ಸಾಲು-ಸಾಲು ರಜೆಯಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಹಾಯಾಗಿ ಸುತ್ತಬೇಕೆ? ಬೆಂಗಳೂರಿನ ಸಮೀಪದಲ್ಲಿವೆ ಸೂಕ್ತ ಪ್ರವಾಸಿ ತಾಣಗಳು
ಚಾಮರಾಜನಗರ, ಅಕ್ಟೋಬರ್, 10: ಶುಕ್ರವಾರ (ಅಕ್ಟೋಬರ್ 11) ಆಯುಧ ಪೂಜೆ ಬಳಿಕ ವಾರಾಂತ್ಯ 2 ರಜೆ ಬರುತ್ತಿದ್ದು, ಉದ್ಯೋಗಿಗಳಿಗೆ ದಸರಾ ಬಂಪರ್ ರಜೆ ಸಿಕ್ಕಿದೆ. ಮೈಸೂರಿನ ದಸರಾ ಕಣ್ತುಂಬಿಕೊಂಡ ಬಳಿಕ ಗಡಿಜಿಲ್ಲೆ ಪ್ರವಾಸಿ ತಾಣಗಳಿಗೂ ಭೇಟಿ ಕೊಟ್ಟರೇ ದಸರಾ ಪ್ರವಾಸ ಕಂಪ್ಲೀಟ್ ಆಗಲಿದೆ. ಹಾಗಾದರೆ ಪ್ರಮುಖ ಪ್ರವಾಸಿ ತಾಣಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಹೌದು.. ಮೈಸೂರಿನ ಪಕ್ಕದ ಜಿಲ್ಲೆಯಾದ, ಒಂದು ಕಾಲದಲ್ಲಿ ಅವಿಭಜಿತ ಮೈಸೂರಿನ ಭಾಗವಾಗಿದ್ದ ಚಾಮರಾಜನಗರ ಜಿಲ್ಲೆಯಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ಮೈಸೂರಿನ ದಸರಾ ಬಳಿಕ ಗಡಿಜಿಲ್ಲೆ ಪ್ರವಾಸಿ ತಾಣಗಳಿಗೂ ಪ್ರವಾಸಿಗರು ಭೇಟಿ ಕೊಟ್ಟು ರಜೆಯ ಮಜಾ ಅನುಭವಿಸಬಹುದಾಗಿದೆ.

ಒಂದೂವರೆ ತಾಸಲ್ಲೇ ಭೇಟಿ ನೀಡಿ: ಕಾರು, ಬೈಕ್‌ಗಳಾದರೆ, ಮೈಸೂರಿನಿಂದ ಕೇವಲ ಒಂದೂವರೆ-ಎರಡು ತಾಸಲ್ಲೇ ಚಾಮರಾಜನಗರದ ಗುಂಡ್ಲುಪೇಟೆಗೆ ಬರಬಹುದಾಗಿದೆ. ಗುಂಡ್ಲುಪೇಟೆಯಿಂದ ಬಂಡೀಪುರ ಸಫಾರಿ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಹುಲುಗನ ಮುರುಡಿ, ತ್ರಯಂಬಕೇಶ್ವರ ದೇಗುಲವನ್ನು ಕಣ್ತುಂಬಿಕೊಳ್ಳಬಹುದಾಗಿದೆ.
ಗುಂಡ್ಲುಪೇಟೆಯಿಂದ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಬಸ್ ಸೌಕರ್ಯವೂ ಇದ್ದು, ಇದು ದಟ್ಟ ಮಂಜು ಕವಿದ ಬೆಟ್ಟವಾಗಿದೆ. ಬೆಟ್ಟದ ದರ್ಶನ ಮುಗಿಸಿದ ಬಳಿಕ ತೆರಕಣಾಂಬಿ ಮಾರ್ಗದಲ್ಲಿರುವ ಪುರಾತನ ದೇಗುಲಗಳಾದ ತ್ರಯಂಬಕೇಶ್ವರನ ಸನ್ನಿಧಿ, ಗುಂಡ್ಲುಪೇಟೆ ವಿಜಯನಾರಯಣ ಸ್ವಾಮಿ ಸನ್ನಿಧಿಗೆ ನಮಿಸಬಹುದು. ಬಳಿಕ, ಬಂಡೀಪುರ ಸಫಾರಿಗೆ ತೆರಳಬಹುದು. ಸಫಾರಿ ಕೇಂದ್ರಕ್ಕೆ ತೆರಳಿ ಟಿಕೆಟ್ ಖರೀದಿಸಬಹುದಾದರೂ ಆನ್‌ಲೈನ್ ಬುಕ್ಕಿಂಗ್ ಮಾಡಿದರೆ ಉತ್ತಮ.
ಬಸ್‌ಗಳಾಗಲಿ, ಕಾರು-ಬೈಕ್‌ಗಳಲ್ಲಾಗಲಿ ಮೈಸೂರಿನಿಂದ ಒಂದೂವರೆ ತಾಸಲ್ಲಿ ಚಾಮರಾಜನಗರ ಜಿಲ್ಲಾ ಕೇಂದ್ರಕ್ಕೆ ಬರಬಹುದಾಗಿದ್ದು, ಮೈಸೂರಿನ ಒಡೆಯರ್ ಕಟ್ಟಿರುವ ಚಾಮರಾಜೇಶ್ವರ ದೇಗುಲ ಭೇಟಿ ಕೊಡಬಹುದು. ಚಾಮರಾಜನಗರದಿಂದ 20-25 ಕಿಲೋ ಮೀಟರ್ ದೂರದಲ್ಲಿ ಅವಳಿ ಜಲಾಶಯಗಳಾದ ಚಿಕ್ಲಹೊಳೆ-ಸುವರ್ಣಾವತಿ ಡ್ಯಾಂಗಳಿದ್ದು ಪಿಕ್ ನಿಕ್‌ಗೆ ಹೇಳಿ ಮಾಡಿಸಿದ ಜಾಗಗಳಾಗಿದೆ.
ವನ್ಯಲೋಕವನ್ನು ಇಚ್ಛಿಸುವರಾದರೇ ಚಾಮರಾಜನಗರದಿಂದ ಕೆ.ಗುಡಿಗೆ ತೆರಳಬಹುದಾಗಿದ್ದು, ಇಲ್ಲಿ ಜಂಗಲ್ ಸಫಾರಿಯೂ ಇದೆ. ದಟ್ಟ ಕಾನನದ ಮಧ್ಯೆ ಸಂಚಾರ ಮಾಡುವುದೇ ಒಂದು ರೋಮಾಂಚಕ ಅನುಭವ ಕೊಡಲಿದೆ. ಕೆ.ಗುಡಿ ಬಳಿಕ, ಪ್ರಸಿದ್ಧ ಯಾತ್ರ ಸ್ಥಳವಾದ ಬಿಳಿಗಿರಿರಂಗನ ಬೆಟ್ಟಕ್ಕೆ ತೆರಳಿ ಹಚ್ಚ ಹಸಿರನ್ನು ಕಣ್ತುಂಬಿಕೊಳ್ಳಬಹುದು.
ಜೊತೆಗೆ, ಶುದ್ಧ ಜೇನು, ಕಾಫಿ, ಮೆಣಸು, ಬೆಟ್ಟದ ನೆಲ್ಲಿಕಾಯಿ ಸೇರಿದಂತೆ ಇತರೆ ಸ್ಥಳೀಯ ವಸ್ತುಗಳನ್ನು ಸವಿಯಬಹುದಾಗಿದೆ. ಇನ್ನು ಯಳಂದೂರು ಪಟ್ಟಣದಲ್ಲಿ ಬಳೆ ಮಂಟಪವಿದ್ದು, ಕಲ್ಲಿನಲ್ಲಿ ಬಳೆಗಳನ್ನು ಮಾಡಿ ಪೋಣಿಸಲಾಗಿದೆ. ಪುರಾತನ ಶಿಲ್ಪವನ್ನು ನೀವು ಎಷ್ಟು ಸಾರಿ ನೋಡಿದರೂ ಬೆಕ್ಕಸ ಬೆರಗಾಗುವುದು ಖಂಡಿತ.
ಮಾದಪ್ಪನ ಪುಣ್ಯ ಕ್ಷೇತ್ರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಮಲೆ ಮಹದೇಶ್ವರ ಬೆಟ್ಟವಿದ್ದು, ಒಂದು ದಿನದ ಯಾತ್ರೆಗೆ ಸೂಕ್ತವಾಗಿದೆ. ಬೇಡಿದ್ದನ್ನು ಕೊಡುವ ಮಾದಪ್ಪ ಎಂದೇ ಹೆಸರಾಗಿರುವ ಮಹದೇಶ್ವರನಲ್ಲಿ ನಿಮ್ಮ ಇಷ್ಟಾರ್ಥ ಬೇಡಿಕೊಳ್ಳಬಹುದಾಗಿದೆ.
ಎರಡು ಜಲಪಾತಗಳನ್ನು ಕಣ್ತುಂಬಿಕೊಳ್ಳಿ: ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ, ಐತಿಹಾಸಿಕ ವೆಸ್ಲಿ ಸೇತುವೆ, ಶಿವನ ಸಮುದ್ರದಲ್ಲಿನ ಸಮೂಹ ದೇವಾಲಯಗಳು ಪ್ರವಾಸಿಗರ ನೆಚ್ಚಿನ ಸ್ಥಳಗಳಾಗಿದೆ. ಜೊತೆಗೆ, ಭಾರತದ ನಯಾಗರ ಎಂದೇ ಕರೆಯುವ ಹೊಗೆನಕಲ್ ಜಲಪಾತ ಹನೂರು ತಾಲೂಕಿನಲ್ಲಿದ್ದು, ಮಾದಪ್ಪನ ದರ್ಶನದ ಬಳಿಕ ಹೊಗೆನಕಲ್ ಜಲಪಾತಕ್ಕೆ ಭೇಟಿ ನೀಡಬಹುದಾಗಿದೆ. ಮಾರ್ಗದಲ್ಲಿ ಪಾಲಾರ್ ನದಿಯ ಚೆಲುವನ್ನು ನೋಡಬಹುದಾಗಿದೆ.
ಮೈಸೂರು ದಸರಾ ಸುಂದರ-ಚಾಮರಾಜನಗರದ ಪ್ರವಾಸಿ ತಾಣವಳು ಮತ್ತಷ್ಟು ಸುಂದರ ಎಂಬಂತೆ ಹತ್ತಾರು ಪ್ರವಾಸಿ ಸ್ಥಳಗಳು, ದೇಗುಲಗಳಿದ್ದು ಈ ದಸರಾ ರಜೆಯಲ್ಲಿ ಮಿಸ್ ಮಾಡದೇ ನೋಡಿ, ಆನಂದಿಸಿ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications