ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶೀಘ್ರದಲ್ಲೇ ಕಡಿಮೆಯಾಗಲಿದೆ ಬೆಂಗಳೂರು-ಚೆನ್ನೈ ನಡುವಿನ ರೈಲು ಪ್ರಯಾಣದ ಅವಧಿ

|
Google Oneindia Kannada News

ಬೆಂಗಳೂರು-ಚೆನ್ನೈ ನಡುವೆ ಪ್ರತಿದಿನ ಸಾವಿರಾರು ಜನ ಪ್ರಯಾಣ ಮಾಡುತ್ತಿದ್ದಾರೆ. ಎರಡೂ ರಾಜ್ಯಗಳ ರಾಜಧಾನಿಗಳ ನಡುವೆ ದಿನಕ್ಕೆ ಹಲವು ರೈಲುಗಳು ಓಡಾಡುತ್ತಿದ್ದರು, ಪ್ರಯಾಣದ ಅವಧಿ ದೀರ್ಘವಾಗಿದೆ. ಎರಡೂ ಮಹಾನಗರಗಳ ನಡುವೆ ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ಸಾಧ್ಯತೆ ಬಗ್ಗೆ ರೈಲ್ವೆ ಇಲಾಖೆ ಚಿಂತನೆ ನಡೆಸುತ್ತಿದೆ.

ಚೆನ್ನೈ ಮಾತ್ರವಲ್ಲದೆ ತಮಿಳುನಾಡಿನ ಹಲವು ಭಾಗಗಳಿಗೆ ಕರ್ನಾಟಕದ ಹಲವು ಭಾಗಗಳಿಂದ ಕೂಡು ಸಾವಿರಾರು ಪ್ರಯಾಣಿಕರು ಸಂಚರಿಸುತ್ತಾರೆ. ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗವನ್ನು ವಿದ್ಯುದೀಕರಣವಾಗಿದ್ದು, ದ್ವಿಪಥವನ್ನು ಹೊಂದಿದೆ.

ಗಣೇಶ ಚತುರ್ಥಿ: ಸಿಕಂದರಾಬಾದ್- ಯಶವಂತಪುರ ಮಧ್ಯೆ ವಿಶೇಷ ರೈಲುಗಣೇಶ ಚತುರ್ಥಿ: ಸಿಕಂದರಾಬಾದ್- ಯಶವಂತಪುರ ಮಧ್ಯೆ ವಿಶೇಷ ರೈಲು

ಪ್ರಸ್ತುತ, ಬೆಂಗಳೂರು ಮತ್ತು ಚೆನ್ನೈ ನಡುವಿನ ಶತಾಬ್ದಿ ಎಕ್ಸ್‌ಪ್ರೆಸ್ ಈ ಮಾರ್ಗದಲ್ಲಿ ಅತ್ಯಂತ ವೇಗವಾಗಿ ಚಲಿಸುವ ರೈಲು ಆಗಿದ್ದು, ಇದು ಸುಮಾರು ಐದು ಗಂಟೆಗಳಲ್ಲಿ 359 ಕಿಲೋಮೀಟರ್‌ಗಳನ್ನು ಸರಾಸರಿ 72 ಕಿಲೋ ಮೀಟರ್ ವೇಗದೊಂದಿಗೆ ಕ್ರಮಿಸುತ್ತದೆ.

ಲಾಲ್‌ಬಾಗ್ ಎಕ್ಸ್‌ಪ್ರೆಸ್‌ನಂತಹ ಇತರ ರೈಲುಗಳು ಸರಾಸರಿ 61 ಕಿಲೋ ಮೀಟರ್ ವೇಗದಲ್ಲಿ 5 ಗಂಟೆ 55 ನಿಮಿಷಗಳ ಕಾಲ ತೆಗೆದುಕೊಳ್ಳುತ್ತವೆ. ಈ ಮಾರ್ಗದಲ್ಲಿನ ಇತರ ರೈಲುಗಳ ಸರಾಸರಿ ವೇಗವು 55 ಕಿಲೋ ಮೀಟರ್ ನಿಂದ 61 ಕಿಲೋ ಮೀಟರ್ ವರೆಗೆ ಇರುತ್ತದೆ. ಈ ರೈಲು ಪ್ರಯಾಣದ ಸಮಯವನ್ನು ಕಡಿಮೆ ಮಾಡಲು ರೈಲ್ವೆ ಇಲಾಖೆ ಬಯಸಿದೆ.

ವಾರದಲ್ಲಿ ಆರು ದಿನ ಮೈಸೂರು ಮಾರ್ಗವಾಗಿ ಬೆಂಗಳೂರು-ಮಂಗಳೂರು ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯ ಅನುಮತಿವಾರದಲ್ಲಿ ಆರು ದಿನ ಮೈಸೂರು ಮಾರ್ಗವಾಗಿ ಬೆಂಗಳೂರು-ಮಂಗಳೂರು ರೈಲು ಸಂಚಾರಕ್ಕೆ ರೈಲ್ವೆ ಸಚಿವಾಲಯ ಅನುಮತಿ

 160 ಕಿಲೋ ಮೀಟರ್ ವೇಗದಲ್ಲಿ ರೈಲು ಓಡಿಸಲು ಯೋಜನೆ

160 ಕಿಲೋ ಮೀಟರ್ ವೇಗದಲ್ಲಿ ರೈಲು ಓಡಿಸಲು ಯೋಜನೆ

ನೈರುತ್ಯ ರೈಲ್ವೆಯ ಮುಖ್ಯ ಪಿಆರ್‌ಒ ಅನೀಶ್ ಹೆಗ್ಡೆ ಈ ಬಗ್ಗೆ ಮಾಹಿತಿ ನೀಡಿದ್ದು, "ಬೆಂಗಳೂರು-ಚೆನ್ನೈ ಮಾರ್ಗದಲ್ಲಿ ವೇಗವನ್ನು ಹೆಚ್ಚಿಸುವ ಮೂಲಕ 160 ಕಿಲೋ ಮೀಟರ್ ವೇಗದಲ್ಲಿ ರೈಲುಗಳನ್ನು ಓಡಿಸುವ ಸಾಧ್ಯತೆಯನ್ನು ಪರಿಶೀಲನೆ ನಡೆಸಲು ನಾವು ವಿವರವಾದ ಯೋಜನಾ ವರದಿ (ಡಿಪಿಆರ್)ಯನ್ನು ಸಿದ್ಧಪಡಿಸುವ ಪ್ರಕ್ರಿಯೆಯಲ್ಲಿದ್ದೇವೆ" ಎಂದು ಹೇಳಿದ್ದಾರೆ.

ಪಸ್ತುತ, ರೈಲುಗಳು ಈ ಮಾರ್ಗದಲ್ಲಿ ಕೆಲವು ಮಾರ್ಗಗಳಲ್ಲಿ ಗರಿಷ್ಠ ಗಂಟೆಗೆ 110 ಕಿಲೋ ಮೀಟರ್ ವೇಗದಲ್ಲಿ ಚಲಿಸಬಹುದು. ಆದರೆ, ಇದಕ್ಕಿಂತ ಹೆಚ್ಚಿನ ವೇಗದಲ್ಲಿ ರೈಲುಗಳು ಚಲಿಸಬೇಕೆಂದರೆ, ತಿರುವುಗಳನ್ನು ಸಮವಾಗಿಸಬೇಕು, ಟ್ರ್ಯಾಕ್‌ಗಳನ್ನು ಬಲಪಡಿಸಬೇಕು, ಅಗತ್ಯವಿರುವಲ್ಲಿ ಬ್ಯಾರಿಕೇಡ್‌ಗಳನ್ನು ಮಾಡಲಾಗುವುದು ಮತ್ತು ಸೇತುವೆಗಳನ್ನು ಪುನಶ್ಚೇತನಗೊಳಿಸಲಾಗುವುದು ಮತ್ತು ಹೆಚ್ಚಿನ ವೇಗಕ್ಕೆ ಸರಿಹೊಂದುವಂತೆ ಮಾಡಲಾಗುವುದು ಎಂದು ಹೇಳಿದ್ದಾರೆ.

 ಕಡಿಮೆಯಾಗಲಿದೆ ಪ್ರಯಾಣದ ಅವಧಿ

ಕಡಿಮೆಯಾಗಲಿದೆ ಪ್ರಯಾಣದ ಅವಧಿ

ತಾಂತ್ರಿಕವಾಗಿ ಕಾರ್ಯಸಾಧ್ಯವಾದಲ್ಲೆಲ್ಲಾ, ಹಸ್ತಚಾಲಿತ ಸಿಗ್ನಲ್ ಕಾರ್ಯಾಚರಣೆಗಳಲ್ಲಿ ಸಮಯವನ್ನು ಕಡಿಮೆ ಮಾಡಲು ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಇರಿಸಲಾಗುವುದು, ಡಿಪಿಆರ್ ನಲ್ಲಿ ಕೆಲಸ ಮಾಡುವ ತಜ್ಞರ ತಂಡವು ಇತರ ತಾಂತ್ರಿಕ ಅಂಶಗಳನ್ನು ಪರಿಶೀಲಿಸುತ್ತದೆ ಎಂದು ಅವರು ಹೇಳಿದರು.

ಸದ್ಯದಲ್ಲಿಯೇ ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸುವ ಪ್ರಸ್ತಾಪವಿದ್ದು, ಅಂತಹ ರೈಲುಗಳು ಗಂಟೆಗೆ 160 ಕಿಲೋ ಮೀಟರ್ ವೇಗದಲ್ಲಿ ಚಲಿಸಬಹುದು. ಈ ವೇಗವನ್ನು ಪ್ರಮುಖ ವಿಸ್ತರಣೆಗಳಲ್ಲಿ ಸಾಧಿಸಲು ಸಾಧ್ಯವಾದರೆ, ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ನಾಲ್ಕು ಗಂಟೆಗಳಿಗಿಂತಲೂ ಕಡಿಮೆಗೊಳಿಸಬಹುದು ಎಂದು ಹೇಳಿದರು.

 ಜೋಲಾರ್‌ಪೇಟ್-ಚೆನ್ನೈ ನಡುವೆ ಕಾಮಗಾರಿ

ಜೋಲಾರ್‌ಪೇಟ್-ಚೆನ್ನೈ ನಡುವೆ ಕಾಮಗಾರಿ

ದಕ್ಷಿಣ ರೈಲ್ವೆಯು ಜೋಲಾರ್‌ಪೇಟ್ಟೈ ಮತ್ತು ಚೆನ್ನೈ ವಿಭಾಗಗಳ ನಡುವೆ ವೇಗವನ್ನು 130 ಕಿಲೋ ಮೀಟರ್ ಮತ್ತು ನಂತರ 160 ಕಿಲೋ ಮೀಟರ್ ಗೆ ಹೆಚ್ಚಿಸಲು ಕೆಲಸ ಮಾಡುತ್ತಿದೆ ಎಂದು ವರದಿಗಳು ಹೇಳುತ್ತವೆ. ಬೆಂಗಳೂರು-ಸಿಕಂದರಾಬಾದ್ ಮಾರ್ಗದಲ್ಲಿ ರೈಲು ಹಳಿಗಳನ್ನು ಬಲಪಡಿಸುವ ಮತ್ತು ವೇಗವನ್ನು ಹೆಚ್ಚಿಸುವ ಪ್ರಸ್ತಾಪವೂ ಇದೆ.

ಬೆಂಗಳೂರು-ಚೆನ್ನೈ ನಡುವೆ ಪ್ರಯಾಣದ ಅವಧಿ ಕಡಿಮೆ ಮಾಡಲು ರೈಲ್ವೆ ಇಲಾಖೆ ಚಿಂತನೆ ನಡೆಸುತ್ತಿದ್ದರೆ. ಬೆಂಗಳೂರು ಮತ್ತು ರಾಷ್ಟ್ರ ರಾಜಧಾನಿ ದೆಹಲಿ ನಡುವಿನ ರೈಲ್ವೆ ಪ್ರಯಾಣದ ಅವಧಿ ಸುದೀರ್ಘವಾಗಿದೆ.

 ದೆಹಲಿ-ಬೆಂಗಳೂರು ಪ್ರಯಾಣದ ಅವಧಿ ಹೆಚ್ಚಳ

ದೆಹಲಿ-ಬೆಂಗಳೂರು ಪ್ರಯಾಣದ ಅವಧಿ ಹೆಚ್ಚಳ

ಬೆಂಗಳೂರು ಮತ್ತು ದೆಹಲಿ ನಡುವಿನ ರೈಲು ಪ್ರಯಾಣವು ಹಲವಾರು ರೈಲುಗಳಲ್ಲಿ ದೀರ್ಘವಾಗಿದೆ. ಬೆಂಗಳೂರು ಮತ್ತು ದೆಹಲಿ ನಡುವಿನ ಅತ್ಯಂತ ವೇಗದ ರೈಲು ರಾಜಧಾನಿ ಎಕ್ಸ್‌ಪ್ರೆಸ್ ಆಗಿದೆ, ಇದು 33 ಗಂಟೆಗಳಲ್ಲಿ 2,367 ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತದೆ. ಕರ್ನಾಟಕ ಎಕ್ಸ್‌ಪ್ರೆಸ್ 37.11 ಗಂಟೆಗಳಲ್ಲಿ ದೆಹಲಿ ತಲುಪುತ್ತಿದೆ, ಆದರೂ ಈ ರೈಲು ಆಗಾಗ್ಗೆ ವಿಳಂಬವಾಗುತ್ತದೆ.

ಕರ್ನಾಟಕ ಸಂಪರ್ಕ ಕ್ರಾಂತಿ ರೈಲು ಆರಂಭದಲ್ಲಿ ಎರಡು ರಾಜ್ಯಗಳ ನಡುವಿನ ಅಂತರವನ್ನು ಸುಮಾರು 34-35 ಗಂಟೆಗಳಲ್ಲಿ ತಡೆರಹಿತ ರೈಲು ಎಂದು ಹೆಸರಿಸಲಾಯಿತು. ಸಿಕಂದರಾಬಾದ್ ಮಾರ್ಗವಾಗಿ ಸಂಚರಿಸುತ್ತಿತ್ತು.

ವಾರದಲ್ಲಿ ಎರಡು ದಿನ ಹುಬ್ಬಳ್ಳಿ ಮಾರ್ಗವಾಗಿ ರೈಲು ಸಂಚರಿಸಲು ಆರಂಭಿಸಿದ ಮೇಲೆ ಪ್ರಯಾಣದ ಅವಧಿ ಮತ್ತಷ್ಟು ದೀರ್ಘವಾಗಿದೆ. ಕೋವಿಡ್ ನಂತರ, ಬೆಂಗಳೂರು-ದೆಹಲಿ ನಡುವೆ ಸಂಪರ್ಕ ಕ್ರಾಂತಿಯ ಪ್ರಯಾಣದ ಸಮಯ 43 ಗಂಟೆಗಳಿಂದ 45 ಗಂಟೆಗಳವರೆಗೆ ಹೆಚ್ಚಾಗಿದೆ. ಸಿಕಂದರಾಬಾದ್ ಮಾರ್ಗವಾಗಿ ರೈಲು ಓಡಿಸಲು ಪ್ರಯಾಣಿಕರು ಒತ್ತಾಯ ಮಾಡುತ್ತಿದ್ದರೂ, ಪ್ರಯಾಣಿಕರ ಬೇಡಿಕೆಯಿಂದಾಗಿ ಈಗ ಹುಬ್ಬಳ್ಳಿ, ಬಳ್ಳಾರಿ ಮಾರ್ಗವಾಗಿ ಸಂಚರಿಸುತ್ತಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಪಿಆರ್ ಒ ಅನೀಶ್ ಹೆಗ್ಡೆ ತಿಳಿಸಿದ್ದಾರೆ.

English summary
Travelling to Chennai From Bengaluru may see a reduction in travel time in the near future. There is a proposal to run a Vande Bharat train on this route in the near future, and such trains can run up to a speed of 160 kmph. If this speed can be attained at major stretches, then the travel time between the two cities can be cut down to less than four hours.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X