Get Updates
Get notified of breaking news, exclusive insights, and must-see stories!

ಕುಂಭಮೇಳಕ್ಕಾಗಿ ಕನ್ನಡಿಗರಿಗೆ ವಿಶೇಷ ಪ್ಯಾಕೇಜ್

Kalpavasi Kumbhamela Kannada special package
ಬೆಂಗಳೂರು, ಡಿ. 18 : 2010ರ ಜನವರಿಯಿಂದ ಹರಿದ್ವಾರದಲ್ಲಿ ಪ್ರಾರಂಭವಾಗುತ್ತಿರುವ ಕುಂಭಮೇಳದಲ್ಲಿ ಭಾಗವಹಿಸುವ ಕರ್ನಾಟಕದ ಕಲ್ಪವಾಸಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ 'ಕನ್ನಡ ವಿಶೇಷ ಕಲ್ಪವಾಸಿ ಪ್ಯಾಕೇಜ'ನ್ನು ಕಲ್ಪವಾಸಿ.ಕಾಂ ಅಂತರ್ಜಾಲ ತಾಣ ಪ್ರಾರಂಭಿಸಿದೆ.

ವಿಶ್ವಪ್ರಸಿದ್ಧ ಕುಂಭಮೇಳದಲ್ಲಿ ಭಾಗವಹಿಸುವ 40 ರಾಷ್ಟ್ರಗಳ ವಿದೇಶಿಯರಿಗೆ ಊಟ, ವಸತಿ, ಪ್ರವಾಸಿ ಮಾರ್ಗದರ್ಶಕ್ಕೆ ಅನುಕೂಲ ಮಾಡಿಕೊಡಲೆಂದು ಸೃಷ್ಟಿಸಲಾಗಿದ್ದ ಈ ತಾಣ ಮೊದಲ ಬಾರಿಗೆ ದಕ್ಷಿಣ ಭಾರತದ ಪ್ರವಾಸಿಗಳನ್ನು ಆಕರ್ಷಿಸಲು ವಿಶೇಷ ಪ್ಯಾಕೇಜನ್ನು ರೂಪಿಸಿದೆ.

ಕರ್ನಾಟಕದಿಂದ ಕುಂಭಮೇಳಕ್ಕೆಂದು ಹೋಗುವ ಕನ್ನಡಿಗರು ಅಲ್ಲಿ ಭಾಷೆ, ವಸತಿ, ಮಾಹಿತಿ, ಮಾರ್ಗದರ್ಶನದ ಕೊರತೆಗಳನ್ನು ಅನುಭವಿಸುವುದು ಸಹಜ. ಆದರೆ, ಈ ವಿಶೇಷ ಪ್ಯಾಕೇಜಿನಿಂದಾಗಿ ಈ ಯಾವ ತೊಂದರೆಗಳು ಕರ್ನಾಟಕದ ಕಲ್ಪವಾಸಿಗಳಿಗೆ ಎದುರಾಗುವುದುದಿಲ್ಲ ಎನ್ನುವುದು ಅಂತರ್ಜಾಲ ತಾಣದ ಅನಿಸಿಕೆ. ಕನ್ನಡಿಗರಿಗಾಗಿ ವಿಶೇಷವಾಗಿ ತರಬೇತಿ ಪಡೆದ ಗೈಡುಗಳನ್ನು ಮತ್ತು ರಕ್ಷಣೆಯನ್ನು ಒದಗಿಸಲಾಗುವುದು.

9 ದಿನಗಳ ವೈಭವದ ಮೇಳದಲ್ಲಿ 5 ದಿನ ಕುಂಭಮೇಳದಲ್ಲಿ ಭಾಗವಹಿಸುವಿಕೆ ಮತ್ತು 4 ದಿನಗಳ ಪ್ರಯಾಣ ಒಳಗೊಂಡಿರುತ್ತದೆ. 9 ದಿನಗಳ ಪ್ರವಾಸಕ್ಕಾಗಿ ಕೇವಲ 25 ಸಾವಿರ ರು.ಗಳನ್ನು ನೀಡಬೇಕಾಗುತ್ತದೆ. ಈ ವಿಶೇಷ ಪ್ಯಾಕೇಜ್, ಮೂರನೇ ದರ್ಜೆಯ ಹೋಗಿಬರುವ ರೈಲು ಟಿಕೆಟ್, ದೆಹಲಿ-ಹರಿದ್ವಾರ-ದೆಹಲಿ ಪ್ರಯಾಣ, ಕ್ಯಾಂಪ್ ಸೈಟಿನಲ್ಲಿ ಟೆಂಟ್ ವ್ಯವಸ್ಥೆ, ಒಂದು ದಿನ ಹರಿದ್ವಾರ ಮತ್ತು ರಿಷಿಕೇಶ ವೀಕ್ಷಣೆಯನ್ನು ಒಳಗೊಂಡಿರುತ್ತದೆ.

ಕುಂಭಮೇಳದಲ್ಲಿ ಭಾಗವಹಿಸಲಿಚ್ಛಿಸುವವರು ಕಲ್ಪವಾಸಿ.ಕಾಂನಲ್ಲಿ ತಮ್ಮ ವಿವರಗಳನ್ನು ನೀಡಿದರೆ ಮುಂದಿನ ವ್ಯವಸ್ಥೆ ಅಂತರ್ಜಾಲ ತಾಣವೇ ಮಾಡಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+