ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗೋವಾ ಬೀಚಿನಲ್ಲಿ ಈಜಾಟವಾಡಿದರೆ, ಸಾವು ನಿಮಗೆ

By Mahesh
|
Google Oneindia Kannada News

Goa Beaches Pollution
ಪ್ರವಾಸಿಗರ ಸ್ವರ್ಗ ಗೋವಾದ ಪ್ರವಾಸೋದ್ಯಮಕ್ಕೆ ಧಕ್ಕೆ ಉಂಟಾಗುವ ಮಾಹಿತಿ ಹೊರಬಿದ್ದಿದೆ.

ಗೋವಾದ ಸಮುದ್ರದಲ್ಲಿ ಈಜಾಡುವುದು ಮಾಡುವುದು ಅಪಾಯಕಾರಿ. ಇಲ್ಲಿನ ಬೀಚುಗಳು ಸಂಪೂರ್ಣವಾಗಿ ಮಾಲಿನ್ಯಗೊಂಡಿದೆ ಎಂದು ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಓಶಿಯಾನೋಗ್ರಾಫಿ(National Institute of Oceanography (NIO)) ವಿಜ್ಞಾನಿಗಳು ಹೇಳಿದ್ದಾರೆ. ಆದರೆ, ಗೋವಾದ ಪ್ರವಾಸೋದ್ಯಮ ಇಲಾಕೆ ಈ ವಿಷಯವನ್ನು ಮುಚ್ಚಿಟ್ಟು, ಯಾವುದೇ ಆತಂಕವಿಲ್ಲದೆ ಬೀಚಿನಲ್ಲಿ ಈಜಾಡಿ ಎನ್ನುತ್ತಿದೆ.

ಸಿನಿ ತಾರೆಯರ ಸಹಿತ ದೇಶ ವಿದೇಶಗಳಿಂದ ನಿತ್ಯ ಲಕ್ಷ ಲಕ್ಷ ಪ್ರವಾಸಿಗರನ್ನು ಗೋವಾ ಸೆಳೆಯುತ್ತಿದೆ. ವಾರ್ಷಿಕವಾಗಿ 2.6 ಮಿಲಿಯನ್ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಗೋವಾದಲ್ಲಿ ಬೀಚ್‌ಗಳೇ ಆಕರ್ಷಣೆಯ ಕೇಂದ್ರ ಬಿಂದು. ಅರೆಬೆತ್ತಲಾಗಿ ಸ್ನಾನ ಮಾಡುವ ದೇಶಿ, ಪರದೇಶಿ ಚೆಲುವೆಯರನ್ನು ನೋಡಲೆಂದೆ ಇಲ್ಲಿಗೆ ಪಡ್ಡೆಗಳು ಬರುವುದುಂಟು.

ಆದರೆ, ರೋಗ ರುಜಿನಗಳನ್ನು ಹರಡುವ ವೈರಾಣುಗಳ ಆಗರವಾಗಿರುವ ಸಮುದ್ರದಲ್ಲಿ ಈಜಾಡಲು ಎಂಟೆದೆ ಬೇಕು. ಇಲ್ಲಿನ ನೀರು ಮನುಷ್ಯರಿಗಷ್ಟೇ ಅಲ್ಲ. ಜಲಚರರನ್ನು ಕೊಲ್ಲುವಷ್ಟು ಹಾಳಾಗಿದೆ ಎಂದು ಎನ್ಐಒನ ತಜ್ಞರು ಹೇಳಿದ್ದಾರೆ.

ಕಾಲಿಫಾರ್ಮ್(fecal coliform bacteria) ಎಂಬ ಬ್ಯಾಕ್ಟೀರಿಯಾ ಮಾಂಡೋವಿ ಹಾಗೂ ಜುವಾರಿ ನದಿಗಳಲ್ಲೂ ಹರಡಿದೆ. ಗೋವಾದ ಸುತ್ತ ಮುತ್ತಲಿನ 30 ಕಿ.ಮೀ ವ್ಯಾಪ್ತಿಯ ನೀರಿನಲ್ಲೂ ವಿಷಕಾರಿ ವೈರಾಣುಗಳು ಪತ್ತೆಯಾಗಿದೆ ಎನ್ನಲಾಗಿದೆ. ಸಮುದ್ರಕ್ಕೆ ಹೋಗಿ ನೀರಿಗಿಳಿಯದೆ ದಂಡೆಯಲ್ಲಿ ಕೂರಲು ಸಾಧ್ಯವಿಲ್ಲ ಎನ್ನುವುದಾದರೆ medical travel insurance policy ಮಾಡಿಸಿಕೊಂಡು ಈಜಾಡಿ ಎನ್ನುತ್ತಿದ್ದಾರೆ ತಜ್ಞರು.

English summary
National Institute of Oceanography have warned coastal waters and rivers in Goa are highly contaminated.According to Goa Tourism Development Corporation beaches are safe. Almost 2.6 million tourists make a trip to the famous holiday destination every year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X