ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ಯಪ್ರಿಯರೇ: ಗೋವಾದಲ್ಲೂ ಇನ್ಮುಂದೆ ಬಿಯರ್ ರೇಟ್ ಮೊದಲಿನಂತಿಲ್ಲ!

|
Google Oneindia Kannada News

ಪಣಜಿ, ಅಕ್ಟೋಬರ್ 15: ಪ್ರವಾಸಿಗರ ಪಾಲಿನ ಹಾಟ್ ಸ್ಪಾಟ್ ಎಂದರೆ ಯುವಕ-ಯುವತಿಯರು ಮೊದಲು ಹೇಳುವ ಸ್ಥಳವೇ ಗೋವಾ. ಪ್ರವಾಸಿಗರ ಪಾಲಿನ ಸ್ವರ್ಗ ಎನಿಸಿರುವ ಗೋವಾ ಮತ್ತೊಂದು ವಿಷಯಕ್ಕೆ ಸಖತ್ ಫೇಮಸ್.

ಮದ್ಯಪ್ರೇಮಿಗಳಿಗೆ ಇಂದಿರನ ಆಸ್ಥಾನದಂತೆ ಗೋಚರಿಸುವ ಗೋವಾದಲ್ಲಿ ಬಿಯರ್ ಸಖತ್ ಚೀಪ್. ಭಾರತದಲ್ಲಿ ಅತ್ಯಂತ ಕಡಿಮೆ ದರದಲ್ಲಿ ಬಿಯರ್ ಸಿಗುವ ರಾಜ್ಯ ಯಾವುದು ಎಂದು ಕೇಳಿದರೆ ಎಲ್ಲರೂ ಹೇಳುವ ರಾಜ್ಯವೇ ಗೋವಾ. ಅಂಥ ರಾಜ್ಯದಲ್ಲಿ ಇದೀಗ ಅದೇ ಬಿಯರ್ ದರದಲ್ಲಿ ಏರಿಕೆಯ ಸುಳಿವು ಸಿಕ್ಕಿದೆ.

Navratri 2022: ಬೆಂಗಳೂರಿನ ವಿವಿಧೆಡೆ 2 ದಿನ ಮದ್ಯ ಮಾರಾಟ ನಿಷೇಧNavratri 2022: ಬೆಂಗಳೂರಿನ ವಿವಿಧೆಡೆ 2 ದಿನ ಮದ್ಯ ಮಾರಾಟ ನಿಷೇಧ

ಇನ್ಮುಂದೆ ಗೋವಾದಲ್ಲೂ ಕೂಡ ಕಡಿಮೆ ದರದಲ್ಲಿ ಬಿಯರ್ ಸಿಗುವುದಿಲ್ಲ. ಸಮುದ್ರ ನಗರದಲ್ಲಿ ಸಿಗುವ ಬಿಯರ್ ಬೆಲೆ ಮೊದಲಿಗಿಂತ ದುಬಾರಿ ಆಗಲಿದೆ ಎಂದು ಸ್ವತಃ ರಾಜ್ಯ ಸರ್ಕಾರವೇ ಘೋಷಿಸಿದೆ. ಗೋವಾದಲ್ಲಿ ಬಿಯರ್ ರೇಟ್ ಹೆಚ್ಚಾಗುವುದಕ್ಕೆ ಕಾರಣವೇನು?, ಬಿಯರ್ ದರ ಹೆಚ್ಚಳದ ಹಿಂದಿನ ಸೀಕ್ರೆಟ್ ಏನು? ಮದ್ಯಪ್ರಿಯರಿಗೆ ಶಾಕ್ ಕೊಟ್ಟಿದ್ದು ಏಕೆ ಗೋವಾ ಸರ್ಕಾರ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಗೋವಾದಲ್ಲಿ ಏರಿಕೆ ಆಗಿದ್ದು ಏಕೆ ಬಿಯರ್ ಬೆಲೆ?

ಗೋವಾದಲ್ಲಿ ಏರಿಕೆ ಆಗಿದ್ದು ಏಕೆ ಬಿಯರ್ ಬೆಲೆ?

ಮದ್ಯಪ್ರಿಯರಿಗೆ ಗೋವಾದಲ್ಲೂ ಇನ್ಮುಂದೆ ಕಡಿಮೆ ದರದಲ್ಲಿ ಬಿಯರ್ ಲಭ್ಯವಾಗುವುದಿಲ್ಲ. ಏಕೆಂದರೆ ಗೋವಾದ ರಾಜ್ಯ ಸರ್ಕಾರವು ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ 10-12 ರೂಪಾಯಿ ಹೆಚ್ಚಿಸಿದೆ. ಅದಾಗ್ಯೂ, ಹಾರ್ಡ್ ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿಲ್ಲ, ಈ ದರದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳಲಾಗಿದೆ. ಈ ಕ್ರಮವು ರಾಜ್ಯದಲ್ಲಿ ಮದ್ಯದ ವ್ಯವಹಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಮಹಾರಾಷ್ಟ್ರ ಕ್ರಮದಿಂದ ಗೋವಾದಲ್ಲಿ ಬಿಯರ್ ದರ ಏರಿಕೆ ಆಯ್ತಾ?

ಮಹಾರಾಷ್ಟ್ರ ಕ್ರಮದಿಂದ ಗೋವಾದಲ್ಲಿ ಬಿಯರ್ ದರ ಏರಿಕೆ ಆಯ್ತಾ?

ಗೋವಾದಲ್ಲಿ ಮದ್ಯದ ದರ ಏರಿಕೆಯ ಹಿಂದೆ ಮಹಾರಾಷ್ಟ್ರ ಸರ್ಕಾರ ತೆಗೆದುಕೊಂಡಿರುವ ಕ್ರಮವೇ ಕಾರಣ ಎಂದು ಹೇಳಲಾಗುತ್ತಿದೆ. ಏಕೆಂದರೆ ಮಹಾರಾಷ್ಟ್ರ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಜಾರಿಗೊಳಿಸುವುದರ ಭಾಗವಾಗಿ ಮದ್ಯದ ಆಮದಿನ ಮೇಲೆ ನಿಯಂತ್ರಣವನ್ನು ಹೇರಲಾಗುತ್ತಿದೆ. ಅಂದರೆೆ ಮಹಾರಾಷ್ಟ್ರ ಸರ್ಕಾರವು ರಾಜ್ಯಕ್ಕೆ ಗೋವಾದಿಂದ ಮದ್ಯ ಸಾಗಣೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ.

ಗೋವಾಗೆ ಹೋಗಲು ಜನ ಹಾಕ್ತಾರಾ ಹಿಂದೇಟು?

ಗೋವಾಗೆ ಹೋಗಲು ಜನ ಹಾಕ್ತಾರಾ ಹಿಂದೇಟು?

ಭಾರತದಲ್ಲಿ ಯಾವುದೇ ರಾಜ್ಯಕ್ಕೆ ಹೋಲಿಸಿ ನೋಡಿದರೂ ಅಷ್ಟೇ. ಗೋವಾದಲ್ಲಿ ಸಿಗುವಷ್ಟು ಕಡಿಮೆ ದರದಲ್ಲಿ ಯಾವುದೇ ರಾಜ್ಯವೂ ಮದ್ಯವನ್ನು ಮಾರಾಟ ಮಾಡುವುದಿಲ್ಲ. ವಿಶೇಷವಾಗಿ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಮದ್ಯವು ಕಡಿಮೆ ದರದಲ್ಲಿ ಸಿಗುವುದಿಲ್ಲ. ಹೀಗಾಗಿಯೇ ಅಗ್ಗದ ಬಿಯರ್ ಮಾರಾಟಕ್ಕೆ ಗೋವಾ ಹೆಸರುವಾಸಿ ಆಗಿದೆ. ಆದರೆ ಈಗ ಅದೇ ಬಿಯರ್ ಮೇಲಿನ ದರವನ್ನು ಹೆಚ್ಚಿಸಿರುವುದು ಗೋವಾದ ಪ್ರವಾಸೋದ್ಯಮದ ಮೇಲೆಯೂ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ.

ಗೋವಾದಲ್ಲಿ ಬಿಯರ್ ರೇಟ್ ಹೇಗಿದೆ?

ಗೋವಾದಲ್ಲಿ ಬಿಯರ್ ರೇಟ್ ಹೇಗಿದೆ?

ರಾಜ್ಯಾದ್ಯಂತ ವಿದೇಶಿ ಮದ್ಯ ಮಾರಾಟದಲ್ಲಿ ಶೇ.30-40ರಷ್ಟು ಕುಸಿತ ದಾಖಲಾಗಿದೆ. ಬಿಯರ್ ಮೇಲಿನ ಅಬಕಾರಿ ಸುಂಕವನ್ನು ಈಗ ಲೀಟರ್‌ಗೆ 30 ರೂಪಾಯಿಯಿಂದ 42 ರೂಪಾಯಿಗೆ ಹೆಚ್ಚಿಸಲಾಗಿದೆ. ಪ್ರೀಮಿಯಂ ವಿಭಾಗದಲ್ಲಿ, ಶೇ.5ಕ್ಕಿಂತ ಹೆಚ್ಚು ಆಲ್ಕೋಹಾಲ್ ಅಂಶವಿರುವ ಸ್ಟ್ರಾಂಗ್ ಬಿಯರ್ ಮತ್ತು ಚಿಲ್ಲರೆ ಬೆಲೆ ಪ್ರತಿ ಬಾಟಲಿಗೆ 160 ರೂಪಾಯಿ ಆಗಿದೆ. ಪ್ರತಿ ಬಲ್ಕ್ ಲೀಟರ್‌ಗೆ 60 ರೂಪಾಯಿ ಸುಂಕವನ್ನು ವಿಧಿಸಲಾಗುತ್ತಿದೆ, ಈ ಹಿಂದೆ ಬಲ್ಕ್ ಲೀಟರ್‌ಗೆ 50 ರೂಪಾಯಿ ಸುಂಕ ವಿಧಿಸಲಾಗುತ್ತಿತ್ತು.

English summary
In Future We Can't get Cheapest Beer in Goa also: Read here to know Why?.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X