ಕರ್ನಾಟಕದ ಪ್ರಸ್ತುತ ರಾಜಕೀಯ ವಿದ್ಯಮಾನ : ಓದುಗರ ವಿಶ್ಲೇಷಣೆ
ಈ ಸಾರಿ ಕರ್ನಾಟಕದ ಚುನಾವಣೆ ಮತ್ತು ಅದರ ಪರಿಣಾಮ ನಾವು ಸರಿಯಾದ ರೀತಿಯಲ್ಲಿ ವಿಶ್ಲೇಷಿಸಬೇಕಿದೆ.
1. ಜೆಡಿಎಸ್ 10 ವರ್ಷಗಳಿಂದ ಅಧಿಕಾರದಲ್ಲಿರಲಿಲ್ಲ, ಅದಕ್ಕೆ ಅತೀವ ಸಂಪನ್ಮೂಲಗಳ ಕೊರತೆಯಲ್ಲಿತ್ತು. ಕುಮಾರಸ್ವಾಮಿಗೆ ಕಾಂಗ್ರೆಸ್ ಪಕ್ಷದ ಜೊತೆ ಹೊಂದಾಣಿಕೆಗೆ ಮನಸ್ಸಿರಲಿಲ್ಲ.
2. ಬಿಜೆಪಿ ಮತ ಎಣಿಕೆಯ ಸಮಯದಲ್ಲಿ ನಮ್ಮ ಪಕ್ಷಕ್ಕೆ ಬಹುಮತ ಬರುತ್ತದೆ ಎನ್ನುವ ಅತಿಯಾದ ಆತ್ಮವಿಶ್ವಾಸ ಹೊಂದಿತ್ತು.
3. ಕರ್ನಾಟಕ ರಾಜ್ಯದಲ್ಲಿ ಅಧಿಕಾರ ಬಿಜೆಪಿಗೆ ಯಾವುದೇ ಕಾರಣಕ್ಕೂ ಬಾರದಂಗೆ ಮಾಡುವುದಕ್ಕೆ ಕಾಂಗ್ರೆಸ್ ಪಕ್ಷ ತ್ಯಾಗ ಮಾಡಲಿಕ್ಕೂ ತಯಾರಿತ್ತು.

4. ಯಡಿಯೂರಪ್ಪನವರು ಜೆಡಿಎಸ್ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸುತರಾಂ ತಯಾರಿರಲಿಲ್ಲ. ಅವರು ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಸರ್ಕಾರದ ಕಹಿ ನೆನಪುಗಳನ್ನು ಇನ್ನು ಮೆಲಕು ಹಾಕುತ್ತಿದ್ದರು.
5. ಯಡಿಯೂರಪ್ಪನವರಿಗೆ ಬಿಜೆಪಿಗೆ ಅಧಿಕಾರ ದಕ್ಕದೆ ಹೋದರೂ ಪರವಾಗಿಲ್ಲ, ಕಾಂಗ್ರೆಸ್ ಗೆ ಅಧಿಕಾರ ಬಂದರೂ ಪರವಾಗಿಲ್ಲ, ಯಾವುದೇ ಕಾರಣಕ್ಕೂ ಜೆಡಿಎಸ್ ಅಧಿಕಾರ ಪಡೆಯಬರೆದೆನ್ನುವ ಛಲ. ಈ ವಿಷಯ ಯಡಿಯೂರಪ್ಪನವರು ವಿಧಾನಸೌದದಲ್ಲೇ ಹೇಳಿದ್ದಾರೆ. ನಮ್ಮ ಹೋರಾಟ ಏನಿದ್ದರೂ ಜೆಡಿಎಸ್ ಮೇಲೆ, ಕಾಂಗ್ರೆಸ್ ಮೇಲಲ್ಲ ಎಂದಿದ್ದಾರೆ.
6. ಕೇಂದ್ರದಲ್ಲಿರುವ ಬಿಜೆಪಿಗೆ ಮೇಲಿನ ವಿಷಯಗಳ ಅವಗಾಹನೆ ಇರಲಿಲ್ಲ. ಅದರ ಒಂದೇ ಗುರಿ ಎಂದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಅಧಿಕಾರ ಪಡೆಯಬಾರದೆನ್ನುವುದು.

ಈ ಮೇಲಿನ ವಿಷಯಗಳು ನಿಜವಾದ ಸಂಗತಿಗಳು. ಯಡಿಯೂರಪ್ಪನವರು ಜೆಡಿಎಸ್ ಯಾವುದೇ ಕಾರಣಕ್ಕೂ ಅಧಿಕಾರ ಪಡೆಯಬಾರದೆನ್ನುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ಲಿಂಗಾಯಿತ ಶಾಸಕರು ಅಥವಾ ಕುಮಾರಸ್ವಾಮಿಗೆ ವಿರುದ್ಧವಾಗಿರುವ ಕಾಂಗ್ರೆಸ್ ಶಾಸಕರು ನಮ್ಮ ಪಕ್ಷಕ್ಕೆ ಬರುತ್ತಾರೆ ಎನ್ನುವ ಸುಳ್ಳು ಭರವಸೆಗಳನ್ನು ಕೇಂದ್ರದ ನಾಯಕರಿಗೆ ಕೊಡುತ್ತ ಬಂದರು.
ಇದಕ್ಕೆ ಉದಾಹರಣೆ, ಸಿದ್ದರಾಮಯ್ಯನವರಿಗೆ ಕುಮಾರಸ್ವಾಮಿಯವರು ಅವಮಾನ ಮಾಡಿದ್ದಾರೆ. ಆದುದರಿಂದ ಕುರುಬ ಶಾಸಕರು ಮತ್ತು ಡಿಕೆ ಶಿವಕುಮಾರ್, ಕುಮಾರಸ್ವಾಮಿಗೆ ಆಗುವುದಿಲ್ಲ. ಆದುದರಿಂದ ನಮಗೆ ಇವರಿಂದ ಸಹಾಯ ಸಿಗುತ್ತದೆ ಎನ್ನುವ ಹುಸಿ ಆಶ್ವಾಶನೆಗಳಿಂದ ಕೇಂದ್ರ ನಾಯಕತ್ವವನ್ನು ಕತ್ತಲೆಯಲ್ಲಿಟ್ಟರು.
ಚುನಾವಣೆ ಎಣಿಕೆ ದಿನದಿಂದ ಯಡಿಯೂರಪ್ಪನವರು ವಿಶ್ವಾಸ ಮತ ಪಡೆಯುವ ಹಿಂದಿನ ದಿನದವರೆಗೂ ನಡೆದ ಸತ್ಯ ಸಂಗತಿಗಳನ್ನು ಯಡಿಯೂರಪ್ಪನವರ ಗುಂಪನ್ನು ಬಿಟ್ಟು ಬೇರೆ ಶಾಸಕರಿಂದ ಸತ್ಯವನ್ನು ತಿಳಿಯದೆ ಕೇಂದ್ರ ನಾಯಕತ್ವ ತಪ್ಪು ಮಾಡಿತು. ಒಟ್ಟಾರೆಯಾಗಿ ಯಡಿಯೂರಪ್ಪನವರು ರಾಜಕೀಯ ಚತುರತೆ ತೋರದೆ, ಭಾವೋದ್ವೇಗದ ನಿರ್ಣಯಗಳಿಂದ ಬಿಜೆಪಿ ತನ್ನ ಅವಕಾಶ ಕಳೆದುಕೊಂಡಿತು.
ಕರ್ನಾಟಕದ ಜನತೆಗೆ ಬಿಜೆಪಿ ವಿಶೇಷವಾಗಿ ನರೇಂದ್ರ ಮೋದಿಯ ಬಗ್ಗೆ ಒಲವಿದೆ. ಇನ್ನು ಮುಂದಾದರೂ ಇಂತಹ ತಪ್ಪುಗಳನ್ನು ಸರಿಪಡಿಸಿಕೊಂಡರೆ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರ ಪಡೆಯುವುದರಲ್ಲಿ ಸಂಶಯವಿಲ್ಲ.
-
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
RCB: ಆರ್ಸಿಬಿ ಪಂದ್ಯದ ನಡುವೆಯೆ ಮತ್ತೊಮ್ಮ ಅಭಿಮಾನಿಗಳ ಮನಗೆದ್ದ 'ಕ್ರಶ್' ಅನನ್ಯಾ ಬಿರ್ಲಾ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger












Click it and Unblock the Notifications