MEMU Train: ಬೆಂಗಳೂರು–ತುಮಕೂರು ಮೆಮು ರೈಲಿನಲ್ಲಿ ₹20 ಟಿಕೆಟ್ ದರ ನಿಗದಿ: ಮಾಹಿತಿ ಇಲ್ಲಿದೆ ತಿಳಿಯಿರಿ

MEMU Train: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಆಗಾಗ ವಿಶೇಷ ರೈಲಿಗಳನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಇನ್ನು ಬೆಂಗಳೂರು-ಮೈಸೂರು ನಡುವೆ 4 ಮೆಮು ರೈಲುಗಳನ್ನು ಪರಿಚಯಿಸಲಾಗುತ್ತಿದೆ. ಪ್ರಯಾಣಿಕರು ಕೇವಲ 35 ರೂಪಾಯಿಗಳಲ್ಲಿ ಪ್ರಯಾಣ ಮಾಡಬಹುದು. ಅದೇ ರೀತಿಯಾಗಿ ಇದೀಗ ಬೆಂಗಳೂರು-ತುಮಕೂರು ನಡುವೆ ಸಂಚರಿಸುವ ಈ ರೈಲಿನಲ್ಲಿ ಟಿಕೆಟ್‌ ದರ ನಿಗದಿ ಮಾಡಲಾಗಿದೆ. ಇಲ್ಲಿದೆ ನೋಡಿ ಸಂಪೂರ್ಭ ಮಾಹಿತಿ.

ಬೆಂಗಳೂರು-ತುಮಕೂರು ನಡುವೆ ಸಂಚರಿಸುವ ಮೆಮು ರೈಲಿನಲ್ಲಿ 20 ರೂಪಾಯಿ ಟಿಕೆಟ್ ದರ ನಿಗದಿಪಡಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಇಂದು (ಫೆಬ್ರವರಿ 16) ಬೆಂಗಳೂರಿನಲ್ಲಿ ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ, ಸಾಧು ಸಂಗಮ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಲೋಕರ್ಪಣೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಿ ಅವರು ಮಾತನಾಡಿದರು.

20 Ticket Price Fixed at Bengaluru-Tumakuru MEMU Train V Somanna

ರೈಲ್ವೆ ನೇಮಕಾತಿ ಪರೀಕ್ಷೆಯನ್ನ ಕನ್ನಡದಲ್ಲಿ ಬರೆಯಲು ಅವಕಾಶ ಮಾಡಿಕೊಟ್ಟಿರುವ ಹಿನ್ನೆಲೆ ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಹೆಚ್ಚಿನ ಉದ್ಯೋಗ ಸಿಗುತ್ತದೆ. ಚುನಾವಣೆಗಳು 5 ವರ್ಷಕ್ಕೊಮ್ಮೆ ಬರುತ್ತವೆ. ಆದರೆ, ನಮ್ಮನ್ನು ಆಯ್ಕೆ ಮಾಡಿದ ಜನರಿಗೆ ಅನುಕೂಲ ಮಾಡಿಕೊಟ್ಟರೆ ಮಾತ್ರ ನಾವು ಜನಪ್ರತಿನಿಧಿ ಎಂದು ಕರೆಸಿಕೊಳ್ಳಲು ಅರ್ಹರಾಗುತ್ತೇವೆಂದು ಅವರು ತಿಳಿಸಿದರು.

ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮಾತನಾಡಿದ್ದು, ಸಹಕಾರ ತತ್ವದ ಮೂಲಕ ಸಮುದಾಯ ಅಭಿವೃದ್ದಿ ಸಾಧಿಸಬೇಕು. ಸಾದರ ಹಿಂದೂ ಸಮಾಜ ಅತೀ ಚಿಕ್ಕ ಸಮುದಾಯ ಆಗಿದೆ. ತುಮಕೂರು ಜಿಲ್ಲೆಯಲ್ಲಿ ಈ ಸಮುದಾಯ ಹೆಚ್ಚಿನ ಪ್ರಮಾಣದಲ್ಲಿದೆ. ದೊಡ್ಡ-ದೊಡ್ಡ ಸಮುದಾಯಗಳು ರಾಜಕೀಯವಾಗಿ ಪ್ರಬಲ ಆಗಿರುತ್ತವೆ. ಅದೇ ರೀತಿಯಾಗಿ ಸಣ್ಣ ಸಮುದಾಯಗಳು ತಮ್ಮ ಧ್ವನಿಯನ್ನ ಒಟ್ಟು ಮಾಡಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಬೇಕೆಂದು ಹೇಳಿದರು.

ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಸಹಕಾರಿ ಕ್ಷೇತ್ರ ಜನರ ಅಂದೋಲನ ಆಗಬೇಕು. ನಿಮ್ಮ ಹಣ ಮತ್ತು ನಿಮ್ಮ ಮಾರ್ಗದರ್ಶನದಲ್ಲಿ ಸಹಕಾರ ಬ್ಯಾಂಕ್‌ಗಳು ನಡೆಯುವಂತಾಗಬೇಕು. ಸಾದರ ಹಿಂದೂ ಸಮಾಜ ಚಿಕ್ಕ ಸಮಾಜವಿರಬಹುದು. ಆದರೆ, ಸಾಧನೆಯಲ್ಲಿ ಸಾದರ ಹಿಂದೂ ಸಮಾಜ ಹಿಂದೆ ಬಿದ್ದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಕ್ಕಳನ್ನು ವಿದ್ಯಾವಂತರಾಗಿ ಮಾಡಬೇಕು. ಉತ್ತಮ ಸಮಾಜ ನಿರ್ಮಾಣಕ್ಕೆ ಸಾದರ ಹಿಂದೂ ಸಮಾಜ ಕೊಡುಗೆ ನೀಡುತ್ತಿದೆ. ಜನರ ಹಿತ ದೃಷ್ಟಿಯಿಂದ ಸಹಕಾರ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದ್ದು, ಪಟ್ಟಭದ್ರ ಹಿತಾಸಕ್ತಿಗಳ ಕೈಯಲ್ಲಿ ಸಹಕಾರ ಸಂಸ್ಥೆ ಸಿಲುಕದಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಈ ರೈಲುಗಳ ಸೇವೆ ವಿಸ್ತರಣೆ: ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಶುಭಸುದ್ದಿಯನ್ನು ನೀಡುತ್ತಲೇ ಇರುತ್ತದೆ. ಹಾಗೆಯೇ ಇದೀಗ ಮೈಸೂರು ಮತ್ತು ಬೆಂಗಳೂರು ರೈಲ್ವೆ ನಿಲ್ದಾಣಗಳ ನಡುವೆ ಸಂಚರಿಸುತ್ತಿರುವ ಪ್ರಮುಖ ರೈಲುಗಳಲ್ಲಿ ಒಟ್ಟು 8 ರೈಲುಗಳು ಇನ್ಮುಂದೆ ಮೈಸೂರಿನ ಹೊರ ವಲಯದಲ್ಲಿನ ಅಶೋಕಪುರಂ ರೈಲ್ವೆ ನಿಲ್ದಾಣಗಳಿಗೂ ವಿಸ್ತರಣೆ ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇಲ್ಲಿದೆ ನೋಡಿ ಸಂಪೂರ್ಣ ವಿವರ.

ಮೈಸೂರಿನಿಂದ ನಂಜನಗೂಡು, ಚಾಮರಾಜನಗರಕ್ಕೆ ಹೋಗುವ ಮಾರ್ಗದಲ್ಲಿರುವ ಅಶೋಕಪುರಂ ರೈಲ್ವೆ ನಿಲ್ದಾಣ ತುಂಬಾ ಹಳೆಯದ್ದಾಗಿದೆ. ಆದರೂ ಅದನ್ನು ಈಗ ಅಭಿವೃದ್ದಿಪಡಿಸಲಾಗಿದೆ. ಅಲ್ಲಿ ಮತ್ತೊಂದು ದ್ವಾರವನ್ನು ತೆರೆಯಲಾಗಿದ್ದು, ಟಿಕೆಟ್‌ ಕೌಂಟರ್‌ ಅನ್ನು ಸಹ ಪ್ರಾರಂಭಿಸಲಾಗಿದೆ. ಮೈಸೂರು ದಕ್ಷಿಣ ಭಾಗದ ಜನ ಮುಖ್ಯ ರೈಲ್ವೆ ನಿಲ್ದಾಣಕ್ಕೆ ಹೋಗುವ ಬದಲಿಗೆ ಅಶೋಕಪುರಂನಿಂದಲೇ ಬೆಂಗಳೂರು ನಡುವೆ ಸಂಚರಿಸುವ 8 ರೈಲುಗಳನ್ನು ಇನ್ಮುಂದೆ ಪ್ರಯಾಣಿಕರು ಬಳಸಿಕೊಳ್ಳಬಹುದು. ಇದರಿಂದ ಮುಖ್ಯ ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರ ಆದಂತಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+