BMTC: ಇಂದಿನಿಂದ ಈ ಹೊಸ ಮಾರ್ಗಗಳಲ್ಲಿ ಓಡಲಿವೆ ಮಟ್ರೋ ಫೀಡರ್‌ ಬಸ್‌ಗಳು, ಸಮಯ, ಮಾರ್ಗಗಳ ವಿವರ

ಬೆಂಗಳೂರು, ಅಕ್ಟೋಬರ್‌, 23: BMTC ಇಂದಿನಿಂದ (ಅಕ್ಟೋಬರ್ 23) ನಾಲ್ಕು ಹೊಸ ಮಾರ್ಗಗಳಲ್ಲಿ ಮೆಟ್ರೋ ಫೀಡರ್ ಬಸ್‌ಗಳನ್ನು ಓಡಿಸಲಿದೆ. ಹಾಗಾದರೆ ಯಾವ್ಯಾವ ಮಾರ್ಗಗಳಲ್ಲಿ ಈ ಬಸ್‌ಗಳು ಸಂಚರಿಸಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

1. MF-9: ಹೂಡಿ ಮೆಟ್ರೋ ನಿಲ್ದಾಣ-ಕೆಆರ್ ಪುರಂ ಹೂಡಿ, ಅಯ್ಯಪ್ಪ ನಗರ ಮತ್ತು ದೇವಸಂದ್ರ ಮಾರ್ಗದಲ್ಲಿ ಎರಡು ಬಸ್‌ಗಳನ್ನು ನಿಯೋಜಿಸಲಾಗುವುದು. ಹೂಡಿಯಿಂದ ಮೊದಲ ಬಸ್ ಬೆಳಗ್ಗೆ 8.45ಕ್ಕೆ ಮತ್ತು ಕೊನೆಯ ಬಸ್ ಸಂಜೆ 5:55ಕ್ಕೆ ಹೊರಡಲಿದೆ. ಕೆಆರ್ ಪುರದಿಂದ ಮೊದಲ ಬಸ್ ಬೆಳಗ್ಗೆ 8ಕ್ಕೆ ಮತ್ತು ಕೊನೆಯ ಬಸ್ ಸಂಜೆ 5.10ಕ್ಕೆ ಹೊರಡಲಿದೆ.

BMTC: Metro feeder buses Service on these new routes from today, know timings, routes details

2. MF-15: ಜೆಪಿ ನಗರ ಮೆಟ್ರೋ ನಿಲ್ದಾಣ-ಜೆಪಿ ನಗರ 7ನೇ ಹಂತ (ಬ್ರಿಗೇಡ್ ಗಾರ್ಡೇನಿಯಾ) ಆರ್‌ವಿ ಡೆಂಟಲ್ ಕಾಲೇಜು, ಪುಟ್ಟೇನಹಳ್ಳಿ ಕ್ರಾಸ್ ಮತ್ತು ಬ್ರಿಗೇಡ್ ಮಿಲೇನಿಯಂ ಮಾರ್ಗದಲ್ಲಿ ಎರಡು ಬಸ್‌ಗಳನ್ನು ನಿಯೋಜಿಸಲಾಗುವುದು. ಜೆ.ಪಿ.ನಗರದ ಮೆಟ್ರೋ ನಿಲ್ದಾಣದಿಂದ ಮೊದಲ ಬಸ್ ಬೆಳಗ್ಗೆ 7 ಗಂಟೆಗೆ ಮತ್ತು ಕೊನೆಯದು ರಾತ್ರಿ 9:30ಕ್ಕೆ ಹೊರಡಲಿದೆ. ಜೆ.ಪಿ.ನಗರ 7ನೇ ಹಂತದಿಂದ ಮೊದಲ ಬಸ್ ಬೆಳಗ್ಗೆ 6:5ಕ್ಕೆ ಮತ್ತು ಕೊನೆಯ ಬಸ್ ರಾತ್ರಿ 9ಕ್ಕೆ ಹೊರಡಲಿದೆ.

3. MF-19: ರಾಗಿಗುಡ್ಡ, ರಾಘವೇಂದ್ರ ಸ್ವಾಮಿ ಮಠ, ಆರ್‌ವಿ ರಸ್ತೆ ಮೆಟ್ರೋ ನಿಲ್ದಾಣ, ಜಯನಗರ ಮೆಟ್ರೋ ನಿಲ್ದಾಣ ಮತ್ತು ಸಂಜಯ್ ಗಾಂಧಿ ಆಸ್ಪತ್ರೆ ಮೂಲಕ ಜಯನಗರ 9ನೇ ಬ್ಲಾಕ್ ರೌಂಡ್ ಟ್ರಿಪ್. ಈ ಮಾರ್ಗದಲ್ಲಿ ಒಂದು ಬಸ್ ಸಂಚರಿಸಲಿದೆ. ಮೊದಲ ಬಸ್ ಬೆಳಗ್ಗೆ 6.10ಕ್ಕೆ ಮತ್ತು ಕೊನೆಯದು ರಾತ್ರಿ 9ಕ್ಕೆ ಆರಂಭವಾಗಲಿದೆ.

4. MF-21: ಬನಶಂಕರಿ-ಬಿಟಿಎಂ ಲೇಔಟ್ (ಕುವೆಂಪು ನಗರ) ಜೆಪಿ ನಗರ 6ನೇ ಹಂತ, ಆರ್‌ವಿ ಡೆಂಟಲ್ ಕಾಲೇಜು, ಡೆಲ್ಮಿಯಾ, ಜೆಪಿ ನಗರ 3ನೇ ಹಂತ ಮತ್ತು ಮಹದೇಶ್ವರ ಲೇಔಟ್ ಮೂಲಕ ಸಂಚರಿಸಲಿದೆ. ಈ ಮಾರ್ಗದಲ್ಲಿ ಎರಡು ಬಸ್‌ಗಳು ಸಂಚರಿಸಲಿವೆ. ಎರಡೂ ಮಾರ್ಗಗಳಲ್ಲಿ, ಮೊದಲ ಬಸ್ ಬೆಳಗ್ಗೆ 6:40ಕ್ಕೆ ಮತ್ತು ಕೊನೆಯದು ರಾತ್ರಿ 8:25ಕ್ಕೆ ಪ್ರಾರಂಭ ಆಗಲಿದೆ.

ಐಸಿಸಿ ವಿಶ್ವಕಪ್ ಪಂದ್ಯಕ್ಕಾಗಿ ವಿಶೇಷ ಬಸ್‌ಗಳ ವ್ಯವಸ್ಥೆ

ಬೆಂಗಳೂರು ಐಸಿಸಿ ವಿಶ್ವಕಪ್ ಪಂದ್ಯಗಳನ್ನು ಆಯೋಜಿಸುವ ದಿನಗಳಲ್ಲಿ ಎಂ.ಚಿನ್ನಸ್ವಾಮಿ ಕ್ರೀಡಾಂಗಣ, ಎಂಜಿ ರಸ್ತೆ, ನಗರದ ಇತರ ಭಾಗಗಳೊಂದಿಗೆ ಸಂಪರ್ಕಿಸಲು ಬಿಎಂಟಿಸಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಿದೆ.

1. SBS-1K - HAL ರಸ್ತೆಯ ಮೂಲಕ ಕಾಡುಗೋಡಿ ಬಸ್ ನಿಲ್ದಾಣ

2. SBS-13K - ಹೂಡಿ ರಸ್ತೆ ಮೂಲಕ ಕಾಡುಗೋಡಿ ಬಸ್ ನಿಲ್ದಾಣ

3. G2 - ಅಗರ ಮತ್ತು ದೊಮ್ಮಸಂದ್ರ ಮೂಲಕ ಸರ್ಜಾಪುರ

4. G3 - ಹೊಸೂರು ರಸ್ತೆ ಮೂಲಕ ಎಲೆಕ್ಟ್ರಾನಿಕ್ಸ್ ಸಿಟಿ

5. G4 - ಜಯದೇವ ಆಸ್ಪತ್ರೆ ಮೂಲಕ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ

6. G6 - ಎಂಸಿಟಿಸಿ ಮೂಲಕ ಕೆಂಗೇರಿ KHB ಕ್ವಾರ್ಟರ್ಸ್, ನಾಯಂಡಹಳ್ಳಿ

7. G7 - ಮಾಗಡಿ ರಸ್ತೆ ಮೂಲಕ ಜನಪ್ರಿಯಾ ಟೌನ್‌ಶಿಪ್

8. G8 - ಯಶವಂತಪುರ ಮೂಲಕ ನೆಲಮಂಗಲ

9. G9 - ಯಲಹಂಕ 5ನೇ ಹಂತ ಹೆಬ್ಬಾಳದ ಮೂಲಕ

10. G10 - ಆರ್‌ಕೆ ಹೆಗಡೆ ನಗರ-ಯಲಹಂಕ ಟ್ಯಾನರಿ ರಸ್ತೆ ಮತ್ತು ನಾಗವಾರ ಮೂಲಕ

11. G11 - ಹೆಣ್ಣೂರು ರಸ್ತೆ ಮೂಲಕ ಬಾಗಲೂರು

12. KBS-12HK - ಟಿನ್ ಫ್ಯಾಕ್ಟರಿ ಮೂಲಕ ಹೊಸಕೋಟೆ

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಿಂದ ವೈಟ್‌ಫೀಲ್ಡ್ (ಕಾಡುಗೋಡಿ) ಮತ್ತು ಕೆಆರ್ ಪುರ ಮೆಟ್ರೋ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ಬಿಎಂಟಿಸಿ ಬಸ್‌ಗಳು ಇವಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+