ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರು ಗಮನಿಸಲೇಬೇಕಾದ ಮಹತ್ವದ ಮಾಹಿತಿ
Chikkamagaluru Travel: ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣಗಳನ್ನು ಹೊಂದಿದ ಜಿಲ್ಲೆಗಳಲ್ಲಿ ಚಿಕ್ಕಮಗಳೂರು ಕೂಡ ಒಂದಾಗಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ತಾಣಗಳು, ಗಿರಿಶಿಖರಗಳಿಂದ ಕೂಡಿದ ಅಚ್ಚಹಸಿರಿನ ಪ್ರಕೃತಿಗೆ ಮನಸೋಲದವರಿಲ್ಲ. ಈ ಪ್ರಕೃತಿ ಸೊಬಗನ್ನು ಸವಿಯಲೆಂದೇ ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಅದರಲ್ಲೂ ಮಳೆಗಾಲ್ಲಂತೂ ಭೇಟಿ ನೀಡುವವರ ಸಂಖ್ಯೆ ತುಸು ಹೆಚ್ಚಾಗಿರುತ್ತದೆ. ಆದರೆ, ಇದೀಗ ಇಲ್ಲಿಗೆ ಭೇಟಿ ನೀಡುವವರು ಗಮನಿಸಲೇಬೇಕಾದ ಮಾಹಿತಿ ಇಲ್ಲಿದೆ.
ಕಾಫಿನಾಡು ಅಂತಲೇ ಪ್ರಸಿದ್ಧಿ ಪಡೆದಿರುವ ಚಿಕ್ಕಮಗಳೂರು ಜಿಲ್ಲೆಯು ಸ್ವರ್ಗದಂತಹ ಅನುಭವ ನೀಡುವ ಪ್ರವಾಸಿ ತಾಣಗಳನ್ನು ಹೊಂದಿದೆ. ಇವುಗಳನ್ನು ಸವಿಯಲೆಂದೇ ದೂರದ ಊರುಗಳಿಂದ ಪ್ರತಿನಿತ್ಯ ಪ್ರವಾಸಿಗರ ದಂಡೇ ಹರಿದುಬರುತ್ತದೆ. ಆದರೆ, ಇದೀಗ ಇಲ್ಲಿಗೆ ಭೇಟಿ ನೀಡುವವರಿಗೆ ಜಿಲ್ಲಾಡಳಿತ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, ಇದು ಮುಂದಿನ ತಿಂಗಳು ಸೆಪ್ಟೆಂಬರ್ 1ರಿಂದಲೇ ಜಾರಿಯಾಗಲಿದೆ ಎಂದು ತಿಳಿಸಿದೆ.

ಚಿಕ್ಕಮಗಳೂರು ಜಿಲ್ಲೆಯು ತನ್ನ ಒಡಲೊಳಗೆ ಅತ್ಯದ್ಭುತ ಪ್ರವಾಸಿ ತಾಣಗಳನ್ನು ಇಟ್ಟುಕೊಂಡಿದೆ. ಅಲ್ಲದೆ, ಇವುಗಳನ್ನು ಪ್ರವಾಸಿಗರಿಗೆ ಪ್ರದರ್ಶನ ಮಾಡುವ ಮೂಲಕ ಅವುಗಳ ವಿಶೇಷತೆಯನ್ನು ಸಾರುತ್ತಲೇ ಇರುತ್ತದೆ. ಅದರಲ್ಲೂ ಮಳೆಗಾಲದಲ್ಲಂತೂ ಇಲ್ಲಿನ ಪ್ರಕೃತಿ ಸೊಬಗನ್ನು ಸವಿಯುದರಲ್ಲಿ ಇರುವ ಮಜಾನೇ ಬೇರೆ. ಆದ್ದರಿಂದ ಈ ವೇಳೆ ಭೇಟಿ ನೀಡುವವರ ಸಂಖ್ಯೆ ತುಸು ಹೆಚ್ಚಾಗಿಯೇ ಇರುತ್ತದೆ.
ಇದೀಗ ಮಳೆಗಾಲ ಇದ್ದು, ಈ ವೇಳೆಯೇ ಅತೀ ಹೆಚ್ಚಾಗಿ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ಆದರೆ, ಇದೀಗ ಜಿಲ್ಲಾಡಳಿತ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಇನ್ಮುಂದೆ ಪ್ರವಾಸಿಗರು ಮುಳ್ಳಯ್ಯನಗಿರಿ, ಬಾಬಾಬುಡನ್‌ಗಿರಿಗೆ ಬರುವ ಮುನ್ನವೇ ಆನ್‌ಲೈನ್‌ನಲ್ಲಿ ಬುಕ್ಕಿಂಗ್ ಮಾಡಿಕೊಂಡು ಬರಬೇಕು. ಸೆಪ್ಟೆಂಬರ್ 1ರಿಂದ ಈ ವ್ಯವಸ್ಥೆ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.
ಚಂದ್ರದೋಣ ಪರ್ವತ ಶ್ರೇಣಿಯಲ್ಲಿ ಇರುವ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ, ಮಾಣಿಕ್ಯಧಾರ ಜಲಪಾತ ವೀಕ್ಷಣೆ ಮಾಡಲು ಬರುವ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಆಗುತ್ತಲಿದೆ. ಈ ಹಿನ್ನೆಲೆ ಪ್ರವಾಸಿ ತಾಣಗಳಲ್ಲಿ ದಟ್ಟಣೆ ಉಂಟಾಗುತ್ತಿದೆ. ಇದನ್ನು ನಿಯಂತ್ರಣ ಮಾಡಲು ಜಿಲ್ಲಾಡಳಿತ ಈ ನಿರ್ಧಾರಕ್ಕೆ ಕೈಹಾಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬುಕ್ಕಿಂಗ್ ಮಾಡುವುದೇಗೆ?: ಪ್ರವಾಸಿಗರು ಜಿಲ್ಲಾಡಳಿತದ ವೆಬ್‌ಸೈಟ್ http://chikkamagaluru.nic.in/en/tourismಗೆ ಭೇಟಿ ನೀಡಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ಇದರಲ್ಲಿ ದಿನಾಂಕ, ಸಮಯವನ್ನು ಮೊದಲೇ ಬುಕ್ಕಿಂಗ್ ಮಾಡಿಕೊಳ್ಳಬೇಕಾಗುತ್ತದೆ. ಹಾಗಾದ್ರೆ ಯಾವ ವಾಹನಕ್ಕೆ ಎಷ್ಟು ಶುಲ್ಕ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ಗಮನಿಸಿ.
ಶುಲ್ಕದ ವಿವರ: ಬೈಕ್‌ಗಳಿಗೆ 50 ರೂಪಾಯಿ, ಕಾರು 100 ರೂಪಾಯಿ, ತೂಫಾನ್ ವಾಹನ 150 ರೂಪಾಯಿ, ಟೆಂಪೋ ಟ್ರಾವೆಲ್‌ಗೆ 200 ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಪ್ರತಿದಿನ ಬೆಳಗ್ಗೆ 6ರಿಮದ ಮಧ್ಯಾಹ್ನ ಗಂಟೆವರೆಗೂ ಮೊದಲ ಅವಧಿ ಮತ್ತು ಮಧ್ಯಾಹ್ನ 1ರಿಂದ ಸಂಜೆ 6 ಗಂಟೆಯವರೆಗೆ ಎರಡನೇ ಅವಧಿ ಎಂದು ಸಮಯ ನಿಗದಿ ಪಡಿಸಲಾಗಿದೆ.
ಒಂದು ಅವಧಿಗೆ 6,000 ವಾಹನಗಳಿಗೆ ಅವಕಾಶ ಇರಲಿದೆ. ಮೊದಲು ಬುಕ್ಕಿಂಗ್ ಮಾಡಿಕೊಂಡವರಿಗೆ ಈ ಅವಕಾಶ ದೊರಕಲಿದೆ ಎಂದು ಪ್ರವಾಸೋದ್ಯಮ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ದ್ವಿಚಕ್ರ ವಾಹನ/ಆಟೋ ರಿಕ್ಷಾ 100 ರೂಪಾಯಿ, ಸ್ಥಳೀಯ ಟ್ಯಾಕ್ಸಿ 100, ಟೆಂಪೋ ಟ್ರಾವೆಲರ್ 50, ತೂಫಾನ್ ವಾಹನ 50, ಪ್ರವಾಸಿಗರ ಕಾರು/ಜೀಪು/ಎಸ್‌ಯುವಿಗಳಿಗೆ 300 ರೂಪಾಯಿ ನಗದಿ ಮಾಡಲಾಗಿದೆ. ಹೀಗೆ ಚಿಕ್ಕಮಗಳೂರು ಪ್ರಮುಖ ಪ್ರವಾಸಿ ತಾಣಗಳಿಗೆ ಭೇಟಿ ನೀಡುವವರಿಗೆ ಬುಕ್ಕಿಂಗ್ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಇದನ್ನು ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಜಾರಿಗಳಿಸಲಾಗಿದೆ ಅಂತಲೂ ತಿಳಿಸಿದೆ.












Click it and Unblock the Notifications