ಜೋಗದ ಮಡಿಲಲ್ಲಿ ಮತ್ತುಗ ಎಂಬ ಹೋಂಸ್ಟೇ

* ಆರ್. ಶರ್ಮಾ, ತಲವಾಟ
ವಿಶ್ವ ವಿಖ್ಯಾತ ಜೋಗ ಜಲಪಾತ ಶರಾವತಿ ನದಿ ಸಮುದ್ರ ಸೇರುವ ತವಕದಿಂದ ಧುಮ್ಮಿಕ್ಕುವ ತಾಣ. ಹಾಗಾಗಿ ಪ್ರವಾಸಿಗರ ಕಣ್ಣಿಗೆ ಹಬ್ಬದ ಪ್ರೇಕ್ಷಣೀಯ ಸ್ಥಳ. ಆದರೆ ಅಂತಹ ವಿಖ್ಯಾತಿಯ ಸ್ಥಳ ಪ್ರವಾಸಿಗರಿಗೆ ಉಳಿಯುವ ಹಾಗೂ ಊಟದ ವಿಚಾರಗಳಲ್ಲಿ ಅಷ್ಟೇ ಕುಖ್ಯಾತಿಯನ್ನು ಹೊಂದಿದೆ. ಸರ್ಕಾರಿ ಅಧಿಕಾರಿಗಳ ಮರ್ಜಿ ಬೇಡುವ ಪ್ರವಾಸಿ ಬಂಗಲೆಗಳು, ಊಟ ಎಂದರೆ ಇದೆನಾ? ಎನ್ನುವಂತಹ ಹೋಟೇಲುಗಳು ಕುಖ್ಯಾತಿಗೆ ಕಾರಣೀಭೂತವಾಗಿವೆ. ಇಂಥಹ ಕುಖ್ಯಾತಿಯನ್ನು ಹೋಗಲಾಡಿಸಲು ಇತ್ತೀಚಿನ ದಿನಗಳಲ್ಲಿ ಹೋಂಸ್ಟೇಗಳು ತಲೆ ಎತ್ತತೊಡಗಿವೆ. ಅಂತಹ ಒಂದು ಹೋಂಸ್ಟೆ ಕುರಿತು ಕಳೆದ ವಾರ (ನಮ್ಮನೆ ಎಂಬ ಉಳಿಮನೆ) ದಟ್ಸ್ ಕನ್ನಡದ ಓದುಗರಾದ ನಿಮಗೆ ತಿಳಿದಿದೆ. ಈಗ ಮತ್ತೊಂದು ಹೋಂಸ್ಟೆ "ಮತ್ತುಗ" ಬಗ್ಗೆ ಪರಿಚಯಿಸುತ್ತೇನೆ.
ಸ್ಟೆ ಎಟ್ ಮತ್ತುಗ (http://matthuga.in) ಎಂಬ ಹೆಸರಿನ ಹೋಂಸ್ಟೆ ತಾಳಗುಪ್ಪ ಹಾಗೂ ಜೋಗದ ನಡುವೆ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಜೋಗದಿಂದ 8 ಕಿಲೋಮೀಟರ್ ಹಿಂದೆ ಸಕಲ ಸೌಲಭ್ಯ ಹೊತ್ತು ನಿಂತಿರುವ ಈ ಹೋಂಸ್ಟೆ ಇನ್ನು ಮೂರು ತಿಂಗಳ ಕೂಸಷ್ಟೆ. ನಾಲ್ಕು ರೂಂಗಳುಳ್ಳ ಈ ಹೋಂಸ್ಟೆ ಒಮ್ಮೆಗೆ ಇಪ್ಪತ್ತು ಜನರಿಗೆ ವಸತಿ ಊಟೋಪಚಾರ ಒದಗಿಸುವ ಸೌಲಭ್ಯವನ್ನು ಹೊಂದಿದೆ. ಆನ್ ಲೈನ್ ಬುಕಿಂಗ್ ವ್ಯವಸ್ಥೆ ಹೊಂದಿರುವ ಈ ಹೋಂಸ್ಟೆ ಕೂಡ ಎಂ.ಎಸ್ ನರಹರಿ ಎಂಬ ಕೃಷಿಕರ ಒಡೆತನದ್ದು ಎಂಬುದು ಹೆಮ್ಮೆಯ ಸಂಗತಿ. ಹತ್ತು ಎಕರೆ ವಿಸ್ತಾರದ ತೊಟದ ನಡುವೆ ಇರುವ ಇದು ಆಹ್ಲಾದಕರ ಎನ್ನಿಸುವುದರಲ್ಲಿ ಅನುಮಾನವಿಲ್ಲ.
ಜೋಗದ (ಛಾಯಾಚಿತ್ರಗಳು) ಸವಿ ಸವಿಯಲು ಬರುವ ಪ್ರವಾಸಿಗರಿಗೆ ಜೋಗದ ಸುತ್ತಮುತ್ತೆಲ್ಲಾ ಏನೇನಿದೆ? ಎಂಬ ಮಾಹಿತಿ ಅಲ್ಲಿ ಸಿಗುವುದಿಲ್ಲ. ಆದರೆ (http://matthuga.in) ಮತ್ತುಗಕ್ಕೆ ಒಮ್ಮೆ ನೀವು ಲಾಗ್ ಇನ್ ಆದರೆ ಜೋಗದ ಸುತ್ತಮುತ್ತ ಐವತ್ತು ಕಿಲೋಮೀಟರ್ ಪಾಸಲೆಯಲ್ಲಿ ಎಂತಹ ಸುಂದರ ತಾಣಗಳಿವೆ ಎಂಬುದರ ಸಮಗ್ರ ಪರಿಚಯ ದೊರಕುತ್ತದೆ. ಸರಿ ಸುಮಾರು ಐವತ್ತು ಪ್ರೇಕ್ಷಣೀಯ ತಾಣಗಳ ಫೋಟೊಗಳ ಸಮೇತ ಮಾಹಿತಿ ವೆಬ್ ತಾಣದಲ್ಲಿ ಲಭ್ಯವಿದೆ.
Trekking - Corporate Activities - Nature/Plantation Walk - Bird Watching Farming - Night Walking Short Trips - Do Nothing ಹೀಗೆ ಪ್ರವಾಸವನ್ನು ವಿಭಾಗ ಮಾಡಿರುವ ಹೋಂಸ್ಟೆಯ ಕೃಷಿಕ ಮಾಲಿಕರು ತಮ್ಮಲ್ಲಿ ಉಳಿಯುವುವ ಪ್ರವಾಸಿಗರ ಮನತಣಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಿನವೊಂದಕ್ಕೆ ಊಟವೂ ಸೇರಿದಂತೆ 1000 ರೂಪಾಯಿಗಳ ಆಸುಪಾಸಿನಲ್ಲಿ ವೆಚ್ಚ ಬೇಡುವ "ಸ್ಟೆ ಎಟ್ ಮತ್ತುಗ"ಕ್ಕೆ ಒಮ್ಮೆ ಬೇಟಿ ನೀಡಿ ಮಲೆನಾಡು ಊಟದ ಸವಿಯ ಜತೆಗೆ ಹತ್ತಾರು ಸ್ಥಳಗಳ ನೋಟ ಸವಿಯಬಹುದು.
ವಿಳಾಸ ಮತ್ತು ಸಂಪರ್ಕ
ಎಮ್ಎಸ್ ನರಹರಿ
ತಲವಾಟ (ಜೋಗ ಜಲಪಾತದ ಬಳಿ), ಬಿಎಚ್ ರಸ್ತೆ (ಎನ್ಎಚ್ 206)
ಸಾಗರ ತಾಲೂಕ್, ಶಿವಮೊಗ್ಗ ಜಿಲ್ಲೆ
ತಲವಾಟ - 577421
ದೂರವಾಣಿ: 08183-207581 / 94480 68870
ಮುಂಗಡ ಕಾಯ್ದಿರಿಸಲು ಮತ್ತು ವಿಚಾರಣೆಗಾಗಿ : 98807 99975 or 98806 76761
ಈ-ಮೇಲ್ ವಿಳಾಸ: [email protected]
ಜೋಗದ ವಿಹಂಗಮ ನೋಟ ನೋಡಲು ಇಲ್ಲಿ ಕ್ಲಿಕ್ಕಿಸಿ
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications