Amarnath Yatra 2024: ಜೂನ್ 29ರಿಂದ ಅಮರನಾಥ ಯಾತ್ರೆ ಆರಂಭ- ನಾಳೆಯಿಂದಲೇ ಬುಕ್ ಮಾಡಿ

ಲೋಕಸಭೆ ಚುನಾವಣೆಯ ಸಂಭ್ರಮದ ನಡುವೆ ಅಮರನಾಥ ಯಾತ್ರೆಗೆ ಸಂಬಂಧಿಸಿದಂತೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಈ ವರ್ಷ ಅಮರನಾಥ ಯಾತ್ರೆ ಆರಂಭವಾಗುವ ದಿನಾಂಕ ಪ್ರಕಟವಾಗಿದೆ. ಜೊತೆಗೆ ಇಲ್ಲಿಗೆ ಭೇಟಿ ನೀಡಲು ಯಾತ್ರಿಕರು ನೋಂದಣಿ ಮಾಡಿಕೊಳ್ಳುವ ದಿನಾಂಕ ಕೂಡ ಪ್ರಕಟಿಸಲಾಗಿದೆ.

ಹಿಮಾಲಯದ ಅಮರನಾಥ ಯಾತ್ರೆ ಬಹಳ ಹಳೆಯದು ಮತ್ತು ಪವಿತ್ರವಾದದ್ದು. ಇಲ್ಲಿ ಸುಮಾರು 5000 ವರ್ಷಗಳಷ್ಟು ಹಳೆಯದಾದ ಶಿವಲಿಂಗವಿದ್ದು ಈ ಪರ್ವತ ಶಿಖರದ ಸಮೀಪದಲ್ಲಿರುವ ಅಮರನಾಥ ಗುಹೆಯು ಹಿಂದೂ ಧರ್ಮದ ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಅಮರನಾಥ ಯಾತ್ರೆ ಕೈಗೊಳ್ಳುತ್ತಾರೆ. ಇದನ್ನು ತೀರ್ಥಯಾತ್ರೆ ಎಂದು ಪರಿಗಣಿಸಲಾಗಿದೆ.

Amarnath Yatra 2024 Amarnath Yatra starts from June 29 Book from April 15 itself in kannada

ಅಮರನಾಥ ಯಾತ್ರೆ ಯಾವಾಗ ಆರಂಭ?

ಈ ವರ್ಷದ ಶ್ರೀ ಬಾಬಾ ಅಮರನಾಥ ಯಾತ್ರೆಯು ಜೂನ್ 29 ರಿಂದ ಪ್ರಾರಂಭವಾಗುತ್ತಿದೆ. ಇದು ರಕ್ಷಾಬಂಧನ ದಿನದವರೆಗೆ ಇರಲಿದೆ. ಅಂದರೆ ಆಗಸ್ಟ್ 19 ರಂದು ಯಾತ್ರೆ ಕೊನೆಗೊಳ್ಳುತ್ತದೆ. ಹೀಗಾಗಿ ಜುಲೈ ಸಂಪೂರ್ಣ ತಿಂಗಳು ಹಾಗೂ ಆಗಸ್ಟ್ 19ರವರೆಗೆ ಭಕ್ತರು ಅಮರನಾಥನ ಯಾತ್ರೆ ಮಾಡಬಹುದು. ಇದಕ್ಕಾಗಿ ಮುಂಚಿತವಾಗಿ ಬುಕ್ ಮಾಡಿಕೊಳ್ಳಬೇಕಾಗುತ್ತದೆ.

ಬುಕ್ಕಿಂಗ್ ದಿನಾಂಕ ಯಾವಾಗ ಆರಂಭ?

ಇನ್ನೂ ಅಮರನಾಥ ಯಾತ್ರೆಗೆ ಹೋಗಲು ಬಯಸುವವರು ಮುಂಗಡ ಬುಕ್ಕಿಂಗ್ ಮಾಡಿಕೊಳ್ಳಬೇಕು. ಆ ಬಗ್ಗೆ ಮಾಹಿತಿಯನ್ನು ಅಮರನಾಥ ಪುಣ್ಯಕ್ಷೇತ್ರ ಮಂಡಳಿ ಹಂಚಿಕೊಂಡಿದೆ. ಮಾಹಿತಿ ಪ್ರಕಾರ ಅಮರನಾಥ ಯಾತ್ರೆ 2024 ಜೂನ್ 29, 2024 ರಿಂದ ಪ್ರಾರಂಭವಾಗಲಿದೆ. 19 ಆಗಸ್ಟ್ 2024 ರಂದು ಮುಕ್ತಾಯಗೊಳ್ಳುತ್ತದೆ. ಇಲ್ಲಿಗೆ ಭೇಟಿ ನೀಡುವ ಭಕ್ತರಿಗಾಗಿ ಮುಂಗಡ ನೋಂದಣಿಯು 15 ಏಪ್ರಿಲ್ 2024 ರಿಂದ ಪ್ರಾರಂಭವಾಗುತ್ತದೆ. ಹೀಗಾಗಿ ಆಸಕ್ತರು ಏಪ್ರಿಲ್ 15 ಅಂದರೆ ನಾಳೆಯಿಂದ ನೊಂದಣಿ ಮಾಡಿಕೊಳ್ಳಬಹುದಾಗಿದೆ.

Amarnath Yatra 2024 Amarnath Yatra starts from June 29 Book from April 15 itself in kannada

ಹಿಮಾಲಯದ ಅಮರನಾಥ ಯಾತ್ರೆ

ಅಮರನಾಥ ಧಾಮವು ಹಿಮಾಲಯದ ದುರ್ಗಮ ಪರ್ವತ ಶ್ರೇಣಿಗಳ ನಡುವೆ ಇದೆ. ಭಾರತೀಯ ಸಂಸ್ಕೃತಿಯ ಸುಪ್ರಸಿದ್ಧ ತೀರ್ಥಯಾತ್ರೆಗಳಲ್ಲಿ ಬಾಬಾ ಅಮರನಾಥನ ತೀರ್ಥಯಾತ್ರೆಗೆ ಬಹುಳ ಮಹತ್ವದ ಸ್ಥಾನವಿದೆ. ಹೀಗಾಗಿ ಪ್ರತೀ ವರ್ಷವೂ ಲಕ್ಷಾಂತರ ಭಕ್ತರು ಇಲ್ಲಿ ಭೇಟಿ ನೀಡುತ್ತಾರೆ.

ಗುಹೆಯಲ್ಲಿ ನಿರ್ಮಿಸಲಾದ ಶಿವಲಿಂಗವನ್ನು ನಿಜವಾದ ಹೃದಯದಿಂದ ನೋಡುವ ಭಕ್ತನು ಹುಟ್ಟು ಮತ್ತು ಮರಣದ ಬಂಧನದಿಂದ ಮುಕ್ತನಾಗುತ್ತಾನೆ ಎನ್ನುವ ನಂಬಿಕೆಯಿದೆ. ಶಿವನು ಈ ಗುಹೆಯಲ್ಲಿ ತಾಯಿ ಪಾರ್ವತಿಗೆ ಅಮರತ್ವದ ರಹಸ್ಯವನ್ನು ಹೇಳಿದ್ದಾನೆ, ಆದ್ದರಿಂದ ಈ ಗುಹೆಯನ್ನು ಅಮರನಾಥ ಗುಹೆ ಎಂದು ಕರೆಯಲಾಗುತ್ತದೆ.

ಹಿಮದಿಂದ ಶಿವಲಿಂಗವು ರಚನೆಯಾಗುವುದರಿಂದ ಇದನ್ನು 'ಬಾಬಾ ಬರ್ಫಾನಿ'ಎಂದೂ ಕರೆಯುತ್ತಾರೆ. ಚಂದ್ರನ ಬೆಳಕನ್ನು ಅವಲಂಬಿಸಿ ಗಾತ್ರದಲ್ಲಿ ಹುಗ್ಗುವ ಮತ್ತು ಕುಗ್ಗುವ ಪ್ರಪಂಚದ ಏಕೈಕ ಶಿವಲಿಂಗ ಇದಾಗಿದೆ. ಪ್ರತಿ ವರ್ಷ ಶ್ರಾವಣಾ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಇಲ್ಲಿನ ಶಿವಲಿಂಗವು ಗಾತ್ರದಲ್ಲಿ ಬೆಳೆಯುತ್ತದೆ ಮತ್ತು ಅದರ ನಂತರ ಮುಂದಿನ ಅಮಾವಾಸ್ಯೆಯವರೆಗೆ ಗಾತ್ರದಲ್ಲಿ ಗಮನಾರ್ಹವಾಗಿ ಕಡಿಮೆಯಾಗುತ್ತಾ ಹೋಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+