ರೈಲಿನಲ್ಲಿ ರಾತ್ರಿ ಪ್ರಯಾಣ: ನೀವು ನೆನಪಿನಲ್ಲಿಟ್ಟುಕೊಳ್ಳಬೇಕಿರುವ ಅಂಶಗಳಿವು

ನವದೆಹಲಿ, ನ.06: ದೂರದೂರುಗಳಿಗೆ ಪ್ರಯಾಣ ಮಾಡಲು ರೈಲ್ವೇ ಒಂದು ಉತ್ತಮ ಆಯ್ಕೆಯಾಗಿದೆ. ಪ್ರಯಾಣದ ಸಮಯದಲ್ಲಿ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹೆಚ್ಚಿನ ಸಮಯ ಕಳೆಯುವ ರೈಲು ಪ್ರಯಾಣ ಹೆಚ್ಚು ಆಹ್ಲಾದಕರ ಅನುಭವ ಕೂಡ.

ಆದರೆ, ರೈಲು ಪ್ರಯಾಣದ ವೇಳೆ, ಅದರಲ್ಲೂ ರಾತ್ರಿಯಲ್ಲಿ ಪ್ರಯಾಣ ಮಾಡುವಾಗ ನಾವು ಕೆಲವು ವಿಷಯಗಳನ್ನು ಗಮನದಲ್ಲಿ ಇರಿಸಿಕೊಳ್ಳಬೇಕಿರುವುದು ಕಡ್ಡಾಯವಾಗಿದೆ. ಹೀಗಾಗಿಯೇ ರೈಲ್ವೇ ಇಲಾಖೆ ಕೂಡ ಹೊಸ ನಿಯಮಗಳನ್ನು ಜಾರಿ ಮಾಡಿದೆ.

ಪ್ರಯಾಣಿಕರ ನಿದ್ದೆಗೆ ಭಂಗ ಬರುವುದನ್ನು ತಡೆಯಲು ಹಾಗೂ ಪ್ರಯಾಣದ ವೇಳೆ ನೆಮ್ಮದಿಯಿಂದ ನಿದ್ದೆ ಮಾಡಲು ರೈಲ್ವೆ ಇಲಾಖೆ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ರೈಲ್ವೆಯ ಹೊಸ ಮಾರ್ಗಸೂಚಿಗಳ ಪ್ರಕಾರ, ನಿಮ್ಮ ಸೀಟು, ಕಂಪಾರ್ಟ್‌ಮೆಂಟ್ ಅಥವಾ ಕೋಚ್‌ನಲ್ಲಿರುವ ಯಾವುದೇ ಪ್ರಯಾಣಿಕರು ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುವಂತಿಲ್ಲ. ಜೊತೆಗೆ ಏರು ಧ್ವನಿಯಲ್ಲಿ ಹಾಡುಗಳನ್ನು ಹಾಕುವಂತಿಲ್ಲ.

Keep these things in mind while traveling by Train Overnight

ಅನೇಕ ಪ್ರಯಾಣಿಕರು ತಮ್ಮ ಕೋಚ್‌ನಲ್ಲಿ ತಮ್ಮೊಂದಿಗೆ ಪ್ರಯಾಣಿಸುವವರು ಫೋನ್‌ನಲ್ಲಿ ಜೋರಾಗಿ ಮಾತನಾಡುತ್ತಾರೆ. ತಡರಾತ್ರಿಯವರೆಗೆ ಹಾಡುಗಳನ್ನು ಕೇಳುತ್ತಾರೆ ಎಂದು ದೂರು ನೀಡಿದ್ದರು. ರೈಲ್ವೇ ಸಿಬ್ಬಂದಿ ಅಥವಾ ನಿರ್ವಹಣಾ ಸಿಬ್ಬಂದಿಯೂ ಫೋನ್‌ನಲ್ಲಿ ಜೋರಾಗಿ ಮಾತನಾಡುತ್ತಾರೆ ಎಂಬ ದೂರು ಕೂಡ ಕೆಲ ಪ್ರಯಾಣಿಕರಿಂದ ಕೇಳಿಬಂದಿತ್ತು.

ಇದಲ್ಲದೇ ಅನೇಕ ಪ್ರಯಾಣಿಕರು ರಾತ್ರಿ 10 ಗಂಟೆಯ ನಂತರವೂ ಲೈಟ್‌ಗಳನ್ನು ಹಾಕುವುದರಿಂದ ಅವರ ನಿದ್ದೆಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಹೊಸ ನಿಯಮ ರೂಪಿಸಿದೆ. ಪ್ರಯಾಣಿಕರು ನಿಯಮಗಳನ್ನು ಪಾಲಿಸದಿದ್ದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

*ಹೊಸ ನಿಯಮಗಳು ಯಾವುವು?*

ರೈಲಿನಲ್ಲಿ ಪ್ರಯಾಣಿಸುವಾಗ ರಾತ್ರಿ 10 ಗಂಟೆಯ ನಂತರ ಮೊಬೈಲ್‌ನಲ್ಲಿ ಜೋರಾಗಿ ಮಾತನಾಡುತ್ತಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ರೈಲ್ವೆ ಮಂಡಳಿ ನಿರ್ಧರಿಸಿದೆ.

Keep these things in mind while traveling by Train Overnight

ಹೊಸ ನಿಯಮಗಳ ಪ್ರಕಾರ ರಾತ್ರಿ ಪ್ರಯಾಣದ ವೇಳೆ ಪ್ರಯಾಣಿಕರು ಜೋರಾಗಿ ಮಾತನಾಡುವಂತಿಲ್ಲ, ಸಂಗೀತ ಕೇಳುವಂತಿಲ್ಲ.

ಯಾವುದೇ ಪ್ರಯಾಣಿಕರು ದೂರು ನೀಡಿದರೆ, ಅದನ್ನು ಪರಿಹರಿಸುವ ಜವಾಬ್ದಾರಿ ರೈಲಿನಲ್ಲಿರುವ ಸಿಬ್ಬಂದಿಯಾಗಿರುತ್ತದೆ.

ಈ ಹೊಸ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು, ರಾತ್ರಿ 10 ಗಂಟೆಯ ನಂತರ ಜೋರಾಗಿ ಶಬ್ದ ಮಾಡುವಂತಿಲ್ಲ. ಹೀಗಾಗಿ ಯಾವುದೇ ರೀತಿಯ ಆಚರಣೆಗಳನ್ನು ಅಂದರೆ ಬರ್ಥ್ ಡೇ, ವಿವಾಹ ವಾರ್ಷಿಕೋತ್ಸವಗಳು ಇತ್ಯಾದಿ ಆಚರಣೆಗಳನ್ನು ಅನುಮತಿಸಲಾಗುವುದಿಲ್ಲ. ಸಹಪ್ರಯಾಣಿಕರ ಹಕ್ಕುಗಳನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಲುವಾಗಿ ರೈಲ್ವೇ ನಿರ್ಬಂಧಗಳನ್ನು ವಿಧಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+