Tirupati Trains Expansion: ತಿರುಮಲ ಭಕ್ತರಿಗೆ ಮತ್ತೊಂದು ಗುಡ್ ನ್ಯೂಸ್.. ತಿರುಪತಿ ವಿಷೇಶ ರೈಲುಗಳ ಸಂಚಾರ ವಿಸ್ತರಣೆ

ತಿರುಮಲಕ್ಕೆ ಹೋಗುವ ಭಕ್ತರಿಗೆ ಮತ್ತೊಂದು ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ಈಗಾಗಲೇ ಓಡುತ್ತಿರುವ ಹಲವು ವಿಶೇಷ ರೈಲುಗಳನ್ನು ವಿಸ್ತರಿಸಲಾಗುತ್ತಿದೆ. ವಿಶೇಷವಾಗಿ ತಿರುಪತಿಗೆ ರೈಲುಗಳನ್ನು ವಿಸ್ತರಿಸಲಾಗಿದೆ.

ಫೆಬ್ರವರಿ 5ರಿಂದ ಮಾರ್ಚ್ 25ರವರೆಗೆ ಪೂರ್ಣ-ತಿರುಪತಿ (07609) (Purna - Tirupati Special Train) ರೈಲು ಸಂಚಾರವನ್ನು ವಿಸ್ತರಿಸಲಾಗಿದೆ. ಅದೇ ರೀತಿ ಫೆಬ್ರವರಿ 6 ರಿಂದ ಮಾರ್ಚ್ 26 ರವರೆಗೆ ತಿರುಪತಿ-ಪೂರ್ಣ (07610) ಹಾಗೂ ಮಾರ್ಚ್ 31 ತಿರುಪತಿ-ಪೂರ್ಣ (07632) ರೈಲುಗಳನ್ನು ವಿಸ್ತರಿಸಲಾಗಿದೆ.

Another good news for devotees going to Tirumala.. Extension of special trains till April

ಹಾಗೆಯೇ ತಿರುಪತಿ-ಸಿಕಂದರಾಬಾದ್ (07481) ಫೆಬ್ರವರಿ 4 ರಿಂದ ಮಾರ್ಚ್ 31 ರವರೆಗೆ, ಸಿಕಂದರಾಬಾದ್-ತಿರುಪತಿ (07482) ಫೆಬ್ರವರಿ 5 ರಿಂದ ಏಪ್ರಿಲ್ 1 ರವರೆಗೆ, ಕಾಕಿನಾಡ ಟೌನ್-ಲಿಂಗಂಪಲ್ಲಿ (07445) ಫೆಬ್ರವರಿ 2 ರಿಂದ ಮಾರ್ಚ್ 29 ರವರೆಗೆ, ಫೆಬ್ರವರಿ 3 ರಿಂದ ಮಾರ್ಚ್ 30 ಲಿಂಗಂಪಲ್ಲಿ -ಕಾಕಿನಾಡ ಟೌನ್ (07446) ರೈಲುಗಳನ್ನು ವಿಸ್ತರಿಸಿ ಓಡಿಸಲಾಗುತ್ತದೆ. ತಿರುಪತಿಗೆ ವಿಸ್ತರಿಸಿರುವ ರೈಲುಗಳು ತಿರುಮಲಕ್ಕೆ ತೆರಳುವ ಭಕ್ತರಿಗೆ ಉಪಯುಕ್ತವಾಗಲಿದೆ ಎಂದು ರೈಲ್ವೆ ಇಲಾಖೆ ಭಾವಿಸಿದೆ.

ನಾಲ್ಕು ವಿಶೇಷ ರೈಲುಗಳ ಸಂಚಾರ

ನಿತ್ಯ ಸಾವಿರಾರು ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ದಕ್ಷಿಣ ಮಧ್ಯ ರೈಲ್ವೆ ಮಹತ್ವದ ನಿರ್ಧಾರ ಕೈಗೊಂಡಿದೆ. ತಿರುಪತಿಗೆ ನಾಲ್ಕು ವಿಶೇಷ ರೈಲುಗಳನ್ನು ಘೋಷಿಸಲಾಗಿದೆ. ಈ ತಿಂಗಳ ಜನವರಿ 25, 26, 27 ಮತ್ತು 28 ರಂದು ವಿಶೇಷ ರೈಲುಗಳು ಲಭ್ಯವಿರುತ್ತವೆ.

ಸಾಲು ಸಾಲು ರಜೆಗಳಿರುವುದರಿಂದಾಗಿ ತಿರುಪತಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲೂ ಹೆಚ್ಚಳವಾಗಲಿದೆ. ಹೀಗಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡಲಾಗಿದೆ. ಸಿಕಂದರಾಬಾದ್-ತಿರುಪತಿ (07041) ರೈಲು ಜನವರಿ 25 ರಂದು (ಗುರುವಾರ) ರಾತ್ರಿ 8 ಗಂಟೆಗೆ ಸಿಕಂದರಾಬಾದ್‌ನಿಂದ ಹೊರಡಲಿದೆ. ಶುಕ್ರವಾರ ಬೆಳಗ್ಗೆ 9 ಗಂಟೆಗೆ ತಿರುಪತಿ ತಲುಪಲಿದೆ. ಇದೇ ರೈಲು ತಿರುಪತಿಯಿಂದ ಸಿಕಂದರಾಬಾದ್ಗೆ (07042) ಜನವರಿ 26ರಂದು (ಶುಕ್ರವಾರ) ಸಂಜೆ 07:50ಕ್ಕೆ ಹೊರಟು ಶನಿವಾರ ಬೆಳಗ್ಗೆ 09:30ಕ್ಕೆ ಸಿಕಂದರಾಬಾದ್‌ ತಲುಪಲಿದೆ.

Another good news for devotees going to Tirumala.. Extension of special trains till April

ಸಿಕಂದರಾಬಾದ್-ತಿರುಪತಿ (02764) ರೈಲು ಜನವರಿ 27 ರಂದು (ಶನಿವಾರ) ಸಂಜೆ 06:40 ಕ್ಕೆ ಸಿಕಂದರಾಬಾದ್‌ನಿಂದ ಹೊರಟು ಭಾನುವಾರ ಬೆಳಿಗ್ಗೆ 06:45 ಕ್ಕೆ ತಿರುಪತಿ ತಲುಪಲಿದೆ. ಇನ್ನೂ ತಿರುಪತಿ - ಸಿಕಂದರಾಬಾದ್ (02763) ರೈಲು ಜನವರಿ 28 ರಂದು (ಭಾನುವಾರ) ಸಂಜೆ 05:15 ಕ್ಕೆ ತಿರುಪತಿಯಿಂದ ಹೊರಟು ಸೋಮವಾರ ಬೆಳಿಗ್ಗೆ 05:55 ಕ್ಕೆ ಸಿಕಂದರಾಬಾದ್ ತಲುಪಲಿದೆ.

ಈ ನಾಲ್ಕು ರೈಲುಗಳು ಯಾವ ನಿಲ್ದಾಣಗಳಲ್ಲಿ ನಿಲ್ಲಲಿವೆ ಎಂಬ ವಿವರವೂ ಬಹಿರಂಗವಾಗಿದೆ. ಸಿಕಂದರಾಬಾದ್-ತಿರುಪತಿ-ಸಿಕಂದರಾಬಾದ್ ವಿಶೇಷ ರೈಲುಗಳು (07041/07042) ಕಾಚಿಗುಡ, ಉಮ್ದನಗರ, ಶಾದ್‌ನಗರ, ಜಡ್‌ಚರ್ಲಾ, ಮಹೆಬೂಬ್‌ನಗರ, ವನಪರ್ತಿ ರಸ್ತೆ, ಗದ್ವಾಲ್, ರಾಯಚೂರು, ಮಂತ್ರಾಲಯ ರಸ್ತೆ, ಗುಂತಕಲ್ಲು, ತಾಡಿಪತ್ರಿ, ಎರಗುಂಟ್ಲಾ, ರಾಜಂಪೇಟೆ ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ.

ಸಿಕಂದರಾಬಾದ್-ತಿರುಪತಿ-ಸಿಕಂದರಾಬಾದ್ ವಿಶೇಷ ರೈಲುಗಳು (02764/02763) ಜನಗಾಮ, ಕಾಜಿಪೇಟ್, ವಾರಂಗಲ್, ಮಹಬೂಬಾಬಾದ್, ಖಮ್ಮಂ, ವಿಜಯವಾಡ, ತೆನಾಲಿ, ಬಾಪಟ್ಲಾ, ಚಿರಾಲ, ಓಂಗೋಲು, ನೆಲ್ಲೂರು, ಗುಡೂರು, ರೇನಿಗುಂಟ ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತವೆ. ಈ ಬಗ್ಗೆ ಪ್ರಯಾಣಿಕರು ಗಮನಹರಿಸುವಂತೆ ರೈಲ್ವೆ ಇಲಾಖೆ ಸೂಚಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+