Indian railways: ಟಿಕೆಟ್ ಹೊರತುಪಡಿಸಿ ರೈಲ್ವೆಗೆ ಕೋಟಿ.. ಕೋಟಿ ಆದಾಯ ಬರುವುದು ಎಲ್ಲಿಂದ ಗೊತ್ತಾ?
ನವದೆಹಲಿ, ಅಕ್ಟೋಬರ್, 04: ಭಾರತೀಯ ರೈಲ್ವೆಯು ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಲೇ ಇದೆ. ಈ ಮೂಲಕ ಹೆಚ್ಚಿನ ಪ್ರಯಾಣಿಕರನ್ನು ತನ್ನತ್ತ ಸೆಳೆಯುತ್ತಲೇ ಇದೆ. ಆದರೆ ರೈಲ್ವೆಗೆ ಪ್ರಯಾಣಿಕರ ಟಿಕೆಟ್‌ಗಳನ್ನು ಹೊರತುಪಡಿಸಿದ ಬೇರೆ ಮೂಲಗಳಿಂದಲೇ ಕೋಟಿ..ಕೋಟಿ ಆದಾಯ ಬರುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಹಾಗಾದರೆ ಈ ದುಪ್ಪಟ್ಟು ಆದಾಯ ಯಾವ ಮೂಲಗಳಿಂದ ಬರುತ್ತದೆ ಹೇಗೆ ಬರುತ್ತದೆ ಎನ್ನುವ ಸಂಪೂರ್ಣ ವಿವರವನ್ನು ಇಲ್ಲಿ ತಿಳಿಯಿರಿ.
ಮೂಲಕಗಳ ಮಾಹಿತಿಯ ಪ್ರಕಾರ, 2023ರ ಮೊದಲ ಆರು ತಿಂಗಳ ಅವಧಿಯಲ್ಲಿ ರೈಲ್ವೆ ಇಲಾಖೆ ಬರೋಬ್ಬರಿ 75.82 ಟನ್ ಸರಕು ಸಾಗಾಣಿಕೆ ಮಾಡಿದೆ ಎನ್ನುವ ಮಾಹಿತಿ ತಿಳಿದುಬಂದಿದ್ದು, ಇದರಿಂದಲೇ ಹೆಚ್ಚಿನ ಆದಾಯ ರೈಲ್ವೆಗೆ ಬರುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ರೈಲ್ವೆ ಇಲಾಖೆಯ ಅಧಿಕೃತ ಮಾಹಿತಿ ಪ್ರಕಾರ ಏಪ್ರಿಲ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳವರೆಗೆ ಸರಕು ಸಾಗಾಣಿಕೆಯ ಮೂಲಕ 81,697 ಕೋಟಿ ರೂಪಾಯಿಗಳನ್ನು ರೈಲ್ವೆ ಇಲಾಖೆಗೆ ಆದಾಯ ಬಂದಿದೆ ಎಂದು ತಿಳಿಬಂದಿದೆ.

ಇದನ್ನು ಗಮನಿಸಿದರೆ ಹಿಂದಿನ (2022) ವರ್ಷಕ್ಕೆ ಹೋಲಿಸಿದರೆ ರೈಲ್ವೆ ಆದಾಯದಲ್ಲಿ 6.67% ಹೆಚ್ಚಳವನ್ನು ಕಂಡಿದೆ. ಇದರಿಂದಾಗಿ 2023 ರೈಲ್ವೆ ಇಲಾಖೆಯ ಆದಾಯದಲ್ಲಿ ಕೂಡ 5.07% ಹೆಚ್ಚಳ ಆಗಿರುವುದನ್ನು ನಾವು ಕಾಣಬಹುದಾಗಿದೆ. ಆದಾಯ ಹೆಚ್ಚಳಕ್ಕೆ ಸರಕು ಸಾಗಾಣಿಕೆಯ ಮೊದಲ ಕಾರಣ ಎಂದು ಹೇಳಬಹುದಾಗಿದೆ. ಸರಕು ಸಾಗಾಣಿಕೆ ವಿಚಾರಕ್ಕೆ ಬಂದರೆ ಕಲ್ಲಿದ್ದಲು. ಲೋಹ, ಕಬ್ಬಿಣ, ಸಿಮೆಂಟ್ ಹಾಗೂ ಇನ್ನಿತರ ವಸ್ತುಗಳನ್ನು ಕೂಡ ಸರಕು ಸಾಗಾಣಿಕೆ ವಿಭಾಗದಲ್ಲಿ ಪರಿಗಣಿಸಲಾಗುತ್ತದೆ. ಮತ್ತು ಟನ್‌ಗಟ್ಟಲೇ ಸರಕು ಸಾಗಾಣಿಕೆಯನ್ನು ಈ ಮೂಲಕ ಮಾಡಲಾಗುತ್ತದೆ.
ರೈಲ್ವೆ ಗ್ರಾಹಕರಿಗೆ ನೆರವಾಗುವ ರೀತಿಯಲ್ಲಿ ಪ್ರತಿಯೊಂದು ಸೇವೆಗಳನ್ನು ಕೂಡ ನಾವು ಕೇಂದ್ರೀಕೃತಗೊಳಿಸಿದ್ದೇವೆ ಎಂಬುದಾಗಿ ಕೂಡ ಹೇಳಿದ್ದು ನಿಜಕ್ಕೂ ಕೂಡ ಕೇವಲ ಪ್ರಯಾಣ ವಿಚಾರದಲ್ಲಿ ಮಾತ್ರವಲ್ಲದೆ, ಅವರಿಗೆ ಸಂಬಂಧಪಟ್ಟಂತಹ ವಸ್ತುಗಳನ್ನು ಸಹ ಸರಕು ಸಾಗಾಣಿಕೆ ಮೂಲಕ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಕೊಂಡೊಯ್ಯುವಲ್ಲಿ ಭಾರತೀಯ ರೈಲ್ವೆ ದೊಡ್ಡ ಮಟ್ಟದ ಆದಾಯವನ್ನು ಗಳಿಸುತ್ತಿದೆ. ಇದು ನಿಜಕ್ಕೂ ಕೂಡ ಆಶ್ಚರ್ಯಕರ ಎಂದರೆ ತಪ್ಪಾಗಲಾರದು.
ಒಟ್ಟಿನಲ್ಲಿ ಬಹುತೇಕ ಜನರು ಭಾರತೀಯ ರೈಲ್ವೆಗೆ ಟಿಕೆಟ್ ಕಲೆಕ್ಟ್, ದಂಡ ಸಂಗ್ರಹದಿಂದಲೇ ಇಷ್ಟೊಂದು ಆದಾಯ ಬರುತ್ತದೆ ಅಂತಲೇ ಭಾವಿಸಿರುತ್ತಾರೆ. ಆದರೆ ಇದೀಗ ಇವೆಲ್ಲಕ್ಕಿಂತ ಹೆಚ್ಚಾಗಿ ಸರಕು ಸಾಗಾಣಿಕೆಯಲ್ಲೇ ಹೆಚ್ಚಾಗಿ ಆದಾಯ ಬರುತ್ತದೆ ಎಂದು ತಿಳಿದುಬಂದಿದೆ.












Click it and Unblock the Notifications