ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Travel News: ಓಣಂ ಹಬ್ಬಕ್ಕಾಗಿ ಬೆಂಗಳೂರಿಗರು ಕೇರಳಕ್ಕೆ ಹೋಗುತ್ತಿಲ್ಲ ಏಕೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 29: ಓಣಂ ಹಬ್ಬಕ್ಕಾಗಿ ಕೇರಳಕ್ಕೆ ವಾಪಸ್ಸಾಗುವುದಕ್ಕೆ ಯೋಜನೆ ಹಾಕಿಕೊಂಡಿರುವ ಬೆಂಗಳೂರಿನ ಕೇರಳಿಗರು ಈಗ ಕಂಗಾಲಾಗಿ ನಿಂತಿದ್ದಾರೆ. ಆಗಸ್ಟ್ 31 ರಿಂದ ಪ್ರಾರಂಭವಾಗಲಿರುವ ಓಣಂ ಹಬ್ಬಕ್ಕಾಗಿ ಸಾವಿರಾರು ಜನರು ಮನೆಗೆ ಮರಳಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇದು ಸಾರಿಗೆ ವ್ಯವಸ್ಥೆ ಮೇಲೆ ಹೇಗೆ ಪರಿಣಾಮ ಬೀರಿದೆ ಎಂಬುದನ್ನು ತಿಳಿದುಕೊಳ್ಳೋಣ.

ಡೆಲಿವರಿ ಕೆಲಸಗಳಲ್ಲಿ ದೈನಂದಿನ ಕನಿಷ್ಠ ಗ್ಯಾರಂಟಿ ಮತ್ತು ವಾರದ ಪ್ರೋತ್ಸಾಹ ಧನನೊಂದಿಗೆ 30,000 ವರೆಗೆ ಗಳಿಸಿ.

ಬೆಂಗಳೂರಿನಿಂದ ಕೇರಳಕ್ಕೆ ಹೋಗಲು ವಿಶೇಷ ರೈಲ್ವೆ ವ್ಯವಸ್ಥೆಯ ನಿರೀಕ್ಷೆಯಲ್ಲಿದ್ದ ಕೇರಳಿಗರಿಗೆ ರೈಲ್ವೆ ಇಲಾಖೆಯು ನಿರಾಸೆ ಮೂಡಿಸಿದೆ. ವಾರಾಂತ್ಯದಲ್ಲಿ ಭಾರತೀಯ ರೈಲ್ವೇ ಕೇವಲ ಒಂದು ವಿಶೇಷ ರೈಲು ಘೋಷಿಸುವ ಮೂಲಕ ಪ್ರಯಾಣಿಕರಿಗೆ ಬೇಸರ ತರಿಸಿದೆ.

ಓಣಂ ವಿಶೇಷ: ಕರ್ನಾಟಕದಿಂದ ಕೇರಳಕ್ಕೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ ಓಣಂ ವಿಶೇಷ: ಕರ್ನಾಟಕದಿಂದ ಕೇರಳಕ್ಕೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್‌ಗಳ ವ್ಯವಸ್ಥೆ

ಈ ವರ್ಷದ ಆರಂಭದಲ್ಲಿ ಕೆಎಸ್‌ಆರ್‌ಟಿಸಿ-ಸ್ವಿಫ್ಟ್ ಅಡಿಯಲ್ಲಿ ಹೊಸ ಬಸ್‌ಗಳನ್ನು ವ್ಯವಸ್ಥೆಗೊಳಿಸಿದೆ. ಅದಾಗ್ಯೂ, ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸಹ ಭಾರಿ ಬೇಡಿಕೆಯನ್ನು ಪೂರೈಸಲು ಸ್ವತಃ ಸಜ್ಜುಗೊಳಿಸದ ಕಾರಣ ಬಸ್‌ಗಳ ಮೂಲಕ ಪ್ರವಾಸ ಮಾಡುವುದು ಕಷ್ಟಸಾಧ್ಯವಾಗಲಿದೆ. ಈ ಕುರಿತು ಒಂದು ವಿಶೇಷ ವರದಿಗಾಗಿ ಮುಂದೆ ಓದಿ ತಿಳಿಯಿರಿ.

ಮೂರು ಪಟ್ಟು ದರ ಹೆಚ್ಚಿಸಿದ ಖಾಸಗಿ ಬಸ್

ಮೂರು ಪಟ್ಟು ದರ ಹೆಚ್ಚಿಸಿದ ಖಾಸಗಿ ಬಸ್

ಬೆಂಗಳೂರಿನಿಂದ ಕೇರಳದ ತಮ್ಮ ಮನೆಗಳಿಗೆ ತೆರಳುವುದಕ್ಕಾಗಿ ಬೆಂಗಳೂರಿನ ಕೇರಳಿಗರು ಯೋಜನೆ ಹಾಕಿಕೊಂಡಿರುವುದು ಖಾಸಗಿ ಬಸ್ ಮಾಲೀಕರಿಗೆ ಲಾಭ ಗಳಿಕೆಯ ಮಾರ್ಗವನ್ನು ಕಂಡುಕೊಟ್ಟಿದೆ. ರೈಲ್ವೆ ಮತ್ತು ಸರ್ಕಾರ ಬಸ್ ಸೌಲಭ್ಯದಲ್ಲಿನ ವ್ಯತ್ಯಯವನ್ನು ಅರಿತಿರುವ ಖಾಸಗಿ ಬಸ್ಸುಗಳು ತಮ್ಮ ಟಿಕೆಟ್ ದರದಲ್ಲಿ ಮೂರು ಪಟ್ಟು ಹೆಚ್ಚಳ ಮಾಡುವುದಕ್ಕೆ ಮುಂದಾಗಿದೆ. ಈಗಾಗಲೇ ಸರಿಸುಮಾರು 300 ಖಾಸಗಿ ಬಸ್‌ಗಳನ್ನು ನಿರ್ವಹಿಸುವ ಟ್ರಾವೆಲ್ ಕಂಪನಿಗಳು ಹೆಚ್ಚುವರಿ ಬಸ್ ಬಿಟ್ಟಿದ್ದು, ಟಿಕೆಟ್ ದರವನ್ನು 4500 ರೂಪಾಯಿಗೆ ಹೆಚ್ಚಿಸುವ ಸಾಧ್ಯತೆಯಿದೆ.

5000 ರೂಪಾಯಿಗೆ ಹೆಚ್ಚಳವಾಗುತ್ತಾ ಟಿಕೆಟ್ ದರ?

5000 ರೂಪಾಯಿಗೆ ಹೆಚ್ಚಳವಾಗುತ್ತಾ ಟಿಕೆಟ್ ದರ?

ಬೆಂಗಳೂರು To ಕೇರಳ ಟಿಕೆಟ್ ದರದಲ್ಲಿ ಈಗಾಗಲೇ ಮೂರು ಪಟ್ಟು ಹೆಚ್ಚಿಸಿರುವ ಖಾಸಗಿ ಬಸ್ ಕಂಪನಿಗಳು ಓಣಂ ಹಬ್ಬ ಹತ್ತಿರಕ್ಕೆ ಬರುತ್ತಿದ್ದಂತೆ ಮತ್ತಷ್ಟು ಹೆಚ್ಚಳ ಮಾಡುವ ಸಾಧ್ಯತೆಗಳಿವೆ. ಆಗ ಟಿಕೆಟ್ ದರ 5000 ರೂಪಾಯಿಗೆ ಏರಿಕೆಯಾದರೂ ಆಶ್ಚರ್ಯವಿಲ್ಲ. ಈ ಸತ್ಯವನ್ನು ಅರಿತುಕೊಂಡಿರುವ ಕೆಲವು ಪ್ರಯಾಣಿಕರು ತಮ್ಮ ಕೇರಳದ ಪ್ರವಾಸವನ್ನೇ ರದ್ದುಪಡಿಸುವುದಕ್ಕೆ ನಿರ್ಧರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಖಾಸಗಿ ಬಸ್ ನಿರ್ವಾಹಕರ ವಿರುದ್ಧ ನೋಟಿಸ್ ಕಳುಹಿಸಲು ನಿರ್ಧಾರ

ಖಾಸಗಿ ಬಸ್ ನಿರ್ವಾಹಕರ ವಿರುದ್ಧ ನೋಟಿಸ್ ಕಳುಹಿಸಲು ನಿರ್ಧಾರ

ಬೆಂಗಳೂರಿನಿಂದ ತಿರುವನಂತಪುರಕ್ಕೆ ಸೇವೆಯನ್ನು ಒದಗಿಸುವ ಖಾಸಗಿ ಬಸ್ ನಿರ್ವಾಹಕರು ಟಿಕೆಟ್ ಅನ್ನು ಖಾತ್ರಿಪಡಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಅದರ ಬದಲಿಗೆ ಹೆಚ್ಚಿನ ದರಕ್ಕೆ ಆ ಸೀಟ್ ಅನ್ನು ಮಾರಾಟ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಟಿಕೆಟ್ ದರವನ್ನು ಸಹ ವಾಪಸ್ ನೀಡುತ್ತಿಲ್ಲ ಎಂದು ಐಟಿ ಹಬ್ ಮೂಲದ ವಕೀಲ ದೇವಿ ಬಿಜು ತಿಳಿಸಿದ್ದಾರೆ. ಕೆಲವು ಜನಪ್ರಿಯ ಆನ್‌ಲೈನ್ ಟ್ರಾವೆಲ್ ಪೋರ್ಟಲ್‌ಗಳು ಇದರೊಂದಿಗೆ ಕೈಜೋಡಿಸಿವೆ. ನಾನು ಇತ್ತೀಚೆಗೆ 2,000 ಕಳೆದುಕೊಂಡಿದ್ದೇನೆ ಮತ್ತು ಮರುಪಾವತಿಯನ್ನು ಕೋರಿ ಶೀಘ್ರದಲ್ಲೇ ಸಂಸ್ಥೆಗಳಿಗೆ ಕಾನೂನು ನೋಟಿಸ್ ಕಳುಹಿಸುತ್ತೇನೆ ಎಂದಿದ್ದಾರೆ.

ಈ ಮಾರ್ಗದಲ್ಲಿ ಹೆಚ್ಚಿನ ರೈಲುಗಳು ಮತ್ತು ಬಸ್‌ಗಳನ್ನು ನಿರ್ವಹಿಸುವುದು ಉತ್ತಮ ಪರ್ಯಾಯ ಮಾರ್ಗವಾಗಿದೆ. ಕೆಎಸ್‌ಆರ್‌ಟಿಸಿ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಇದುವರೆಗೆ ಒಂದೇ ಒಂದು ವಿಶೇಷ ರೈಲು ಘೋಷಣೆಯಾಗಿರುವುದು ವಿಷಾದದ ಸಂಗತಿಯಾಗಿದೆ. ಭಾರತೀಯ ರೈಲ್ವೆ ಮತ್ತು ಪ್ರವಾಸೋದ್ಯಮ ಕಾರ್ಪೊರೇಷನ್ (IRCTC) ವೆಬ್‌ಸೈಟ್ ತುಂಬಾ ನಿಧಾನವಾಗಿದೆ, ಇದು ಮತ್ತಷ್ಟು ಬೇಸರ ತರಿಸುತ್ತದೆ," ಎಂದು ಅವರು ಹೇಳಿದರು.

ಕಾರುಗಳ ಮೂಲಕ ಕೇರಳಕ್ಕೆ ಪ್ರಯಾಣಿಸುವ ವ್ಯವಸ್ಥೆ

ಕಾರುಗಳ ಮೂಲಕ ಕೇರಳಕ್ಕೆ ಪ್ರಯಾಣಿಸುವ ವ್ಯವಸ್ಥೆ

ಬೆಂಗಳೂರಿನಿಂದ ಕೇರಳಕ್ಕೆ ತೆರಳಲು ಕಾರುಗಳ ವ್ಯವಸ್ಥೆಯನ್ನು ಕಲ್ಪಿಸುವಂತೆ ಕೆಲವರು ಒತ್ತಾಯಿಸುತ್ತಿದ್ದಾರೆ. ಇದರ ಜೊತೆಗೆ ರಾಜ್ಯ ಸರ್ಕಾರಗಳು ಖಾಸಗಿ ಬಸ್ ನಿರ್ವಾಹಕರನ್ನು ನಿಯಂತ್ರಿಸಲು ಮತ್ತು ಪ್ರಯಾಣದ ದರದ ಮೇಲಿನ ದರವನ್ನು ನಿಗದಿಪಡಿಸಲು ಮುಂದಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ನಗರದಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣವನ್ನು ಅಭಿವೃದ್ಧಿಪಡಿಸಿರುವುದರಿಂದ ಬೆಂಗಳೂರು ಮಾರ್ಗದಲ್ಲಿ ಹೆಚ್ಚಿನ ರೈಲುಗಳನ್ನು ಓಡಿಸುವ ಸಾಮರ್ಥ್ಯವಿದೆ.

"ಪ್ರಯಾಣಿಕರು ಸಾಕಷ್ಟು ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಬಹುದು, ಆದ್ದರಿಂದ ಕಾಯುವ ಪಟ್ಟಿಯು 240 ಮೀರಿದಾಗ ವಿಶೇಷ ರೈಲುಗಳನ್ನು ನಿರ್ವಹಿಸಬಹುದು. ಅವರ ಕಡೆಯಿಂದ ದಕ್ಷಿಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಎರಡೂ ವಲಯದಲ್ಲಿ ಹೆಚ್ಚಿನ ರೈಲುಗಳಿಗೆ ಅವಕಾಶ ಕಲ್ಪಿಸಲು ಒಪ್ಪಿಕೊಳ್ಳಬೇಕು," ಎಂದು ಸಲಹೆ ನೀಡಲಾಗಿದೆ.

English summary
How Travel Plans Ruined For Bengaluru Keralites Heading Home For Onam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X