ, ಐಹೋಳೆ, ಪಟ್ಟದ ಕಲ್ಲು, ಮಂತ್ರಾಲಯ, ಮಹಾನಂದಿ, ಹಾಗೂ ವಿವಿದ ಪುಣ್ಯಕ್ಷೇತ್ರಗಳ ದರ್ಶನ ಪಡೆಯಬಹುದಾಗಿದೆ. ಶ್ರೀಶೈಲಕ್ಕೆ ಪಾದಯಾತ್ರೆ ಬಂದಂತಹ ಭಕ್ತಾದಿಗಳಿಗೆ ಮರಳಿ ತಮ್ಮ ಗ್ರಾಮಗಳಿಗೆ ಹೋಗಲು ಶ್ರೀಶೈಲದಿಂದ ನೆರವಾಗಿ ಹೆಚ್ಚುವರಿ ಸಾರಿಗೆಗಳನ್ನು ಬಿಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7760991852, 7760991875, 7760991876, 7760991877, 7760991878, 7760991879, 7760991880, 7760998007 ಈ ದೂರವಾಣಿ ಸಂಖ್ಯಗಳನ್ನು ಸಂಪರ್ಕಿಸಿ.












Click it and Unblock the Notifications