Ganesha Chaturthi; ಈ ರೈಲುಗಳಿಗೆ ಹೆಚ್ಚುವರಿ ಬೋಗಿ ಸೇರ್ಪಡೆ, ಪಟ್ಟಿ

ಬೆಂಗಳೂರು, ಸೆಪ್ಟೆಂಬರ್ 10; ಗಣೇಶ ಚತುರ್ಥಿ ಸಂದರ್ಭದಲ್ಲಿ ಸಂಚಾರ ನಡೆಸುವ ಪ್ರಯಾಣಿಕರಿಗಾಗಿ ಭಾರತೀಯ ರೈಲ್ವೆ ಹಲವು ಹೊಸ ರೈಲು ಓಡಿಸುತ್ತಿದೆ. ಅಲ್ಲದೇ ಕೆಲವು ರೈಲಗಳಿಗೆ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಹೆಚ್ಚುವರಿ ಬೋಗಿಯನ್ನು ಅಳವಡಿಕೆ ಮಾಡುತ್ತಿದೆ.

ನೈಋತ್ಯ ರೈಲ್ವೆ ಈ ಕುರಿತು ಪ್ರಕಟಣೆ ಮೂಲಕ ಮಾಹಿತಿ ನೀಡಿದೆ. ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಈ ರೈಲುಗಳಿಗೆ ತಾತ್ಕಾಲಿಕ ಆಧಾರದ ಮೇಲೆ ಹೆಚ್ಚುವರಿ ಬೋಗಿಗಳನ್ನು ಜೋಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

additional-coaches

ಯಾವ-ಯಾವ ರೈಲುಗಳು

* ರೈಲು ಸಂಖ್ಯೆ 07339 ಎಸ್.ಎಸ್.ಎಸ್ ಹುಬ್ಬಳ್ಳಿ-ಕೆ.ಎಸ್.ಆರ್ ಬೆಂಗಳೂರು ವಿಶೇಷ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಮೂರು ಹೆಚ್ಚುವರಿ ಸ್ಲಿಪರ್ ಕ್ಲಾಸ್ ಬೋಗಿಗಳನ್ನು ಸೆಪ್ಟೆಂಬರ್ 14 ರಿಂದ 19ರವರೆಗೆ ಜೋಡಿಸಲಾಗುತ್ತಿದೆ.

* ರೈಲು ಸಂಖ್ಯೆ 07340 ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ವಿಶೇಷ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಮೂರು ಹೆಚ್ಚುವರಿ ಸ್ಲಿಪರ್ ಕ್ಲಾಸ್ ಬೋಗಿಗಳನ್ನು ಸೆಪ್ಟೆಂಬರ್ 15 ರಿಂದ 20ರ ತನಕ ಜೋಡಣೆ.

* ರೈಲು ಸಂಖ್ಯೆ 12079 ಕೆ.ಎಸ್.ಆರ್ ಬೆಂಗಳೂರು-ಎಸ್.ಎಸ್.ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್‌ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ನಾನ್-ಎಸಿ ಚೇರ್ ಕಾರ್ ಬೋಗಿಯನ್ನು ಸೆಪ್ಟೆಂಬರ್ 15 ರಿಂದ 18ರ ತನಕ ಜೋಡಿಸಲಾಗುತ್ತಿದೆ.

* ರೈಲು ಸಂಖ್ಯೆ 12080 ಎಸ್.ಎಸ್.ಎಸ್ ಹುಬ್ಬಳ್ಳಿ-ಕೆ.ಎಸ್.ಆರ್ ಬೆಂಗಳೂರು ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ನಾನ್-ಎಸಿ ಚೇರ್ ಕಾರ್ ಬೋಗಿಯನ್ನು ಸೆಪ್ಟೆಂಬರ್ 15 ರಿಂದ 18ರ ತನಕ ಜೋಡಣೆ.

* ರೈಲು ಸಂಖ್ಯೆ 17309 ಯಶವಂತಪುರ-ವಾಸ್ಕೋ-ಡ-ಗಾಮಾ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿಯನ್ನು ಸೆಪ್ಟೆಂಬರ್ 14 ರಿಂದ ಅಕ್ಟೋಬರ್ 5ರ ರವರೆಗೆ ಜೋಡಿಸಲಾಗುತ್ತಿದೆ.

* ರೈಲು ಸಂಖ್ಯೆ 17310 ವಾಸ್ಕೋ-ಡ-ಗಾಮಾ-ಯಶವಂತಪುರ ಡೈಲಿ ಎಕ್ಸ್‌ಪ್ರೆಸ್ ರೈಲಿಗೆ ತಾತ್ಕಾಲಿಕವಾಗಿ ಒಂದು ಹೆಚ್ಚುವರಿ ಎಸಿ ತ್ರಿ ಟೈಯರ್ ಬೋಗಿಯನ್ನು ಸೆಪ್ಟೆಂಬರ್ 13 ರಿಂದ ಅಕ್ಟೋಬರ್ 4ರ ತನಕ ಜೋಡಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+