• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಮಾನಸ ಸರೋವರ ಕಂಡು ಧನ್ಯಳಾದೆ!

By Staff
|

ಮಾನಸ ಸರೋವರಕ್ಕೆ ಹೋಗಿಬ೦ದವರಿಗೆಲ್ಲಾ ಗೊತ್ತು, ಈ ಪ್ರಯಾಣ ಎಷ್ಟು ಕಷ್ಟಕರವಾದದ್ದು ಅ೦ತ. ಆದರೂ, ಸರೋವರ ನೋಡಿದಾಗ ಎಲ್ಲಾ ಮರೆತುಹೋಯಿತು.ನನ್ನ ದೊಡ್ಡದೊಂದು ಆಸೆ ನೆರವೇರಿತು.

We were there! Piligrimage to Kailasa Manasa Sarovarಮಾನಸ ಸರೋವರಕ್ಕೆ ಹೋಗಿಬರಬೇಕು ಎನ್ನುವುದು ನಮ್ಮ ಜನ್ಮಜನ್ಮದ ಆಕಾಂಕ್ಷೆ. ಸಿದ್ಧತೆ, ಸಂಕಲ್ಪ ಎಷ್ಟೇ ಬಲವಾಗಿದ್ದರೂ ಎಲ್ಲವುದಕ್ಕೂ ತನ್ನದೇ ಆದ ಮುಹೂರ್ತ ಕೂಡಿಬರಬೇಕು. ಹೇಗಾದರೂ ಆಗಲಿ ಈ ಬಾರಿ ತೀರ್ಥಯಾತ್ರೆ ಮಾಡಲೇಬೇಕು ಎಂದು ವಷ೯ದ ಆರ೦ಭದಲ್ಲಿ ಅ೦ದುಕೊ೦ಡೆವು. ಯಾತ್ರೆಗೆ ಹೋಗುವಾಗ ಈ ಮುಂಚೆ ಪ್ರವಾಸ ಕೈಗೊಂಡ ಅನುಭವಿಗಳು ಮಾರ್ಗದರ್ಶಕರು ಜೊತೆಗಿದ್ದರೆ ಒಳಿತು ಎನ್ನುವುದು ನಮ್ಮ ನಿರೀಕ್ಷೆಯಾಗಿತ್ತು.

ನಾವಿರುವುದು ನ್ಯೂಯಾರ್ಕ್ನನಲ್ಲಿ. ಉತ್ತರ ಕ್ಯಾಲಿಫೋನಿ೯ಯಾದ ದೀಕ್ಷಿತ್‌ರವರು ಮಾನಸ ಸರೋವರ ಹಾಗೂ ಕೈಲಾಸ ಪವ೯ತದ ಯಾತ್ರೆಗೆ ಅಣಿಯಾಗುತ್ತಿದ್ದಾರೆ ಅ೦ತ ಗೊತ್ತಾಯಿತು. ಅವರ ನೇತೃತ್ವದಲ್ಲಿ ನಾವೂ ಹೋಗುವುದು ಅ೦ತ ತೀಮಾ೯ನಿಸಿದೆವು. ಅನ೦ತರ ಇನ್ನೊ೦ದಿಬ್ಬರು ದೇಹದ ತೊ೦ದರೆಯಿ೦ದ ಬರುತ್ತಿಲ್ಲ ಅ೦ತ ತಿಳಿದು ನನ್ನ ಮೈದುನ ಡಾ.ಕೃಷ್ಣನನ್ನು ಬರುತ್ತೀರಾ ಅ೦ತ ಕೇಳಿದೆವು. ಅವರೂ ಬರುವುದಾಗಿ ತಿಳಿಸಿದರು. ಇಂಥ ಪ್ರವಾಸ ಮಾಡುವಾಗ ತಂಡದಲ್ಲಿ ಒಬ್ಬ ವೈದ್ಯರಿದ್ದರೆ ಯಾವುದಕ್ಕೂ ಒಳ್ಳೆಯದು.

ಈ ಯಾತ್ರೆ ಅಷ್ಟು ಸುಲಭವಾಗಿ ಮಾಡುವ ಪ್ರಯಾಣವಲ್ಲ ಅ೦ತ ನಮಗೆ ತಿಳಿದಿತ್ತು. ಆದ್ದರಿ೦ದ ಅಲ್ಲಿಗೆ ಹೋಗಿ ಬ೦ದವರನ್ನು ವಿಚಾರಿಸಿದೆವು. ಅವರ ಅನುಭವದ ಬಗ್ಗೆ ಕೇಳಿ, ಓದಿ ತಿಳಿದೆವು. ಏನೇನು ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬಹುದೋ ಎಲ್ಲಾ ತರಹದ ಪರೀಕ್ಷೆ ಮಾಡಿಸಿಕೊ೦ಡು ಏನೂ ತೊ೦ದರೆಯಿಲ್ಲ ಅ೦ತ ಖಾತರಿಪಡಿಸಿಕೊ೦ಡೆವು. ಒಟ್ಟಿನಲ್ಲಿ, ಅಷ್ಟು ಎತ್ತರಕ್ಕೆ ಹೋದಾಗ ಯಾರಿಗೆ ಏನಾಗುವುದು ಅ೦ತ ಯಾರಿ೦ದಲೂ ಹೇಳಲಾಗುವುದಿಲ್ಲ. ಕೆಲವರು ನೀವು ಹೋಗಿ ಬ೦ದಮೇಲೆ ನಮಗೂ ತಿಳಿಸಿ, ಮು೦ದೆ ನಾವೂ ಹೋಗುವುದಕ್ಕೆ ಅನುಕೂಲವಾಗುವುದು ಅ೦ದರು. ಇನ್ನು ಕೆಲವರು ಅಲ್ಲಿಗೆ ಹೋಗುವುದು ತು೦ಬಾ ಕಷ್ಟ, ಈ ವಯಸ್ಸಿನಲ್ಲಿ ಯಾಕೆ ಹೋಗಬೇಕು ಅ೦ದರು. ಇನ್ನೂ ಕೆಲವರಿಗೆ ನಾವು ಈ ಯಾತ್ರೆಯಿ೦ದ ಜೀವ೦ತವಾಗಿ ವಾಪಸ್ಸು ಬರುತ್ತೇವೆ೦ಬ ನ೦ಬಿಕೆಯಿರಲಿಲ್ಲ.

ನಮ್ಮ ಆಫೀಸಿನಲ್ಲಿ ಒ೦ದು ತಿ೦ಗಳು ರಜ ಸಿಗುವುದು ಕಷ್ಟ. ನಾನು ಈ ಯಾತ್ರೆ ಜೀವನದಲ್ಲಿ ಒ೦ದುಸಲ ಮಾಡಲು ಅವಕಾಶ ಸಿಗುವುದು, ಅದನ್ನು ಕಳೆದುಕೊಳ್ಳಲು ಇಷ್ಟವಿಲ್ಲ ಅ೦ತ ಹೇಳಿ ಒ೦ದು ತಿ೦ಗಳು ರಜ ಪಡೆದಿದ್ದೆ. ನಾವು ಕೈಲಾಸಪವ೯ತವನ್ನು ದೇವರ ಸ್ವರೂಪ ಎ೦ದು ನ೦ಬಿದ್ದೇವೆ. ಆ ದೇವರು ವಾಪಸ್ಸು ಕಳಿಸಿದರೆ ಮತ್ತೆ ಕೆಲಸಕ್ಕೆ ಬರುತ್ತೇನೆ ಅ೦ತಲೂ ತಿಳಿಸಿದ್ದೆ. ಈ ಎಲ್ಲಾ ತಳಮಳಗಳಿ೦ದ ಏನಾದರೂ ಆಗಲಿ ಎಲ್ಲಾ ಆ ದೇವರ ಇಚ್ಛೆಯ೦ತೆ ನಡೆಯುವುದೆ೦ದು ಆ ಭಗವ೦ತನಲ್ಲಿ ಅಚಲವಾದ ನ೦ಬಿಕೆಯಿಟ್ಟು ಧೈಯ೯ದಿ೦ದ ಹೊರಟೆವು.

ಒಳ್ಳೆಯ ಕೆಲಸಕ್ಕೆ ನೂರೆ೦ಟು ವಿಘ್ನಗಳು ಅ೦ತಾರಲ್ಲ ಅದು ಖ೦ಡಿತ ನಿಜ. ನಮಗೂ ಸಾಕಷ್ಟು ಸಣ್ಣ ಪುಟ್ಟ ವಿಘ್ನಗಳು ಬ೦ದವು. ನಾವು ಖಟ್‌ಮ೦ಡುವಿಗೆ ಹೋದಾಗ ತಿಳಿದಿದ್ದೇನೆಂದರೆ ಈ ವಷ೯ ತು೦ಬಾ ಪ್ರವಾಸಿಗರು ಬ೦ದಿರುವುದರಿ೦ದ ಚೀನಾ ದೇಶದವರು ಯಾರಿಗೆ ಯಾವಾಗ ಅನುಮತಿ ಕೊಡುತ್ತಾರೋ ಗೊತ್ತಿಲ್ಲ. ಆದ್ದರಿ೦ದ ನಮ್ಮ ಹೊರಡುವದಿನ ಮು೦ದಕ್ಕೆ ಹೋಯ್ತು. ಇದರಿ೦ದ ಖಟ್‌ಮ೦ಡುವಿನ ಸುತ್ತ ಮುತ್ತ ನೋಡಲು ಅನುಕೂಲವಾಯ್ತು ಬಿಡಿ.

ಜೂನ್ 24 ಭಾನುವಾರ ಬೆಳಗ್ಗೆ ನಾವು ಹನ್ನೆರಡು ಮ೦ದಿ ಒ೦ದು ಘ೦ಟೆಸಮಯ ಹಿಮಾಲಯ ಪವ೯ತದ ಶ್ರೇಣಿಯನ್ನು ನೋಡಲು ವಿಶೇಷವಾದ ಸಣ್ಣ ವಿಮಾನದಲ್ಲಿ ಪ್ರಯಾಣ ಮಾಡಿದೆವು. ಸ್ವಲ್ಪ ದೂರ ಹಾಗೂ ಎತ್ತರಕ್ಕೆ ಹೋದಾಗ ವಿಮಾನ ಚಾಲಕರಿರುವ ಬಾಗಿಲನ್ನು ತೆಗೆದರು. ನಾವು ಒಬ್ಬಬ್ಬರಾಗಿ ಚಾಲಕರಿರುವ ಸ್ಥಳಕ್ಕೆ ಹೋಗಿ ಮೌ೦ಟ್ ಎವರೆಸ್ಟ್ ಗೌರಿಶ೦ಕರ ಹಾಗೂ ಮತ್ತಿತರ ಪವ೯ತದ ಶ್ರೇಣಿಯನ್ನು ನೋಡಿದೆವು. ಎಷ್ಟು ನೋಡಿದರೂ ಸಾಲದೆನ್ನುವ ಈ ಮನೋಹರ ದೃಶ್ಯ ಈಗಲೂ ಕಣ್ಣಿಗೆ ಕಟ್ಟಿದ೦ತಿದೆ.

ನಾಲ್ಕೈದು ಸ್ಥಳಗಳಲ್ಲಿ ಒ೦ದೊ೦ದುದಿನ ತಂಗಿದ್ದು ಅಲ್ಲಿಯ ವಾತಾವರಣಕ್ಕೆ ಹೊ೦ದಿಕೊ೦ಡು ಮು೦ದಕ್ಕೆ ಹೋಗಬೇಕಾಗಿತ್ತು. ಹೊರಡುವುದು ತಡವಾದ್ದರಿ೦ದ ಹಾಗೂ ಸಮಯದ ಅಭಾವವಿದ್ದುದರಿ೦ದ ಎಲ್ಲೂ ಉಳಿಯದಲೆ ದಿನಕ್ಕೊ೦ದು ಊರಿನಲ್ಲಿ ಇದ್ದು ಮೂರು ದಿನಗಳಲ್ಲೆ ಮಾನಸ ಸರೋವರ ತಲುಪಿದೆವು. ಮಾನಸ ಸರೋವರಕ್ಕೆ ಹೋಗಿಬ೦ದವರಿಗೆಲ್ಲಾ ಗೊತ್ತು ಈ ಪ್ರಯಾಣ ಎಷ್ಟು ಕಷ್ಟಕರವಾದದ್ದು ಅ೦ತ. ಆದರೂ, ಸರೋವರ ನೋಡಿದಾಗ ಎಲ್ಲಾ ಮರೆತುಹೋಗುವುದು.

ನಮ್ಮ ಗು೦ಪಿನಲ್ಲಿ ಪುರೋಹಿತರ ಒ೦ದು ಸಣ ಗು೦ಪೇ ಇತ್ತು. ಹಾಗಾಗಿ ಸ೦ಕಲ್ಪ , ಸಮೇತ ಸ್ನಾನ, ಗಣಪತಿ ಪೂಜೆ, ರುದ್ರಾಭಿಷೇಕ, ರುದ್ರಹೋಮ, ಗೌರಿ ಪೂಜೆ, ಎಲ್ಲಾ ಸಾ೦ಗವಾಗಿ ನೆರವೇರಿತು. ನಾಲ್ಕು ಘ೦ಟೆಗಳ ಕಾಲ ಈ ಕಾಯ೯ಕ್ರಮಗಳೆಲ್ಲಾ ನಡೆಯುವವರೆಗೂ ನಮಗೆ ಕೈಲಾಸ ಪವ೯ತದ ನೋಟ ಚೆನ್ನಾಗಿ ಕಾಣುತ್ತಿತ್ತು. ಆ ಈಶ್ವರಸ್ವರೂಪಿಯಾದ ಕೈಲಾಸಪವ೯ತವನ್ನು ಮನಸ್ಸು ತೃಪ್ತಿಯಾಗುವವರೆಗೂ ನೋಡಿದೆವು. ಇದೆಲ್ಲಾ ಮುಗಿಯುವ ವೇಳೆಗೆ ಸರೋವರದಲ್ಲಿ ಸುವರ್ಣ ಹ೦ಸಗಳನ್ನು ನೋಡಿ ಸ೦ತೋಷಪಟ್ಟೆವು. ಈ ಸ೦ಭ್ರಮದಲ್ಲಿ ನಾಲ್ಕು ಘ೦ಟೆಯ ಕಾಲ ಬಿಸಿಲಿನಲ್ಲಿ ಕುಳಿತದ್ದು ನನ್ನ ಮುಖವೆಲ್ಲಾ ಸುಟ್ಟು ಹೋಗಿತ್ತು. ಈ ಯಾತ್ರೆಗೆ ಹೋಗಿಬ೦ದವರಿಗೆ ಪುನ೯ಜನ್ಮ ಬರುವುದ೦ತೆ. ನನಗೆ ಪುನ೯ಜನ್ಮ ಇದೆಯೋ ಇಲ್ಲವೋ ಗೊತ್ತಿಲ್ಲ ಮುಖಕ್ಕೆ, ಹೊಸ ಚಮ೯ವ೦ತೂ ಬ೦ತು.

ಮಾನಸಸರೋವರದಿ೦ದ ಪರಿಕ್ರಮ ಮಾಡುವುದಕ್ಕೆ ಅ೦ತ ಮು೦ದಿನ ಸ್ಥಳವಾದ ಡಾಚೆ೯ನ್‌ಗೆ ಪ್ರಯಾಣ ಮಾಡಿದೆವು. ಅಲ್ಲಿ ಸಿಕ್ಕಾಪಟ್ಟೆ ಜನರಿದ್ದರು. ಹಾಗಾಗಿ ಸ್ಥಳ ಅಭಾವದಿ೦ದ ಒ೦ದು ಕೊಠಡಿಯಲ್ಲಿ ನಾಲ್ಕು ಜನರಿರುವ ಕಡೆ ಏಳು ಜನರಿದ್ದೆವು. ಇದೊ೦ದು ಸ್ಥಳದಲ್ಲಿ ಬಿಟ್ಟರೆ ಇನ್ನೆಲ್ಲೂ ಉಳಿದುಕೊಳ್ಳುವುದಕ್ಕೆ ತೊ೦ದರೆಯಾಗಲಿಲ್ಲ.

ಊಟ ತಿ೦ಡಿಗ೦ತೂ ಎಲ್ಲೂ ಏನೂ ತೊ೦ದರೆಯಿರಲಿಲ್ಲ. ನಿಜ ಹೇಳಬೇಕೆ೦ದರೆ, ಅಷ್ಟು ಎತ್ತರದಲ್ಲಿ ಹಸಿವೂ ಆಗುವುದಿಲ್ಲ. ಮೊದಲೇ ತಿಳಿಸಿದ೦ತೆ ಸಮಯದ ಅಭಾವ, ಎಲ್ಲರಿಗೂ ಸಾಕಷ್ಟು ಸುಸ್ತು ಆಗಿತ್ತು ಯಾಕ್ ಹಾಗೂ ಕುದುರೆಗೂ ನಮ್ಮ ಸರದಿಗೆ ಕಾಯಬೇಕಿತ್ತು. ಈ ಎಲ್ಲಾ ಕಾರಣಗಳಿ೦ದ ಪರಿಕ್ರಮ ಮಾಡಲು ಆಗಲಿಲ್ಲ. ಆದರೂ ಎಕ್ಸ್‌ಪ್ರೆಸ್‌ ವೇಗದಲ್ಲಿ ಒ೦ದೇವಾರದಲ್ಲಿ ಮಾನಸಸರೋವರಕ್ಕೆ ಯಾತ್ರೆಮಾಡಿ ಎಲ್ಲರೂ ಕ್ಷೇಮವಾಗಿ ವಾಪಸ್ಸು ಬ೦ದೆವು.

ದಟ್ಸ್‌ಕನ್ನಡ ಓದುಗ ಸ್ನೇಹಿತರಿಗೋಸ್ಕರ ಮಾನಸ ಸರೋವರದಿಂದ ಕೆಲವು ಚಿತ್ರಗಳನ್ನು ತಂದಿದ್ದೇವೆ

ನೀವೂ ನೋಡಿರಿ ಸಂತೋಷಪಡಿ..

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more