• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಚಿವ ಜಿಟಿ ದೇವೇಗೌಡರ ಕನ್ನಡ ಮಾತಿಗೆ ಓದುಗರು ಹೀಗಂತಾರೆ...

|

ಬೆಂಗಳೂರು, ಜೂನ್ 23 : ಉನ್ನತ ಶಿಕ್ಷಣ ಖಾತೆಯನ್ನು ಜಿ.ಟಿ.ದೇವೇಗೌಡರಿಗೆ ವಹಿಸಲಾಗಿದೆ ಎಂಬ ವಿಚಾರ ತಿಳಿದಾಗಿನಿಂದ ಸ್ವತಃ ಜಿಟಿಡಿ ಶ್ಯಾನೇ ಬೇಜಾರ್ ಮಾಡ್ಕಂಡವ್ರೆ. ಇನ್ನು ಖಾತೆ ಬದಲಾವಣೆ ಆಗೋದೇ ಇಲ್ಲ ಅಂತಾಗಿ ತಮ್ಮ ಜವಾಬ್ದಾರಿ ನಿರ್ವಹಿಸುವುದಕ್ಕೆ ಮುಂದಾದರೆ ಅದೆಲ್ಲೋ ಅಮೆರಿಕದಿಂದ ಬಂದ ನಿಯೋಗದ ಎದುರು ಮುಜುಗರವಾಯಿತಂತೆ ಎಂಬ ಸುದ್ದಿ ಬೇರೆ.

ಈ ಬಗ್ಗೆ, ಅಂದರೆ ಜಿ.ಟಿ.ದೇವೇಗೌಡರಿಗೆ ಮುಜುಗರ ಆಯಿತು ಎಂಬ ಸುದ್ದಿಗೆ ಒನ್ಇಂಡಿಯಾ ಕನ್ನಡ ಓದುಗರ ಅಭಿಪ್ರಾಯ ಇಲ್ಲಿದೆ. ಜಿ.ಟಿ.ದೇವೇಗೌಡರಿಗೆ ಈ ಸನ್ನಿವೇಶದಲ್ಲಿ ಆ ಅಭಿಪ್ರಾಯಗಳು ಖಂಡಿತವಾಗಿಯೂ ಆತ್ಮವಿಶ್ವಾಸ ತುಂಬಬಲ್ಲವು. ಮತ್ತು ಅಂಥದೇ ಅಭಿಪ್ರಾಯಗಳು ಆತ್ಮವಿಶ್ವಾಸ ತುಂಬುತ್ತವೆ.

ಇಂಗ್ಲಿಷ್ ಮಾತನಾಡಲು ಬಾರದೆ ಇರಿಸುಮುರಿಸು ಅನುಭವಿಸಿದ ಜಿಟಿಡಿ

ತಮಿಳುನಾಡಿನ ಮುಖ್ಯಮಂತ್ರಿ ಆಗಿದ್ದಾಗಲೂ ಎಂದಾದರೂ ಡಿಎಂಕೆ ಅಧಿನಾಯಕ ಕರುಣಾನಿಧಿ ಅವರು ತಮಿಳು ಹೊರತಾಗಿ ಬೇರೆ ಭಾಷೆಯನ್ನು ಮಾತನಾಡಿದ್ದು ಕೇಳಿದ್ದೀರಾ? ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಜಪಾನ್- ಚೀನಾದ ಪ್ರಧಾನಿ- ಅಧ್ಯಕ್ಷರು ತಮ್ಮದಲ್ಲದ ಭಾಷೆಯನ್ನು ಮಾತನಾಡಿದ್ದು ಕೇಳಿದ್ದೀರಾ ಅಥವಾ ನೋಡಿದ್ದೀರಾ? ಆರೇಳು ಕೋಟಿ ಜನಸಂಖ್ಯೆ ಇರುವ ಕರ್ನಾಟಕ ಅಂದರೆ ಒಂದೋ ಎರಡೋ ದೇಶಕ್ಕಾಗುವಷ್ಟು ಜನರು.

Kannada

ಇಲ್ಲಿನ ಆಡಳಿತ ಭಾಷೆ ಕನ್ನಡ. ನಮ್ಮ ಹೃದಯದ ಭಾಷೆ ಕನ್ನಡ. ನಮಗೆ ತಿಳಿದ ವಿಚಾರವನ್ನು, ಭಾವನೆಯನ್ನು ಅದಕ್ಕಿಂತ ಬೇರೆ ಯಾವ ಭಾಷೆಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ವ್ಯಕ್ತ ಪಡಿಸಲು ಸಾಧ್ಯ? ಅಷ್ಟೆಲ್ಲ ಏಕೆ, ವಸ್ತು- ವಿಮೆ ಖರೀದಿ, ಸಾಲ ಮಾಡುವಾಗ ನಿಯಮ- ಷರತ್ತುಗಳು ಅಂತ ಇರುತ್ತವಲ್ಲಾ ಅದನ್ನು ಆಯಾ ವ್ಯಕ್ತಿ ಅರ್ಥ ಮಾಡಿಕೊಳ್ಳುವ ಭಾಷೆಯಲ್ಲೇ ತಿಳಿಸಬೇಕು ಎಂಬ ನಿಯಮವೇ ಇದೆ.

ಇವೆಲ್ಲ ಇರಲಿ, ಜಿ.ಟಿ.ದೇವೇಗೌಡರು ಅಮೆರಿಕದ ನಿಯೋಗದ ಎದುರು ಇಂಗ್ಲಿಷ್ ಮಾತನಾಡಲಾರದೆ ಮುಜುಗರ ಅನುಭವಿಸಿದರು ಎಂಬುದು ಸುದ್ದಿ. ಅದು ನಿಜವೂ ಹೌದು. ಆದರೆ ಅವರು ಸಂಕೋಚ- ಮುಜುಗರ ಪಡಬೇಕಾ? ಒನ್ ಇಂಡಿಯಾ ಕನ್ನಡದ ಓದುಗರ ಅಭಿಪ್ರಾಯ ಇಲ್ಲಿದೆ.

G T Devegowda

ರವಿಕಾಂತ್ ವೈ ಗದಗ್ ಕರ್

ಕಾಗೇ ಕೈಲಿ ಕಚೇರಿ ಕೊಟ್ಟಂಗೆ ಆಗಿದೆ ಕುಮಾರಗೌಡನ ಸರಕಾರ. ಇದು ಕನ್ನಡರಿಗೇ ಬೇಕಾ?

ಶರತ್

ಮಂಡ್ಯ ಕನ್ನಡದಲ್ಲಿಯೇ ಮಾತಾಡಣ್ಣ...ಏನೂ ತೇಪ್ಪಿಲ್ಲ ಬುಡು ...ಆ ಹೈಲಳು ಒಸಿ ಕನ್ನಡ ಕಲ್ತಕೊಳ್ಳಿ ಅಲ್ವರಾ?

ಪ್ರಶಾಂತ್

ಇದ್ರಲ್ಲಿ ಇರಿಸುಮುರಿಸು ಆಗೋವಂತದ್ ಏನ್ ಇದೆ? ಒನ್ ಇಂಡಿಯಾ ದವರಿಗೆ ಗೊತ್ತಿಲ್ವ? ಚೀನಾದವರಿಗೆ ಇಂಗ್ಲಿಷ್ ಬರಲ್ಲ, ಜಪಾನ್ ನವರಿಗೆ ಇಂಗ್ಲಿಷ್ ಬರಲ್ಲ, ಹಾಗಂತ ಅವರ ದೇಶಕ್ಕೆ ಹೋದಾಗ ನೀವು ಇಂಗ್ಲಿಷ್ ನಲ್ಲಿ ಮಾತಾಡಿದ್ರೆ ಅವ್ರು ಜಪಾನೀಸ್ ನಲ್ಲಿ ಉತ್ತರ ಕೊಡತಾರೆ. ಮೊದ್ಲು ಮಾತೃ ಭಾಷೆಗೆ ಬೆಲೆ ಕೊಡೋದನ್ನ ಕಲಿರಿ. ಬ್ರಿಟಿಷ್ ಮಾನಸಿಕತೆ ಬಿಡಿ ಸ್ವಲ್ಪ. ಭಾರತೀಯರಾಗಿ ಯೋಚಿಸಿ.

ಮಲ್ಲಿಕಾರ್ಜುನ್ ಎಸ್.ಎಂ.

ಸರ್ ಇಂಗ್ಲಿಷ್ ಬಾರದ ರಷ್ಯಾ ಅಧ್ಯಕ್ಷ ಪುಟಿನ್ ಪ್ರಪಂಚದಲ್ಲಿಯೇ ಉತ್ತಮ ಆಡಳಿತಗಾರರಾಗಿದ್ದಾರೆ. ನೀವು ಅಂಜಬೇಡಿ. ಉತ್ತಮ ಕೆಲಸ ಮಾಡಿ.

ವಿಜಯ್

ಅನೇಕ ಯುರೋಪ್ ರಾಷ್ಟ್ರಗಳಲ್ಲಿ, ಜಪಾನ್, ರಷ್ಯಾ ಮತ್ತು ಇನ್ನಿತರ ಏಷ್ಯಾ ರಾಷ್ಟ್ರಗಳ ಪ್ರಧಾನಿ, ರಾಷ್ಟ್ರಪತಿಗಳು ಟ್ರಾನ್ಸ್ ಲೇಟರ್ ಇಟ್ಟುಕೊಂಡೇ ವ್ಯವಹಾರ ನಡೆಸುತ್ತಾರೆ. ಜಿಟಿಡಿಗೆ ಇಂಗ್ಲಿಷ್ ಗೊತ್ತಿಲ್ಲ ಅಂತ ಟೀಕೆ ಮಾಡೋದು ತಪ್ಪು. ಇಂಗ್ಲಿಷ್ ಮಾತನಾಡುವವರೆಲ್ಲ ಜ್ಞಾನಿಗಳಲ್ಲ. ಹಾಗಂತ ನಾನು ಇಲ್ಲಿ ಜಿಟಿಡಿ ಪರ ವಕಾಲತ್ತು ವಹಿಸುತ್ತಿಲ್ಲ. ಕೇವಲ ಎಂಟನೆ ತರಗತಿ ಓದಿರುವ ಜಿಟಿಡಿಗೆ ಕೊಟ್ಟಿರುವ ಉನ್ನತ ಶಿಕ್ಷಣ ಖಾತೆಯನ್ನು ಮುಖ್ಯಮಂತ್ರಿಗಳು ವಾಪಸ್ ತೆಗೆದುಕೊಳ್ಳುವುದು ಉತ್ತಮ.

ರವಿಕುಮಾರ್

ಪ್ರೀತಿಯ ಸರ್, ಜೀವನದಲ್ಲಿ ಯಾವುದೂ ಪರಿಪೂರ್ಣ ಅಲ್ಲ. ಕನ್ನಡದಲ್ಲಿ ಮಾತನಾಡುವುದರಿಂದಲೂ ಜನರ ಹೃದಯ ಗೆಲ್ಲಬಹುದು. ನೀವೀಗ ಸಂಪುಟ ಸಚಿವರು. ಆದ್ದರಿಂದ ಇಂಗ್ಲಿಷ್ ಕಲಿಯಲು ಪ್ರಯತ್ನಿಸಿ. ನಿಮ್ಮ ಸಚಿವ ಇಲ್ಲೇ ಕೊನೆ ಅಲ್ಲ. ನೀವು ಇನ್ನೂ ದೊಡ್ಡ ಬೆಟ್ಟಗಳನ್ನು ಏರಬೇಕಿದೆ. ನೀವೇಕೆ ಕಲಿಯಲು ಆರಂಭಿಸಬಾರದು. ಇನ್ನೂ ಐದು ವರ್ಷ ಈ ಮೈತ್ರಿ ಸರಕಾರ ಪ್ರತಿನಿಧಿಸುತ್ತೀರಿ. ಆದ್ದರಿಂದ ಕಲಿಯಲು ಯತ್ನಿಸಿ.

ರಾಜೀವ್ ಮಗಲ್

ಜಿಟಿಡಿ ಅವರಿಗೆ ಇಂಗ್ಲಿಷ್ ಮಾತನಾಡಲು ಬರಲ್ಲ ಅಂದರೆ ದೊಡ್ಡ ವಿಷಯ ಅಲ್ಲ. ಅವರು ತಮ್ಮ ಮೆಚ್ಚಿನ ಭಾಷೆಯಲ್ಲೇ ಚೆನ್ನಾಗಿ ಮಾತನಾಡಬಹುದು. ಭಾಷಾಂತರಕಾರರು ಅಮೆರಿಕ ತಂಡಕ್ಕೆ ತರ್ಜುಮೆ ಮಾಡ್ತಿದ್ದರು. ಜಗತ್ತಿನ ಎಷ್ಟೋ ನಾಯಕರು ತಮ್ಮ ಮಾತೃ ಭಾಷೆಯಲ್ಲೇ ಮಾತನಾಡುತ್ತಾರೆ. ಅದನ್ನು ಭಾಷಾಂತರಕಾರರು ಅನುವಾದ ಮಾಡುತ್ತಾರೆ. ಇಂಥ ಸಣ್ಣ ಸಮಸ್ಯೆಗೆ ಸಚಿವರು ಬೇಜಾರಾಗಬಾರದು. ಮಾತೃಭಾಷೆಯಲ್ಲೇ ಯಾರೂ ಪರಿಪೂರ್ಣರಲ್ಲ್. ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಯೇ ಇದಕ್ಕೆ ಒಳ್ಳೆ ಉದಾಹರಣೆ. ಜಿ.ಟಿ.ದೇವೇಗೌಡರಿಗೆ ಕನ್ನಡದಲ್ಲಿ ಮಾತನಾಡುವ ಹಕ್ಕಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು kannada ಸುದ್ದಿಗಳುView All

English summary
Oneindia Kannada readers response to minister GT Deve Gowda's Kannada conversation with America delegation. Readers supported GT Deve Gowda.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more