ಪತ್ರ : ಅಕ್ರಮ ಸಂಪಾದನೆ ಮಾಡಿರುವವರನ್ನು ಬಿಡಬೇಡಿ!

Posted By:
Subscribe to Oneindia Kannada

'ಪವರ್'ಫುಲ್ ಮಿನಿಸ್ಟರ್ ದೊಡ್ಡಾಲಹಳ್ಳಿ ಕೆಂಪೇಗೌಡರ ಮಗ ಶಿವಕುಮಾರ್ ಅವರ ಮೇಲೆ ನಡೆದಿರುವ ಆದಾಯ ತೆರಿಗೆ ದಾಳಿ, ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಸುದ್ದಿ ಸಡಗರವನ್ನು ತಂದಿದೆ. ಪೇಪರುಗಳಲ್ಲಿ, ಟಿವಿಗಳಲ್ಲಿ, ಇಂಟರ್ನೆಟ್ಟಿನಲ್ಲಿ, ಮನೆಮನೆಗಳಲ್ಲಿ ಇದೇ ಮಾತು.

ಗ್ಯಾಲರಿ: ಡಿಕೆ ಶಿವಕುಮಾರ್ ಮನೆ ಮೇಲೆ ಐಟಿ ದಾಳಿ

ಇನ್ನು ಸದಾಕಾಲ ಅಂತರ್ಜಾಲದಲ್ಲಿ ವಿಹರಿಸುತ್ತಿರುವ, ಒನ್ಇಂಡಿಯಾ ಸುದ್ದಿಗಳನ್ನು ಓದುತ್ತಿರುವ ಓದುಗರು ಬಿಡ್ತಾರಾ? ಇಂಥದೊಂದು ಬೋಲ್ಡ್ ನಿರ್ಣಯ ತೆಗೆದುಕೊಂಡಿದ್ದಕ್ಕೆ ಆದಾಯ ತೆರಿಗೆ ಇಲಾಖೆಗೆ ಓದುಗರು ಬಹುಪರಾಕ್ ಹೇಳುತ್ತಿದ್ದಾರೆ. ದಾಳಿಯಾಗಿದೆ ಎಂದ ಮಾತ್ರಕ್ಕೆ ಡಿಕೆ ಶಿವಕುಮಾರ್ ಅವರಿಗೆ ಜೈಲಾಗುತ್ತದಂತೇನೂ ಇಲ್ಲ. ಅವರು ತಪ್ಪಿಸಿಕೊಳ್ಳಲೂಬಹುದು, ಐಟಿ ಇಲಾಖೆಗೆ ಚಳ್ಳೆಹಣ್ಣು ತಿನ್ನಿಸಲೂಬಹುದು. ಭಾರತದಲ್ಲಿ ಏನು ಬೇಕಾದರೂ ಆಗಬಹುದು.

ಡಿಕೆ ಶಿವಕುಮಾರ್ ಪಿಎ ಬಾಯ್ಬಿಟ್ಟ ಸ್ಫೋಟಕ ಮಾಹಿತಿ: ಸಂಕಷ್ಟದಲ್ಲಿ ಹೈಕಮಾಂಡ್?

ಏನೇ ಆಗಲಿ, ಈ ದಾಳಿ ಕರ್ನಾಟಕದ 'ಭ್ರಷ್ಟ' ರಾಜಕಾರಣಿಗಳಲ್ಲಿ ನಡುಕ ಹುಟ್ಟಿಸಿರುವುದಂತೂ ನಿಜ. ಇದು ತನ್ನನ್ನು ಎದುರು ಹಾಕಿಕೊಂಡವರಿಗೆ ತನ್ನ ತಾಕತ್ತಿನ ರುಚಿ ತೋರಿಸುವ ಭಾರತೀಯ ಜನತಾ ಪಕ್ಷದ ತಂತ್ರವೂ ಆಗಿರಬಹುದು. ತನ್ನ ಆದಾಯಕ್ಕೆ ಮೀರಿ ಕೂಡಿಟ್ಟ ಹಣವೆಲ್ಲ ನಮ್ಮನಿಮ್ಮೆಲ್ಲರಿಗೆ ಸೇರಿದ್ದು ಅಲ್ವಾ? ಹೀಗಾಗಿ ಪ್ರತಿಯೊಬ್ಬರಿಗೂ ಇಲ್ಲಿ ಅಭಿಪ್ರಾಯ ಮಂಡಿಸುವ ಅಧಿಕಾರವಿದೆ.

ಡಿಕೆಶಿ ಮನೆಯಲ್ಲಿ ಮುಂದುವರಿದ ತನಿಖೆ: ದಿನದ 10 ಪ್ರಮುಖ ಬೆಳವಣಿಗೆ

ಡಿಕೆ ಶಿವಕುಮಾರ್ ಅವರ ಮೇಲೆ ನಡೆದಿರುವ ಐಟಿ ದಾಳಿಗೆ ಸಂಬಂಧಿಸಿದಂತೆ ನೂರಾರು ಅಭಿಪ್ರಾಯಗಳನ್ನು ಓದುಗರು ಮಂಡಿಸಿದ್ದಾರೆ. ಅವುಗಳಲ್ಲಿ ಉತ್ತಮವಾದ 10 ಕಾಮೆಂಟುಗಳನ್ನು ಆರಿಸಿ ಇಲ್ಲಿ ನೀಡಲಾಗಿದೆ. ಹೆಚ್ಚಾಗಿ ಕನ್ನಡದಲ್ಲಿಯೇ ಬರೆದ ಅಭಿಪ್ರಾಯಗಳನ್ನು ಆಯ್ದುಕೊಳ್ಳಲಾಗಿದೆ. ಕನ್ನಡದಲ್ಲಿ ಬರೆದವರಿಗೆ ಧನ್ಯವಾದಗಳು.

ತೆರಿಗೆ ಇಲಾಖೆಗೆ ಶಭಾಷ್

ತೆರಿಗೆ ಇಲಾಖೆಗೆ ಶಭಾಷ್

ಎಷ್ಟು ಬಡವರ ಹೊಟ್ಟೆ ಮೇಲೆ ಹೊಡೆದು ಸಂಪಾದನೆ ಮಾಡಿದ್ದರೋ ಏನೋ? ಪಾಪ... ಆದಾಯ ಇಲಾಖೆ ಸಿಬ್ಬಂದಿ ಎಲ್ಲ ತೆಗೆದುಕೊಂಡು ಹೋದರು. ಇನ್ನು 2 ಹೊತ್ತಿನ ಊಟಕ್ಕೆ ಏನು ಮಾಡುವುದು? ಜಾರಿ ನಿರ್ದೇಶನಾಲಯಕ್ಕೆ ವರ್ಗಾವಣೆ ಆದರೆ... ಸರಕಾರ ಇವರಿಗೂ ಊಟ ಹಾಕಬೇಕು. ಅಹಂಕಾರ, ಗತ್ತು, ಗರ್ವ ಎಲ್ಲ ಕಾಲ ಕೆಳಗೆ ಇದ್ದರೇ ಮನುಷ್ಯನಿಗೆ ಶೋಭೆ. ಇಲ್ಲ ಅಂದರೆ ಹೀಗೆ ಆಗೋದು. ಕಾಲಾಯ ತಸ್ಮೈ ನಮಃ. ತೆರಿಗೆ ಇಲಾಖೆಗೆ ಶಭಾಷ್. ಅಕ್ರಮ ಸಂಪಾದನೆ ಮಾಡಿರುವವರನ್ನು ಬಿಡಬೇಡಿ...

ಶ್ರೀಕಾಂತ್

ಡಿಜಿಟಲ್ ದಾಖಲೆಗಳನ್ನು ಹೇಗೆ ಟ್ರಾಕ್ ಮಾಡ್ತಾರೆ?

ಡಿಜಿಟಲ್ ದಾಖಲೆಗಳನ್ನು ಹೇಗೆ ಟ್ರಾಕ್ ಮಾಡ್ತಾರೆ?

ಐಟಿಯವರಿಗೆ ಅಲ್ಲಿ ಶೇ 0.5ದಷ್ಟು ಹಣ ಸಹ ಸಿಕ್ಕಿರಲ್ಲ. ಡಿಕೆ ಶಿವಕುಮಾರ್ ಮೇಲೆ ಯಾವಾಗ ಬೇಕಾದ್ರೂ ಐಟಿ ರೇಡ್ ಆಗಬಹುದು ಅಂತ ಗೊತ್ತಿದೆ. ಅದಕ್ಕೆ ಅವರು ವೆಲ್ ಪ್ರಿಪೇರ್ಡ್. ಅಲ್ಲ ಸರ್, ಈಗಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಹೂಡಿಕೆ ವಿವರ ದಾಖಲೆಗಳನ್ನು ಯಾರು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ? ಎಲ್ಲಾ ಡಿಜಿಟಲ್ ಮಾಡಿ ಸೇಫ್ ಆಗಿ ಯಾವುದಾದ್ರೂ ಆನ್ ಲೈನ್ ಪ್ಲಾಟ್ ಫಾರಂನಲ್ಲಿ ಸೇವ್ ಮಾಡಿ ಇಟ್ಟಿರಬಹುದು. ಅಲ್ಲದೆ ಎಲ್ಲಾ ವರ್ಚುವಲ್ ಗೋಲ್ಡ್ ಅದೂಇದೂ ಅಂತ ಎಲ್ಲಾ ಬಂದಿದೆ ಅಲ್ವಾ. ಇನ್ನು ಈ ಡಿಜಿಟಲೈಸೇಷನ್ ಯುಗದಲ್ಲಿ ಐಟಿಯವರಿಗೆ ಟ್ರಾಕ್ ಮಾಡೋದು ಕಷ್ಟ ಇದೆ. ಶ್ರೀಮಂತರ ದಾಖಲಾತಿಗಳನ್ನು ಸೇಫ್ ಆಗಿ ಇಡಲು ಈಗ ಬೇಕಾದಷ್ಟು ಆನ್ ಲೈನ್ ಪ್ಲಾಟ್ ಫಾರಂಗಳಿವೆ. ಮೇಲಿನ ದೇವರು ಬಂದ್ರೂ ಐಡೆಂಟಿಫೈ ಮಾಡೋಕೆ ಸಾಧ್ಯ ಆಗಲ್ಲ.

ಸತ್ಯ ಪ್ರಸನ್ನ

ಖಾದರ್ ಅವರೆ, ನಾಟಕ ಆಡಬೇಡಿ

ಖಾದರ್ ಅವರೆ, ನಾಟಕ ಆಡಬೇಡಿ

ಖಾದರ್ ಅವ್ರೆ, ಮೊದಲು ನಮ್ಮ ರಾಜ್ಯದಲ್ಲಿ ಲೋಕಾಯುಕ್ತ ಬಲಪಡಿಸಿ. ಅದನ್ನು ಹಲ್ಲು ಕಿತ್ತ ಹಾವು ಮಾಡಿ, ಈಗ ಲೋಕಪಾಲ್ ಮಸೂದೆ ಅಂತ ನಾಟಕ ಬೇಡ. ಲೋಕಾಯುಕ್ತ ಸಂಸ್ಥೆಯನ್ನ ಕೊಂದು ಈಗ ನಿಮ್ಮ ತಾಳಕ್ಕೆ ಕುಣಿಯುವ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಹುಟ್ಟು ಹಾಕಿದ್ದೀರಿ. ನಿಮ್ಮ ಘನ ಸರಕಾರದ ಎಲ್ಲಾ ಪ್ರಕರಣಗಳಿಗೂ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಕ್ಲೀನ್ ಚಿಟ್ ನೀಡಿಲ್ಲವೇ? ಒಮ್ಮೆ ನೆನಪಿಸಿಕೊಳ್ಳಿ. ಸಿದ್ದರಾಮಯ್ಯ ಅವರ ವಾಚ್ ಪ್ರಕರಣ, ತನ್ವಿರ್ ಸೇಠ್ ಅವರ ವಿಡಿಯೋ ಪ್ರಕರಣ, ಇನ್ನೂ ಪಟ್ಟಿ ಬೇಕೇ?

ಶ್ರೀನಾಥ್

ಕಳಂಕರಹಿತ ಸರಕಾರಕ್ಕೆ ಮಸಿ ಬಳಿಯಲು ಕೇಂದ್ರ ಯತ್ನ: ಖಾದರ್

ಕಾನೂನು ಕಾಂಗ್ರೆಸ್ಸಿಗೆ ಒಂದು, ಇತರರಿಗೆ ಒಂದಾ?

ಕಾನೂನು ಕಾಂಗ್ರೆಸ್ಸಿಗೆ ಒಂದು, ಇತರರಿಗೆ ಒಂದಾ?

ಈ ಹಿಂದೆಯೇ ಡಿಕೆಶಿ ಅವರು ತಮ್ಮ ಆಸ್ತಿಯನ್ನು ಘೋಷಿಸಿಕೊಂಡಿದ್ದರು. ಅದರಂತೆ, ಅವರ ಆಸ್ತಿ ಮೌಲ್ಯ 251 ಕೋಟಿ ರು.ಗಳಷ್ಟಿತ್ತು. ಹಾಗಿರುವಾಗ, ಅವರ ಮನೆಯಲ್ಲಿ 10 ಕೋಟಿ ರು. ಸಿಕ್ಕಿದ್ದು ದೊಡ್ಡ ವಿಷಯವೇ? ಇದು ತಮಾಷೆಯಲ್ಲವೇ? ಎಂದು ಅವರು ಗೇಲಿ ಮಾಡಿದ್ದಾರೆ ಪ್ರಿಯಾಂಕಾ ಗಾಂಧಿ.

ಪ್ರಿಯಾಂಕಾ ಗಾಂಧಿ ಯವರೇ, ಡಿ.ಕೆ.ಶಿವಕುಮಾರ್ ರವರು ಘೋಷಿಸಿದ್ದ 251 ಕೋಟಿ ಆಸ್ತಿ ಮೌಲ್ಯದ ಬಗ್ಗೆಯೇ ಈಗ ಆದಾಯ ತೆರಿಗೆ ದಾಳಿ ಆಗಿರುವುದು. ಅವರ ಆದಾಯದ ಮೂಲವನ್ನು ಸರಿಯಾದ ದಾಖಲೆಗಳೊಂದಿಗೆ ಸಮರ್ಥಿಸಿದರೆ ಭಯಪಡುವ ಅಗತ್ಯವೇನಿದೆ?

ನಮ್ಮ ದೇಶದ ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿ / ಸಂಸ್ಥೆಗಳ ಹತ್ತಿರ ಹೊಂದಿರಬಹುದಾದ ಗರಿಷ್ಠ ನಗದು ಮಿತಿ 15 ಲಕ್ಷ ರೂಪಾಯಿಗಳು ಮಾತ್ರ. ನಿಯಮಕ್ಕಿಂತ ಜಾಸ್ತಿ ನಗದು ಹೊಂದಿದ್ದರೆ ಅದೂ ಸಹಾ ಅಪರಾಧವಾಗುತ್ತದೆ ಮತ್ತು ಆ ನಗದಿನ ಮೂಲವನ್ನು ಮತ್ತು ಅಷ್ಟೊಂದು ನಗದು ಹಣವನ್ನು ಹೊಂದಿರುವ ಉದ್ದೇಶವನ್ನೂ ಸಹ ತಿಳಿಸಬೇಕಾಗುತ್ತದೆ.

ಈಗ ಹೇಳಿ ಪ್ರಿಯಾಂಕಾ ಗಾಂಧಿ ಯವರೇ, ನಮ್ಮ ದೇಶದ ಕಾನೂನು ಕಾಂಗ್ರೆಸ್ ನವರಿಗೆ ಒಂದು, ಇತರರಿಗೆ ಒಂದು ಇದೆಯಾ? ಕಾನೂನು ತನ್ನ ಕ್ರಮವನ್ನು ತಾನು ತೆಗೆದುಕೊಳ್ಳಲು ನಿಮ್ಮದೇಕೆ ಆಕ್ಷೇಪ? ಇದರಲ್ಲಿ ನಿಮ್ಮದೇನಾದರೂ ಪಾಲಿದೆಯಾ?

ರಘು

ಮಂಡ್ಯದಲ್ಲಿ ಏನು ಬೇಳೆ ಬೇಯಿಸಿಕೊಳ್ತಾರೆ

ಮಂಡ್ಯದಲ್ಲಿ ಏನು ಬೇಳೆ ಬೇಯಿಸಿಕೊಳ್ತಾರೆ

ತೇಜಸ್ವಿನಿ ಗೌಡ ಉದಯ ಟಿವಿಯಲ್ಲಿದ್ದಾಗ ಸರಿಯಾಗಿ ಕನ್ನಡ ಉಚ್ಚರಿಸಲಿಕೆ ಬರುತಿರಲಿಲ್ಲ. ಡಿಕೆ ಶಿವಕುಮಾರ್ ಕನಕಪುರದ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಲು ಹೊದಿಸಿ ಕಾಂಗ್ರೆಸ್ನಲ್ಲಿ ರಾಜಕೀಯ ದಾರಿ ತೋರಿಸಿದವರಿಗೆ ಈಗ ಏನೋ ಬಿಜೆಪಿ ಸೇರಿಕೊಂಡು ಈಯಮ್ಮ ಮಂಡ್ಯದಲ್ಲಿ ಏನು ಬೇಳೆ ಬೇಯಿಸಿಕೊಳ್ತಾರೆ. ಮುಂದೆ ಏನಾಗುತ್ತೋ ಕಾದು ನೋಡಬೇಕು.

ಆಂಟೋನಿ

ಡಿಕೆಶಿ ಭದ್ರಕೋಟೆಯನ್ನು ಛಿದ್ರ ಮಾಡ್ತಾರಾ ತೇಜಸ್ವಿನಿ ಗೌಡ?

ಆದಾಯ ತೆರಿಗೆ ಇಲಾಖೆಗೆ ಶುಭ ಕೋರಿರಿ

ಆದಾಯ ತೆರಿಗೆ ಇಲಾಖೆಗೆ ಶುಭ ಕೋರಿರಿ

ಭ್ರಷ್ಟರನ್ನು ಒಳಗೆ ಹಾಕಿ, ಯಾವ ಪಕ್ಷದವರಾದರು ಸರಿ, ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 25 ವರ್ಷಗಳ ನಂತರ ಅವರು ಇದೇ ಕೆಲಸವನ್ನೇ ಮಾಡುತ್ತಾರೆ. ಸಮಯದ ಬಗ್ಗೆ ಮಾತನಾಡುವುದಕ್ಕಿಂತ ಇಂಥವರನ್ನು ಹಿಡಿದಿದ್ದಕ್ಕೆ ಆದಾಯ ತೆರಿಗೆ ಇಲಾಖೆಗೆ ಶುಭ ಕೋರಿರಿ.

ಎನ್ ಟಿ ಎಸ್

ನಿಮಗೆ ಬಡವರ ಹಸಿವು ಹೇಗೆ ಗೊತ್ತಾಗುತ್ತದೆ?

ನಿಮಗೆ ಬಡವರ ಹಸಿವು ಹೇಗೆ ಗೊತ್ತಾಗುತ್ತದೆ?

ಸರ್, ಎಷ್ಟೋ ಜನ ರಾಜ್ಯದಲ್ಲಿ ಒಪ್ಪತ್ತು ಊಟಕ್ಕೂ ಪರದಾಡುವ ಈ ಸಮಯದಲ್ಲಿ ಬೇನಾಮಿ ಆಸ್ತಿ ಮಾಡ್ಕೊಂಡಿರೋ ನಿಮ್ಮಂಥವರಿಗೆ ಅವರ ಹಸಿವು ಹೇಗೆ ಅರಿವು ಆಗತ್ತೆ? ಬಡವರ ಬಿಸಿ ಉಸಿರು ನಿಮ್ಮಂಥ ಭ್ರಷ್ಟ ರಾಜಕಾರಣಿಗಳಿಗೆ ಒಂದಲ್ಲ ಒಂದು ದಿನ ತಟ್ಟೇ ತಟ್ಟತೆ ಅನ್ನೋದಕ್ಕೆ ಇಂದು ಆಗುತ್ತಿರುವ ಐ.ಟಿ. ದಾಳಿ ಯೇ ಸಾಕ್ಷಿ ಸರ್. ಇನ್ನು ಮುಂದೆಯಾದರೂ ಬಡವರ ಬಗ್ಗೆ ಸ್ವಲ್ಪ ಅನುಕಂಪ ಇರಲಿ ಸರ್.

ಪಂಚಮಿ ಸಾಗರ್

ಪೈಪೋಟಿ ಇದ್ದವರು ಅಂದ್ರೆ ಡಿಕೆಶಿ ಮಾತ್ರ

ಪೈಪೋಟಿ ಇದ್ದವರು ಅಂದ್ರೆ ಡಿಕೆಶಿ ಮಾತ್ರ

ಸಿದ್ರಾಮಣ್ಣ, ಎಲೆಕ್ಷನ್ ಹತ್ರ ಬಂತು ಮುಂದಿನ ಚುನಾವಣೇಲಿ ಮುಖ್ಯಮಂತ್ರಿ ಗಾದಿಗೆ ಪೈಪೋಟಿ ಇದ್ದವರು ಅಂದ್ರೆ ಡಿಕೆಶಿ ಮಾತ್ರ. ಎಂಥ ಉಪಾಯ ಸ್ವಾಮಿ! ಡಿಕೆಶಿನಾ ಮೇಲೆ ಏಳ್ದಂಗೆ ಮಾಡಿಬಿಟ್ರಲ್ಲ..... ಎಷ್ಟೇ ಆದ್ರೂ ನೀವು ಹೆಗ್ಡೆ ಅವರ ಗರಡಿಯಲ್ಲಿ ಬೆಳೆದವರು. ಏನೇ ಆದ್ರೂ ಮುಖ್ಯಮಂತ್ರಿ ಗಾದಿಗೆ ಇಷ್ಟೊಂದು ಅಂಟಿಕೊಂಡಿರಬರ್ದು. ಇವರ ಮುಂದೆ ಕುಮಾರಸ್ವಾಮಿ, ಯಡಿಯೂರಪ್ಪ ಆಡಿದ್ದು ಕಮ್ಮಿನೆ ಅನ್ಸುತ್ತೆ!

ರಾಜ್

ಬ್ಯಾಂಕ್ ನಲ್ಲಿ ದುಡ್ಡು ಇಟ್ಟಿದ್ದರೆ ಬಿಡಿಸಿಕೊಳ್ಳಿ

ಬ್ಯಾಂಕ್ ನಲ್ಲಿ ದುಡ್ಡು ಇಟ್ಟಿದ್ದರೆ ಬಿಡಿಸಿಕೊಳ್ಳಿ

ಈ ದ್ವಾರಕಾನಾಥ್ (ಡಿಕೆ ಶಿವಕುಮಾರ್ ಆಪ್ತರಲ್ಲಿ ಒಬ್ಬ) ಮಹಾ ನೀಚ ಜ್ಯೋತಿಷಿ. ಇವನ ಒಡೆತನದ ಕೋ ಆಪರೇಟಿವ್ ಬ್ಯಾಂಕ್ ಶ್ರೀ ಸಾಯಿ ಚರಣ್ ಕೋ ಆಪರೇಟಿವ್ ಬ್ಯಾಂಕ್ ಅಂತ ಕೆಲವು ಶಾಖೆಗಳಿವೆ. ಬಸವನಗುಡಿ, ಜಯನಗರಗಳಲ್ಲಿ ಇವೆ. ಯಾರಾದರೂ ಇವನ ಬ್ಯಾಂಕ್ ನಲ್ಲಿ ದುಡ್ಡು ಇಟ್ಟಿದ್ದರೆ ಮೊದಲು ಬಿಡಿಸಿಕೊಳ್ಳಿ.

ರವಿ ಕನ್ನಡೇಶ

ಯಾರೀತ ಡಿಕೆ ಶಿವಕುಮಾರ್ ಆಪ್ತ ದ್ವಾರಕನಾಥ್ ಗುರೂಜಿ?

ಗಾಂಧಿಯನ್ನು ಯಾರೂ ಟಚ್ ಮಾಡುವಂತಿಲ್ಲವೆ

ಗಾಂಧಿಯನ್ನು ಯಾರೂ ಟಚ್ ಮಾಡುವಂತಿಲ್ಲವೆ

"ಇವತ್ತು ಶಿವಕುಮಾರ್, ನಾಳೆ ಪೂಜಾರಿ, ನಾಡಿದ್ದು ಸೋನಿಯಾ ಗಾಂಧಿ, ಆ ಬಳಿಕ ರಾಹುಲ್ ಗಾಂಧಿ ಮೇಲೂ ಐಟಿ ದಾಳಿ ಮಾಡುವ ಇರಾದೆ ಮೋದಿ ಅವರಿಗಿದೆ"
Of course, these other people aren't immune for raids and have to abide by the laws of the land.
This guy is talking as if nobody should touch the Gandhi family as if they are the emperors!

ರಾಜನ್

ಎಲ್ಲಾ ದುಡ್ಡು ಡಿಕೆಶಿಗೆ ಸೇರಿದ್ದಲ್ಲ : ಡಿಕೆ ಸುರೇಶ್ ಭಿನ್ನರಾಗ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Letters to the editor : Readers of Oneindia Kannada have expressed their honest views on Income Tax raid on Powerful minister DK Shivakumar. Readers are of the opinion that no corrupt should be left to loot India and public money. What do you say?
Please Wait while comments are loading...