ಗೋವಾದ ಜಲಪಾತಗಳು ಹೊಸ ರೂಪ ಪಡೆಯಲಿವೆ: ಸಚಿವ
ಪಣಜಿ ಆಗಸ್ಟ್ 10: ಗೋವಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜಲಪಾತಗಳು ಪ್ರವಾಸಿಗರಿಗೆ ಹೊಸ ಸೌಲಭ್ಯಗಳನ್ನು ಒದಗಿಸುವ ಮೂಲಕ ಹೊಸ ರೂಪ ಪಡೆಯಲಿವೆ ಎಂದು ಗೋವಾ ಅರಣ್ಯ ಸಚಿವ ವಿಶ್ವಜಿತ್ ರಾಣೆ ಹೇಳಿದ್ದಾರೆ. ಗೋವಾವು ಹಲವಾರು ಜಲಪಾತಗಳನ್ನು ಹೊಂದಿದೆ ಮತ್ತು ಅವುಗಳಲ್ಲಿ ಹೆಚ್ಚಿನವು ಮಾನ್ಸೂನ್ ಸಮಯದಲ್ಲಿ ಸಕ್ರಿಯವಾಗುತ್ತವೆ.
"ಗೋವಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜಲಪಾತಗಳು ಪ್ರವಾಸಿಗರನ್ನು ಆಕರ್ಷಿಸಲಿವೆ. ಪ್ರವೇಶ ದ್ವಾರದಲ್ಲಿ ನೋಂದಣಿ ಕೌಂಟರ್, ಪ್ರತಿ 500 ಮೀಟರ್‌ಗಳಲ್ಲಿ ಜೈವಿಕ ಶೌಚಾಲಯಗಳು, ಪಿಕ್ನಿಕ್ ತಾಣಗಳು ಮತ್ತು ಗುಂಪುಗಳ ಜೊತೆಯಲ್ಲಿ ಮಾರ್ಗದರ್ಶನ, ಜನರು ಜಲಪಾತಗಳಿಗೆ ಭೇಟಿ ನೀಡಿ ಸೌಲಭ್ಯಗಳನ್ನು ಪಡೆದುಕೊಳ್ಳುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ' ಎಂದು ರಾಣೆ ಟ್ವೀಟ್ ಮಾಡಿದ್ದಾರೆ. ಅರಣ್ಯ ಇಲಾಖೆಯು ಜಲಪಾತಗಳ ರಕ್ಷಣೆಯನ್ನು ಖಚಿತಪಡಿಸುತ್ತದೆ ಮತ್ತು ಪ್ರವಾಸಿಗರ ಅನುಭವವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.
ಗೋವಾ ಸುಂದರವಾದ ಹಾಗು ಆಕರ್ಷಕವಾದ ನೈಟ್ ಪಾರ್ಟಿ, ಚರ್ಚ್, ಬೀಚ್ ಗಳು, ಮನಸೆಳೆಯುವ ಆಕರ್ಷಕ ಪ್ರೇಕ್ಷಣೀಯ ಸ್ಥಳಗಳು ಎಂಥವರನ್ನು ಮಂತ್ರಮುಗ್ಧರನ್ನಾಗಿಸದೇ ಬಿಡದು. ಗೋವಾ ಕಡಲತೀರಗಳು, ಪ್ರಾಚೀನವಾದ ಕಟ್ಟಡಗಳನ್ನು ಹೊರತುಪಡಿಸಿ, ಇಲ್ಲಿ ಸಹ್ಯಾದ್ರಿ ಬೆಟ್ಟಗಳ ನಡವೆ ಸುಂದರವಾದ ಭೂದೃಶ್ಯಗಳಿಂದ ಕೂಡಿದೆ. ಗೋವಾದಲ್ಲಿ ರಮಣೀಯವಾದ ಜಲಪಾತಗಳಿವೆ ಅವುಗಳ ಸೌಂದರ್ಯವನ್ನು ಸವಿಯಲು ಜನರು ಜೀವನದಲ್ಲಿ ಒಮ್ಮೆಯಾದರು ಗೋವಾಗೆ ಭೇಟಿ ನೀಡದಿರರು.

ಭಾರತದ 5ನೇ ಅತಿದೊಡ್ಡದಾದ ದೂಧ್ ಸಾಗರ್ ಜಲಪಾತ
ಈ ಸುಂದರವಾದ ಜಲಪಾತವು ಗೋವಾ ಹಾಗು ಕರ್ನಾಟಕ ಗಡಿಯಲ್ಲಿದೆ. ಇದು ಗೋವಾದ ಅತ್ಯುತ್ತಮವಾದ ಹಾಗು ಸುಂದರವಾದ ಜಲಪಾತವಾಗಿದೆ. ಇದು ಮಾಂಡೋವಿ ಎಂಬ ನದಿಯಿಂದ ಹುಟ್ಟುತ್ತದೆ. ಅಲ್ಲದೇ, ದೂಧ ಸಾಗರ್ ಎಂದರೆ ಹಾಲಿನ ಸಾಗರ ಎಂದೇ ಆಗಿದೆ. ಇಲ್ಲಿನ ಆಕರ್ಷಕವಾದ ಜಲಪಾತವು ಹಾಲ್ನೊರೆಯಂತೆ ಸುಮಾರು 130 ಮೀಟರ್ ಎತ್ತರದಿಂದ ಧರೆಗೆ ಧುಮ್ಮಿಕ್ಕುತ್ತದೆ. ಈ ರಮಣೀಯವಾದ ಜಲಪಾತವು ಭಾರತದ ಐದನೇ ಅತಿದೊಡ್ಡದಾದ ಜಲಪಾತವಾಗಿದೆ.

ಗೋವಾದ ಸುಂದರವಾದ ಹರ್ವಾಲೆಮ್ ಜಲಪಾತ
ಗೋವಾದ ಸುಂದರವಾದ ಜಲಪಾತಗಳಲ್ಲಿ ಈ ಹರ್ವಾಲೆಮ್ ಜಲಪಾತವು ಒಂದು. ಇದು ಗೋವಾದ ಸ್ಯಾಂಕ್ವೆಲಿಮ್ ಪಟ್ಟಣದಿಂದ ಕೇವಲ 2 ಕಿ.ಮೀ ದೂರದಲ್ಲಿದೆ. ಇದೊಂದು ಭವ್ಯವಾದ ಜಲಪಾತವಾಗಿದ್ದು, ಸುತ್ತಮುತ್ತ ದಟ್ಟವಾದ ಹಸಿರಿನ ಮಧ್ಯೆ ಕಂಗೊಳಿಸುತ್ತದೆ. ಇದು ತನ್ನ ಪರ್ವತಗಳಿಂದ ಧರೆಗೆ ಸುಮಾರು 50 ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಇದೊಂದು ಪಿಕ್ನಿಕ್ ತಾಣವಾಗಿದ್ದು, ಅನೇಕ ಪ್ರವಾಸಿಗರು ಈ ಜಲಪಾತಕ್ಕೆ ಭೇಟಿ ನೀಡಲು ಬಯಸುತ್ತಾರೆ. ಇಲ್ಲಿ ಜನಪ್ರಿಯವಾದ ಹಾಗು ನಿಮ್ಮ ಆಧ್ಯಾತ್ಮಿಕವನ್ನು ಹೆಚ್ಚಿಸುವ ರುದ್ರೇಶ್ವರ ದೇವಾಲಯವು ಕೂಡ ಇದೆ.

ಟ್ರೆಕ್ಕಿಂಗ್ ತಾಣ
ಗೋವಾದ ಮತ್ತೊಂದು ಜನಪ್ರಿಯವಾದ ಜಲಪಾತವೆಂದರೆ ಅದು ಹಿವ್ರೆ ಜಲಪಾತವಾಗಿದೆ. ಇದು ಗೋವಾ ವಾಲ್ ಪೋಯ್ ನಗರ ದಿಂದ ಕೇವಲ 14 ಕಿ.ಮೀ ದೂರದಲ್ಲಿರುವ ಹಿವ್ರೆ ಗ್ರಾಮದಲ್ಲಿ ಬೆಟ್ಟದ ಹಾದಿಯಲ್ಲಿ ನೆಲೆಗೊಂಡಿದೆ. ಈ ಮನೋಹರವಾದ ಜಲಪಾತಕ್ಕೆ ತೆರಳಲು ನೀವು ಬಯಸಿದರೆ, ಚಾರಣದ ಮಾರ್ಗದಿಂದಲೂ ತೆರಳಬಹುದು. ಅಂದರೆ, ಇದೊಂದು ಜನಪ್ರಿಯವಾದ ಟ್ರೆಕ್ಕಿಂಗ್ ತಾಣವಾಗಿದೆ.

ಕೇಸರ್ವಾಲ್ ಜಲಪಾತ
ಸದಾ ಜಲಪಾತವು ಆಹ್ಲಾದಕರವಾದ ವಾತಾವರಣವನ್ನು ಹೊಂದಿದೆ. ಈ ಜಲಪಾತದವರೆಗೆ ನಡೆದುಕೊಂಡು ಹೋಗುವುದೇ ಮೋಡಿ ಮಾಡುವ ಅನುಭೂತಿಯನ್ನು ಉಂಟು ಮಾಡುತ್ತದೆ. ಇದು ಗೋವಾದ ಚೋರ್ಲಾ ಘಾಟ್ ಗಳಲ್ಲಿ ನೆಲೆಸಿದ್ದು, ಗೋವಾದ ಸಣ್ಣ ಹಳ್ಳಿಯಿಂದ ಕೇವಲ 8 ಕಿ.ಮೀ ದೂರದಲ್ಲಿದೆ. ಟ್ರೆಕ್ಕಿಂಗ್ ಮಾಡಬಯಸುವವರಿಗೆ ಇದೊಂದು ಉತ್ತಮವಾದ ಸ್ಥಳ ಎಂದೇ ಹೇಳಬಹುದು. ಸುತ್ತಮುತ್ತಲಿನ ವಾತಾವರಣ, ಜುಳು ಜುಳು ಶಬ್ಧ ಆಕಾಶದಿಂದ ಧರೆಗೆ ಇಳಿಯುತ್ತಿರುವ ಜಲಪಾತದ ಅನುಭವವು ನಿಮಗೆ ಸ್ವರ್ಗದ ಅನುಭವವನ್ನು ಉಂಟು ಮಾಡುತ್ತದೆ.
ಗೋವಾದ ಮತ್ತೊಂದು ರಮಣೀಯವಾದ ಜಲಪಾತವೆಂದರೆ, ಕೇಸರ್ವಾಲ್ ಜಲಪಾತ. ಇದು ವೆರ್ನಾ ಪ್ರಸ್ಥಭೂಮಿಯಲ್ಲಿ ನೆಲೆಗೊಂಡಿದೆ. ಗೋವಾದ ಪಣಜಿಯಿಂದ ಸುಮಾರು 22 ಕಿ.ಮೀ ದೂರದಲ್ಲಿದೆ ಈ ಜಲಪಾತ. ಸುತ್ತಮುತ್ತ ಅನೇಕ ತೋಟಗಳು, ದಟ್ಟವಾದ ಹಸಿರುಗಳಿಂದ ಕೂಡಿದ್ದು, ಗೋವಾದ ಜಲಪಾತ ಪ್ರಿಯರು ಈ ಜಲಪಾತದಲ್ಲಿ ಮಿಂದೇಳುತ್ತಾರೆ. ಹೀಗೆ ಸ್ನಾನ ಮಾಡುವುದರಿಂದ ಅನೇಕ ಚರ್ಮ ರೋಗಗಳು ಗುಣವಾಗುತ್ತದೆ ಎಂದು ನಂಬಲಾಗಿದೆ. ಏಕೆಂದರೆ ಈ ಜಲಪಾಯದಲ್ಲಿ ಔಷಧಿಯ ಗುಣವನ್ನು ಹೊಂದಿದೆ ಎಂದು ಸ್ಥಳೀಯರ ನಂಬಿಕೆಯಾಗಿದೆ.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications