ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆಲಿಕಾಪ್ಟರ್‌ನಲ್ಲಿ ಲಡಾಖ್ ಸುತ್ತಾಡಬೇಕೇ: ನಿಮಗೊಂದು ಅವಕಾಶ!

|
Google Oneindia Kannada News

ಲಡಾಖ್, ಜೂನ್ 28: ಲಡಾಖ್‌ನಲ್ಲಿ ಪ್ರಯಾಣಿಸಲು ಬಯಸುವ ಪ್ರಯಾಸಿಗರಿಗೆ ಸಿಹಿಸುದ್ದಿಯೊಂದನ್ನು ನೀಡಲಾಗಿದೆ. ಕೇಂದ್ರಾಡಳಿತ ಪ್ರದೇಶದಾದ್ಯಂತ ಪ್ರಯಾಣಿಸುವುದಕ್ಕೆ ಹೆಲಿಕಾಪ್ಟರ್ ಸೇವೆಯನ್ನು ಪ್ರಾರಂಭಿಸಲಾಗಿದೆ.

ಮೊದಲ ಬ್ಯಾಚ್ ಪ್ರವಾಸಿಗರು ಈಗಾಗಲೇ ಹೆಲಿ ಸೇವೆ ಪಡೆದುಕೊಂಡಿದ್ದಾರೆ, ಮಂಗಳವಾರ ಮೊದಲ ಬ್ಯಾಚ್ ನಲ್ಲಿ ಪ್ರವಾಸಿಗರಿಗೆ ಹೆಲಿಕಾಪ್ಟರ್ ಸೇವೆ ಒದಗಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಡಾಖ್ ಗಡಿಭಾಗದಲ್ಲಿ 25 ಯುದ್ಧವಿಮಾನ ಅಣಿಗೊಳಿಸಿ ಕಾದಿದೆ ಚೀನಾಲಡಾಖ್ ಗಡಿಭಾಗದಲ್ಲಿ 25 ಯುದ್ಧವಿಮಾನ ಅಣಿಗೊಳಿಸಿ ಕಾದಿದೆ ಚೀನಾ

ಹೆಲಿಕಾಪ್ಟರ್ ಸೇವೆಗಳು ಕೇಂದ್ರಾಡಳಿತ ಪ್ರದೇಶದಲ್ಲಿ ಸಾಮಾನ್ಯವಾಗಿ ಸ್ಥಳೀಯರು ಮತ್ತು ಪ್ರವಾಸಿಗರಿಗೆ ಲಭ್ಯವಿರುತ್ತವೆ ಎಂದು ಆಡಳಿತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಲಡಾಖ್‌ನ ನಾಗರಿಕ ವಿಮಾನಯಾನ ಇಲಾಖೆಯ ಆದೇಶದ ಪ್ರಕಾರ, ಲಡಾಖ್‌ನ ನಿವಾಸಿಗಳಿಗೆ ಸೇವೆಯನ್ನು ಪಡೆಯಲು ದರಗಳನ್ನು ಸೂಚಿಸಿದೆ. ಈ ಹೆಲಿಕಾಪ್ಟರ್ ಸೇವೆಗಳ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಟಿಕೆಟ್ ಬುಕ್ ಮಾಡಲು ಆನ್‌ಲೈನ್‌ನಲ್ಲಿ ವ್ಯವಸ್ಥೆ

ಟಿಕೆಟ್ ಬುಕ್ ಮಾಡಲು ಆನ್‌ಲೈನ್‌ನಲ್ಲಿ ವ್ಯವಸ್ಥೆ

"ಅಧಿಸೂಚಿತ ಮಾರ್ಗಗಳಲ್ಲಿ ಹೆಲಿಕಾಪ್ಟರ್ ಸೇವೆಯನ್ನು ಪಡೆದುಕೊಳ್ಳಲು ಬಯಸುವ ಪ್ರಯಾಣಿಗರು ಮೊದಲೇ ಆನ್‌ಲೈನ್‌ನ ಮೂಲಕ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಹೀಗೆ ಕಾಯ್ದಿರಿಸಲು ಬಯಸುವ ವ್ಯಕ್ತಿಗಳು ಆನ್‌ಲೈನ್‌ನಲ್ಲಿ https://heliservice.ladakh.gov.in/" ನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೊರಗಿನ ಪ್ರವಾಸಿಗರಿಗೆ ವಿಭಿನ್ನ ಬುಕಿಂಗ್ ವ್ಯವಸ್ಥೆ

ಹೊರಗಿನ ಪ್ರವಾಸಿಗರಿಗೆ ವಿಭಿನ್ನ ಬುಕಿಂಗ್ ವ್ಯವಸ್ಥೆ

ಲಡಾಖ್ ಪ್ರದೇಶದಲ್ಲಿ ಹೆಲಿಕಾಪ್ಟರ್ ಸೇವೆಯನ್ನು ಮುಕ್ತವಾಗಿ ಒದಗಿಸಲು ಎಲ್ಲ ರೀತಿ ಸಿದ್ಧತೆಯನ್ನು ಮಾಡಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಸ್ಥಳೀಯರಿಗೆ ಬೇರೆ ಮತ್ತು ಹೊರಗಿನ ಪ್ರವಾಸಿಗರಿಗೆ ಸುಲಭವಾಗಲು ವಿಭಿನ್ನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಲಡಾಖ್ ನಿವಾಸಿಗಳನ್ನು ಹೊರತುಪಡಿಸಿ ಇತರ ಪ್ರಯಾಣಿಕರಿಗೆ ಪೋರ್ಟಲ್‌ನಲ್ಲಿ ವಿಭಿನ್ನ ಬುಕಿಂಗ್ ಕಾರ್ಯವಿಧಾನವನ್ನು ಲಭ್ಯಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹವಾಮಾನ ಪರಿಸ್ಥಿತಿ, ಇತರೆ ಕಾರ್ಯಾಚರಣೆ ಮೇಲೆ ಟಿಕೆಟ್ ಲಭ್ಯತೆ

ಹವಾಮಾನ ಪರಿಸ್ಥಿತಿ, ಇತರೆ ಕಾರ್ಯಾಚರಣೆ ಮೇಲೆ ಟಿಕೆಟ್ ಲಭ್ಯತೆ

ಲಡಾಖ್ ವಲಯದಲ್ಲಿ ಹೆಲಿಕಾಪ್ಟರ್ ಸೇವೆಯನ್ನು ಪಡೆದುಕೊಳ್ಳುವುದಕ್ಕೆ ಟಿಕೆಟ್ ಬುಕ್ ಮಾಡುವವರು ಈ ಅಂಶವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಟಿಕೆಟ್‌ನ ಲಭ್ಯತೆಯು ಪ್ರಯಾಣಿಕರ ಸಂಖ್ಯೆ, ಹವಾಮಾನ ಪರಿಸ್ಥಿತಿ ಅಥವಾ ಯಾವುದೇ ಇತರ ಕಾರ್ಯಾಚರಣೆಯ ನಿರ್ಬಂಧಗಳನ್ನು ಅವಲಂಬಿಸಿರುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹೆಲಿಕಾಪ್ಟರ್ ಸೇವೆಯನ್ನು ಒದಗಿಸಲು ಯಾವ ಚಾಪರ್ ಬಳಕೆ?

ಹೆಲಿಕಾಪ್ಟರ್ ಸೇವೆಯನ್ನು ಒದಗಿಸಲು ಯಾವ ಚಾಪರ್ ಬಳಕೆ?

ಲಡಾಖ್ ಕೇಂದ್ರಾಡಳಿತ ಪ್ರದೇಶದಲ್ಲಿ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುವುದಕ್ಕೆ ಎರಡು ಚಾಪರ್ ಅನ್ನು ಬಳಕೆ ಮಾಡಿಕೊಳ್ಳಲಾಗಿದೆ. ಐದು ಆಸನಗಳನ್ನು ಹೊಂದಿರುವ ಬಿ-3 ಚಾಪರ್ ಮತ್ತು Mi-172 ಚಾಪರ್ ಅನ್ನು ಹೆಲಿಕಾಪ್ಟರ್ ಸೇವೆಗಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸೇವೆಗಳು ಲೇಹ್, ಕಾರ್ಗಿಲ್, ಪಾಡುಮ್, ಲಿಂಗ್‌ಶೆಡ್, ಡಿಬ್ಲಿಂಗ್, ನೇರಾಕ್, ಡಿಸ್ಕಿಟ್, ಟರ್ಟುಕ್, ಶ್ರೀನಗರ ಮತ್ತು ಜಮ್ಮುವಿನಲ್ಲೂ ಪ್ರಾರಂಭಿಸಲಾಗುವುದು ಎಂದು ಅವರು ಹೇಳಿದ್ದಾರೆ.

English summary
Helicopter services is starts for Ladakh tourists to travel across the Union Territory. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X