ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಂಗಾಯತ ಚಳವಳಿ ಹಾಳಾಗಿದ್ದು ರಾಜಕಾರಣಿಗಳಿಂದಲ್ಲ, ಮಠಾಧೀಶರಿಂದ!

By ಶಶಿಕಾಂತ್ ಪಟ್ಟಣ, ಧಾರವಾಡ
|
Google Oneindia Kannada News

ಲಿಂಗಾಯತ ಒಂದು ಸ್ವತಂತ್ರ ಧರ್ಮ. ಬಸವಣ್ಣನವರು ಸ್ಥಾಪಿಸಿದ ಸಾರ್ವಕಾಲಿಕ ಸಮತೆ ಸಾರುವ ವೈಚಾರಿಕ ಸಿದ್ಧಾಂತವುಳ್ಳ ಅನುಭಾವಿಕ ಧರ್ಮವಾಗಿದೆ. ಯಾವುದೇ ಪುರಾವೆ ಇತಿಹಾಸ ದಾಖಲೆಗಳಿಲ್ಲದ ಕಟ್ಟು ಕಥೆ ಪುರಾಣವನ್ನಾಧರಿಸಿದ ವೀರಶೈವವು ಹದಿನೈದನೆಯ ಶರ್ತಮಾನದಲ್ಲಿ ಕರ್ನಾಟಕಕ್ಕೇ ಕಾಲಿಟ್ಟ ಒಂದು ವ್ರತ.

ವೀರಶೈವ-ಲಿಂಗಾಯತ ಎರಡೂ ಒಂದೇ : ಕಾಶಿ ಜಗದ್ಗುರುವೀರಶೈವ-ಲಿಂಗಾಯತ ಎರಡೂ ಒಂದೇ : ಕಾಶಿ ಜಗದ್ಗುರು

ಬ್ರಾಹ್ಮಣ್ಯದ ವಿರುದ್ಧ ಸೆಟೆದು ನಿಂತ ಅಭೂತಪೂರ್ವ ಲಿಂಗಾಯತ ಧರ್ಮವು ಶೈವರ ಅದರಲ್ಲೂ ವೀರಶೈವರ ಕಪಿಮುಷ್ಟಿಗೆ ಸಿಲುಕಿ ತನ್ನ ಸ್ವರೂಪವನ್ನೇ ಕಳೆದುಕೊಂಡಿತು. ವೀರಶೈವರು ಆರು ಶತಮಾನದಿಂದ ಲಿಂಗಾಯತ ತತ್ವದ ಮೇಲೆ ಸವಾರಿ ಮಾಡುತ್ತಾ, ಮಠ ಆಶ್ರಮ ಲಾಂಛನಗಳನ್ನು ಗಟ್ಟಿಗೊಳಿಸಿ ಸನಾತನಗಳ ಸಂಕೇತಗಳಿಗೆ ಆದ್ಯತೆ ನೀಡಿ ಆಚರಣೆಗೆ ತಂದರು.

ಜಯಮೃತ್ಯುಂಜಯ ಶ್ರೀಗಳಿಗೆ ಸಂಕಷ್ಟ, ಖುದ್ದು ಹಾಜರಿಗೆ ನ್ಯಾಯಾಲಯ ಸೂಚನೆಜಯಮೃತ್ಯುಂಜಯ ಶ್ರೀಗಳಿಗೆ ಸಂಕಷ್ಟ, ಖುದ್ದು ಹಾಜರಿಗೆ ನ್ಯಾಯಾಲಯ ಸೂಚನೆ

ಯಾವುದನ್ನು ಬಸವಣ್ಣ ವಿರೋಧ ಮಾಡಿದನೋ ಅದನ್ನೇ ವೀರಶೈವ ಲಿಂಗಾಯತರು ಆಚರಣೆಗೆ ತಂದರು. ಲಿಂಗಾಯತ ಧರ್ಮ ಮಾನ್ಯತೆ ಚಳವಳಿ ಜನಪರ ಮೂಲ ಕ್ರಾಂತಿಯ ಆಶಯದಲ್ಲಿ ನಡೆಯಲಿ. ರಾಜಕೀಯವಾಗಿ ಇದನ್ನು ದಾಳವಾಗಿ ಬಳಸದಿರಲಿ.

ಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ, 5ನಿರ್ಣಯಗಳುಲಿಂಗಾಯತ ಧರ್ಮೀಯರ ರಾಷ್ಟ್ರೀಯ ಸಮಾವೇಶ, 5ನಿರ್ಣಯಗಳು

ಲಿಂಗಾಯತರ ವಿಷಯ ಬೇಡಿಕೆ ಪ್ರತಿಪಾದನೆ ಮೌಲಿಕವಾದ ತತ್ವಗಳ ಮೇಲೆ ರೂಪುಗೊಳ್ಳಲಿ. ಅದನ್ನು ಬಿಟ್ಟು ದ್ವೇಷ- ಪ್ರತೀಕಾರ ಪ್ರತಿಷ್ಠೆಯಿಂದ ಹೋರಾಡಿದರೆ ಪ್ರತಿ ಪಕ್ಷದವರಿಗೆ ಲಾಭವಾಗುತ್ತದೆ. ಚಳವಳಿ ಕಾನೂನು ಮತ್ತು ನ್ಯಾಯ ಸಮ್ಮತವಾಗಿರಬೇಕು. ಅರಿವು ಜಾಗೃತಿ ಸಾಕಷ್ಟು ಪ್ರಮಾಣದಲ್ಲಿ ನಡೆದು ಹೋಗಿದೆ.

ಭಾವಾವೇಶದ ಸಮಾವೇಶದಿಂದ ಪ್ರಯೋಜನವಿಲ್ಲ

ಭಾವಾವೇಶದ ಸಮಾವೇಶದಿಂದ ಪ್ರಯೋಜನವಿಲ್ಲ

ಆದರೆ, ಲಿಂಗಾಯತ ಧಾರ್ಮಿಕ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸ್ಥಾನಮಾನಗಳು ಕೇವಲ ಭಾವಾವೇಶದ ಸಮಾವೇಶಗಳಿಂದ ಆಗುವುದಿಲ್ಲ. ಕಾನೂನು ಚೌಕಟ್ಟಿನಲ್ಲಿ ಪ್ರಜಾಸತ್ತಾತ್ಮಕವಾಗಿ ಹೋರಾಡಬೇಕು. ಇದು ಅನೇಕ ಪ್ರಗತಿಪರರ ಆಶಯ ಮತ್ತು ಬೇಡಿಕೆಯಾಗಿತ್ತು.

ಆದರೆ ಕರ್ನಾಟಕದಲ್ಲಿ ನಡೆದ ಲಿಂಗಾಯತ ಮಹಾ ಅಧಿವೇಶನಗಳು ಜನರಲ್ಲಿ ಲಿಂಗಾಯತ ಒಂದು ಸ್ವತಂತ್ರ ಧರ್ಮದ ಸ್ಪಷ್ಟ ಅರಿವು ಮೂಡಿಸಿದೆ.

ಸ್ವಾಮೀಜಿಗಳ ಆಸ್ಥೆ

ಸ್ವಾಮೀಜಿಗಳ ಆಸ್ಥೆ

ಇದರಲ್ಲಿ ರಾಜಕಾರಣಿಗಳು ಮತ್ತು ಬೇಲಿ ಮಠ ಗದಗ- ಬೆಳಗಾವಿ ನಾಗನೂರು ಶ್ರೀಗಳು, ಭಾಲ್ಕಿಸ್ವಾಮಿಗಳು, ಮಾತೆ ಮಹಾದೇವಿ ಹಾಗೂ ಮತ್ತಿತರ ಕೆಲ ಸ್ವಾಮಿಗಳು ಇದರಲ್ಲಿ ಆಸ್ಥೆ ವಹಿಸಿ ದುಡಿದಿದ್ದಾರೆ . ಸದ್ಯ ಸಚಿವ ವಿನಯ ಕುಲಕರ್ಣಿ ಅವರ ಮೇಲೆ ಆರೋಪ ಬಂದ ಹಿನ್ನೆಲೆಯಲ್ಲಿ ಕೆಲ ಮಠಾಧೀಶರು ಈ ಚಳವಳಿಯನ್ನು ಕೇವಲ ಭಕ್ತ ಮತ್ತು ಸ್ವಾಮಿಗಳು ಹೋರಾಟ ಮಾಡಲು ನಿರ್ಧರಿಸಿದ್ದು ಅಚ್ಚರಿ ಮೂಡಿಸಿದೆ.


ಕಾರಣ ಏನೆಂದರೆ ಎಂ.ಬಿ. ಪಾಟೀಲ್, ಬಸವರಾಜ್ ಹೊರಟ್ಟಿ, ಡಾ.ಶರಣ ಪ್ರಕಾಶ್ ಪಾಟೀಲ್, ವಿನಯ ಕುಲಕರ್ಣಿ ಅವರು ಪ್ರಾಮಾಣಿಕವಾಗಿ ಇದನ್ನು ಒಂದು ದೊಡ್ಡ ಪ್ರಮಾಣದ ಆಂದೋಲನವನ್ನಾಗಿ ರೂಪಿಸಿದ್ದಾರೆ.

ರಾಜಕಾರಣಿಗಳ ಮೇಲೆ ಗೂಬೆ ಕೂಡಿಸುವುದು ಸರಿಯೇ?

ರಾಜಕಾರಣಿಗಳ ಮೇಲೆ ಗೂಬೆ ಕೂಡಿಸುವುದು ಸರಿಯೇ?

ಲಿಂಗಾಯತ ಧರ್ಮದಲ್ಲಿ ಮಠಗಳೇ ಇಲ್ಲ ಮತ್ತು ಕೇವಲ ಮಾತಾಜಿ ಒಬ್ಬರನ್ನು ಬಿಟ್ಟರೆ ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಯಾರೊಬ್ಬರೂ ಹೋರಾಟಕ್ಕೆ ಮುಂದೆ ಬಂದಿಲ್ಲ. ವಸ್ತು ಸ್ಥಿತಿ ಹೀಗಿರುವಾಗ ರಾಜಕಾರಣಿಗಳ ಮೇಲೆ ಗೂಬೆ ಕೂಡಿಸಿ ಅವರನ್ನು ಚಳವಳಿಯಿಂದ ಮುಕ್ತ ಮಾಡುವುದು ಯಾವ ನ್ಯಾಯ?

ಅಪಸ್ವರ ಮೂಡಿರುವುದು ಬೇಸರ

ಅಪಸ್ವರ ಮೂಡಿರುವುದು ಬೇಸರ

ಬಿಜೆಪಿಯಲ್ಲಿ ನಾಯಕರು ಕೇವಲ ಹಿಂದೂ ಧರ್ಮದ ಅಜೆಂಡಾ ಹಿಡಿದು ಹೋರಾಟ ಮಾಡುವುದು ಸರಿಯೇ? ಅದನ್ನೇಕೆ ಈ ಮಠಾಧೀಶರು ಪ್ರಶ್ನಿಸುತ್ತಿಲ್ಲ. ನಾಡಿನ ಪ್ರಸಿದ್ಧ ಪತ್ರಿಕೆಯೊಂದರಲ್ಲಿ ಯಾವುದೇ ಸ್ವಾಮಿಗಳ- ಮಠಾಧೀಶರ ಹೆಸರಿಲ್ಲದೆ ಈ ರೀತಿಯ ಅಪಸ್ವರ ಅಭಿಮತ ಮೂಡಿರುವುದು ನೋವುಂಟು ಮಾಡಿದೆ.

ವಿವಾದಾಸ್ಪದ ಹೇಳಿಕೆ

ವಿವಾದಾಸ್ಪದ ಹೇಳಿಕೆ

ಪ್ರತಿ ಸಮಾವೇಶಗಳಲ್ಲಿ ಸ್ವಾಮಿಗಳು, ಮಾತೆಯರು ವಿವಾದಾಸ್ಪದ ಹೇಳಿಕೆ ನೀಡಿದ್ದಾರೆ. ಹುಬ್ಬಳ್ಳಿಯಲ್ಲಂತೂ ಅದು ತಾರಕಕ್ಕೆ ಏರಿತು. ಬಹುತೇಕ ಮಠಾಧೀಶರು, ಅಕ್ಕನವರು ಎಲ್ಲಾ ರಾಜಕೀಯ ಪಕ್ಷದವರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಕಾರಣ, ಬೇಲಿಮಠ ಬೆಳಗಾವಿ ನಾಗನೂರು ಶ್ರೀಗಳು, ಭಾಲ್ಕಿ ಸ್ವಾಮಿಗಳು, ಕೊರ್ಣೇಶ್ವರ ವಿಶ್ವನಾಥ ಸ್ವಾಮೀಜಿ ಇವರಂತಹ ಗಟ್ಟಿ ಕುಳಗಳನ್ನು ಆಯ್ಕೆ ಮಾಡಿಕೊಂಡು ಸಮಾನ ಮನಸ್ಕರ ವೇದಿಕೆಯು ಭಕ್ತವರ್ಗದಿಂದ ಈ ಹೋರಾಟವನ್ನು ಮುನ್ನಡೆಸುವುದು ನಮ್ಮ ಕರ್ತವ್ಯವಾಗಿದೆ.

ರಾಜಕಾರಣಿಗಳಲ್ಲಿ ನಂಬಿಕೆ ಇದೆ

ರಾಜಕಾರಣಿಗಳಲ್ಲಿ ನಂಬಿಕೆ ಇದೆ

ನಮಗೆ ಬಸವರಾಜ್ ಹೊರಟ್ಟಿ, ಬಿ.ಎಂ. ಪಾಟೀಲ್, ಬಿ.ಆರ್.ಪಾಟೀಲ್ ಇನ್ನು ಅನೇಕ ದಕ್ಷ ರಾಜಕಾರಣಿಗಳಲ್ಲಿ ನಂಬಿಕೆ ಇದೆ. ಈ ಚಳವಳಿಯನ್ನು ಅರ್ಧಕ್ಕೆ ಕೈ ಬಿಡದೆ ಸಂಪೂರ್ಣ ಗೆಲವು ಸಾಧಿಸುವವರೆಗೂ ಚಳವಳಿ ನಿಲ್ಲದಿರಲಿ.

ಬಸವಣ್ಣನವರನ್ನು ಒಪ್ಪಿಕೊಂಡು ಬರುವ ಪ್ರಗತಿಪರ ಮನಸ್ಸು ಮುಖ್ಯ. ಸಂಪ್ರದಾಯವಾದಿಗಳ ಕಿರುಚಾಟ ಸಾಕಾಗಿದೆ. ಲಿಂಗಾಯತ ಧರ್ಮ ಇದು ಭಕ್ತರ ಧರ್ಮ. ಮತ್ತೆ ಮಠಾಧೀಶರು, ಕಾವಿಗಳು, ಅಕ್ಕ, ಅಣ್ಣನವರು ಇದರ ಯಜಮಾನಿಕೆ ಸ್ವಾಮ್ಯತ್ವವನ್ನು ಪಡೆಯಬೇಕೆನ್ನುವ ಹುನ್ನಾರ ಮಾಡುವುದು ಸರಿಯಲ್ಲ.

English summary
Seers spoiled Lingayat movement, not politicians. This is the opinion of Dr. Shashikantha Pattana- reader of Oneindia Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X