ಬ್ರಾಹ್ಮಣರ ಹುಡುಗರ ಮದುವೆ: ಎರಡು ಪ್ರತಿಕ್ರಿಯೆ

Posted By: ವಿಠ್ಠಲ್/ಅನಿಲ್
Subscribe to Oneindia Kannada

ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂಬ ಲೇಖನಕ್ಕೆ ಪೌರೋಹಿತ್ಯ ಹಾಗೂ ಅಡುಗೆ ಕೆಲಸ ಮಾಡುವವರು ಪ್ರತಿಕ್ರಿಯೆ ನೀಡಿದ್ದಾರೆ. ಆ ವೃತ್ತಿಯಲ್ಲಿನ ವಿಶೇಷತೆ ಹಾಗೂ ಪುರೋಹಿತರು ಮತ್ತು ಅಡುಗೆ ಕೆಲಸದವರನ್ನು ಮದುವೆ ಆಗುವ ಹೆಣ್ಣುಮಕ್ಕಳಿಗೆ ಇರುವ ಅನುಕೂಲತೆಗಳನ್ನು ವಿವರಿಸಿದ್ದಾರೆ.

****

ಪೌರೋಹಿತ್ಯ ಅನ್ನೋದು ಬ್ರಾಹ್ಮಣ ಆದವನಿಗೆ ಮೊದಲ ಆಯ್ಕೆಯ ವೃತ್ತಿ. ನೀವು ಯಾರನ್ನೂ ಸಂಭಾವನೆ ಇಷ್ಟೇ ನೀಡಿ ಎಂದು ಕೇಳುವ ಅಗತ್ಯ ಇಲ್ಲ. ಆದರೆ ಇಂದಿನ ದಿನಮಾನಕ್ಕೆ ತಕ್ಕ ಹಾಗೆ ದಕ್ಷಿಣೆ ಸಿಗುತ್ತದೆ.

ಬ್ರಾಹ್ಮಣ ಹುಡುಗರಿಗೆ ಮದುವೆಗೆ ಹೆಣ್ಣು ಹುಡುಕಿಕೊಡಿ...

ಇದರ ಜತೆಗೆ ದಿನಸಿ, ವಸ್ತ್ರ ಮತ್ತಿತರ ವಸ್ತುಗಳು ದಾನದ ರೂಪದಲ್ಲಿ ಸಿಗುತ್ತವೆ. ಹಾಗಂತ ಯಾರನ್ನೋ ಬಲವಂತವಾಗಿ ಕೇಳಬೇಕಾದ ಅನಿವಾರ್ಯ ಇಲ್ಲಿಲ್ಲ. ಶ್ರದ್ಧೆ- ಭಕ್ತಿಯಿಂದ ಪೂಜೆ ಮಾಡಿ, ಕರ್ತೃವಿಗೆ ಶುಭವಾಗಲಿ ಎಂದು ಮನಸಾರೆ ಸಂಕಲ್ಪ ಮಾಡಿದರೆ ಸಾಕು.

Response from cook, priest about brahmin youth's marriage

ಜ್ಞಾನ, ವಿದ್ವತ್, ಅನುಷ್ಠಾನ ಇರಿಸಿಕೊಂಡ ಪುರೋಹಿತರಿಗೆ ಒಂದು ಧಾರ್ಮಿಕ ಕಾರ್ಯಕ್ರಮಕ್ಕೆ ಸಾವಿರಾರು ರುಪಾಯಿ ದಕ್ಷಿಣೆ ಸಿಗುತ್ತದೆ. ಅದರ ಹೊರತಾಗಿ ಗೌರವ ಕೂಡ ಇದೆ.

ಒಂದು ಕಂಪೆನಿಯಲ್ಲೋ ಸಂಸ್ಥೆಯಲ್ಲೋ ಕೆಲಸ ಮಾಡುವವರಂತೆ ಎಲ್ಲಾದರೂ ಹೋಗಬೇಕು ಅಂದರೆ ರಜೆ ಕೇಳಬೇಕು, ಅದಕ್ಕಾಗಿ ತಿಂಗಳುಗಟ್ಟಲೆ ಮುಂಚೆ ಅನುಮತಿ ಪಡೆಯಬೇಕು ಅಂತಿಲ್ಲ.

ಬ್ರಾಹ್ಮಣರನ್ನು ಹಿಗ್ಗಾಮಗ್ಗಾ ಬೈಯುವ ಮಂದಿಗೆ ಕೆಲ ಪ್ರಶ್ನೆ!

ನಮ್ಮಲ್ಲಿ ಪಿಂಕ್ ಸ್ಲಿಪ್ ಅನ್ನೋ ಮಾತಿಲ್ಲ. ನಮ್ಮ ಆದಾಯಕ್ಕೆ ನಾವು ಕೂಡ ತೆರಿಗೆ ಕೊಡ್ತೀವಿ, ಬ್ಯಾಂಕ್ ನಲ್ಲಿ ಸಾಲ ಸಿಗುತ್ತದೆ. ನಿವೃತ್ತಿ ಅನ್ನೋದಂತೂ ದೂರದ ಮಾತಾಯಿತು.

ಹಿಂದೂ ಧರ್ಮ ಪ್ರಚಾರ ತುಂಬ ಸೊಗಸಾಗಿ ಆಗುತ್ತಿದೆ. ಕದಿರೇನಹಳ್ಳಿಯಿಂದ ಅಮೆರಿಕದಲ್ಲಿನ ನ್ಯೂಜೆರ್ಸಿಯಲ್ಲಿರುವ ದೇವಸ್ಥಾನಗಳವರೆಗೆ ಪುರೋಹಿತರ ಅಗತ್ಯ ಇದೆ.

ಕಾಸ್ಟ್ ಕಟಿಂಗ್ ಅಂತ ಆದರೂ ಪುರೋಹಿತರನ್ನೇ ಕೆಲಸದಿಂದ ತೆಗೆದುಬಿಡಿ ಅನ್ನೋ ಮಾತು ಯಾರೂ ಆಡಲ್ಲ.

ಪೂಜೆಗೆ ತೆರಳಿದಾಗ ದಂಪತಿ ಸಮೇತ ಬರುವುದಕ್ಕೆ ಹೇಳ್ತಾರೆ. ನಮ್ಮ ಪಾಲಿನ ಗೌರವದಲ್ಲಿ ಹೆಂಡತಿಗೂ ಪಾಲಿದೆ.

Response from cook, priest about brahmin youth's marriage

ನಮ್ಮ ಧಾರ್ಮಿಕ ಪ್ರವೃತ್ತಿಗೆ ದುಶ್ಚಟಗಳಂತೂ ದೂರದ ಮಾತಾಯಿತು. ನಾವು ಮಾಡಬಹುದಾದಷ್ಟು ದಾನ ಹಾಗೂ ಉಳಿತಾಯ ಇನ್ಯಾರಿಂದಲೂ ಸಾಧ್ಯವಿಲ್ಲ

ನೈಟ್ ಶಿಫ್ಟ್ ಮಾಡಬೇಕು, ವರ್ಷಕ್ಕೊಮ್ಮೆ ಸಿಗುವ ಇನ್ ಕ್ರಿಮೆಂಟ್, ಪ್ರಮೋಷನ್ ಗೆ ಕಾಯಬೇಕು ಅಂತೇನಿಲ್ಲ.

ಇಷ್ಟೆಲ್ಲ ಪ್ಲಸ್ ಪಾಯಿಂಟ್ ಯಾರಿಗಿದೆ ಹೇಳಿ.

***

ಅಡುಗೆ ಕಾಂಟ್ರ್ಯಾಕ್ಟ್ ತೆಗೆದುಕೊಳ್ತಾರಲ್ಲ ಒಮ್ಮೆ ಮಾತನಾಡಿಸಿ ನೋಡಿ, ಒಂದು ಕೆಲಸ ಒಪ್ಪಿದರೆ ಅವರಿಗೆ ಎಷ್ಟು ಹಣ ಉಳಿಯುತ್ತೆ ಅಂತ ಕೇಳಿ ನೋಡಿ.

ನಮಗೆ ವರ್ಷದಲ್ಲಿ ಕನಿಷ್ಠ ಮೂರು ತಿಂಗಳು ರಜಾ ಸಿಕ್ಕೇ ಸಿಗುತ್ತದೆ. ಆಗ ಯಾವ ಊರನ್ನಾದದೂ ನೋಡಿ ಬರಬಹುದು.

ನಾವು ಮನೆಯಲ್ಲಿದ್ದಾಗ ಹೆಂಡತಿ ಅಡುಗೆ ಮಾಡಬೇಕು ಅಂತ ಯಾವ ಕಡ್ಡಾಯವೂ ಇಲ್ಲ. ನಾವೇ ಅಡುಗೆ ಮಾಡಿ, ಅವಳಿಗೂ ಬಡಿಸ್ತೀವಿ.

ಬೈಗುಳಕ್ಕೆ ಬ್ರಾಹ್ಮಣ ಮಾತ್ರ ಗುರಿ, ಇದ್ಯಾವ ನ್ಯಾಯರಿ?

ನಮ್ಮ ಕೆಲಸದಲ್ಲಿ ರಿಟೈರ್ ಮೆಂಟೂ ಇಲ್ಲ, ಕೆಲಸದಿಂದ ತೆಗೆದು ಹಾಕ್ತಾರೇನೋ ಅನ್ನೋ ಭಯವೂ ಇಲ್ಲ.

ಎಲ್ಲಿವರೆಗೆ ಊಟ ಮಾಡುವ ಮಂದಿ ಇರುತ್ತಾರೋ ಅಲ್ಲಿವರೆಗೆ ಮುಂದೇನು ಅನ್ನೋ ಹೆದರಿಕೆ ಇಲ್ಲವೇ ಇಲ್ಲ್.

ತರಕಾರಿ ಹೆಚ್ಚಿ, ನೀರು ಬಡಿಸಿ ಬರ್ತೀನಿ ಅಂದರೂ ಒಂದು ವರ್ಷದಲ್ಲಿ ಎರಡು-ಎರಡೂವರೆ ಲಕ್ಷ ಸಂಪಾದನೆಗೆ ಮೋಸವಿಲ್ಲ. ಜತೆಗೆ ಊಟ-ತಿಂಡಿಯೂ ಕಳೆಯುತ್ತದೆ

ನಾವಾಗಿಯೇ ವಾಲಂಟರಿ ರಿಟೈರ್ ಮೆಂಟ್ ಅಂತ ತಗೊಂಡರೂ ಯಾರಾದರೂ ಮನೆಗೆ ಹೋಗಿ ಅಡುಗೆ ಮಾಡಿಟ್ಟು ಬಂದರೂ ಒಂದೆರಡು ಗಂಟೆ ಕೆಲಸಕ್ಕೆ ಸಾವಿರಾರು ರುಪಾಯಿ ಸಂಬಳ ಸಿಗುತ್ತದೆ

ಜಾಬ್ ಸೆಕ್ಯೂರಿಟಿಗೆ ಬೇಕು ಅಂತ ಇಲ್ಲ, ಮುಂದೇನು ಎಂಬ ಚಿಂತೆ ಇಲ್ಲ, ಕುಟ್ಟೋ-ರುಬ್ಬುವಂಥ ದೈಹಿಕ ಶ್ರಮದ ಕೆಲಸ ಮಾಡುವುದರಿಂದ ಆರೋಗ್ಯದ ಸಮಸ್ಯೆಯೂ ಇಲ್ಲ

ಈಗ ಹೇಳಿ ಅಡುಗೆ ಮಾಡುವುದು ಎಂಥ ಅದ್ಭುತವಾದ ಕೆಲಸ, ನಮ್ಮ ಕೆಲಸದಲ್ಲಿ ಇರುವವರಿಗೆ ಬಿಟ್ಟು ಇನ್ಯಾರಿಗೆ ಹೆಣ್ಣುಮಕ್ಕಳನ್ನು ಧೈರ್ಯವಾಗಿ ಮದುವೆ ಮಾಡಬಹುದು ಹೇಳಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vittal- a priest and Anil- a cook responded to article about Brahmin youth's marriage story published in Oneindia Kannada.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ