Get Updates
Get notified of breaking news, exclusive insights, and must-see stories!

ಏಷ್ಯಾದ ಅತಿ ದೊಡ್ಡ ಗಾಜಿನ ಮನೆ‌ ಬಗ್ಗೆ ನಿಮಗೆಷ್ಟು ಗೊತ್ತು?-ಇಲ್ಲಿದೆ ಮಾಹಿತಿ

ದಾವಣಗೆರೆ, ನವೆಂಬರ್‌, 20: ದಾವಣಗೆರೆ ಅಂದ ತಕ್ಷಣ ಮೊದಲು ಬಹುತೇಕರ ತಲೆಗೆ ಬರುವುದೇ ಬೆಣ್ಣೆ ದೋಸೆ. ಹಾಗೆಯೇ ಈ ನಗರದಲ್ಲಿ ಏಷ್ಯಾದ ಅತೀ ದೊಡ್ಡ ಗಾಜಿನ ಮನೆಯೂ ಕೂಡ ಇದೆ ಅನ್ನುವುದನ್ನು ಮರೆಯಬೇಡಿ. ನೀವು ಇಲ್ಲಿಗೆ ಭೇಟಿ ನೀಡಿದರೆ ಇದರ ಹಲವಾರು ಗೊತ್ತಿಲ್ಲದ ವಿಶೇಷತೆಗಳನ್ನು ತಿಳಿಯಲೇಬೇಕಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಇದೀಗ ಚಳಿಗಾಲೂ ಆರಂಭವಾಗಿದ್ದು, ವಾರಾಂತ್ಯ ಹಾಗೂ ರಜಾ ದಿನಗಳಲ್ಲೂ ಕೂಡ ಕುಟುಂಬದ ಜೊತೆ ಪ್ರವಾಸ ಕೈಗೊಳ್ಳಲು ದಾವಣಗೆರೆಯಲ್ಲಿರುವ ಗ್ಲಾಸ್‌ ಹೌಸ್‌ ಸೂಕ್ತ ತಾಣವಾಗಿದೆ. ಹಾಗಾದರೆ ಇಲ್ಲಿ ಏನೆಲ್ಲ ವಿಶೇಷತೆಗಳು ಇರಲಿವೆ, ಇಲ್ಲಿಗೆ ತಲುಪುವುದೇಗೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

Davanagere Glass house: Know Details of Asias largest glass house?

ಬೆಣ್ಣೆನಗರಿಯಲ್ಲಿನ ಗಾಜಿನ ಮನೆ ಪ್ರವಾಸಿಗರ ಗಮನ ಸೆಳೆಯುವುದರ ಜೊತೆಗೆ, ರಾಷ್ಟ್ರಮಟ್ಟದಲ್ಲಿಯೂ ಪ್ರಖ್ಯಾತಿ ಪಡೆದಿದೆ. ಪ್ರವಾಸಿಗರ ಪಾಲಿಗೆ ಅತ್ಯುತ್ತಮ ಪ್ರವಾಸಿ ತಾಣವೂ ಆಗಿದ್ದು, ಇಲ್ಲಿ ಸಾಕಷ್ಟು ವಿಶೇಷತೆಗಳನ್ನು ಕಾಣಬಹುದಾಗಿದೆ. ನಗರದಿಂದ ಕುಂದುವಾಡಕ್ಕೆ ಹೋಗುವ ಮಾರ್ಗದ ಮಧ್ಯದಲ್ಲಿ ಈ ಗಾಜಿನ ಮನೆ ಇದೆ. ಇದು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಬೇರೆಡೆ ಪ್ರಯಾಣ ಮಾಡುವವರು ಇಲ್ಲಿಗೆ ಭೇಟಿ ನೀಡಿ ಗಾಜಿನ ಮನೆಯ ಸೌಂದರ್ಯವನ್ನು ಸವಿದು ಹೋಗುತ್ತಾರೆ.

ಕೇವಲ 3 ಹೆಕ್ಟೇರ್‌ ವಿಸ್ತೀರ್ಣದಲ್ಲಿ ಗಾಜಿನ ಮೆನ ಇದೆ. ಆದರೆ ಸುತ್ತಮುತ್ತ ಇರುವ 12 ಹೆಕ್ಟೇರ್‌ ಜಾಗದಲ್ಲಿ ಸಿನಿಮಾ ಶೂಟಿಂಗ್‌ಗಳಿಗಾಗಿ ಹೇಳಿ ಮಾಡಿಸಿದ ಸುಂದರವಾದ ಜಾಗವಿದೆ. ಈಗಾಗಲೇ ಇಲ್ಲಿ ಸ್ಯಾಂಡಲ್‌ವುಡ್‌ನ ಹಲವು ಚಿತ್ರಗಳ ಚಿತ್ರೀಕರಣವೂ ಆಗಿದೆ. ನೋಡುಗರ ಪಾಲಿಗಂತೂ ಹೇಳಿ ಮಾಡಿಸಿದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.

ಇನ್ನು ವಾರಾಂತ್ಯದಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಕೇವಲ ಜಿಲ್ಲೆ ಮಾತ್ರವಲ್ಲದೆ ಬೇರೆ ಬೇರೆ ತಾಲೂಕುಗಳಿಂದಲೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವುದರಿಂದ ಗ್ಲಾಸ್ ಹೌಸ್‌ ನೋಡಲು ಪ್ರವಾಸಿಗರ ದಂಡೇ ಹರಿದುಬರುತ್ತದೆ. ಇಲ್ಲಿನ ಸೌಂದರ್ಯಕ್ಕೆ ಮಾರುಹೋದ ಪ್ರವಾಸಿಗರಂತೂ ಮತ್ತೆ ಮತ್ತೆ ವಿಸಿಟ್‌ ನೀಡುತ್ತಲೇ ಇರುತ್ತಾರೆ.

2013-14ನೇ ಸಾಲಿನಲ್ಲಿ ಗಾಜಿನ ಮನೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು. ಒಟ್ಟು 47.31 ಕೋಟಿ ರೂಪಾಯಿ ಹಣ ಮಂಜೂರಾಗಿತ್ತು. ಮುಖ್ಯವಾಗಿ ಕುಂದುವಾಡ ಕೆರೆಯ ಪಕ್ಕದಲ್ಲಿಅತಿ ದೊಡ್ಡದಾದ ಮತ್ತು ಸುಂದರವಾದ ಗಾಜಿನ ಮನೆಯ ಪ್ರಾರಂಭಿಕವಾಗಿ 25 ಕೋಟಿ 63 ಲಕ್ಷ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿತ್ತು.

ದಿನಗಳು ಕಳೆದಂತೆ ಯೋಜನೆಯ ಗಾತ್ರ ವೆಚ್ಚವೂ ಹೆಚ್ಚಾಗುತ್ತಾ ಹೋಯಿತು. ಗಾಜಿನ ಮನೆ ಮಾತ್ರವಲ್ಲದೇ ವಿದೇಶಿ ಗಿಡಗಳು ಕೂಡ ಇಲ್ಲಿವೆ. ಒಂದಕ್ಕಿಂತ ಮತ್ತೊಂದು ವಿಭಿನ್ನವಾದ ಗಿಡಗಳನ್ನು ಇಲ್ಲಿ ಇಡಲಾಗಿದೆ. ಜಪಾನ್, ಅಮೇರಿಕಾ ಸೇರಿದಂತೆ ಬೇರೆ ಬೇರೆ ದೇಶಗಳ ಗಿಡಗಳು ಇಲ್ಲಿರುವುದು ವಿಶೇಷ ಆಗಿದೆ.

ಎಸ್.ಎಸ್.ಮಲ್ಲಿಕಾರ್ಜುನ್ ಅವರು ತೋಟಗಾರಿಕೆ ಸಚಿವರಾಗಿದ್ದಾಗ ದಾವಣಗೆರೆಗೆ ಗಾಜಿನ ಮನೆ ತರಲು ಪಣ ತೊಟ್ಟಿದ್ದರು. ಇದು ರಾಮನಗರಕ್ಕೆ ಹೋಗುವ ಸಾಧ್ಯತೆಯಿತ್ತು. ಆದರೂ ಪಟ್ಟುಬಿಡದ ಮಲ್ಲಿಕಾರ್ಜುನ್ ಅವರು ದಾವಣಗೆರೆಗೆ ಮಂಜೂರಾತಿ ಮಾಡಿಸುವಲ್ಲಿ ಯಶಸ್ವಿಯಾಗಿದ್ದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಗಾಜಿನ ಮನೆ ಆಗಬೇಕೆಂಬ ಬೇಡಿಕೆಯಿತ್ತು. ಕೊನೆಗೂ ಶಕ್ತಿ ಬಳಸಿ ಬೆಣ್ಣೆನಗರಿಯಲ್ಲಿ ಈ ಸುಂದರ ಗಾಜಿನ ಮನೆ ರೂಪುಗೊಳ್ಳಲು ಕಾರಣಕರ್ತರಾದರು.

ಸುಮಾರು 108 ಮೀಟರ್ ಉದ್ದವಿರುವ ಗಾಜಿನ ಮನೆಯ ಅಗಲ 68 ಮೀಟರ್‌ ಇದ್ದು, 18 ಮೀಟರ್ ಎತ್ತರ ಇದೆ. ಇದನ್ನು ಸೇಂಟ್ ಗೊಬೇನ್ ಗ್ಲಾಸ್‌ಗಳನ್ನು ಬಳಸಿ ವೈವಿಧ್ಯಮಯವಾಗಿ ವಿನ್ಯಾಸ ರೂಪಿಸಲಾಗಿದೆ. ಒಳಗಡೆ ಗ್ರಾನೈಟ್ ನೆಲಹಾಸು ಅಳವಡಿಸಲಾಗಿದೆ. ಸೂರ್ಯನ ತಪ್ಪಿಸುವಂತೆ ಗ್ಲಾಸ್‌ಗಳನ್ನು ಹೊಂದಿಸಲಾಗಿದೆ. ಇದರಿಂದಾಗಿ ಬಿಸಿಲಿನ ತಾಪ ಒಳಗಡೆ ಬರುವುದಿಲ್ಲ. ಬದಲಾಗಿ ಇಲ್ಲಿ ತಂಪೆನೆಯ ವಾತಾವರಣದ ಜೊತೆಗೆ ತಂಗಾಳಿಯ ಅನುಭವವಾಗುತ್ತದೆ. ಇದು ಇಲ್ಲಿಗೆ ಬರುವವರಿಗೆ ಮತ್ತಷ್ಟು ಸಂತೋಷ ನೀಡುತ್ತದೆ.

ಇನ್ನು ಇಲ್ಲಿ ಇದೀಗ ಉದ್ಯಾನವನವೊಂದನ್ನು ಸಿದ್ಧಪಡಿಸಲಾಗುತ್ತಿದೆ. ಜೊತೆಗೆ ಇಲ್ಲಿಗೆ ಬರುವ ಪ್ರವಾಸಿಗರು ಕುಳಿತುಕೊಳ್ಳಲು ಬೆಂಚ್‌ಗಳನ್ನು ಅಳವಡಿಸಲಾಗಿದೆ. ಸ್ಪೈನ್, ಫಿಲಿಫೈನ್ಸ್, ಥೈಲಾಂಡ್‌ನಿಂದ ಇಲ್ಲಿಗೆ 300 ರಿಂದ 400 ಗಿಡಗಳನ್ನು ತಂದು ನೆಡಲಾಗಿದೆ. ಈ ಮಧ್ಯೆ ಸಂಗೀತ ಕಾರಂಜಿಯೂ ಇಲ್ಲಿದ್ದು, ಪ್ರವಾಸಿಗರಿಗೆ ಮತ್ತಷ್ಟು ರಂಗು ನೀಡುತ್ತಿದೆ. ಇಲ್ಲಿ ವರ್ಷಕ್ಕೊಮ್ಮೆ ಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲಾಗುತ್ತಿದೆ.

ಇನ್ನು ಹೂವು ಪ್ರಿಯರಿಗೆ, ಪ್ರವಾಸಿಗರಿಗೆ ಈ ತಾಣ ಮುದ ನೀಡುವುದಲ್ಲದೇ, ಮತ್ತೆ ಮತ್ತೆ ಇಲ್ಲಿಗೆ ಭೇಟಿ ನೀಡಬೇಕು ಎನಿಸುವಷ್ಟರ ಮಟ್ಟಿಗೆ ಗಮನ ಸೆಳೆಯುತ್ತಲೇ ಇದೆ. ಇಲ್ಲಿನ ಗ್ಲಾಸ್ ಹೌಸ್ ಈಗ ಕೇವಲ ದಾವಣಗೆರೆ ಮಾತ್ರವಲ್ಲ, ಇಡೀ ದೇಶದಲ್ಲಿಯೇ ಪ್ರಖ್ಯಾತಿ ಪಡೆದಿದೆ.

ಪ್ರವಾಸಿರು ಎಂಜಾಯ್ ಮಾಡಲು ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ, ಮಂಗಳೂರು, ಉಡುಪಿ ಸೇರಿದಂತೆ ಬೇರೆ ಬೇರೆ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಹೋಗುತ್ತಿದ್ದರು. ಆದರೆ ಇದೀಗ ಅದೆಷ್ಟೋ ಜನರು ಕುಟುಂಬ ಸಮೇತರಾಗಿ ಗ್ಲಾಸ್ ಹೌಸ್‌ಗೆ ಬಂದು ಇಲ್ಲಿನ ಸೌಂದರ್ಯವನ್ನು ಸವಿದು ಹೋಗುತ್ತಿರುವುದು ತುಂಬಾ ವಿಶೇಷವಾಗಿದೆ.

ವಾರಾಂತ್ಯದಲ್ಲಿ ಸಾವಿರಾರು ಜನ ಇಲ್ಲಿಗೆ ಮಕ್ಕಳೊಂದಿಗೆ ಬಂದು ಎಂಜಾಯ್ ಮಾಡುತ್ತಿದ್ದಾರೆ. ಯುವಕ, ಯುವತಿಯರಂತೂ ಇಲ್ಲಿಗೆ ಬಂದರೆ ತಮ್ಮದೊಂದು ಸೆಲ್ಫೀ ಫೋಟೋ ತೆಗೆದುಕೊಂಡು ಹೋಗದೇ ಹಿಂದಿರುಗುವುದಿಲ್ಲ. ಅಷ್ಟರ ಮಟ್ಟಿಗೆ ಇಲ್ಲಿನ ಸೌಂದರ್ಯ ಯುವಜನತೆಯನ್ನು ತನ್ನತ್ತ ಸೆಳೆಯುತ್ತಿದೆ.

ಗಾಜಿನ ಮನೆಯ ಸುತ್ತಲೂ ಹಚ್ಚ ಹಸಿರು, ಪ್ರವೇಶಿಸುತ್ತಿದ್ದಂತೆ ಕಲಾಕೃತಿಗಳು ಪ್ರವಾಸಿಗರನ್ನು ಸ್ವಾಗತಿಸುತ್ತಿದ್ದು, ಇದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೌರವ ಸಿಕ್ಕಿದೆ. ಈಗಾಗಲೇ ಬೆಣ್ಣೆನಗರಿ ಮಂಡಕ್ಕಿ, ಮೆಣಸಿನಕಾಯಿ ಬೋಂಡಾಕ್ಕೆ ಪ್ರಸಿದ್ಧಿಯಾಗಿದೆ. ಇದೀಗ ಗಾಜಿನ ಮನೆಯ ವಿನ್ಯಾಸವೂ ಕೂಡ ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಗಾಜಿನ ಕಟ್ಟಡ ನಿರ್ಮಾಣ ವಿಭಾಗದಲ್ಲಿ ಇಲ್ಲಿನ ಗಾಜಿನ ಮನೆಯು 2018ನೇ ಸಾಲಿನ ಝಾಕ್ ರಾಷ್ಟ್ರೀಯ ಪ್ರಶಸ್ತಿಗೆ ಪಾತ್ರವಾಗಿದೆ.

ಅಲ್ಲದೆ ಗಾಜಿನ ಮನೆಯು ದೇಶದ್ಯಾಂತ ಮನೆಮಾತಾಯಿತು. ಮುಂಬೈನಲ್ಲಿ ನಡೆದಿದ್ದ ಸಮಾರಂಭದಲ್ಲಿ ಬೆಂಗಳೂರಿನ ಆರ್ಗೊ ಫೆಸೆಡಸ್ ಕಂಪೆನಿಯ ಪಾಲುದಾರ ಅರವಿಂದ್ ದಾಸ್ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದರು. ಗಾಜಿನ ಮನೆ ನಿರ್ಮಾಣ ಜವಾಬ್ದಾರಿಯನ್ನು ನಿಕಿತಾ ಬಿಲ್ಡ್ ಟೆಕ್ ಕಂಪೆನಿ ಗುತ್ತಿಗೆ ಪಡೆದಿತ್ತು. ಮದನ್ ಅಸೋಸಿಯೇಷನ್ ಇದರ ವಿನ್ಯಾಸ ತಯಾರಿಸಿದ್ದು, ಈ ಕಂಪೆನಿಯು ಗಾಜಿನ ಕೆಲಸಗಳನ್ನು ಮಾಡಿತ್ತು. ಗಾಜಿನ ಮನೆ ನಿರ್ಮಾಣ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿರುವುದು ತೋಟಗಾರಿಕೆ ಇಲಾಖೆ ನಿರ್ದೇಶಕರಿಗೆ ಮಾತ್ರವಲ್ಲ, ಇಲ್ಲಿನ ಜಿಲ್ಲೆಯ ಜನರಿಗೂ ಖುಷಿ ಕೊಟ್ಟಿದೆ.

ಗಾಜಿನ ವಿಭಾಗದಲ್ಲಿ ದಾವಣಗೆರೆ ಗ್ಲಾಸ್ ಹೌಸ್‌ಗೆ ಪ್ರಥಮ ಸ್ಥಾನ ದೊರೆತಿತ್ತು. ಮಾಜಿ ಸಚಿವ ಎಸ್‌.ಎಸ್.ಮಲ್ಲಿಕಾರ್ಜುನ್ ನೆದರ್ ಲ್ಯಾಂಡ್‌ನಲ್ಲಿದ್ದ ಗಾಜಿನಮನೆಯ ಮಾದರಿಯಲ್ಲಿ ನಿರ್ಮಿಸುವಂತೆ ವಿನ್ಯಾಸ ತಯಾರಿಸಲು ಸಲಹೆ ನೀಡಿದ್ದರು. ಅದರಂತೆ 16 ಕೋಟಿ ರೂಪಾಯಿ ವೆಚ್ಚದಲ್ಲಿ ಗಾಜಿನ ಮನೆಯನ್ನು ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದು ದಿನ ಕಳೆದಂತೆ ಯೋಜನೆಯ ವೆಚ್ಚವೂ ಹೆಚ್ಚಾಯಿತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+