• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮರನಾಥ ಯಾತ್ರೆಗೆ 3 ಲಕ್ಷ ಯಾತ್ರಾರ್ಥಿಗಳಿಂದ ನೋಂದಣಿ

|
Google Oneindia Kannada News

ನವದೆಹಲಿ, ಜೂನ್ 26: ದೇಶದ ಪವಿತ್ರ ಅಮರನಾಥ ಯಾತ್ರೆಯು ಇದೇ ಜೂನ್ 30ರಿಂದ ಪ್ರಾರಂಭವಾಗಲಿದ್ದು, ಇದುವರೆಗೂ 3 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಲು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ಏಪ್ರಿಲ್ 11 ರಂದು ಅಮರನಾಥಜಿ ಶ್ರೈನ್ ಬೋರ್ಡ್ (SASB) ವಿವಿಧ ಬ್ಯಾಂಕ್‌ಗಳ 566 ಗೊತ್ತುಪಡಿಸಿದ ಶಾಖೆಗಳ ಮೂಲಕ 43 ದಿನಗಳ ಅಮರನಾಥ ಯಾತ್ರೆಯ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿತು.

ಈಗ ಅಮರನಾಥ ಯಾತ್ರೆಗೆ ಆಧಾರ್‌ ಕಡ್ಡಾಯ ಈಗ ಅಮರನಾಥ ಯಾತ್ರೆಗೆ ಆಧಾರ್‌ ಕಡ್ಡಾಯ

ದಕ್ಷಿಣ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಸಾಂಪ್ರದಾಯಿಕ 48-ಕಿಮೀ ನುನ್ವಾನ್ ಮತ್ತು ಮಧ್ಯ ಕಾಶ್ಮೀರದ ಗಂಡರ್‌ಬಾಲ್‌ನಲ್ಲಿ 14-ಕಿಮೀ ಚಿಕ್ಕದಾದ ಬಾಲ್ಟಾಲ್‌ನಿಂದ ಯಾತ್ರೆಯು ಅವಳಿ ಮಾರ್ಗಗಳಿಂದ ಪ್ರಾರಂಭವಾಗುತ್ತದೆ. ಸಾಧುಗಳು ಸೇರಿದಂತೆ ಯಾತ್ರಾರ್ಥಿಗಳ ಮೊದಲ ಬ್ಯಾಚ್ ಜಮ್ಮುವಿನ ಭಗವತಿ ನಗರ ಮತ್ತು ರಾಮಮಂದಿರದಿಂದ ಕಾಶ್ಮೀರದ ಅವಳಿ ಬೇಸ್ ಕ್ಯಾಂಪ್‌ಗಳಿಗೆ ಯಾತ್ರೆಯ ಅಧಿಕೃತ ಆರಂಭದ ಒಂದು ದಿನ ಮುಂಚಿತವಾಗಿ ಹೊರಡಲಿದೆ. ಸಂಪ್ರದಾಯದ ಪ್ರಕಾರ, ಆಗಸ್ಟ್ 11ರಂದು 'ರಕ್ಷಾ ಬಂಧನ' ಹಬ್ಬದ ದಿನದಂದು ಅದು ಮುಕ್ತಾಯವಾಗಲಿದೆ.

ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ ವ್ಯವಸ್ಥೆ: ಅಮರನಾಥ ಯಾತ್ರೆ ಸಂದರ್ಭದಲ್ಲಿ ಭದ್ರತೆಯ ದೃಷ್ಟಿಯಿಂದ ಯಾತ್ರಾರ್ಥಿಗಳ ಚಲನವಲನಗಳನ್ನು ಪತ್ತೆಹಚ್ಚಲು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ವ್ಯವಸ್ಥೆಯನ್ನು ಸರ್ಕಾರ ಪರಿಚಯಿಸಿದೆ. ಅದೇ ರೀತಿ ವಿವಿಧ ಭದ್ರತಾ ಏಜೆನ್ಸಿಗಳ ಕಣ್ಗಾವಲು ಮತ್ತು ನಿಕಟ ಸಮನ್ವಯದಲ್ಲಿ ನಡೆಯುತ್ತಿರುವ ಯಾತ್ರೆ ಭದ್ರತೆಗೆ ಸಂಬಂಧಿಸಿದ ವ್ಯವಸ್ಥೆಗಳು ಪೂರ್ಣಗೊಂಡಿವೆ ಎಂದು ಜಮ್ಮುವಿನ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಮುಖೇಶ್ ಸಿಂಗ್ ಹೇಳಿದ್ದಾರೆ.

"ನಮಗೆ ಸಾಕಷ್ಟು ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗಿದೆ ಮತ್ತು ನಿಯೋಜನೆ ಪೂರ್ಣಗೊಂಡಿದೆ. ಈ ಬಾರಿ ಅಮರನಾಥ ಯಾತ್ರೆಯನ್ನು ಶಾಂತಿಯುತ ವಾತಾವರಣದಲ್ಲಿ ನಡೆಸಲಾಗುವುದು," ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಾರ್ವಜನಿಕರಿಗೆ, ಚಾಲಕರಿಗೆ ಜಾಗೃತಿ ಅಭಿಯಾನ: ಅಮರನಾಥ ಯಾತ್ರೆಯಲ್ಲಿ ಭಯೋತ್ಪಾದಕರ ವಿಧ್ವಂಸಕ ಕೃತ್ಯವೇ ದೊಡ್ಡ ಸವಾಲಾಗಿದೆ. ಇದರಿಂದ ಸಾರ್ವಜನಿಕರಿಗೆ, ವಿಶೇಷವಾಗಿ ಚಾಲಕರಿಗೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಅನುಸರಿಸಬೇಕಾದ ವಿವಿಧ ಕ್ರಮಗಳ ಕುರಿತು ಜಾಗೃತಿ ಅಭಿಯಾನವನ್ನು ಪೊಲೀಸರು ಆರಂಭಿಸಿದ್ದಾರೆ ಎಂದು ಎಡಿಜಿಪಿ ಹೇಳಿದ್ದಾರೆ.

3 Lakh Pilgrims Registered Names to Amarnath Yatra Begin on June 30 Amid Heavy Security

ಉಧಮ್‌ಪುರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಂಬ್ ಬೆದರಿಕೆ ಕುರಿತು ಚಾಲಕರಿಗೆ ತಿಳಿಸಲು ಪ್ರಾರಂಭಿಸಿದ್ದಾರೆ. ಇಂತಹ ಅಭಿಯಾನವನ್ನು ಎಲ್ಲಾ ಜಿಲ್ಲೆಗಳಲ್ಲೂ ನಡೆಸಲಾಗುವುದು. ಯಾತ್ರೆಯು ಶಾಂತಿಯುತವಾಗಿ ಮುಕ್ತಾಯಗೊಳ್ಳುವ ಸಂಪೂರ್ಣ ವಿಶ್ವಾಸವಿದೆ. ಈ ವರ್ಷದ ಯಾತ್ರೆ ಸಮಯದಲ್ಲಿ, ಹೆಲಿಕಾಪ್ಟರ್‌ಗಳಲ್ಲಿ ಪ್ರಯಾಣಿಸುವವರನ್ನು ಹೊರತುಪಡಿಸಿ, ಪ್ರತಿನಿತ್ಯದ ಮಾರ್ಗದಲ್ಲಿ ಯಾತ್ರಿಕರ 10,000 ಸೀಲಿಂಗ್ ಅನ್ನು ಸ್ಥಾಪಿಸಲು SASB ನಿರ್ಧರಿಸಿದೆ.

ಗರ್ಭಿಣಿಯರ ಹೆಸರು ನೋಂದಣಿಗಿಲ್ಲ ಅವಕಾಶ: SASB ಪ್ರಕಾರ 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಅಥವಾ 75 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಆರು ವಾರಗಳಿಗಿಂತ ಹೆಚ್ಚು ಗರ್ಭಿಣಿಯಾಗಿರುವ ಯಾವುದೇ ಮಹಿಳೆ ಯಾತ್ರೆಗೆ ನೋಂದಾಯಿಸಲ್ಪಟ್ಟಿಲ್ಲ.

Recommended Video

   Umran Malik ಮೊದಲನೇ ಪಂದ್ಯದಲ್ಲಿ ಹೀಗಾ ಆಡೋದು | *Cricket | OneIndia Kannada

   ಆರ್ಟಿಕಲ್ 370 ರದ್ದತಿ ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಎರಡು ಭಾಗಗಳಾಗಿ ವಿಭಜಿಸುವ ಮೊದಲು ಸರ್ಕಾರ ಯಾತ್ರೆ ಅನ್ನು ಮಧ್ಯದಲ್ಲಿ ರದ್ದುಗೊಳಿಸಿತ್ತು. ಅದಕ್ಕೂ ಮೊದಲು ಎಂದರೆ ಜುಲೈ 1 ರಿಂದ ಆಗಸ್ಟ್ 1, 2019 ಅವಧಿಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಶಿವಲಿಂಗ ದರ್ಶನಕ್ಕಾಗಿ 3.42 ಲಕ್ಷಕ್ಕೂ ಹೆಚ್ಚು ಯಾತ್ರಿಕರು ಯಾತ್ರೆ ಕೈಗೊಂಡಿದ್ದರು.

   English summary
   3 lakh pilgrims registered names to Amarnath Yatra begin on June 30 amid heavy security. Know More.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X