Indian Railways: ದಟ್ಟ ಮಂಜು ಹಿನ್ನೆಲೆ ಡಿಸೆಂಬರ್‌ನಿಂದ ಈ ಮಾರ್ಗಗಳಲ್ಲಿ ರೈಲು ಸೇವೆ ರದ್ದು-ಪಟ್ಟಿ ಹೀಗಿದೆ

ಇದೀಗ ಚಳಿಗಾಲ ಆರಂಭವಾಗಿರುವ ಹಿನ್ನೆಲೆ ದಟ್ಟವಾದ ಮಂಜು ಬೀಳಲಿದೆ ಎನ್ನುವ ಮುನ್ಸೂಚನೆಯಿದೆ. ಆದ್ದರಿಂದ ಡಿಸೆಂಬರ್‌ನಿಂದ ಭಾರತೀಯ ರೈಲ್ವೆಯು ಈ ಮಾರ್ಗಗಳಲ್ಲಿ ರೈಲು ಸೇವೆಯನ್ನು ರದ್ದು ಮಾಡಲು ಮುಂದಾಗಿದೆ. ಹಾಗಾದರೆ ಯಾವೆಲ್ಲ ಮಾರ್ಗಗಳಲ್ಲಿ ಯಾವತ್ತಿನಿಂದ ರೈಲು ಸೇವೆ ರದ್ದಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಡಿಸೆಂಬರ್‌ ಮೊದಲ ವಾರದಿಂದ ಸಾವಿರಾರು ಪ್ರಯಾಣಿಕರು ದೂರದ ಮಾರ್ಗಗಳ ರೈಲುಗಳಲ್ಲಿ ಪ್ರಯಾಣಿಸಲು ಆಗುವುದಿಲ್ಲ. ದಟ್ಟವಾದ ಮಂಜು ಕವಿಯಲಿದ್ದು, ಮುಂಜಾಗ್ರತಾ ಕ್ರಮವಾಗಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗಬಾರದು ಎನ್ನುವ ದೃಷ್ಟಿಯಿಂದ ಭಾರತೀಯ ರೈಲ್ವೆ ವಿವಿಧ ಮಾರ್ಗಗಳಲ್ಲಿ ಅನೇಕ ರೈಲುಗಳನ್ನು ರದ್ದು ಮಾಡಲು ತೀರ್ಮಾನಿಸಿದೆ.

indian-railways-cancellation

ಇವುಗಳಲ್ಲಿ ಟಾಟಾ-ಅಮೃತಸರ, ಸಂತ್ರಗಚಿ-ಆನಂದ್‌ ವಿಹಾರ್‌, ಹಟಿಯಾ-ಆನಂದ್‌ ವಿಹಾರ್‌ ಮತ್ತು ಸೀಲ್ಹಾ-ಅಜ್ಮೀರ್‌ ನಡುವೆ ಚಲಿಸುವ ರೈಲುಗಳು ಸೇರಿವೆ. ಧನ್‌ಬಾದ್‌ನಿಂದ ಹುಟ್ಟುವ ಮತ್ತು ಹಾದುಹೋಗುವ ಇನ್ನೂ ಕೆಲವು ರೈಲುಗಳ ಸೇವೆಯು ರದ್ದಾಗುವ ಸಾಧ್ಯತೆಯಿದೆ ಎನ್ನುವ ಮಾಹಿತಿಯನ್ನು ನೀಡಿದೆ. ಕೆಲವು ರೈಲುಗಳ ರದ್ಧತಿಯನ್ನು ಈಗಾಗಲೇ ರೈಲ್ವೆ ಅಧಿಕಾರಿಗಳು ಘೋಷಿಸಿದ್ದಾರೆ. ಹಾಗಾದರೆ ಯಾವ್ಯಾವ ರೈಲುಗಳು ಯಾವಾಗ ರದ್ದಾಗಲಿವೆ ಎನ್ನುವ ಪಟ್ಟಿಯನ್ನು ಇಲ್ಲಿ ಗಮನಿಸಿ.

ರದ್ದಾಗುವ ರೈಲುಗಳ ಪಟ್ಟಿ ಹೀಗಿದೆ

1. 18103 ಟಾಟಾ ಅಮೃತಸರ ಜಲಿಯನ್‌ ವಾಲಾಬಾಗ್‌ ಎಕ್ಸ್‌ಪ್ರೆಸ್‌ ಅನ್ನು ಡಿಸೆಂಬರ್ 4ರಿಂದ ಫೆಬ್ರವರಿ 28ರವರೆಗೆ ರದ್ದಗೊಳಿಸಲಾಗಿದೆ.

2. 18103 ಅಮೃತಸರ ಟಾಟಾ ಜಲಿಯನ್‌ ವಾಲಾ ಎಕ್ಸ್‌ಪ್ರೆಸ್‌ ಡಿಸೆಂಬರ್‌ 6ರಿಂದ ಮಾರ್ಚ್‌ 1ರವರೆಗೆ ರದ್ದಾಗಲಿದೆ.

3. 22857 ಸಂತಗ್ರಚಿ-ಆನಂದ್‌ ವಿಹಾರ್‌ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ಅನ್ನು ಡಿಸೆಂಬರ್‌ 4ರಿಂದ ಫೆಬ್ರವರಿ 26ರವರೆಗೆ ರದ್ದುಗೊಳಿಸಲಾಗಿದೆ.

4. 22858 ಆನಂದ್‌ ವಿಹಾರ್‌ ಸಂತ್ರಗಾಚಿ ಸಾಪ್ತಾಯಿಕ ಎಕ್ಸ್‌ಪ್ರೆಸ್‌ ಡಿಸೆಂಬರ್‌ 5ರಿಂದ ಫೆಬ್ರವರಿ 27ರವರೆಗೆ ರದ್ದುಗೊಳಿಸಲಾಗಿದೆ.

5. 12873 ಹಟಿಯಾ ಆನಂದ್‌ ವಿಹಾರ್‌ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್‌ ಅನ್ನು ಡಿಸೆಂಬರ್‌ 4ರಿಂದ ಫೆಬ್ರವರಿ 29ರವರೆಗೆ ರದ್ದುಗೊಳಿಸಲಾಗಿದೆ.

6. 12874 ಆನಂದ್‌ ವಿಹಾರ್‌-ಹತಿಯಾ ಸ್ವರ್ಣ ಜಯಂತಿ ಎಕ್ಸ್‌ಪ್ರೆಸ್‌ ಅನ್ನು ಡಿಸೆಂಬರ್‌ 5ರಿಂದ ಮಾರ್ಚ್‌ 1ರವರೆಗೆ ರದ್ದು ಮಾಡಲಾಗಿದೆ.

7. 12987 ಸೀಲ್ದಾ-ಅಜ್ಮೀರ್‌ ಎಕ್ಸ್‌ಪ್ರೆಸ್‌ ಅನ್ನು ಬುಧವಾರ, ಶುಕ್ರವಾರ ಮತ್ತು ಭಾನುವಾರದಂದು ಡಿಸೆಂಬರ್‌ 3ರಿಂದ ಮಾರ್ಚ್‌ 1ರವರೆಗೆ ರದ್ದುಪಡಿಸಲಾಗಿದೆ.

8. 12988 ಅಜ್ಮೀರ್‌-ಸೀಲ್ದಾಹ್‌ ಎಕ್ಸ್‌ಪ್ರೆಸ್‌ ಅನ್ನು ಮಂಗಳವಾರ, ಗುರುವಾರ ಮತ್ತು ಶನಿವಾರದಂದು ಡಿಸೆಂಬರ್ 2ರಿಂದ ಫೆಬ್ರವರಿ 29ರವರೆಗೆ ರದ್ದುಗೊಳಿಸಲಾಗಿದೆ.

ಚಳಿಗಾಲದಲ್ಲಿ ದೇಶದ ಉತ್ತರ ಮತ್ತು ಪೂರ್ವ ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸುವ ನಿರೀಕ್ಷೆಯಿರುವುದರಿಂದ ರೈಲುಗಳ ರದ್ದತಿಗೆ ಕಾರಣವಾಗಿದೆ. ಮಂಜು ಗೋಚರತೆಯನ್ನು ಕಡಿಮೆ ಮಾಡುತ್ತದೆ ಮತ್ತು ರೈಲುಗಳ ಸುರಕ್ಷತೆ ಮತ್ತು ಸಮಯಪ್ರಜ್ಞೆಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಯಾವುದೇ ಅಹಿತಕರ ಘಟನೆ ತಪ್ಪಿಸಲು ಮತ್ತು ರೈಲುಗಳ ಸುಗಮ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಅಧಿಕಾರಿಗಳು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+