Shivamogga Airport: ಶಿವಮೊಗ್ಗದಿಂದ ಹೈದರಾಬಾದ್‌, ತಿರುಪತಿ, ಗೋವಾ ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್‌, ಸಮಯಗಳ ವಿವರ

ಶಿವಮೊಗ್ಗ, ಅಕ್ಟೋಬರ್‌, 17: ಶಿವಮೊಗ್ಗ ವಿಮಾನ ನಿಲ್ದಾಣದಿಂದ ಮೂರು ಹೊಸ ಸ್ಥಳಗಳಿಗೆ ವಿಮಾನ ಹಾರಾಟಕ್ಕೆ ದಿನಾಂಕ ನಿಗದಿಯಾಗಿದ್ದು, ಟಿಕೆಟ್‌ ಬುಕ್ಕಿಂಗ್‌ ಕೂಡ ಆರಂಭವಾಗಿದೆ. ಹಾಗಾದರೆ ಯಾವ ಮಾರ್ಗಗಳಿಗೆ ವಿಮಾನ ಸೇವೆ ಮತ್ತು ಯಾವಾಗ ಆರಂಭ ಆಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಸ್ಟಾರ್‌ ಏರ್‌ ಲೈನ್ಸ್‌ ವಿಮಾನಯಾನ ಸಂಸ್ಥೆಯು ಶಿವಮೊಗ್ಗದಿಂದ ತನ್ನ ಕಾರ್ಯಾಚರಣೆ ಆರಂಭಕ್ಕೆ ಸಿದ್ಧತೆ ಮಾಡಿಕೊಂಡಿದೆ. ಶಿವಮೊಗ್ಗದಿಂದ ತಿರುಪತಿ, ಗೋವಾ ಮತ್ತು ಹೈದರಾಬಾದ್‌ಗೆ ವಾರದಲ್ಲಿ 6 ದಿನ ವಿಮಾನಯಾನ ಸೇವೆ ಆರಂಭಿಸುತ್ತಿದೆ. ಈ ಸೇವೆಯು ನವೆಂಬರ್‌ 17ರಿಂದ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

flight-service-from-shivamogga-to-hyderabad

ಸ್ಟಾರ್‌ ಏರ್‌ ವಿಮಾನವು ಬೆಳಗ್ಗೆ 9:30ಕ್ಕೆ ಹೈದರಾಬಾದ್‌ನಿಂದ ಹೊರಡಲಿದ್ದಿ, ಬೆಳಗ್ಗೆ 10:35ಕ್ಕೆ ಶಿವಮೊಗ್ಗ ತಲುಪಲಿದೆ. ಬೆಳಗ್ಗೆ 11ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 12ಕ್ಕೆ ತಿರುಪತಿ ತಲುಪಲಿದೆ. ತಿರುಪತಿಯಿಂದ ಮಧ್ಯಾಹ್ನ 12:35ಕ್ಕೆ ಹೊರಟು ಮಧ್ಯಾಹ್ನ 1:40ಕ್ಕೆ ಶಿವಮೊಗ್ಗಕ್ಕೆ ವಾಪಸ್‌ ಆಗಲಿದೆ.

ಬಳಿಕ ಮಧ್ಯಾಹ್ನ 1.55ಕ್ಕೆ ಶಿವಮೊಗ್ಗದಿಂದ ಹೊರಟು ಮಧ್ಯಾಹ್ನ 2.45ಕ್ಕೆ ಗೋವಾ ತಲುಪಲಿದೆ. ಮತ್ತೆ ಗೋವಾದಿಂದ ಮಧ್ಯಾಹ್ನ 3:15ಕ್ಕೆ ಹೊರಟು ಸಂಜೆ 4:05ಕ್ಕೆ ಶಿವಮೊಗ್ಗ ತಲುಪಲಿದೆ. ಸಂಜೆ 4:30ಕ್ಕೆ ಶಿವಮೊಗ್ಗದಿಂದ ಹೊರಟು ಸಂಜೆ 5.30ಕ್ಕೆ ಹೈದರಾಬಾದ್‌ ತಲುಪಲಿದೆ. ಅಲ್ಲದೆ ಈಗಾಗಲೇ ಬುಕಿಂಗ್‌ ಪ್ರಕ್ರಿಯೆ ಕೂಡ ಆರಂಭ ಆಗಿದೆ ಎಂದು ತಿಳಿದುಬಂದಿದೆ.

ಆಗಸ್ಟ್ 31ರಂದು ಬೆಂಗಳೂರು-ಶಿವಮೊಗ್ಗ ಮಾರ್ಗದಲ್ಲಿ ವಿಮಾನ ಸೇವೆಗಳೊಂದಿಗೆ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಶೀಘ್ರದಲ್ಲೇ ಗೋವಾ, ತಿರುಪತಿ ಮತ್ತು ಹೈದರಾಬಾದ್‌ನ ಮೂರು ಸ್ಥಳಗಳಿಗೆ ನೇರ ವಿಮಾನ ಹಾರಾಟ ಆರಂಭ ಮಾಡಲಾಗುತ್ತದೆ. ಬೆಂಗಳೂರು ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ ಸ್ಟಾರ್ ಏರ್ ಶಿವಮೊಗ್ಗದಿಂದ ಈ ಮೂರು ಸ್ಥಳಗಳಿಗೆ ವಿಮಾನಯಾನವನ್ನು ಪ್ರಾರಂಭಿಸಲಿದೆ.

ವಿಮಾನಯಾನ ಸಂಸ್ಥೆಯು ಅಕ್ಟೋಬರ್ 15ರಂದು ಬೆಂಗಳೂರು-ಕೊಲ್ಲಾಪುರ-ಮುಂಬೈಗೆ ಹೊಸ ವಿಮಾನವನ್ನು ಪ್ರಾರಂಭಿಸಿತು. ಪ್ರಸ್ತುತ ಇಂಡಿಗೋ ಬೆಂಗಳೂರು ಮತ್ತು ಶಿವಮೊಗ್ಗ ನಡುವೆ ತಡೆರಹಿತ ದೈನಂದಿನ ವಿಮಾನಗಳನ್ನು ನಿರ್ವಹಿಸುತ್ತಿದೆ.

ಶಿವಮೊಗ್ಗ ವಿಮಾನ ನಿಲ್ದಾಣವನ್ನು ₹449.22 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ರನ್‌ವೇಯಲ್ಲಿ ಎ320 ವಿಮಾನಗಳಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ವಾಣಿಜ್ಯ ವಿಮಾನಗಳನ್ನು ನಿರ್ವಹಿಸುವ ಕರ್ನಾಟಕದ ಈ 9ನೇ ವಿಮಾನ ನಿಲ್ದಾಣವನ್ನು ಫೆಬ್ರವರಿ 27ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಈ ವಿಮಾನ ನಿಲ್ದಾಣವು ಬಹಳಷ್ಟು ಪ್ರವಾಸಿ ತಾಣಗಳನ್ನು ಹೊಂದಿರುವ ಶಿವಮೊಗ್ಗ ಮತ್ತು ಕರ್ನಾಟಕದ ಮಲೆನಾಡು ಪ್ರದೇಶಗಳಿಗೆ ಸಂಪರ್ಕ ಸಾಧಿಸುವ ನಿರೀಕ್ಷೆಯಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+