ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿಗರೇ ಭಾರತಕ್ಕೆ ಬರುವ ಮೊದಲು ಈ ಮಾರ್ಗಸೂಚಿ ಓದಿರಿ

|
Google Oneindia Kannada News

ನವದೆಹಲಿ, ಆಗಸ್ಟ್ 10: ಇದು ವಿದೇಶಿಗರಿಗೆ ಸಂಬಂಧಿಸಿದ ಸುದ್ದಿ. ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ನಂತರದಲ್ಲಿ ಪ್ರತಿಯೊಂದು ರಾಷ್ಟ್ರಗಳು ತಮ್ಮದೇ ಆಗಿರುವ ಮಾರ್ಗಸೂಚಿಗಳನ್ನು ರಚಿಸಿಕೊಂಡಿವೆ.

ವಿದೇಶಿಗರನ್ನು ಸ್ವಾಗತಿಸುವುದಕ್ಕೂ ಮೊದಲು ಅಥವಾ ಪ್ರಯಾಣಕ್ಕೆ ಅನುಮತಿ ನೀಡುವುದಕ್ಕೂ ಪೂರ್ವದಲ್ಲಿ ಕೆಲವು ನಿಯಮಗಳನ್ನು ಪಾಲನೆ ಮಾಡುವಂತೆ ಮಾರ್ಗಸೂಚಿಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ.

ಮಂಕಿಪಾಕ್ಸ್ ಪ್ರಕರಣ: ವಿಮಾನ ನಿಲ್ದಾಣ, ಬಂದರಿನಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ನಿರ್ಧಾರಮಂಕಿಪಾಕ್ಸ್ ಪ್ರಕರಣ: ವಿಮಾನ ನಿಲ್ದಾಣ, ಬಂದರಿನಲ್ಲಿ ಕಟ್ಟುನಿಟ್ಟಿನ ತಪಾಸಣೆಗೆ ನಿರ್ಧಾರ

ಭಾರತದಲ್ಲಿ ಇದೀಗ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಹಾವಳಿ ಕೊಂಚ ತಗ್ಗಿದೆ. ಆದರೆ ವಿದೇಶಿಗರಿಗೆ ಪ್ರಯಾಣದ ನಿರ್ಬಂಧಗಳು ಮತ್ತು ಕಠಿಣ ನಿಯಮಗಳು ಹಾಗೆ ಮುಂದುವರಿದಿವೆ. ಈ ಮಾರ್ಗಸೂಚಿಗಳನ್ನು ಪಾಲನೆ ಮಾಡುವುದು ಅಗತ್ಯವಾಗಿದೆ. ಭಾರತಕ್ಕೆ ಪ್ರಯಾಣಿಸುವುದಕ್ಕೆ ಪ್ಲಾನ್ ಹಾಕಿಕೊಂಡಿರುವ ಮಂದಿ ಈ ಮಾರ್ಗಸೂಚಿಗಳನ್ನು ಒಮ್ಮೆ ಗಮನವಿಟ್ಟು ಓದಿಕೊಳ್ಳುವುದು ಸೂಕ್ತ.

14 ದಿನಗಳ ಪ್ರಯಾಣದ ಮಾಹಿತಿ ನೀಡಬೇಕು

14 ದಿನಗಳ ಪ್ರಯಾಣದ ಮಾಹಿತಿ ನೀಡಬೇಕು

ಎಲ್ಲಾ ಪ್ರಯಾಣಿಕರು ಕಳೆದ 14 ದಿನಗಳ ಪ್ರಯಾಣದ ವಿವರಗಳನ್ನು ಒಳಗೊಂಡಂತೆ ನಿಗದಿತ ಪ್ರಯಾಣದ ಮೊದಲು ಆನ್‌ಲೈನ್ ಏರ್ ಸುವಿಧಾ ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ರೂಪದಲ್ಲಿ ಸಂಪೂರ್ಣ ಮತ್ತು ವಾಸ್ತವ ಮಾಹಿತಿಯನ್ನು ಸಲ್ಲಿಸಬೇಕು.

ಕೊರೊನಾ ವೈರಸ್ ನೆಗಟಿವ್ ವರದಿ ಅಪ್‌ಲೋಡ್ ಕಡ್ಡಾಯ

ಕೊರೊನಾ ವೈರಸ್ ನೆಗಟಿವ್ ವರದಿ ಅಪ್‌ಲೋಡ್ ಕಡ್ಡಾಯ

ಪ್ರಯಾಣಿಕರು ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ RT-PCR ಪರೀಕ್ಷೆಯ ನಕಾರಾತ್ಮಕ ವರದಿಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯ. ಪ್ರಯಾಣವನ್ನು ಕೈಗೊಳ್ಳುವ ಮೊದಲು 72 ಗಂಟೆಗಳ ಒಳಗೆ ಪರೀಕ್ಷೆಯನ್ನು ನಡೆಸಬೇಕು ಅಥವಾ ಕೋವಿಡ್-19 ವ್ಯಾಕ್ಸಿನೇಷನ್‌ನ ಪೂರ್ಣ ಪ್ರಾಥಮಿಕ ಲಸಿಕೆ ವೇಳಾಪಟ್ಟಿಯನ್ನು ಪೂರ್ಣಗೊಳಿಸಿದ ಪ್ರಮಾಣಪತ್ರ ಹೊಂದಿರಬೇಕು.

ದೇಶದ ಸ್ಥಳೀಯ ನಿಯಮಗಳ ಪಾಲನೆಗೆ ಬದ್ಧರಾಗಿರಬೇಕು

ದೇಶದ ಸ್ಥಳೀಯ ನಿಯಮಗಳ ಪಾಲನೆಗೆ ಬದ್ಧರಾಗಿರಬೇಕು

ಪ್ರತಿ ಪ್ರಯಾಣಿಕರು ವರದಿಯ ಸತ್ಯಾಸತ್ಯತೆಯ ಬಗ್ಗೆ ಘೋಷಣೆಯನ್ನು ಸಲ್ಲಿಸಬೇಕು. ಇಲ್ಲದಿದ್ದರೆ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸಬೇಕಾಗುತ್ತದೆ. ಪ್ರಯಾಣ ಆರಂಭಿಸುವುದುಕ್ಕೂ ಪೂರ್ವದಲ್ಲಿ ನಿಯಮಗಳ ಪಾಲನೆಗೆ ಬದ್ಧರಾಗಿರುವಂತೆ ಅವರು ಪ್ರಯಾಣೀಕರಿಸಬೇಕಾಗುತ್ತದೆ. ಭಾರತಕ್ಕೆ ಆಗಮಿಸಿದ ನಂತರದಲ್ಲಿ ಆ ಪ್ರಯಾಣಿಕರು ಸರ್ಕಾರಿ ಮತ್ತು ಪ್ರಾಧಿಕಾದ ನಿರ್ಧಾರಕ್ಕೆ ಬದ್ಧರಾಗಿರಬೇಕಾಗುತ್ತದೆ. ಈ ಸಂಬಂಧ ಪ್ರಯಾಣ ಕೈಗೊಳ್ಳುವುದಕ್ಕೆ ಮೊದಲೇ ಭರವಸೆ ನೀಡಬೇಕಾಗುತ್ತದೆ. ಮನೆ ಅಥವಾ ಸಾಂಸ್ಥಿಕ ಕ್ವಾರೆಂಟೇನ್ ಆಗುವ ಹಾಗೂ ಸ್ವಯಂ ಆರೋಗ್ಯ ಮೇಲ್ವಿಚಾರಣೆಗೆ ಒಳಗಾಗುವ ಅವಶ್ಯಕತೆ ಇರುತ್ತದೆ.

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಏರಿಳಿತ

ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಏರಿಳಿತ

ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಏರಿಳಿತದ ಮಧ್ಯೆ ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 4,41,90,697ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದೈನಂದಿನ ಪಾಸಿಟಿವಿಟಿ ದರ ಶೇ. 3.50 ರಿಂದ 4.94ಕ್ಕೆ ಏರಿಕೆಯಾಗಿದೆ. ಅದೇ ರೀತಿ ವಾರದ ಪಾಸಿವಿಟಿವಿಟಿ ದರವು ಶೇ.4.90 ರಷ್ಟಿದೆ. ಕಳೆದ 24 ಗಂಟೆಗಳಲ್ಲೇ 16,047 ಮಂದಿಗೆ ಕೋವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅದೇ ರೀತಿ ಸಕ್ರಿಯ ಪ್ರಕರಣಗಳ ಸಂಖ್ಯೆ 128,261ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

English summary
Central Govt guidelines for Travelling to India from abroad. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X