Vande Bharat Express: ಅತಿ ದೂರದ ವಂದೇ ಭಾರತ್ ರೈಲು ಆರಂಭ, ದರಪಟ್ಟಿ
ನವದೆಹಲಿ, ಅಕ್ಟೋಬರ್ 31: ಭಾರತೀಯ ರೈಲ್ವೆಯ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಭಾರೀ ಬೇಡಿಕೆ ಇದೆ. ಬಿಳಿ ಮತ್ತು ಕೇಸರಿ ಬಣ್ಣದ ಈ ಮಾದರಿ ರೈಲುಗಳನ್ನು 50ಕ್ಕೂ ಅಧಿಕ ಮಾರ್ಗದಲ್ಲಿ ಓಡಿಸಲಾಗುತ್ತಿದೆ. ಎರಡು ನಗರಗಳ ನಡುವಿನ ಪ್ರಯಾಣದ ಅವಧಿ ಇಳಿಕೆ ಮಾಡುವಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪ್ರಮುಖವಾಗಿದೆ. ಈಗ ರೈಲ್ವೆ ಇಲಾಖೆ ದೇಶದ ಅತಿ ದೂರದ ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಆರಂಭಿಸಿದೆ.
ಬುಧವಾರ ಭಾರತೀಯ ರೈಲ್ವೆ ದೆಹಲಿ-ಪಾಟ್ನಾ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಿದೆ. ದೀಪಾವಳಿ ಮತ್ತು ಛತ್ ಪೂಜೆಯ ಅಂಗವಾಗಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಈ ಮಾದರಿಯ ರೈಲು ಸೇವೆಗೆ ಪ್ರಾಯೋಗಿಕವಾಗಿ ಚಾಲನೆಯನ್ನು ನೀಡಲಾಗಿದೆ.

ಅತಿ ದೂರದ ರೈಲು ಮಾರ್ಗ: ದೆಹಲಿ-ಪಾಟ್ನಾ ಮಾರ್ಗದ ವಂದೇ ಭಾರತ್ ರೈಲು ದೇಶದ ಅತಿ ದೂರ ಮಾರ್ಗದ ವಂದೇ ಭಾರತ್ ರೈಲು ಎಂಬ ಹೆಗ್ಗಳಿಕೆ ಪಡೆದಿದೆ. 994 ಕಿ. ಮೀ. ಮಾರ್ಗದಲ್ಲಿ ಈ ರೈಲು ಸಂಚಾರವನ್ನು ನಡೆಸಲಿದೆ. ಈ ದೂರ ಕ್ರಮಿಸಲು ರೈಲು 11 ಗಂಟೆ 35 ನಿಮಿಷಗಳನ್ನು ತೆಗೆದುಕೊಳ್ಳಲಿದೆ. ಇದುವರೆಗೂ ರೈಲು ಕೇವಲ 6, 7 ಗಂಟೆಯ ಮಾರ್ಗದಲ್ಲಿ ಮಾತ್ರ ವಂದೇ ಭಾರತ್ ರೈಲುಗಳನ್ನು ಓಡಿಸುತ್ತಿತ್ತು.
ದೇಶದ ರಾಜಧಾನಿ ದೆಹಲಿ ಮತ್ತು ಬಿಹಾರ ರಾಜ್ಯದ ರಾಜಧಾನಿ ಪಾಟ್ನಾ ನಡುವೆ ಈ ವಂದೇ ಭಾರತ್ ರೈಲು ಸಂಚಾರವನ್ನು ನಡೆಸುತ್ತದೆ. ರೈಲು ಆರಾ, ಬಕ್ಸರ್, ದೀನ್‌ದಯಾಳ್ ಉಪಾಧ್ಯಾಯ ನಿಲ್ದಾಣ, ಪ್ರಯಾಗ್ ರಾಜ್ ಮತ್ತು ಕಾನ್ಪುರದಲ್ಲಿ ನಿಲುಗಡೆಯನ್ನು ಹೊಂದಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.
ಪ್ರಾಯೋಗಿಕವಾಗಿ ದೂರದ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಈ ರೈಲು ದೆಹಲಿ-ಪಾಟ್ನಾ ನಡುವೆ ಬುಧವಾರ, ಶುಕ್ರವಾರ ಮತ್ತು ಭಾನುವಾರ ಸಂಚಾರವನ್ನು ನಡೆಸಲಿದೆ. ಪಾಟ್ನಾ-ದೆಹಲಿ ನಡುವೆ ಸೋಮವಾರ, ಗುರುವಾರ ಮತ್ತು ಶನಿವಾರ ಸಂಚರಿಸಲಿದೆ.
ಪ್ರಾಯೋಗಿಕವಾಗಿ ದೆಹಲಿ-ಪಾಟ್ನಾ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಈ ರೈಲು ಸೇವೆಯನ್ನು ಮುಂದುವರೆಸುವ ಕುರಿತು ಇನ್ನೂ ಸಹ ಇಲಾಖೆ ಯಾವುದೇ ತೀರ್ಮಾನವನ್ನು ಕೈಗೊಂಡಿಲ್ಲ. ಆದರೆ ಅತಿ ದೂರದ ವಂದೇ ಭಾರತ್ ರೈಲು ಸಂಚಾರ ಇದಾಗಿದೆ.
ಈ ರೈಲು ದೆಹಲಿಯಿಂದ ಬೆಳಗ್ಗೆ 8.25ಕ್ಕೆ ಹೊರಟು ರಾತ್ರಿ 8 ಗಂಟೆಗೆ ಪಾಟ್ನಾವನ್ನು ತಲುಪಲಿದೆ. ಪಾಟ್ನಾದಿಂದ ಬೆಳಗ್ಗೆ 7.30ಕ್ಕೆ ಹೊರಟು ಸಂಜೆ 7 ಗಂಟೆಗೆ ದೆಹಲಿಗೆ ತಲುಪುತ್ತದೆ. ದೆಹಲಿ-ಪಾಟ್ನಾ ಮಾರ್ಗದಲ್ಲಿ ಎಸಿ ಚೇರ್ ಕಾರ್‌ಗೆ 2,575 ರೂ. ಮತ್ತು ಎಕ್ಸಿಕ್ಯುಟಿವ್ ಚೇರ್ ಕಾರ್‌ಗೆ 4,655 ರೂ. ಪ್ರಯಾಣ ದರವನ್ನು ನಿಗದಿ ಮಾಡಲಾಗಿದೆ.
ದೀಪಾವಳಿ ಮತ್ತು ಛತ್ ಪೂಜೆಯ ಅಂಗವಾಗಿ ಉಂಟಾಗುವ ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ-ಪಾಟ್ನಾ ನಡುವೆ ವಂದೇ ಭಾರತ್ ರೈಲು ಸಂಚಾರವನ್ನು ಆರಂಭಿಸಲಾಗಿದೆ. ಇದು ಪ್ರಾಯೋಗಿಕ ಸಂಚಾರವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಕಾಯಂಗೊಳಿಸುವ ಕುರಿತು ತೀರ್ಮಾನಿಸಲಾಗುತ್ತದೆ ಎಂದು ಇಲಾಖೆ ಹೇಳಿದೆ.











Click it and Unblock the Notifications