ಚಾರ್ ಧಾಮ್ ಯಾತ್ರೆ 2026: ಬೆಂಗಳೂರಿನಿಂದ 4 ಪವಿತ್ರ ಸ್ಥಳಗಳಿಗೆ ಟೂರ್ ಪ್ಯಾಕೇಜ್, ಟಿಕಟ್ ದರ, ವೇಳಾಪಟ್ಟಿ

Char Dham Yatra 2026: ಪ್ರತಿ ವರ್ಷ ಹಿಂದೂಗಳ ಪವಿತ್ರ 'ಚಾರ್ ಧಾಮ್ ಯಾತ್ರೆ 'ಗೆ (Char Dham Yatra) ತೆರಳು ಕೋಟ್ಯಾಂತರ ಭಕ್ತರು ಕಾಯುತ್ತಿರುತ್ತಾರೆ. 'ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮನೋತ್ರಿ' ಹಾಗೂ ಹರಿದ್ವಾರ, ದೇವಪ್ರಯಾಗ, ಋಷಿಕೇಶ್ ಸ್ಥಳಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಪುನೀತರಾಗುತ್ತಾರೆ. ಈ ಪ್ರವಾಸಿಗರಿಗೆಂದೆ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಪ್ರಸಕ್ತ 2026ನೇ ಸಾಲಿನ 'ಚಾರ್ ಧಾಮ್ ಯಾತ್ರೆ' ಘೋಷಿಸಿದೆ. ಒಟ್ಟು ಎಷ್ಟು ದಿನ? ಸಂಚಾರ ಹೇಗೆ, ಊಟ, ವಸತಿ, ಮುಖ್ಯವಾಗಿ ಈ ಸ್ಥಳಗಳ ವಿಶೇಷ ಸೇರಿ ಸಂಪೂರ್ಣ ವಿವರ ಇಲ್ಲಿದೆ.

ಹಿಂದೂ ದೇವರುಗಳು ಮತ್ತು ಭಾರತದ ಪವಿತ್ರ ನದಿಗಳಿಗೆ ಮೀಸಲಾಗಿರುವ ಉತ್ತರಾಖಂಡದಲ್ಲಿ ನಾಲ್ಕು ಪವಿತ್ರ ದೇಗುಲಗಳಿವೆ. ಅವು 'ಕೇದಾರನಾಥ, ಬದ್ರಿನಾಥ, ಗಂಗೋತ್ರಿ, ಯಮನೋತ್ರಿ'. ಇಲ್ಲಿಗೆ ಪ್ರತಿ ವರ್ಷ ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ. ಇವುಗಳೊಂದಿಗೆ ಹರಿದ್ವಾರ, ದೇವಪ್ರಯಾಗ, ಋಷಿಕೇಶ್ ಒಳಗೊಂಡು ಟೂರ್ ಪ್ಯಾಕೇಜ್ ಘೋಷಿಸಲಾಗಿದೆ. ಬೆಂಗಳೂರು ಸೇರಿದಂತೆ ಕರ್ನಾಟಕ ಭಾಗದಿಂದ ತೆರಳುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

Char Dham Yatra 2026

ಭಾರತ ಮಾತ್ರವಲ್ಲದೇ ಬೇರೆ ಬೇರೆ ದೇಶಗಳಿಂದ ಯಾತ್ರಾರ್ಥಿಗಳು ಇಲ್ಲಿಗೆ ಬರುತ್ತಾರೆ. ದೇಗುಲಗಳು ಬಾಗಿಲು ತೆರೆಯುವುದನ್ನು ಕಾಯುತ್ತಿರುತ್ತಾರೆ. ನಿರ್ದಿಷ್ಟ ದಿನಗಳಲ್ಲಿ ದೇವಾಲಯಗಳನ್ನು ಅಲಂಕರಿ ಪೂಜಿಸಲಾಗುತ್ತದೆ. ಆಗ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಹಿಂದೂಗಳ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಚಾರ್ ಧಾಮ್ ಯಾತ್ರೆಯನ್ನು ಕೈಗೊಳ್ಳಬೇಕು ಎಂದು ನಂಬಿಕೆ ಇದೆ. ಮೊದಲಿಗೆ ದೇವಾಲಯಗಳ ವಿಶೇಷತೆ ತಿಳಿಯೋಣ..

Tour Package: ರಾಯರ ಭಕ್ತರಿಗೆ ಶುಭ ಸುದ್ದಿ, ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್, ಬುಕಿಂಗ್ ಹೇಗೆ?
Tour Package: ರಾಯರ ಭಕ್ತರಿಗೆ ಶುಭ ಸುದ್ದಿ, ಬೆಂಗಳೂರು-ಮಂತ್ರಾಲಯ ಟೂರ್ ಪ್ಯಾಕೇಜ್, ಬುಕಿಂಗ್ ಹೇಗೆ?

ದೇವಾಲಯಗಳ ವಿಶೇಷತೆ

ಯಮುನೋತ್ರಿ

ದೇವಾಲಯ 19 ನೇ ಶತಮಾನದಲ್ಲಿ ಜೈಪುರದ ಮಹಾರಾಣಿ ಗುಲೇರಿಯಾ ನಿರ್ಮಿಸಿದ ಯಮುನೋತ್ರಿ ದೇವಾಲಯವು ಗರ್ಹ್ವಾಲ್ ನಲ್ಲಿ ಹಿಮಾಲಯದ ಪಶ್ಚಿಮ ಪ್ರದೇಶದಲ್ಲಿ 3293 ಮೀಟರ್ ಎತ್ತರದಲ್ಲಿದೆ. ಯಮುನಾ ನದಿಗೆ ಸಮರ್ಪಿತವಾಗಿದೆ. ಹೂಮಾಲೆಗಳಿಂದ ಅಲಂಕರಿಸಿ ವೀಶೇಷವಾಗಿ ಪೂಜಿಸಲಾಗುತ್ತದೆ. ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಇಲ್ಲಿಗೆ ಭೇಟಿ ನೀಡುವುದು ಅಪಾರ ಭಕ್ತರ ಕನಸಾಗಿರುತ್ತದೆ.

ಗಂಗೋತ್ರಿ ದೇಗುಲ

18 ನೇ ಶತಮಾನದಲ್ಲಿ ಗೂರ್ಖಾ ಜನರಲ್ ಅಮರ್ ಸಿಂಗ್ ಥಾಪಾ ನಿರ್ಮಿಸಿದ ಗಂಗೋತ್ರಿ ದೇವಾಲಯ ಭಾಗೀರಥಿ ನದಿಯ ತೀರದಲ್ಲಿದೆ. ಈ ದೇವಾಲಯವು ದೇವದಾರುಗಳು ಮತ್ತು ಪೈನ್ ಮರಗಳ ಸುಂದರವಾದ ಸುತ್ತಮುತ್ತಲಿನ ನಡುವಿದೆ. ರಾಜ ಭಗೀರಥ ಶಿವನನ್ನು ಪೂಜಿಸಿದ ಪವಿತ್ರ ಬಂಡೆ ಅಥವಾ ಭಗೀರಥ ಶಿಲೆಯ ಬಳಿ ಇದೆ. ಗಂಗೋತ್ರಿ ದೇವಾಲಯವು ಗಂಗಾ ದೇವಿಗೆ ಸಮರ್ಪಿತವಾಗಿದೆ.

ಬದ್ರಿನಾಥ ದೇವಸ್ಥಾನ

ಒಟ್ಟು ಸಮಾರು 50 ಅಡಿ ಎತ್ತರವಿರುವ ಬದ್ರಿನಾಥ ದೇವಾಲಯದ ಮುಖ್ಯ ಪ್ರವೇಶ ದ್ವಾರವು ವರ್ಣಮಯವಾಗಿದೆ. ಅದರ ಪ್ರವೇಶ ಧ್ವಾರವೇ ಅತ್ಯಂತ ಸುಂದರವಗಿ ಕಾಣಿಸುತ್ತದೆ. ಇದನ್ನು ಸಿಂಘದ್ವಾರ ಅಂತಲೂ ಕರೆಯಲಾಗುತ್ತದೆ. ದೇವಾಲಯದ ಮೇಲೆ ಮೇಲೆ ಸಣ್ಣ ಕಳಸದ ವಿನ್ಯಾಸ (ಕುಪೋಲಾ) ಇದ್ದು, ಚಿನ್ನದ ಮೇಲ್ಛಾವಣಿಯಿಂದ ದೇವಾಲಯ ಮುಚ್ಚಿಲ್ಪಟ್ಟಿದೆ. ಅನೇಕ ಭಾರಿ ಹಿಮದಿಂದ ಆವೃತವಾಗಿರುತ್ತದೆ. ಮಳೆಗಾಲ ಸಂಪೂರ್ಣವಾಗಿ ಮರೆಯಾದ ಬಳಿಕ ಬೇಸಿಗೆಯಲ್ಲಿ ಲ್ಲಿ ದೇಗುಲ ತೆರೆಯಲಾಗುತ್ತದೆ. ಆಗ ಅಪಾರ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

Char Dham Yatra 2026

ಭಗವಂತನ ಮುಖ್ಯ ವಿಗ್ರಹಕ್ಕೆ ನೇರವಾಗಿ ಎದುರಾಗಿರುವ ಬದ್ರಿನಾಥ ಮಂದಿರ ದ್ವಾರದಲ್ಲಿ, ಭಗವಾನ್ ಬದರಿನಾರಾಯಣನ ವಾಹನ (ವಾಹಕ ಪಕ್ಷಿ) ಗರುಡನ ಕುಳಿತಿರುವ ವಿಗ್ರಹವಿದೆ. ಗರುಡನು ಕುಳಿತಿರುವ ಭಂಗಿಯಲ್ಲಿ ಮತ್ತು ಪ್ರಾರ್ಥನೆಯಲ್ಲಿ ಕೈಗಳನ್ನು ಮಡಚಿರುವಂತೆ ಕಾಣುತ್ತದೆ. ಇಲ್ಲಿ ಸೂಕ್ಷ್ಮೈವಾಗಿ ಕೆತ್ತನೆ ಮಾಡಿದ ಒಟ್ಟು ಸುಮಾರು 15 ವಿಗ್ರಹಗಳಿವೆ.

ಕೇದಾರನಾಥ ದೇವಸ್ಥಾನ

ಹಿಮದಿಂದ ಆವೃತವಾದ ಶಿಖರಗಳ ಮಧ್ಯೆ ನಿರ್ಮಾಣವಾದ ಪ್ರಮುಖ ಕೇದಾರನಾಥ ದೇವಸ್ಥಾನ ಇದಾಗಿದೆ. ಹಿಮಗಳ ಬೆಟ್ಟದ ಮಧ್ಯೆ ಅತ್ಯಂತ ಆಕರ್ಷವಾಗಿ ದೇವಾಲಯ ಕಾಣುತ್ತದೆ. ಜಗದ್ ಗುರು ಆದಿ ಶಂಕರಾಚಾರ್ಯರು ಕ್ರಿ.ಶ. 8ನೇ ಶತಮಾನದಲ್ಲಿ ನಿರ್ಮಿಸಿದರು. ಶಿವನಿಗೆ ಸಮರ್ಪಿತವಾದ ಕೇದಾರನಾಥ ದೇವಾಲಯವು ಅತ್ಯಂತ ವಿಶಿಷ್ಟ ವಾಸ್ತುಶಿಲ್ಪ ಹೊಂದಿದೆ. ಸಮ ಶಿಲೆಗಳು, ಬೂದು ಬಣ್ಣದ ಕಲ್ಲುಗಳ ಚಪ್ಪಡಿ ಕಲ್ಲುಗಳಿಂದ ನಿರ್ಮಿಸಲ್ಪಟ್ಟದ್ದಾಗಿದೆ. ಶಿವನನ್ನು ಆರಾಧಿಸುವ ಈ ದೇವಾಲಯದಲ್ಲಿ ಪೂಜೆಗೆ ಗರ್ಭಗೃಹ ಮತ್ತು ಯಾತ್ರಿಕರು ಮತ್ತು ಸಂದರ್ಶಕರ ಸಭೆಗಳಿಗೆ ಸೂಕ್ತ ವಿಶಾಲ ಸ್ಥಳ ಹೊಂದಿದೆ.

ಚಾರ್ ಧಾಮ್ ಯಾತ್ರೆ ಟೂರ್ ಪ್ಯಾಕೇಜ್ ವಿವರ

ಮೇ ತಿಂಗಳಿನಲ್ಲಿ ಆರಂಭ

ಬೆಂಗಳೂರಿನಿಂದ ದೆಹಲಿಗೆ ವಿಮಾನ ಮೂಲಕ ಕರೆದೊಯ್ಯಲಾಗುತ್ತದೆ. ಅಲ್ಲಿಂದ ಉತ್ತರಾಖಂಡ ಮತ್ತು ಚಾರ್ ಧಾಮ್ ಯಾತ್ರೆ ಆರಂಭವಾಗುತ್ತದೆ. ಮುಂದಿನ ಮೇ 6ರಿಂದ ಯಾತ್ರೆ ಶುರುವಾಗಲಿದ್ದು, ಪ್ರವಾಸಿಗರು ಬುಕ್ ಮಾಡಿಕೊಳ್ಳಬಹುದಾಗಿದೆ.

ಬೆಂಗಳೂರು ಮೂರು ಹಂತಗಳಲ್ಲಿ ಚಾರ್ ಧಾಮ್ ಯಾತ್ರೆ

* ಮೇ 05

* ಮೇ 19

* ಜೂನ್ 02
(ಮೂರು ಪ್ಯಾಕೇಜ್‌ಗಳ ರೀತಿಯಲ್ಲಿ ಬೆಂಗಳೂರಿನಿಂದ ಪ್ರವಾಸಿಗರನ್ನು ಕರೆದೊಯ್ಯಲಾಗುತ್ತದೆ. )

ಪ್ರವಾಸ ಸಮಯ, ವೇಳಾಪಟ್ಟಿ

* 12 ರಾತ್ರಿ ಮತ್ತು 13 ದಿನ ಹಗಲು ಪ್ರವಾಸದ ಟೋರ್ ಪ್ಯಾಕೇಜ್ ಇದಾಗಿದೆ.

* ಬೆಂಗಳೂರು-ದೆಹಲಿಗೆ ವಿಮಾನವು (6E-5256) ಮೇ 6ರಂದು ಬೆಳಗ್ಗೆ 9.15ಕ್ಕೆ ಹೊರಡುತ್ತದೆ.

* ದೆಹಲಿ-ಬೆಂಗಳೂರಿಗೆ ವಿಮಾನವು (6E-6515) ಮೇ 18ರಂದು ಮರಳುತ್ತದೆ.

ಮೇ 5ರ ಪ್ರವಾಸ ಪ್ಯಾಕೇಜ್‌ ದರವೆಷ್ಟು?

* ಒಬ್ಬರಿಗೆ: 69,500 ರೂಪಾಯಿ
* ಇಬ್ಬರಿಗೆ: ತಲಾ 62,500 ರೂಪಾಯಿ
* ಮೂವರಿಗೆ: ತಲಾ 61,500 ರೂಪಾಯಿ

ಮೇ 19ರ ಪ್ರವಾಸ ಪ್ಯಾಕೇಜ್ ದರ?

* ಒಬ್ಬರಿಗೆ: 71,150 ರೂಪಾಯಿ
* ಇಬ್ಬರಿಗೆ: ತಲಾ 65,500 ರೂಪಾಯಿ
* ಮೂವರಿಗೆ: ತಲಾ 64,500 ರೂಪಾಯಿ

ಜೂನ್ 02 ಪ್ರವಾಸ ಪ್ಯಾಕೇಜ್ ದರ

* ಒಬ್ಬರಿಗೆ: 73,750 ರೂಪಾಯಿ
* ಇಬ್ಬರಿಗೆ: ತಲಾ 66,990 ರೂಪಾಯಿ
* ಮೂವರಿಗೆ: ತಲಾ 65,900 ರೂಪಾಯಿ

ದೆಹಲಿಯಲ್ಲಿ ವಿಮಾನ ಇಳಿದ ಬಳಿಕ ಅಲ್ಲಿಂದ ಸಾರಿಗೆ ವ್ಯವಸ್ಥೆ, ಪ್ರವಾಸ ಎಲ್ಲ ದಿನಗಳು ಉಳಿದುಕೊಳ್ಳಲು, ಹೋಟೆಲ್ ರೂಮ್ ವ್ಯವಸ್ಥೆ, ಊಟ, ಆರೋಗ್ಯ ಸಂಬಂಧ ಎಲ್ಲ ಎಚ್ಚರಿಕೆ, ಗೈಡ್ ಎಲ್ಲವನ್ನು ಈ ಟೂರ್‌ಗೆ ಪ್ಯಾಕೇಜ್ ಒಳಗೊಂಡಿರುತ್ತದೆ ಎಂದು ಐಆರ್‌ಸಿಟಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+