ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾನವಂತ ಪೊಲೀಸ್‌ಗೆ ಹೃದಯತುಂಬಿದ ಅಭಿನಂದನೆ!

By Prasad
|
Google Oneindia Kannada News

ಇಲ್ಲಿ ಸುದ್ದಿಯಲ್ಲಿರುವ ಪೊಲೀಸ್ ಅಧಿಕಾರಿ ನಮ್ಮ ರಾಜ್ಯದವರೋ, ಇನ್ನಾವುದೋ ರಾಜ್ಯದವರೋ ಎಂಬುದನ್ನು ಇಲ್ಲಿ ಯಾರೂ ಪರಿಗಣಿಸಿಲ್ಲ. ಪ್ರತಿ ಓದುಗರ ಮನದಲ್ಲಿ ಒಂದೇ ಗುಣಗಾನ... ಹ್ಯಾಟ್ಸಾಫ್ ಟು ಯು ಸರ್, ನಿಮ್ಮಂಥ ಪೊಲೀಸ್ ಅಧಿಕಾರಿಗಳು ಇನ್ನಷ್ಟು ಜನಿಸಲಿ...

ಅತ್ಯಾಚಾರಕ್ಕೊಳಗಾಗಿ ವಾರಣಾಸಿಯ ಆಸ್ಪತ್ರೆಯಲ್ಲಿ ಮಲಗಿದ್ದ ಹೆಣ್ಣುಮಗುವನ್ನು ರಕ್ಷಿಸಲು, ನಿಯಮಗಳನ್ನು ಉಲ್ಲಂಘಿಸಿ, ತನ್ನ ಹೆಗಲ ಮೇಲೆ ಹೊತ್ತುಕೊಂಡು ಆಸ್ಪತ್ರೆ ಆಸ್ಪತ್ರೆಗೆ ಅಲಿದಿದ್ದಲ್ಲದೆ, ಆ ಮಗುವಿನ ಪೋಷಕ ತಾನೇ ಎಂದು ಹೇಳಿ, ಚಿಕಿತ್ಸೆ ಖರ್ಚನ್ನು ಭರಿಸಿದ ಪೊಲೀಸ್ ಅಧಿಕಾರಿ ಸಂಜೀವ್ ಮಿಶ್ರಾ ಕುರಿತ ಲೇಖನಕ್ಕೆ ಅತ್ಯುತ್ತಮ ಪ್ರತಿಸ್ಪಂದನೆ ವ್ಯಕ್ತವಾಗಿದೆ.

ಯಾವುದೇ ಸ್ವಾರ್ಥವಿಲ್ಲ, ಕೇವಲ ಮಾನವೀಯತೆಯ ದೃಷ್ಟಿಯಿಂದ ಮಗುವಿಗೆ ಚಿಕಿತ್ಸೆ ಕೊಡಿಸಲು ಮುಂದಾದ ವಾರಣಾಸಿಯ ಪೊಲೀಸ್ ಅಧಿಕಾರಿ ಇಂದು ಎಲ್ಲರ ಹೃದಯದಲ್ಲಿ ಹೀರೋ ಆಗಿ ರಾರಾಜಿಸುತ್ತಿದ್ದಾರೆ. ಇತರ ಪೊಲೀಸ್ ಅಧಿಕಾರಿಗಳಿಗೆ ಮಾದರಿಯಾಗಿದ್ದರೆ, ಕಾಂಚಾಣಕ್ಕಾಗಿ ಕುಣಿಯುವ ವೈದ್ಯರು ತಲೆತಗ್ಗಿಸುವಂತೆ ಮಾಡಿದ್ದಾರೆ.

ಈ ಲೇಖನಕ್ಕೆ ಸಂಬಂಧಿಸಿದಂತೆ ಓದುಗರು ವ್ಯಕ್ತಪಡಿಸಿರುವ ಅಭಿಪ್ರಾಯಗಳಲ್ಲಿ ಕೆಲವನ್ನು ಹೆಕ್ಕಿ ಇಲ್ಲಿ ನೀಡಿದ್ದೇವೆ. ಇದರಿಂದ ನಮ್ಮ ಕರ್ನಾಟಕದ ಪೊಲೀಸರು ಕೂಡ ಸ್ಫೂರ್ತಿ ಪಡೆಯುವಂತಾಗಲಿ. [ಮಾನವೀಯತೆ ಮೆರೆದ ಪೊಲೀಸ್ ಇನ್ ಸ್ಪೆಕ್ಟರ್ ಗೆ ಸೆಲ್ಯೂಟ್]

Hats off to Police Officer Sanjeev Mishra

ಸ್ವಾಮಿ ವಿವೇಕಾನ೦ದರ ದೃಷ್ಟಿಕೋನದಿ೦ದ ಹೇಳುವುದಾದರೆ, ನಿಜ ಅರ್ಥದಲ್ಲಿ ನೀವೋರ್ವ ಮಾನವರು... ಮಹಾತ್ಮರು. ವ್ಯವಸ್ಥೆಯನ್ನೂ ಒಳಗೊ೦ಡ೦ತೆ ಮಿಕ್ಕುಳಿದವರೆಲ್ಲ ಕೇವಲ ಜೀವ೦ತ ಶವಗಳು. ಅವರುಗಳು ಬದುಕಿದ್ದರೂ ಸತ್ತ೦ತೆಯೇ ಸರಿ.. - ಗುರುರಾಜ ಆಚಾರ್.

***
ಬಾರತ ದೇಶದಲ್ಲಿ ಮನವೀಯತೆ ಇನ್ನು ಇದೆ ಎನ್ನಲು ಇವರು ಸಾಕ್ಷಿ. ಅವರಿಗೆ ನನ್ನ ಒಂದು ದೊಡ್ಡ ನಮಸ್ಕಾರ. - ಕೆ.ಎಸ್. ಕುಮಾರ್.

***
ಮಾನವೀಯತೆ ಇನ್ನೂ ಇರುವುದಕ್ಕೆ ಇವರೇ ಸಾಕ್ಷಿ ... - ರಾಧಾ ಕಂಜೂರ್.

***
ಅಪರೂಪದ ಆರಕ್ಷಕ! ಸುದ್ದಿ ಕಣ್ಣು ತೇವ ಮಾಡಿತು!... ಮಾನವೀಯ ನೆಲೆಗಟ್ಟಿನಲ್ಲಿ ಯೋಚಿಸುವ ಜನಗಳೇ ಮರೆಯಾಗುತ್ತಿರುವಾಗ ಅಂತಹ ನರಭಕ್ಷಕ(!) ಇಲಾಖೆಯಲ್ಲಿದ್ದುಕೊಂಡು ಇಂತಹ ಕೆಲಸ ಮಾಡಿದ ಸಂಜೀವ್ ಅಭಿನಂದನಾರ್ಹರು! - ಕನ್ನಡತಿ.

***
ಒಬ್ಬ ಪೋಲಿಸ್ ಆಫೀಸರಿಗೆ ಇರುವ ಮಹಾ ಮಾನವೀಯತೆ, ಇಬ್ಬರು ಜೀವ ಉಳಿಸುವ ವೈದ್ಯರುಗಳಿಗೆ ಇಲ್ಲವಲ್ಲ... ಸಸ್ಪೆಂಡ್ ಡಾಕ್ಟರ್ಸ್. ದೆ ಶುಡ್ ನಾಟ್ ಗೆಟ್ ಜಾಬ್ ಎನಿವೇರ್ .....ಇನ್ಸ್ಪೆಕ್ಟರ್ ಈಸ್ ಗ್ರೇಟ್ - ಶಾಂತ ಕುಮಾರ್.

***
ಹಾಟ್ಸ್ ಆಫ್ ಟು ದಿ ಪೊಲೀಸ್ ಆಫೀಸರ್. ಸರ್ ನಿಮ್ಮಂತ ನೂರಾರು ಸಹೃದಯಿಗಳು ಹುಟ್ಟಿಬರಲಿ. ಜೈ ಹೊ ಸಂದೀಪ್ ಜಿ... - ವೀರೇಶ್ ಗಂಜಿ.

***
ಸರ್ ನಿಮ್ಮಂತ ನೂರಾರು ಸಹೃದಯಿಗಳು ಹುಟ್ಟಿಬರಲಿ. ಕ್ರೂರ ವ್ಯವಸ್ಥೆಗೆ ಮಾನವೀಯತೆಯಿಂದಲೇ ಉತ್ತರ ಕೊಡೋಣ - ವಿರೂಪಾಕ್ಷ.

***
ತುಂಬ ದಿನದ ಮೇಲೆ ಒಳ್ಳೆ ವಿಷ್ಯ ಮಾಧ್ಯಮದಲಿ... ಹೀರೋ ಅಂದ್ರೆ ಇವರು... ಇಂಥವರು ಮತ್ತೊಬ್ಬರಿಗೆ ಸ್ಪೂರ್ತಿ - ಶ್ರೀನಿವಾಸ್.

***
Hats of to Police office Mr. Sanjeev and Government and Private doctors should be punished for their irresponsible behavior. - Shiva.

English summary
Oneindia Kannada readers have saluted the police officer Sanjeev Mishra, who took the sexually assaulted girl from hospital to hospital for the treatment. The Varanasi police inspector offered to become girl's guardian and borne all the expenses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X