ಗೋಲ್ಡನ್ ಚಾರಿಯಟ್‌ನಲ್ಲಿ ಪ್ರವಾಸ ಈಗ ಮತ್ತಷ್ಟು ಅಗ್ಗ: ಐಆರ್‌ಸಿಟಿಸಿಯಿಂದ 20% ದರ ರಿಯಾಯಿತಿ

ಕರ್ನಾಟಕದ ಐಷಾರಾಮಿ ಪ್ರವಾಸಿ ರೈಲು ಗೋಲ್ಡನ್ ಚಾರಿಯಟ್‌ನಲ್ಲಿ ಪ್ರಯಾಣಿಸಲು ಬಯಸುವ ಪ್ರವಾಸಿಗರಿಗೆ ಸಂತಸದ ಸುದ್ದಿ ಸಿಕ್ಕಿದೆ. 2026-27ರ ಪ್ರವಾಸ ಸಮಯದ ಹಿನ್ನೆಲೆಯಲ್ಲಿ ಈ ರೈಲಿನ ದರವನ್ನು ಶೇಕಡಾ 20 ರಷ್ಟು ಕಡಿತಗೊಳಿಸಲು ಐಆರ್‌ಸಿಟಿಸಿ (IRCTC) ನಿರ್ಧರಿಸಿದೆ.

ವಿದೇಶಿ ಪ್ರವಾಸಿಗರನ್ನು ಆಕರ್ಷಿಸುವ ಹಾಗೂ ರಾಜ್ಯದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಸಲುವಾಗಿ 2008ರಲ್ಲಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು (KSTDC) ಐಷಾರಾಮಿ 'ಗೋಲ್ಡನ್ ಚಾರಿಯಟ್' (ಸುವರ್ಣ ರಥ) ರೈಲನ್ನು ಆರಂಭಿಸಿತು. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಯ ವಿಠ್ಠಲ ದೇವಸ್ಥಾನದ ಐತಿಹಾಸಿಕ 'ಕಲ್ಲಿನ ರಥ'ದಿಂದ ಸ್ಫೂರ್ತಿ ಪಡೆದು ಈ ರೈಲಿಗೆ ಹೆಸರಿಡಲಾಗಿದೆ. ಆರಂಭದಲ್ಲಿ ಯಶಸ್ವಿಯಾಗಿ ಮುನ್ನಡೆದರೂ, ಕಾಲಕ್ರಮೇಣ ಉಂಟಾದ ಆರ್ಥಿಕ ನಷ್ಟ ಮತ್ತು ಕೋವಿಡ್‌ ಸಾಂಕ್ರಾಮಿಕದ ಸವಾಲುಗಳಿಂದಾಗಿ, ಈ ರೈಲಿನ ನಿರ್ವಹಣೆ ಮತ್ತು ಕಾರ್ಯಾಚರಣೆಯ ಜವಾಬ್ದಾರಿಯನ್ನು ಪ್ರಸ್ತುತ ಐಆರ್‌ಸಿಟಿಸಿ (IRCTC) ಸಂಸ್ಥೆಗೆ ಹಸ್ತಾಂತರಿಸಲಾಗಿದೆ.

IRCTC Golden Chariot

2028ರವರೆಗೆ ಯೋಜಿಸಲಾಗಿರುವ ಒಟ್ಟು 12 ಪ್ರವಾಸಗಳ ಪೈಕಿ 10 ಪ್ರವಾಸಗಳಿಗೆ ಈ ವಿಶೇಷ ರಿಯಾಯಿತಿ ಅನ್ವಯವಾಗಲಿದೆ. ಈ ವರ್ಷ ರೈಲ್ವೆಯು ಮೂರು ವಿಭಿನ್ನ ಪ್ರವಾಸ ಪ್ಯಾಕೇಜ್‌ಗಳನ್ನು ಪರಿಚಯಿಸುತ್ತಿದ್ದು, ಅವುಗಳಲ್ಲಿ ಅತ್ಯಂತ ಪ್ರಸಿದ್ಧವಾದ 'ಪ್ರೈಡ್ ಆಫ್ ಕರ್ನಾಟಕ' (Pride of Karnataka) ಪ್ಯಾಕೇಜ್ ಪ್ರವಾಸಿಗರ ಮೊದಲ ಆಯ್ಕೆಯಾಗಿದೆ. ಕರ್ನಾಟಕದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಈ ಪ್ಯಾಕೇಜ್ ಪ್ರವಾಸಿಗರಲ್ಲಿ ಹೆಚ್ಚಿನ ಕುತೂಹಲ ಮತ್ತು ಜನಪ್ರಿಯತೆ ಗಳಿಸಿದೆ.

ಪ್ರವಾಸೋದ್ಯಮಕ್ಕೆ ವಂದೇ ಭಾರತ್ ಮೆರುಗು: ನೀವು ಸುಲಭವಾಗಿ ತಲುಪಬಹುದಾದ 5 ಪ್ರಮುಖ ನಗರಗಳು
ಪ್ರವಾಸೋದ್ಯಮಕ್ಕೆ ವಂದೇ ಭಾರತ್ ಮೆರುಗು: ನೀವು ಸುಲಭವಾಗಿ ತಲುಪಬಹುದಾದ 5 ಪ್ರಮುಖ ನಗರಗಳು

ಕರ್ನಾಟಕ ಸುತ್ತಾಟಕ್ಕೆ ವಿಶೇಷ ಪ್ಯಾಕೇಜ್

ಐದು ರಾತ್ರಿ ಮತ್ತು ಆರು ದಿನಗಳ ಈ ಪ್ಯಾಕೇಜ್‌ನಲ್ಲಿ ಬೆಂಗಳೂರು, ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಹಾಗೂ ಗೋವಾ ಸೇರಿದಂತೆ ಹಲವು ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಾಗುತ್ತದೆ.

ಈ ಪ್ಯಾಕೇಜ್‌ನ ಒಬ್ಬರ ಟಿಕೆಟ್ ದರ ಮೊದಲು ಸುಮಾರು ರೂ.4.8 ಲಕ್ಷ (5,000 ಡಾಲರ್‌ ) ಇತ್ತು. ಶೇಕಡಾ 20 ರಷ್ಟು ರಿಯಾಯಿತಿಯ ನಂತರ ಇದು ಸುಮಾರು ರೂ.3.8 ಲಕ್ಷ (4,000 ಡಾಲರ್‌) ಆಗಲಿದೆ.

'ಜುವೆಲ್ಸ್ ಆಫ್ ಸೌತ್' ಪ್ಯಾಕೇಜ್‌ಗೂ ರಿಯಾಯಿತಿ

ಕರ್ನಾಟಕದ ಜೊತೆಗೆ ಕೇರಳ ಮತ್ತು ತಮಿಳುನಾಡು ರಾಜ್ಯಗಳ ಪ್ರಮುಖ ಪ್ರವಾಸಿ ತಾಣಗಳನ್ನು ಒಳಗೊಂಡಿರುವ "ಜುವೆಲ್ಸ್ ಆಫ್ ಸೌತ್" ಪ್ಯಾಕೇಜ್‌ನ ದರವೂ ಇಳಿಕೆಯಾಗಿದೆ.

ಮೊದಲು ಸುಮಾರು ರೂ.3.3 ಲಕ್ಷ (3,400 ಡಾಲರ್‌) ಇದ್ದ ದರ ಈಗ ಸುಮಾರು ರೂ.2.6 ಲಕ್ಷ (2,720 ಡಾಲರ್‌)ಆಗಿದೆ.

IRCTC ಗುಡ್ ನ್ಯೂಸ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ ಈಗ ಇನ್ನಷ್ಟು ಸುಲಭ
IRCTC ಗುಡ್ ನ್ಯೂಸ್: ಅಯೋಧ್ಯೆ, ಕಾಶಿ, ಪುರಿ ಪುಣ್ಯಕ್ಷೇತ್ರಗಳ ದರ್ಶನ ಈಗ ಇನ್ನಷ್ಟು ಸುಲಭ

ಮುಂಗಡ ಬುಕ್ಕಿಂಗ್‌ಗೆ ಹೆಚ್ಚುವರಿ ರಿಯಾಯಿತಿ

ಜೂನ್ 30ರೊಳಗೆ ಮುಂಗಡ ಪಾವತಿ ಮಾಡುವ ಪ್ರವಾಸಿಗರಿಗೆ ಹೆಚ್ಚುವರಿಯಾಗಿ 5% ಆರಂಭಿಕ ರಿಯಾಯಿತಿ ನೀಡಲಾಗುತ್ತದೆ. ರಿಯಾಯಿತಿ ದರದ ಮೊದಲ ಪ್ರವಾಸವು ಅಕ್ಟೋಬರ್ 24, 2026ರಿಂದ ಆರಂಭವಾಗಲಿದೆ.

ಪ್ರಯಾಣಿಕರಿಗಾಗಿ ಹೊಸ ಸೌಲಭ್ಯಗಳು

ಮುಂಬರುವ ಹೊಸ ಪ್ರವಾಸದ ಋತುವಿಗಾಗಿ ಸಜ್ಜಾಗಿರುವ ಐಆರ್‌ಸಿಟಿಸಿ, ರೈಲಿನ ಒಳಾಂಗಣವನ್ನು ಸಂಪೂರ್ಣವಾಗಿ ನವೀಕರಿಸಿ ಪ್ರಯಾಣಿಕರಿಗೆ ಐಷಾರಾಮಿ ಅನುಭವ ನೀಡಲು ಮುಂದಾಗಿದೆ. ಸೀಟುಗಳ ಹೊಸ ಪೀಠೋಪಕರಣಗಳು, ಮರದ ಮೇಲ್ಮೈಗಳಿಗೆ ಪಾಲಿಶ್, ಉನ್ನತ ದರ್ಜೆಯ ಹಾಸಿಗೆ, ಹೊದಿಕೆ ಹಾಗೂ ಆಧುನಿಕ ಶೈಲಿಯ ಬಾತ್‌ರೂಮ್ ಸೌಲಭ್ಯಗಳು ರೈಲಿನ ಸೌಂದರ್ಯವನ್ನು ಹೆಚ್ಚಿಸಿವೆ.

ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರತಿ ಬೋಗಿಯಲ್ಲೂ ಸಿಸಿಟಿವಿ ಕ್ಯಾಮೆರಾ, ಸುಧಾರಿತ ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ವೃತ್ತಿಪರ ಆತಿಥ್ಯ ನೀಡಲು ದಕ್ಷ ಸಿಬ್ಬಂದಿ ವರ್ಗವನ್ನು ನಿಯೋಜಿಸಲಾಗಿದೆ.

80 ಪ್ರಯಾಣಿಕರಿಗೆ ಅವಕಾಶ

ಗೋಲ್ಡನ್ ಚಾರಿಯಟ್ ರೈಲು ಒಟ್ಟು 80 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದರಲ್ಲಿ 13 ಡಬಲ್ ಬೆಡ್ ಕ್ಯಾಬಿನ್‌, 26 ಟ್ವಿನ್ ಬೆಡ್ ಕ್ಯಾಬಿನ್‌ ಹಾಗೂ ವಿಶೇಷ ಚೇತನರಿಗಾಗಿ ಒಂದು ವಿಶೇಷ ಕ್ಯಾಬಿನ್ ವ್ಯವಸ್ಥೆ ಇದೆ.

ವಿದೇಶಿ ಪ್ರವಾಸಿಗರ ಮೆಚ್ಚಿನ ರೈಲು

ಐಷಾರಾಮಿ ರೈಲು ಪ್ರಯಾಣಕ್ಕೆ ಹೆಸರಾದ ಗೋಲ್ಡನ್ ಚಾರಿಯಟ್ (Golden Chariot) ವಿದೇಶಿ ಪ್ರವಾಸಿಗರ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಕಳೆದ ವರ್ಷ ತನ್ನ ಇತಿಹಾಸದಲ್ಲೇ ಅತ್ಯಧಿಕ ಅಂದರೆ 64 ಪ್ರಯಾಣಿಕರನ್ನು ಒಂದೇ ಬಾರಿಗೆ ಹೊತ್ತೊಯ್ಯುವ ಮೂಲಕ ಈ ರೈಲು ಹೊಸ ದಾಖಲೆ ಬರೆದಿದೆ. ವಿಶೇಷವೆಂದರೆ, 2025ರಲ್ಲಿ ಒಟ್ಟು ಐದು ಯಶಸ್ವಿ ಪ್ರವಾಸಗಳನ್ನು ಪೂರೈಸುವ ಮೂಲಕ ತನ್ನ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ.

ಈ ರೈಲಿನ ಒಟ್ಟು ಗ್ರಾಹಕರಲ್ಲಿ ಅಮೆರಿಕ, ಬ್ರಿಟನ್, ಯುರೋಪ್, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್‌ನ ಪ್ರವಾಸಿಗರೇ ಪ್ರಮುಖರಾಗಿದ್ದಾರೆ. ಇದರಲ್ಲಿ ಅಮೆರಿಕದ ಪ್ರವಾಸಿಗರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಈ ಐಷಾರಾಮಿ ಪಯಣದ ಬಗ್ಗೆ ವಿಶೇಷ ಆಸಕ್ತಿ ತೋರಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+