Adani: 30 ಲಕ್ಷ ಕೋಟಿ ರೂ ಒಪ್ಪಂದಕ್ಕೆ ಮಹಾರಾಷ್ಟ್ರ ಸಹಿ; ಅದಾನಿ ಗ್ರೂಪ್‌ನಿಂದ ಮೆಗಾ ಪ್ಲ್ಯಾನ್

ನವದೆಹಲಿ: ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ (WEF 2026) ರಲ್ಲಿ ಮಹಾರಾಷ್ಟ್ರವು ದಾಖಲೆಯ 360 ಶತಕೋಟಿ ಡಾಲರ್ (30 ಲಕ್ಷ ಕೋಟಿ ರೂ) ಮೌಲ್ಯದ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಿದೆ. ರಾಜ್ಯದ ಸಿಎಂ ದೇವೇಂದ್ರ ಫಡ್ನವೀಸ್ ನೇತೃತ್ವದ ನಿಯೋಗ ಹಾಗೂ ಅದಾನಿ ಗ್ರೂಪ್ ಪ್ರಮುಖ ಒಪ್ಪಂದಕ್ಕೆ ಸಾಕ್ಷಿಯಾಗಿವೆ. ಎಐ, ಡೇಟಾ ಮೂಲಸೌಕರ್ಯ, ಪರಮಾಣು ವಿದ್ಯುತ್, ಕ್ವಾಂಟಮ್ ಕಂಪ್ಯೂಟಿಂಗ್, ಹಸಿರು ಶಕ್ತಿ ಸೇರಿದಂತೆ ಯೋಜನೆಗಳು 30-40 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿವೆ ಎಂದು ವರದಿ ಆಗಿದೆ.

ಈ ಒಪ್ಪಂದವು ಮಹಾರಾಷ್ಟ್ರದ ಪಾಲಿಗೆ ಆರ್ಥಿಕ ಉತ್ತೇಜ ನೀಡಲಿದೆ. 18ಕ್ಕೂ ಹೆಚ್ಚು ದೇಶಗಳಿಂದ ಬಂಡವಾಳ ಹರಿದು ಬರಲಿದೆ. ವಿಶ್ವ ಬ್ಯಾಂಕ್‌ನ ಹಿರಿಯ ಸಲಹೆಗಾರ ಎಂ. ಜಮ್ಶೆಡ್ ಅವರು ದಾವೋಸ್‌ನ ವಿಶ್ವ ಆರ್ಥಿಕ ವೇದಿಕೆ 2026 ರಲ್ಲಿ ಮಹಾರಾಷ್ಟ್ರವು 360 ಶತಕೋಟಿ ಡಾಲರ್ ಮೌಲ್ಯದ ಬೃಹತ್ ಒಪ್ಪಂದವು ದೊಡ್ಡ ಯಶಸ್ಸು ತಂದುಕೊಡಲಿದೆ ಎಂದು ಪ್ರಶಂಸಿದ್ದಾರೆ.

Maharashtra

ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ವತಿಯಿಂದ ಅಪಾರ ಹೂಡಿಕೆ ಹರಿದು ಬರಲಿದೆ. ಈ ಒಪ್ಪಂದದಲ್ಲಿ ಪ್ರಮುಖ ಪಾತ್ರ ವಹಿಸಲಿರುವ ಒಟ್ಟು ಹೂಡಿಕೆಯ ಬಹುಪಾಲಾದ 66 ಶತಕೋಟಿ ಡಾಲರ್ (6 ಲಕ್ಷ ಕೋಟಿ ರೂ.) ಅದಾನಿ ಸಮೂಹದಿಂದ ಬರಲಿದೆ. ಈ ಮೊತ್ತವನ್ನು ಮಹಾರಾಷ್ಟ್ರದ ಮೆಗಾ-ಯೋಜನೆಗಳಿಗಾಗಿ ಹಂಚಿಕೆ ಮಾಡಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ. ಅದಾನಿ ಗ್ರೂಪ್‌ನ ಯೋಜನೆಗಳು ಮುಂದಿನ ಸುಮಾರು ಏಳು ವರ್ಷಗಳಲ್ಲಿ ಜಾರಿಗೆ ತರಲು ಚಿಂತಿಸಲಾಗಿದೆ. ಧಾರಾವಿ ನಗರ ಪುನರಾಭಿವೃದ್ಧಿ, 3,000 ಮೆಗಾ ವ್ಯಾಟ್ ಹಸಿರು ಡೇಟಾ ಸೆಂಟರ್ ಪಾರ್ಕ್‌ಗಳು, ಪರಮಾಣು ವಿದ್ಯುತ್ ಸ್ಥಾವರ, ಸುಧಾರಿತ ಸೆಮಿಕಂಡಕ್ಟರ್, ಡಿಸ್ಪ್ಲೇ ಫ್ಯಾಬ್ರಿಕೇಶನ್ ಸೌಲಭ್ಯಗಳು, 8,700 ಮೆಗಾ ವ್ಯಾಟ್ ಪಂಪ್ಡ್-ಸ್ಟೋರೇಜ್ ಜಲವಿದ್ಯುತ್ ಯೋಜನೆಗಳು ಇದರಲ್ಲಿವೆ.

Adani: ಉದ್ಯಮಿ ಅದಾನಿ ಮೇಲಿನ ಕ್ರಿಮಿನಲ್ ಪ್ರಕರಣಗಳ ಕೈ ಬಿಟ್ಟ ಯುಎಸ್ ನ್ಯಾಯ ಇಲಾಖೆ
Adani: ಉದ್ಯಮಿ ಅದಾನಿ ಮೇಲಿನ ಕ್ರಿಮಿನಲ್ ಪ್ರಕರಣಗಳ ಕೈ ಬಿಟ್ಟ ಯುಎಸ್ ನ್ಯಾಯ ಇಲಾಖೆ

ರಾಜ್ಯದಲ್ಲಿ 40 ಲಕ್ಷ ಉದ್ಯೋಗ ಸೃಷ್ಟಿ

ಅದಾನಿ ಎಂಟರ್‌ಪ್ರೈಸಸ್‌ನ ನಿರ್ದೇಶಕ ಪ್ರಣವ್ ಅದಾನಿ ಒಪ್ಪಂದ ಬಳಿಕ ಮಾತನಾಡಿ, ಮಹಾರಾಷ್ಟ್ರದ ಪೂರಕ ನೀತಿ ಪರಿಸರ ವ್ಯವಸ್ಥೆಯು ಇಲ್ಲಿನ ಮೂಲಸೌಕರ್ಯಗಳು ಉದ್ದೇಶಿತ ಯೋಜನೆಗೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನ ಒದಗಿಸುತ್ತವೆ. ದಾವೋಸ್‌ನ ಯಶಸ್ಸು ಮಹಾರಾಷ್ಟ್ರದ ಕೈಗಾರಿಕಾ ಮತ್ತು ಆರ್ಥಿಕ ವಲಯವನ್ನು ಗಣನೀಯವಾಗಿ ಬದಲಾಯಿಸಲಿದೆ. ಈ ಹೂಡಿಕೆಗಳಿಂದ ಮುಂದಿನ ದಶಕದಲ್ಲಿ ಯುವಕರಿಗೆ ನೇರ ಮತ್ತು ಪರೋಕ್ಷ ಸೇರಿ ಸುಮಾರು 40 ಲಕ್ಷ ಉದ್ಯೋಗ ಲಭ್ಯವಾಗಲಿವೆ ಎಂದು ತಿಳಿಸಿದರು.

ಅದಾನಿ ಕಂಪನಿಯಿಂದ ಬೃಹತ್ ಹೂಡಿಕೆ, ಏನೆಲ್ಲ ಅಭಿವೃದ್ಧಿ?

ಘೋಷಿತ ಒಡಂಬಡಿಕೆಗಳಲ್ಲಿ ಸುಮಾರು ಶೇ.83ರಷ್ಟು ವಿದೇಶಿ ನೇರ ಬಂಡವಾಳ (FDI) ಮೂಲಕ ಬರಲಿದೆ. ಅಮೆರಿಕ, ಯುಕೆ, ಜಪಾನ್, ಸಿಂಗಾಪುರ ಮತ್ತು ಸ್ವಿಟ್ಜರ್ಲೆಂಡ್ ಸೇರಿದಂತೆ 18ಕ್ಕೂ ಹೆಚ್ಚು ದೇಶಗಳು ಹೂಡಿಕೆ ಮಾಡಲು ಒಪ್ಪಿವೆ. ಅದಾನಿ ಗ್ರೂಪ್‌ ನಿಂದ 100 ಎಕರೆಯಲ್ಲಿ 'ಮಹಾರಾಷ್ಟ್ರ ಇನ್ನೋವೇಶನ್ ಸಿಟಿ' (AI ಮತ್ತು ಡೇಟಾ ಮೂಲಸೌಕರ್ಯಗಳಿಗಾಗಿ) ಮತ್ತು 1200 ಎಕರೆಯಲ್ಲಿ 'ರಾಯಗಢ ಪೆನ್ ಗ್ರೋತ್ ಸೆಂಟರ್' ಸ್ಥಾಪನೆಗೂ ಒಪ್ಪಂದ ಮಾಡಿಕೊಂಡಿದೆ. ಕ್ವಾಂಟಮ್ ಕಂಪ್ಯೂಟಿಂಗ್, ಸುಸ್ಥಿರ ವಾಯುಯಾನ ಇಂಧನ, ವಿದ್ಯುತ್ ವಾಹನ (ಇವಿ) ಮತ್ತು ಸುಧಾರಿತ ಆರೋಗ್ಯ ರಕ್ಷಣೆ ಕ್ಷೇತ್ರಗಳಿಗೆ ಈ ಹೂಡಿಕೆ ಬಳಕೆ ಆಗಲಿದೆ. ಇದರಿಂದ ರಾಜ್ಯ ಸಮಗ್ರ ಆರ್ಥಿಕ ಪ್ರಗತಿ ನಿರೀಕ್ಷಿಸಲಾಗಿದೆ.

ಇಂದಿನ ಹೂಡಿಕೆಯ ಒಪ್ಪಂದದ ಯಶಸ್ಸು ಮಹಾರಾಷ್ಟ್ರವನ್ನು ದಕ್ಷಿಣ ಏಷ್ಯಾದ ಅತ್ಯಂತ ಆದ್ಯತೆಯ ಹೂಡಿಕೆ ತಾಣವನ್ನಾಗಿ ಮಾರ್ಪಡಿಸಿದೆ. ಇದು ರಾಜ್ಯವನ್ನು ತನ್ನ ಬಹು-ಟ್ರಿಲಿಯನ್ ಡಾಲರ್ ಆರ್ಥಿಕ ಗುರಿಗಳತ್ತ ಕೊಂಡೊಯ್ಯಲಿದೆ ಎಂದು ತಜ್ಞರು ಬಣ್ಣಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+