Indian Railways: ಈ ಎರಡು ಜಿಲ್ಲೆಗಳ ನಡುವೆ ಪ್ರತಿ 10 ನಿಮಿಷಕ್ಕೊಮ್ಮೆ ರೈಲು.!
ಬೆಂಗಳೂರು, ಡಿಸೆಂಬರ್, 14: ಸಾಮಾನ್ಯವಾಗಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಜನಮನ್ನಣೆ ಪಡೆದಿದೆ. 5-6 ನಿಮಿಷಗಳ ಒಳಗೆ ಮೆಟ್ರೋ ನಿಲ್ದಾಣಗಳಿಗೆ ಬಂದು ತಲುಪುತ್ತವೆ. ಕೆಲವು ಬಾರಿ ಮಾತ್ರ ಸ್ವಲ್ಪ ತಡವಾಗುತ್ತದೆ ಅಷ್ಟೇ. ಹಾಗೆಯೇ ಇದೀಗ ಮೆಟ್ರೋದಂತೆಯೇ ಮೈಸೂರು-ಬೆಂಗಳೂರು ನಡುವೆ ಪ್ರತಿ 10 ನಿಮಿಷಗಳಿಗೊಮ್ಮೆ ರೈಲು ಓಡಿಸಲು ಇಲಾಖೆ ಮುಂದಾಗಿದೆ.
ಈ ಎರರು ನಗರಗಳ ನಡೆಸುವ 10 ನಿಮಿಷಗಳಿಗೊಮ್ಮೆ ರೈಲು ಓಡಿಸುವ ಬಗ್ಗೆ ರೈಲ್ವೆ ಇಲಾಖೆ ನಿರ್ಧಾರ ಮಾಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಯಾಣ ಮೂಲ ಸೌಕರ್ಯವನ್ನು ಹೆಚ್ಚಿಸುವ ಹಾಗೂ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಇದು ಮಹತ್ವದ ಸೂಕ್ತ ಕ್ರಮವಾಗಲಿದೆ. ಅಲ್ಲದ ಇದರಿಂದ ಬೃಹತ್ ನಗರಗಳ ನಡುವೆ ಪ್ರಯಾಣಿಕರಿಗೆ ತ್ವರಿತ, ಸುರಕ್ಷಿತ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಅನುಭವ ದೊರೆಯಲಿದೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ ಅಂತಾ ಟಿವಿ 9 ಕನ್ನಡ ವರದಿ ಮಾಡಿದೆ.

ಹೀಗೆ 10 ನಿಮಿಷಗಳಿಗೊಮ್ಮೆ ರೈಲುಗಳು ಸಂಚಾರ ಮಾಡಲು ಸಾಧ್ಯವೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಮೆಟ್ರೋ ರೈಲುಗಳು ಅಂತೂ ಬರೀ ಬೆಂಗಳೂರಿನಲ್ಲಿ ಮಾತ್ರ ಸಂಚಾರ ಮಾಡುತ್ತಿರುತ್ತವೆ. ಆದರೆ ರೈಲು ಬೇರೆ, ಬೇರೆ ಜಿಲ್ಲೆ, ಸೇರಿದಂತೆ ರಾಜ್ಯಗಳಿಗೂ ಸಂಚಾರ ಮಾಡುತ್ತವೆ. ಮತ್ತೊಂದೆಡೆ 10 ನಿಮಿಷದೊಳಗೆ ಈ ರೈಲುಗಳು ನಿರ್ಗಮಿಸಿದರೆ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗಲಿದೆ ಎನ್ನುವ ಅಭಿಪ್ರಾಯಗಳು ಕೇಳಿಬಂದಿವೆ.
4 ಲೇನ್ ರೈಲ್ವೆ ಮಾರ್ಗಕ್ಕೆ ಸಮೀಕ್ಷೆ
ಈಗಾಗಲೇ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉದ್ಘಾಟನೆ ಆಗಿದ್ದು, ಇದೀಗ ರೈಲ್ವೆ ಇಲಾಖೆಯು ಈ ಎರಡು ನಗರಗಳ ನಡುವಿನ ಮಾರ್ಗಗಳಲ್ಲಿ ನಾಲ್ಕು ಹಳಿ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಸಮೀಕ್ಷೆಯು ಶುರುವಾಗಿದ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಇದರಿಂದ ಏನೆಲ್ಲ ಪ್ರಯೋಜನಾ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಇನ್ನು ಬೆಂಗಳೂರು-ಮೈಸೂರು ಮಾರ್ಗಗಳಲ್ಲಿ 4 ಹಳಿ ನಿರ್ಮಾಣಕ್ಕೆ ಸಿದ್ಧತೆಗಳು ಆರಂಭವಾಗಿವೆ. ಹಾಗಾದರೆ ಈ ಹಳಿ ಕಾಮಗಾರಿ ಸಂಪೂರ್ಣ ಆದರೆ ಏನೆಲ್ಲ ಉಪಯೋಗ ಆಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ಗಮನಿಸಿ.
ಪ್ರಯಾಣಿಕರ ದಟ್ಟಣೆ ನಿವಾರಣೆ, ಸರಕು ಸಾಗಣಿಕೆ ಹೆಚ್ಚಳದ ಉದ್ದೇಶದಿಂದ ನೈರುತ್ಯ ರೈಲ್ವೆಯು ಬೆಂಗಳೂರು ಸಂಪರ್ಕಿಸುವ ಮಾರ್ಗವೂ ಸೇರಿ ಒಟ್ಟಾರೆ 10 ರೈಲ್ವೆ ಮಾರ್ಗಗಳ ಜೋಡಿ ಹಳಿ ಹಾಗೂ ಮೈಸೂರು-ಬೆಂಗಳೂರು ಮಾರ್ಗಗಳ 4 ಹಳಿ ನಿರ್ಮಾಣಕ್ಕೆ ಮುಂದಾಗಿದ್ದು, ಈಗಾಗಲೇ ಅಂತಿಮ ಸ್ಥಳ ಸಮೀಕ್ಷೆಗೆ ನಿರ್ಧರಿಸಿದೆ.
ಬೆಂಗಳೂರಿನ ರಸ್ತೆ ಸಾರಿಗೆ ಮೇಲಿನ ಒತ್ತಡ ನಿವಾರಣೆ ದೃಷ್ಟಿಯಿಂದ ಈ ಯೋಜನೆ ಮಹತ್ವ ಪಡೆದಿದೆ. ಅಂತಿಮ ಸ್ಥಳ ಸಮೀಕ್ಷೆ ಬಳಿಕ ರೈಲ್ವೆ ಮಂಡಳಿ ಒಪ್ಪಿಗೆ ನೀಡಿದರೆ ಮಾತ್ರ ಈ ಯೋಜನೆ ಮುಂದುವರೆಯಲಿದೆ. ಒಟ್ಟಾರೆ ₹38 ಕೋಟಿ ರೂಪಾಯಿ ವೆಚ್ಚದಲ್ಲಿ 12 ರೈಲುಗಳ ಜೋಡಿ ಹಳಿ ಹಾಗೂ 4 ಹಳಿಗಳನ್ನು ಸಮೀಕ್ಷೆ ಮಾಡಲು ಯೋಜಿಸಲಾಗಿದೆ. 2 ವರ್ಷಗಳಲ್ಲಿ ಸಮೀಕ್ಷೆ ಮುಗಿಸುವ ಗುರಿ ಹೊಂದಲಾಗಿದೆ ಎಂದು ನೈರುತ್ಯ ರೈಲ್ವೆಯ ಮೂಲಗಳಿಂದ ತಿಳಿದುಬಂದಿದೆ.
ಈ ಮಾರ್ಗಗಳಲ್ಲಿ ನಾಲ್ಕು ಹಳಿ ನಿರ್ಮಾಣ
ಬೆಂಗಳೂರು-ತುಮಕೂರು (70 ಕಿಲೋ ಮೀಟರ್), ಬೆಂಗಳೂರು-ಮೈಸೂರು (137 ಕಿಲೋ ಮೀಟರ್), ಘಟ್ಟ ಪ್ರದೇಶ ಸೇರಿದಂತೆ ಬಂಗಾರಪೇಟೆ-ಜೋಲಾರಪೇಟೈ (72 ಕಿಲೋ ಮೀಟರ್), ಹುಬ್ಬಳ್ಳಿ-ಹೊಸಪೇಟೆ (143 ಕಿಲೋ ಮೀಟರ್) ಹಾಗೂ ಚಾಮರಾಜನಗರ-ಮೈಸೂರು (60 ಕಿಲೋ ಮೀಟರ್) ಮಾರ್ಗವನ್ನು ಜೋಡಿಹಳಿಯಿಂದ 4 ಹಳಿಗೆ ಹೆಚ್ಚಿಸಲು ಆರಂಭ ಮಾಡಲಾಗಿದೆ.
ಇನ್ನು ಒಂದೇ ಹಳಿ ಇರುವ ಹೊಸಪೇಟೆ-ವ್ಯಾಸ ಕಾಲೋನಿ (58 ಕಿ.ಮೀ.), ಹಾಸನ-ಕುಣಿಗಲ್-ಚಿಕ್ಕಬಾಣಾವರ (166 ಕಿ.ಮೀ.), ಗಿಣಿಗೇರಾ-ರಾಯಚೂರು (166 ಕಿ.ಮೀ.), ವ್ಯಾಸ ಕಾಲೋನಿ-ಕೊಟ್ಟೂರು-ಅಮರಾವತಿ ಕಾಲೋನಿ (196 ಕಿ.ಮೀ.), ಮಾಲ್ಗೂರು -ಮದಕ್ಷಿರ- ಹಿರಿಯೂರು ಹೊಸ ಮಾರ್ಗದ ಡಬ್ಲಿಂಗ್ (110 ಕಿ.ಮೀ.) ಹಾಗೂ ಗದಗ-ವಾಡಿ (257 ಕಿ.ಮೀ.) ನಡುವೆ ಜೋಡಿಹಳಿ ರೂಪಿಸಲು ಅಂತಿಮ ಸ್ಥಳ ಸಮೀಕ್ಷೆಗೆ ನೈಋತ್ಯ ರೈಲ್ವೆ ಟೆಂಡರ್ ಕರೆದಿದೆ.
ಬೆಂಗಳೂರು-ಮೈಸೂರು ನಡುವೆ ಸರಕಿಗಿಂತ ಹೆಚ್ಚು ಪ್ರಯಾಣಿಕರ ದಟ್ಟಣೆ ನಿಯಂತ್ರಣ ದೃಷ್ಟಿಯಿಂದ ಜೋಡಿ ಮಾರ್ಗ ಅಗತ್ಯವಾಗಿದೆ. ಇದನ್ನು ಮುಂದೆ ಸಬ್‌ಅರ್ಬನ್ ರೈಲಿಗೂ ಬಳಸಿಕೊಳ್ಳಬಹುದು. ಅಲ್ಲದೆ ಸರಕು ರೈಲನ್ನು ಒಂದು ಮಾರ್ಗದಲ್ಲಿ ಸಂಚರಿಸಿ, ಪ್ಯಾಸೆಂಜರ್ ರೈಲನ್ನು ಎರಡನೇ ಟ್ರ್ಯಾಕ್ ಹಾಗೂ 3-4ನೇ ಲೈನ್‌ನಲ್ಲಿ ಎಕ್ಸ್‌ಪ್ರೆಸ್, ಸೂಪರ್ ಫಾಸ್ಟ್ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.
ಶತಾಬ್ದಿ, ವಂದೇ ಭಾರತ್ ರೈಲನ್ನು ನೂತನ ಟ್ರ್ಯಾಕ್‌ಗಳಲ್ಲಿ ಓಡಿಸುವುದರಿಂದ ಹೆಚ್ಚಿನ ಅನುಕೂಲ ಆಗಲಿದೆ. ಬೆಂಗಳೂರು-ತುಮಕೂರು, ಬೆಂಗಳೂರು-ಬಂಗಾರಪೇಟೆ ಮಾರ್ಗದಲ್ಲೂ 4 ಹಳಿ ಅಗತ್ಯವಿದೆ. ಅರ್ಧ, ಮುಕ್ಕಾಲು ಗಂಟೆಗೆ ಈ ಮಾರ್ಗದಲ್ಲಿ ರೈಲು ಸಂಚರಿಸುವಂತಾದರೆ ಮಹಾನಗರ ಬೆಂಗಳೂರಿನ ರಸ್ತೆ ಸಾರಿಗೆ ಮೇಲಿನ ಒತ್ತಡ ನಿವಾರಣೆ ಆಗಲಿದೆ ಎಂದು ತಜ್ಞರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಗಿಣಿಗೇರಾ-ರಾಯಚೂರು, ಕುಡುಚಿ-ಬಾಗಲಕೋಟೆ, ತುಮಕೂರು-ರಾಯದುರ್ಗ, ತುಮಕೂರು- ಚಿತ್ರದುರ್ಗ ರೈಲ್ವೆ ಮಾರ್ಗ ಯೋಜನೆ ಕಾಮಗಾರಿ ಹಲವು ವರ್ಷದಿಂದ ಕುಂಟುತ್ತಾ ಸಾಗಿವೆ. ಇವುಗಳಿಗೆ ಭೂಸ್ವಾದೀನ ಸಮಸ್ಯೆಗಳು ಕಾಡುತ್ತಿವೆ.
ಮತ್ತೊಂದೆಡೆ ಮೈಸೂರು-ಚಾಮರಾಜನಗರ ಹಾಗೂ ಮೈಸೂರು-ಹಾಸನ- ಅರಸಿಕೆರೆ ಜೋಡಿ ಮಾರ್ಗ ಆಗಬೇಕು. ಅದರಂತೆ ಹಾಸನ- ಮಂಗಳೂರು ಮಾರ್ಗ ಕೂಡ ಡಬ್ಲಿಂಗ್ ಆಗಬೇಕು. ಆದ್ರೆ, ಸುಬ್ರಹ್ಮಣ್ಯ ಸಕಲೇಶಪುರದ ಘಟ್ಟಪ್ರದೇಶ ಹಿನ್ನೆಲೆ ಭೂಸ್ವಾದೀನ, ಅರಣ್ಯನಾಶದ ಆತಂಕವೂ ಇರುವುದರಿಂದ ಇಲ್ಲಿ ಜೋಡಿ ಹಳಿ ಮಾರ್ಗ ನಿರ್ಮಾಣ ಕಷ್ಟ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಜೋಡಿಹಳಿ ನಿರ್ಮಾಣಕ್ಕಾಗಿ ಅಗತ್ಯವಿರುವ ಭೂಸ್ವಾದೀನ, ನದಿ ಮೇಲಿನ ಸೇತುವೆಗಳ ನಿರ್ಮಾಣ, ಹೈಟೆನ್ಷನ್ ವಿದ್ಯುತ್ ಲೈನ್‌ಗಳನ್ನು ಗುರುತಿಸಿಕೊಳ್ಳುವುದು, ತಿರುವುಗಳನ್ನು ಗುರುತಿಸಿಕೊಳ್ಳುವುದು ಸೇರಿ ಹಲವು ವಿಚಾರ ಕಂಡುಕೊಳ್ಳಲು ಅಂತಿಮ ಸ್ಥಳ ಸಮೀಕ್ಷೆ ನಡೆಯಲಿದೆ. ಇದರ ಜೊತೆಗೆ ಪ್ರಯಾಣಿಕರ ಅಗತ್ಯತೆ ಮತ್ತು ಸರಕು ಸಾಗಣೆ ಪ್ರಮಾಣದಂತಹ ಸಾಧಕ ಬಾಧಕ ತಿಳಿದು ನೈರುತ್ಯ ರೈಲ್ವೆಯು ರೈಲ್ವೆ ಮಂಡಳಿಗೆ ವರದಿ ಸಲ್ಲಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications