ಮೂರನೇ ಮಹಾಯುದ್ಧ ಶುರುವಾಗಿದೆಯಾ? ಏನಿದೆ ಸೂಚನೆ?

ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ ಮೂರನೇ ವಿಶ್ವ ಮಹಾಯುದ್ಧಕ್ಕೆ ಮುನ್ನುಡಿ ಬರೆಯುತ್ತಿದೆಯಾ? ರಷ್ಯಾದ ಕೆಲ ಮಾಧ್ಯಮಗಳು ಈಗಾಗಲೇ ಮೂರನೇ ಮಹಾಯುದ್ಧ ಆರಂಭವಾಗಿಬಿಟ್ಟಿದೆ ಎಂದು ಹೇಳತೊಡಗಿವೆ. ನಿಜಕ್ಕೂ ಅಂಥದ್ದೊಂದು ಭೀಕರ ಬೆಳವಣಿಗೆ ಆಗುತ್ತಿದೆಯಾ? ಏಪ್ರಿಲ್ 14ರಂದು ರಷ್ಯಾದ ಅತಿದೊಡ್ಡ ಯುದ್ಧನೌಕೆ ಮಾಸ್ಕವಾ ನಾಶಗೊಂಡಿರುವುದು ಮೂರನೇ ಮಹಾಯುದ್ಧಕ್ಕೆ ಟರ್ನಿಂಗ್ ಪಾಯಿಂಟ್ ಎನ್ನಲಾಗುತ್ತಿದೆ.

ಉಕ್ರೇನ್ ಸೇನೆ ತನ್ನ ಎರಡು ಕ್ಷಿಪಣಿಗಳು ರಷ್ಯಾದ ಬೃಹತ್ ಮಾಸ್ಕವಾ ವಾರ್‌ಶಿಪ್ (Moskva Warship) ಅನ್ನು ನಾಶಗೊಳಿಸಿದ್ದೇವೆ ಎಂದು ಹೇಳಿಕೊಂಡಿದೆ. ಮಾಸ್ಕವಾ ನಾಶಗೊಂಡಿರುವುದು ವಾಸ್ತವವೇ. ಬೆಂಕಿಹೊತ್ತುಕೊಂಡಿರುವ ಯುದ್ಧನೌಕೆಯ ಚಿತ್ರಗಳು ಕಾಣಿಸತೊಡಗಿವೆ. ಯುದ್ಧನೌಕೆ ನಾಶಗೊಂಡಿರುವುದನ್ನು ರಷ್ಯಾ ಕೂಡ ಒಪ್ಪಿಕೊಂಡಿದೆ. ಆದರೆ, ಉಕ್ರೇನ್ ಸೇನೆಯ ಕ್ಷಿಪಣಿ ದಾಳಿಗಳಿಂದ ನಾಶಗೊಂಡಿದ್ದಲ್ಲ, ಕಡಲತೀರಕ್ಕೆ ಸಾಗಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿವರ್ಗ ಸುರಕ್ಷಿತವಾಗಿದ್ದಾರೆ ಎಂದು ರಷ್ಯಾ ಸರಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದೇನೇ ಹೇಳಲಾಗುತ್ತಿದ್ದರೂ ಮಾಸ್ಕವಾ ವಾರ್‌ಶಿಪ್ ನಾಶಗೊಂಡ ಬಳಿಕ ರಷ್ಯಾ ಮತ್ತು ಉಕ್ರೇನ್ ನಡುವಿನ ಕಾಳ ಇನ್ನಷ್ಟು ತೀವ್ರಗೊಂಡಿದೆ. ರಷ್ಯಾ ಹೆಚ್ಚು ಆಕ್ರಮಣಕಾರಿಯಾಗಿ ವರ್ತಿಸುತ್ತಿರುವುದು ಕಾಣುತ್ತಿದೆ.

 ಯುದ್ಧನೌಕೆ ನಾಶಗೊಂಡ ಘಟನೆ

ಯುದ್ಧನೌಕೆ ನಾಶಗೊಂಡ ಘಟನೆ

ಕಪ್ಪು ಸಮುದ್ರದಲ್ಲಿ ನಿಂತಿದ್ದ ಮಾಸ್ಕವಾ ಯುದ್ಧನೌಕೆ ನಾಶಗೊಂಡ ಘಟನೆ ಮೂರನೇ ಮಹಾಯುದ್ಧಕ್ಕೆ ನಾಂದಿ ಹಾಡಿದೆ ಎಂಬ ವಾದಕ್ಕೆ ಪುಷ್ಟಿ ನೀಡುವುದು 1941ರಲ್ಲಿ ನಡೆದ ಇಂತದ್ದೇ ಒಂದು ಘಟನೆ. ಆಗ ಸೋವಿಯತ್ ರಷ್ಯಾದ ಯುದ್ಧನೌಕೆಯೊಂದನ್ನು ರಷ್ಯಾದ ನೌಕಾಪಡೆ ನಾಶ ಮಾಡಿತ್ತು. ಆ ಘಟನೆಯು ಆ ಯುದ್ಧದ ಟರ್ನಿಂಗ್ ಪಾಯಿಂಟ್ ಆಗಿತ್ತೆಂದು ಹೇಳಲಾಗುತ್ತದೆ.

ಈಗ ರಷ್ಯಾದ ಮಾಸ್ಕವಾ ಪತನಗೊಂಡಿರುವುದು ಉಕ್ರೇನ್ ಯುದ್ಧದ ಟರ್ನಿಂಗ್ ಪಾಯಿಂಟ್ ಆಗಬಹುದು ಎಂಬ ಎಣಿಕೆ ಇದೆ. ರಷ್ಯಾ ಮೇಲೇರಿ ಬಂದಾಗ ಒಂಟಿಯಾಗಿದ್ದ ಉಕ್ರೇನ್ ದೇಶಕ್ಕೆ ಈಗ ಹೆಚ್ಚಿನ ಬಲ ಸಿಕ್ಕಿದೆ. ಸುಮಾರು 30 ದೇಶಗಳು ಉಕ್ರೇನ್‌ಗೆ ನೇರವಾಗಿ ಬೆಂಬಲ ನೀಡುತ್ತಿವೆ. ಮಿಲಿಟರಿ ಸಾಮಗ್ರಿ ಇತ್ಯಾದಿ ನೆರವು ಒದಗಿಸುತ್ತಿವೆ. ಇನ್ನೂ ಅನೇಕ ದೇಶಗಳು ಪರೋಕ್ಷವಾಗಿ ಮತ್ತು ನೈತಿಕವಾಗಿ ಉಕ್ರೇನ್ ಪರ ನಿಂತಿವೆ. ಇದು ಉಕ್ರೇನ್‌ಗೆ ಪುಷ್ಟಿ ಕೊಟ್ಟಂತಾಗಿದೆ, ಧೈರ್ಯ ತುಂಬಿದಂತಾಗಿದೆ. ರಷ್ಯಾದಂಥ ಪ್ರಬಲ ಶತ್ರುವನ್ನು ಹಿಮ್ಮೆಟ್ಟಿಸಲು ಉಕ್ರೇನ್ ಸೈನಿಕರಿಗೆ ಈಗ ಆತ್ಮವಿಶ್ವಾಸ ಹೆಚ್ಚುತ್ತಿದೆ.

 ಮಾಸ್ಕವಾ ವಾರ್‌ಶಿಪ್ ಸಾಮಾನ್ಯವಲ್ಲ:

ಮಾಸ್ಕವಾ ವಾರ್‌ಶಿಪ್ ಸಾಮಾನ್ಯವಲ್ಲ:

ರಷ್ಯಾದ ಮಾಸ್ಕವಾ ಯುದ್ಧನೌಕೆ ಆ ದೇಶದ ಸೇನೆಯ ಹೆಮ್ಮೆಯ ಸಂಕೇತವೆಂಬಂತಿತ್ತು. 1983ರಲ್ಲಿ ಅದನ್ನ ಮೊದಲ ಬಾರಿಗೆ ನೌಕಾಪಡೆಗೆ ನಿಯೋಜಿಸಲಾಗಿತ್ತು. ಬ್ಲ್ಯಾಕ್ ಸೀ ಪ್ರದೇಶದಲ್ಲಿ 2008ರಿಂದಲೂ ಮಾಸ್ಕವಾವನ್ನು ಇರಿಸಲಾಗಿತ್ತು. 2014ರಲ್ಲಿ ಉಕ್ರೇನ್ ಭಾಗವಾಗಿದ್ದ ಕ್ರಿಮಿಯಾ ಪ್ರದೇಶವನ್ನು ರಷ್ಯಾ ಆಕ್ರಮಿಸಿಕೊಂಡಾಗ ಆ ಕಾರ್ಯಾಚರಣೆಯಲ್ಲಿ ಮಾಸ್ಕವಾ ಪಾತ್ರ ಕೂಡ ಮುಖ್ಯವಾಗಿತ್ತು. ಬ್ಲ್ಯಾಕ್ ಸೀ ಪ್ರದೇಶದಲ್ಲಿ ಈ ಮಹಾನ್ ಯುದ್ಧನೌಕೆ ನಿಯೋಜನೆಗೊಂಡಿರುವವರೆಗೂ ಉಕ್ರೇನ್ ದೇಶಕ್ಕೆ ಯುದ್ಧದ ಧೈರ್ಯ ಬರುವುದಿಲ್ಲ ಎಂಬ ಲೆಕ್ಕಾಚಾರ ಇತ್ತು.

ಈಗ ಮಾಸ್ಕವಾ ನಾಶಗೊಂಡಿದೆ. ಸುಮಾರು 6 ಸಾವಿರ ಕೋಟಿ ರೂಪಾಯಿಯಷ್ಟು ದುಬಾರಿ ಬೆಲೆಯ ಯುದ್ಧ ನೌಕೆಯನ್ನು ನೂರು ಕೋಟಿ ರೂ ಮೌಲ್ಯದ ಎರಡು ಕ್ಷಿಪಣಿಗಳು ಜಲಕ್ಕುರುಳಿಸಿವೆ. ಯುದ್ಧ ಆರಂಭಗೊಂಡಾಗ ಉಕ್ರೇನ್ ಪ್ರತಿರೋಧ ಇಷ್ಟು ಗಟ್ಟಿಯಾಗಿರುತ್ತದೆ ಎಂದು ಎಣಿಸದ ರಷ್ಯಾ ದೇಶ ಈಗ ತನ್ನ ಪ್ರಬಲ ಯುದ್ಧನೌಕೆ ನಾಶವಾಗಿರುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟಸಾಧ್ಯ ಎಂಬ ಮಾತುಗಳು ಕೇಳಿಬರುತ್ತಿವೆ.

 ಯುದ್ಧನೌಕೆಗಳ ಕಾಲ ಮುಗಿಯುತ್ತಾ?

ಯುದ್ಧನೌಕೆಗಳ ಕಾಲ ಮುಗಿಯುತ್ತಾ?

ಮೊದಲೆರಡು ಮಹಾಯುದ್ಧಗಳಲ್ಲಿ ಯುದ್ಧನೌಕೆಗಳ ಪಾತ್ರ ಬಹಳ ಗಮನಾರ್ಹವಾಗಿತ್ತು. ಅಂತೆಯೇ ವಿವಿಧ ದೇಶಗಳು ಬಹಳಷ್ಟು ಯುದ್ಧನೌಕೆಗಳನ್ನ ನಿರ್ಮಿಸಿವೆ. ಚೀನಾ ಬಳಿ 777 ವಾರ್‌ಶಿಪ್‌ಗಳಿವೆ. ರಷ್ಯಾ 605, ಅಮೆರಿಕ 484 ಯುದ್ಧನೌಕೆಗಳನ್ನ ಹೊಂದಿವೆ. ಭಾರತದಲ್ಲಿ ಸುಮಾರು 100 ಸಮರನೌಕೆಗಳು ಇರಬಹುದು. ಆದರೆ, ಈಗಿನ ಆಧುನಿಕ ಯುದ್ಧದಲ್ಲಿ ಈ ಸಾಂಪ್ರದಾಯಿಕ ಯುದ್ಧನೌಕೆಗಳು ಎಷ್ಟರಮಪಟ್ಟಿಗೆ ಪ್ರಾಯೋಗಿಕವಾಗಿ ಪರಿಣಾಮಕಾರಿ ಆಗಿರುತ್ತವೆ ಎಂಬುದು ಸ್ಪಷ್ಟ ಇಲ್ಲ. ಅನೇಕ ಆಂಟಿ ಟ್ಯಾಂಕ್ ಕ್ಷಿಪಣಿಗಳು, ಆಂಟಿ-ವಾರ್‌ಶಿಪ್ ಕ್ಷಿಪಣಿಗಳು (Anti-Warship Missile) ಅಭಿವೃದ್ಧಿಗೊಂಡಿವೆ. ಕ್ಷಣಮಾತ್ರದಲ್ಲಿ ದೈತ್ಯ ಹಡಗುಗಳನ್ನ ನಾಶ ಮಾಡಬಲ್ಲ ಪ್ರಬಲ ಕ್ಷಿಪಣಿಗಳಿವೆ. ಅದಕ್ಕೆ ಉದಾಹರಣೆಯಾಗಿ ರಷ್ಯಾದ ಮಾಸ್ಕವಾ ಯುದ್ಧನೌಕೆ ನಾಶಗೊಂಡ ಘಟನೆ ಕಣ್ಮುಂದೆ ಇದೆ. ಈ ಹಿನ್ನೆಲೆಯಲ್ಲಿ ಚೀನಾ ತನ್ನ ಯುದ್ಧನೌಕೆ ಅಭಿವೃದ್ಧಿಯನ್ನು ನಿಲ್ಲಿಸಿ ಪ್ರಬಲ ಕ್ಷಿಪಣಿಗಳತ್ತ ಗಮನ ನೆಟ್ಟಿದೆ.

 ಯುದ್ಧನೌಕೆಗಳು ಯಾಕೆ ಪರಿಣಾಮಕಾರಿ ಅಲ್ಲ?

ಯುದ್ಧನೌಕೆಗಳು ಯಾಕೆ ಪರಿಣಾಮಕಾರಿ ಅಲ್ಲ?

ಸಾಮಾನ್ಯವಾಗಿ ಯುದ್ಧನೌಕೆಗಳ ಗಾತ್ರ ಮತ್ತು ತೂಕ ಅಗಾಧವಾಗಿರುತ್ತವೆ. ಪರಿಣಾಮವಾಗಿ ಅವರು ವೇಗವಾಗಿ ಸಾಗಲೂ ಸಾಧ್ಯವಿಲ್ಲ. ಅವು 50-100 ಕಿಮೀ ವೇಗದಲ್ಲಿ ಸಾಗಲು ಶಕ್ತವಾಗಿರುತ್ತವೆ. ಅವುಗಳ ಗಾತ್ರ ದೊಡ್ಡದಿರುವುದರಿಂದ ಶತ್ರುವಿನ ನೌಕಾಪಡೆಯ ಕಣ್ಣಿಗೆ ಬಹಳ ಬೇಗ ಬೀಳುತ್ತವೆ. ಯುದ್ಧನೌಕೆಯಲ್ಲಿ ಕ್ಷಿಪಣಿ ನಿರೋಧಕ ರಕ್ಷಣಾ ವ್ಯವಸ್ಥೆ ಇದ್ದರೂ ಈಗಿನ ಪ್ರಬಲ ಕ್ಷಿಪಣಿಗಳನ್ನ ತಡೆಯುವುದು ಕಷ್ಟಸಾಧ್ಯವಾಗುತ್ತದೆ. ಉಕ್ರೇನ್‌ನ ಎರಡು ನೆಪ್ಚೂನ್ ಮಿಸೈಲ್‌ಗಳು ರಷ್ಯಾದ ಯುದ್ಧನೌಕೆಯನ್ನು ಮುಳುಗಿಸಿದ್ದು ಇದಕ್ಕೆ ಸಾಕ್ಷಿ.

 ಮೂರನೇ ಮಹಾಯುದ್ಧ ನಡೆಯುತ್ತಾ?

ಮೂರನೇ ಮಹಾಯುದ್ಧ ನಡೆಯುತ್ತಾ?

ಒಂದು ಯುದ್ಧದಲ್ಲಿ ಮೂರಕ್ಕಿಂತ ಹೆಚ್ಚು ದೇಶಗಳು ಭಾಗಿಯಾಗಿದ್ದರೆ ಅದು ವಿಶ್ವ ಯುದ್ಧ ಎನಿಸುತ್ತದೆ. ಈಗ ಉಕ್ರೇನ್ ದೇಶದ ಪರವಾಗಿ ಅನೇಕ ದೇಶಗಳು ನೇರವಾಗಿ ಯುದ್ಧದಲ್ಲಿ ಕೈಜೋಡಿಸಿವೆ. ಆದರೆ, ಇನ್ನೊಂದು ಬದಿಯಲ್ಲಿ ರಷ್ಯಾ ಒಂಟಿಯಾಗಿ ಫೈಟ್ ಮಾಡುತ್ತಿದೆ. ಸದ್ಯ ರಷ್ಯಾಗೆ ನೇರವಾಗಿ ಯುದ್ಧಸಹಾಯವನ್ನು ನೀಡಬಲ್ಲ ಕೆಲ ದೇಶಗಳೆಂದರೆ ಚೀನಾ, ಬೆಲಾರಸ್ ಮೊದಲಾದವು. ಸದ್ಯ ಅಂಥ ಸೂಚನೆಗಳು ಕಾಣಿಸುತ್ತಿಲ್ಲ. ರಷ್ಯಾಗೆ ತನ್ನ ನೆಲ ಬಳಸಿಕೊಳ್ಳಲು ಬೆಲಾರಸ್ ಅನುಮತಿ ನೀಡಿದೆ ಹೊರತು ಅದು ನೇರವಾಗಿ ಯುದ್ಧದಲ್ಲಿ ಭಾಗಿಯಾಗಿಲ್ಲ. ಆದರೆ, ಮಾಸ್ಕವಾ ನಾಶ ಘಟನೆ ಬಳಿಕ ರಷ್ಯಾ ಪರವಾಗಿ ಕೆಲ ದೇಶಗಳು ನೇರವಾಗಿ ನಿಂತಲ್ಲಿ ಮೂರನೇ ವಿಶ್ವ ಮಹಾಯುದ್ಧ ಆರಂಭಗೊಂಡಂತೆಯೇ.

(ಒನ್ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+