ತಿರುಪತಿಯಲ್ಲಿ ಕನ್ನಡಿಗರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ!

Karnataka devotees neglected in Tirupatiಜಗತ್ತಿನ ಅತ್ಯಂತ ಶ್ರೀಮಂತ ದೇವರಾದ ಏಳುಕೊಂಡಲವಾಡ ಗೋವಿಂದ ತಿರುಪತಿ ತಿಮ್ಮಪ್ಪನ ದರುಶನಕ್ಕೆಂದು ಹೋದ ಬಡವರಿಗೆ ದೇವಸ್ಥಾನದ ಆಡಳಿತ ಮಂಡಳಿ ನಾಮವಿಕ್ಕುತ್ತಿದೆ. ಹಣದ ಥೈಲಿ ಹಿಡಿದು ಬರುವ ಶ್ರೀಮಂತರಿಗೆ ಸಲಾಮು ಹಾಕುತ್ತಿದೆ. ಬಡವರು ಹಾಗಿರಲಿ ಕನ್ನಡಿಗರ ಸ್ಥಿತಿಯನ್ನಂತೂ ಕೇಳುವುದೇ ಬೇಡ. ಕರ್ನಾಟಕದಿಂದ ಹೋದ ಪ್ರವಾಸಿಗರಿಗೆ ತಂಗಲು ಕನಿಷ್ಠ ಸೌಲಭ್ಯಗಳೂ ಇಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿ.

ಕೇವಲ ಹತ್ತಾರು ವರ್ಷಗಳಿಂದೀಚೆಗೆ ತಿರುಪತಿಯ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಕನ್ನಡಿಗರ ಪಾಲಿಗೆ ಒಂದು ಮರೀಚಿಕೆಯಂತೆ ಆಗಿರುವುದು ದುರ್ದೈವ.

ಒಂದು ಕಾಲಕ್ಕೆ ತಿರುಪತಿ ಪ್ರವಾಸವು ಕರ್ನಾಟಕ, ಆಂಧ್ರ ಮತ್ತು ತಮಿಳುನಾಡಿನ ಭಕ್ತ ಜನಕೋಟಿಗೆ ಮೀಸಲಾಗಿಬಿಟ್ಟಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಉತ್ತರ ಭಾರತದ ಜನರಿಗೆ 'ಬಾಲಾಜಿ' ದರ್ಶನವು ವರಪ್ರಸಾದವಾಗಿ ಪರಿಣಮಿಸಿದೆ. ತಿರುಮಲೆಯಲ್ಲಿ ಸಾಮಾನ್ಯ ಭಕ್ತರಿಗೆ ಯಾವ ಸವಲತ್ತುಗಳು ಇಲ್ಲ. ರಾತ್ರಿ ತಂಗಲು, ಸ್ನಾನ ಮಾಡಲು, ಮತ್ತಿತರ ಸೌಲಭ್ಯಗಳಿಗೆ ಪರದಾಡುವ ಸ್ಥಿತಿಯಾಗಿದೆ. ಕರ್ನಾಟಕ ಸರ್ಕಾರಕ್ಕೆ ಸೇರಿದ ಸುಮಾರು ಆರು ಎಕರೆ ಜಮೀನು ತಿರುಮಲೆಯಲ್ಲಿದ್ದರೂ ಸರ್ಕಾರ ಇತ್ತೀಚೆಗಷ್ಟೇ ಒಂದು ಎಕರೆ ಜಾಗದಲ್ಲಿ 266 ಕೊಠಡಿಗಳ ಯೋಜನೆಯನ್ನು ಕೈಗೆತ್ತಿಕೊಂಡಿದೆ.

ಪ್ರತಿದಿನವೂ ಸರ್ವದರ್ಶನಕ್ಕಾಗಿ ಇಲ್ಲಿಗೆ ಸುಮಾರು 50 ಸಾವಿರ ಭಕ್ತಾದಿಗಳು ವೆಂಕಟೇಶ್ವರನ ದರ್ಶನ ಪಡೆದು ಹೋಗುತ್ತಾರೆ. ಇದಕ್ಕಾಗಿ 20 ಗಂಟೆಗಳ ಕಾಲ ದೇವಸ್ಥಾನದ ಬಾಗಿಲು ತೆರೆದೇ ಇರುತ್ತದೆ. ವಿಶೇಷ ದರ್ಶನದ ಹೆಸರಿನಲ್ಲಿ ದೇವಸ್ಥಾನದ ಆಡಳಿತ ಮಂಡಳಿಯು ದುಬಾರಿ ಹಣವನ್ನು ವಸೂಲು ಮಾಡುತ್ತಿದೆ. ಶ್ರೀಮಂತ ಕುಟುಂಬದವರು ಲಕ್ಷಾಂತರ ರುಪಾಯಿ ಕೊಟ್ಟು ವಿಶೇಷ ಸವಲತ್ತುಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಕರ್ನಾಟಕದಿಂದ ಹೋಗುವ ಭಕ್ತಾದಿಗಳು ದಿನಗಟ್ಟಲೆ ಕಾದರೂ ಸರ್ವದರ್ಶನ ಸಿಗದೇ ನಿರಾಶರಾಗಿ ಹಿಂತಿರುಗಿದ ಪ್ರಸಂಗಗಳು ಇತ್ತೀಚೆಗೆ ಸಾಮಾನ್ಯವಾಗಿಬಿಟ್ಟಿದೆ. ಆಂಧ್ರ ಸರ್ಕಾರ ತಿರುಪತಿ ದೇವಸ್ಥಾನವನ್ನು ದೊಡ್ಡ ವ್ಯಾಪಾರಿ ಕೇಂದ್ರವನ್ನಾಗಿ ಮಾಡಿಕೊಂಡಿರುವುದು ದುರಂತ.

ನಮ್ಮ ಕರ್ನಾಟಕ ಸರ್ಕಾರ ಮೊದಲಿನಿಂದಲೂ ಸುಧಾರಣೆಯ ಮಾತುಗಳನ್ನು ಹೇಳಿ ಜನರ ಕಣ್ಣೊರೆಸುವ ತಂತ್ರವನ್ನು ಉಪಯೋಗಿಸುತ್ತಿದೆ. ಈಗಿನ ಮಜರಾಯಿ ಕಮಿಷನರ್ ಶ್ಯಾಂಭಟ್ ಅವರು ಇನ್ನಾದರೂ ತ್ವರಿತಗತಿಯಲ್ಲಿ ತಿರುಪತಿ ಯೋಜನೆಗಳನ್ನು ಕಾರ್ಯಗತಗೊಳಿಸಬೇಕು. ಕರ್ನಾಟಕದಿಂದ ಹೋಗುವ ಭಕ್ತಾದಿಗಳಿಗೆಂದೇ ಕನಿಷ್ಠ ಮೂರು ಗಂಟೆಗಳ ಕಾಲ ಪ್ರತ್ಯೇಕ ದರ್ಶನ ಕಾಲವನ್ನು ನಿಗದಿಗೊಳಿಸಬೇಕು. ತಿರುಪತಿಯಲ್ಲಿರುವ ಮಜರಾಯಿ ಕಚೇರಿಯನ್ನು ಕನ್ನಡಿಗರ ಸಹಕಾರಕ್ಕಾಗಿ 24 ಗಂಟೆಗಳ ಕಾಲವೂ ತೆರೆದಿಡುವ ವ್ಯವಸ್ಥೆ ಮಾಡಿರಬೇಕು. ಕರ್ನಾಟಕದ ಶ್ರೀಸಾಮಾನ್ಯ ಭಕ್ತರಾರು ಬಿದಿಯಲ್ಲಿ ಮಲಗಬಾರದು. ದಕ್ಷತೆಗೆ ಹೆಸರಾದ ಐಎಎಸ್ ಅಧಿಕಾರಿ ಕಮಿಷನರ್ ಶ್ಯಾಂಭಟ್‌ರವರು ತಮ್ಮ ಕಾಲದಲ್ಲೇ ಸುಧಾರಣೆಗಳನ್ನು ಜಾರಿಗೆ ತಂದು ಭಕ್ತರ ಮೆಚ್ಚುಗೆ ಪಡೆಯುವಂತಾಗಲಿ.

(ಸಿಟಿವಾಯ್ಸ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+