ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೈನಾ ಕಡಲ ತಡಿಯಲ್ಲಿ ಕನ್ನಡಿಗರ ಕಣ್ಣೀರು

By ಶಿವಾನಂದ್ ಗುಂಡನವರ್
|
Google Oneindia Kannada News

ಮಕ್ಕಳೆಲ್ಲ ಮನೆಯ ಹೊರಗೆ ಬೈನಾ ಕಡಲ ತಡಿಯಲ್ಲಿ ಬರುವ ಅಲೆಗಳನ್ನ ನೋಡುತ್ತಾ ಪುಟಾಣಿ ಆಟಿಕೆಯ ಮಣ್ಣಿನ ಮನೆಗಳನ್ನು ಕಟ್ಟುತ್ತಾ ಅಪ್ಪ ಅಮ್ಮನ ಬರುವ ನೀರಿಕ್ಷೆಯಲ್ಲಿ ತಲೆಯೆತ್ತಿ ಮೇಲೆ ನೋಡಿದಾಗ ದೊಡ್ಡ ದೊಡ್ಡ ಜೆಸಿಬಿಗಳು ಇವರನ್ನು ನುಂಗುವಂತೆ ಬಾಯ್ದೆರೆದು ಇವರ ದೊಡ್ಡ ಮನೆಗಳನ್ನ ಯಾವ ಕನಿಕರವು ಇಲ್ಲದೆ ತರಿದು ಹಾಕುತ್ತಿದ್ದವು...

ಕನಸು ಕಟ್ಟಿಕೊಂಡು ಗೋವಾಕ್ಕೆ ಬಂದಿದ್ದ ಕನ್ನಡಿಗರ ಬದುಕು ಮೂರಾಬಟ್ಟೆಕನಸು ಕಟ್ಟಿಕೊಂಡು ಗೋವಾಕ್ಕೆ ಬಂದಿದ್ದ ಕನ್ನಡಿಗರ ಬದುಕು ಮೂರಾಬಟ್ಟೆ

ಅಮಾಯಕ ಕಣ್ಣುಗಳಿಂದ ಧ್ವನಿ ಬಂದ ಕಡೆ ನೋಡಿದಾಗ ಅಪ್ಪ ಅಮ್ಮ ಎದೆ ಬಡಿದುಕೊಳ್ಳುತ್ತಾ ಓಡಿ ಬರುತ್ತಿದ್ದರು, ಅಯ್ಯೋ ನನ್ನ ಮನೆ ಅಯ್ಯೋ ನನ್ನ ಬದುಕೇ ಎನ್ನುತ್ತಾ ಎಲ್ಲರೂ ಚೀರುತ್ತಾ ಒಳ ಓಡಿ ಬರುವಾಗ ಗೋವೆಯ ಸರ್ಕಾರೀ ಆರಕ್ಷಕರು ದಪ್ಪ ದಪ್ಪ ಬಡಿಗೆಗಳಿಂದ ಇವರನ್ನ ಬಡಿಯುತ್ತ ಆಚೆ ಕಳಿಸುತ್ತಿರುವ ಪರಿ ನೋಡಿ ಯಾವ ಮಾನವೀಯ ಹೃದಯವು ಇದಕ್ಕೆ ಮೀಡಿಯದೇ ಇರದು.

ಪುಟ್ಟ ಗುಡಿಸಲಲ್ಲಿ ‌‌ಬೆಚ್ಚಗಿದ್ದ ‌ಕನ್ನಡಿಗರ ಬದುಕನ್ನ ‌ನೂಚ್ಚು ‌ನೂರು ‌ಮಾಡಿದ ‌ಗೋವೆಯ ‌ಸರ್ಕಾರ! ರೀತಿ - ‌ಯಾವ ‌ಬ್ರಿಟಿಷ್
‌ಸರ್ಕಾರದ ದೌರ್ಜ್ಯನ್ಯಕ್ಕಿಂತಲೂ ಕಡಿಮೆ ಇರಲಿಲ್ಲ. ಹತ್ತಾರು ಜೆಸಿಬಿಗಳಿಂದ ಆ ಎಲ್ಲ ಪುಟ್ಟ ಪುಟ್ಟ ಗುಡಿಸಲನ್ನು ನೆಲ ಸಮ ಮಾಡಿದ ಆ ಸರ್ಕಾರಿ ಜನ ಅಲ್ಲಿರುವ ಜನಗಳಿಗೆ ಯಾವ ರೀತಿಯು ನೆರವಾಗದೆ ಅವರನ್ನ ಬಡಿದು ದೂರ ಅಟ್ಟಿ ಹೊರಟು ಹೋದರು.

ಬರಕ್ಕೆ ಬೇಸತ್ತು ಬಂದ ಜನರು

ಬರಕ್ಕೆ ಬೇಸತ್ತು ಬಂದ ಜನರು

ಸುಮಾರು 30-40 ವರ್ಷಗಳ ಹಿಂದೆ ಉತ್ತರ ಕರ್ನಾಟಕದಲ್ಲಿನ ಬರಕ್ಕೆ ಬೇಸತ್ತು ಬದುಕು ಕಟ್ಟಿಕೊಳ್ಳಲು ಗೋವೆಗೆ ಹೋಗೆ ಅಲ್ಲಿಯ ಜನರಿಗೆ ಭದ್ರ ಸೂರುಗಳನ್ನ ಕಟ್ಟಿಕೊಟ್ಟು ಬದುಕು ಕಂಡುಕೊಂಡಿದ್ದ ಈ ಜನರ ಮನೆಗಳನ್ನೇ ಅವರಿಂದು ಹಾಳುಗೆಡವಿದ್ದಾರೆ!

ವಿಜಯಪುರ, ಯಾದಗಿರಿ ಮತ್ತು ಬಾಗಲಕೋಟೆಯ ಮೂಲದವರಾದ ಇವರೀಗ ಅಲ್ಲೂ ಇಲ್ಲದೆ ಇಲ್ಲೂ ಇಲ್ಲದೆ ತ್ರಿಶಂಕೂ ಪರಿಸ್ಥಿತಿಯಲ್ಲಿ ಇವರ ಬದುಕಾಗಿದೆ, ನಮ್ಮ ಸರ್ಕಾರದ ಸಹಾಯವಂತೂ ಮರೀಚಿಕೆಯಾಗಿದೆ!

ಇವರ ಸ್ಥಿತಿ ಆ ದೇವರೇ ಬಲ್ಲ

ಇವರ ಸ್ಥಿತಿ ಆ ದೇವರೇ ಬಲ್ಲ

ಐದು ನೂರಕ್ಕೂ ಹೆಚ್ಚು ಸರ್ಕಾರೀ ಜನ ಬಂದು 55ಕ್ಕೂ ಹೆಚ್ಚು ಕನ್ನಡಿಗರ ಮನೆಗಳನ್ನ ನೆಲಸಮ ಮಾಡಿ ಭಾರತದ ಒಕ್ಕೂಟದಲಿ ಕನ್ನಡಿಗರು ಪರಕೀಯರಂತೆ ಕಂಡದ್ದಂತೂ ಬಹೂ ನೋವಿನ ವಿಷಯ, ಎಂದೋ ‌ಬಂದ ‌ಭಾಂಗ್ಲಿಗರಿಗೆ ಟಿಬೇಟಿಯನ್ನರಿಗೆ ಮರುಮಾತನಾಡದೆ ಸಾವಿರಾರು ಎಕರೆ ‌ಜಾಗ ನೀಡಿ ಅವರನ್ನು ನಮ್ಮ ಸಹೋದರರಂತೆ ಕಾಣುವ ಕನ್ನಡಿಗರನ್ನ ಅತೀ ಹೀನಾಯವಾಗಿ ಗೋವೆಯ ಸರ್ಕಾರ ಇಂದು ನಡೆಸಿಕೊಂಡ ರೀತಿ ಇತಿಹಾಸದ ಕರಾಳ ನೆನಪಾಗಿ ಉಳಿಯಲಿದೆ.

ಮತ್ತಾರಿಗೂ ‌ಬರದೆ ಇರಲಿ

ಮತ್ತಾರಿಗೂ ‌ಬರದೆ ಇರಲಿ

ಉತ್ತರ ಕನ್ನಡದಲ್ಲಿ ಕೈಗಾ, ‌ಚಳ್ಳಕೆರೆಯಲಿ ‌ಅಣು ‌ಕೇಂದ್ರ ‌, ‌ದೇಶ ‌ಸೈನ್ಯದ ‌ಬೇಟಾಲಿಯನ್ನಗಳಿಗೆ ಸಾವಿರಾರು ‌ಹೇಕ್ಟೆರಗಳಷ್ಟು ‌ಭೂಮಿಯನ್ನ ‌ನೀಡಿದ ‌ಕನ್ನಡಿಗರಿಗೆ ಹಿಂದೆ ಅವರದೆ ‌ನೆಲವಾದ ‌ಗೋವೆಯ ‌ಕಡಲ ತಡಿಯಲ್ಲಿ ‌ಅಂಗೈ ಅಷ್ಟು ‌ಭೂಮಿ ಸಿಗದೆ ಅಲ್ಲಿಯ ಸರ್ಕಾರದ ಕೈಯಲ್ಲಿ ‌ಜೇಸಿಬಿ ‌ಯಂತ್ರಗಳ ‌ಮೂಲಕ ‌ಹೊರದಬ್ಬಿಸಿಕೊಂಡು ‌ಬರುತ್ತಿರುವ ಬಡ ‌ಕನ್ನಡಿಗರ ‌ಸ್ಥಿತಿ ‌ಮತ್ತಾರಿಗೂ ‌ಬರದೆ ಇರಲಿ!

ಆಕ್ರಂದನಗಳು ಕೇಳಿಸದು

ಆಕ್ರಂದನಗಳು ಕೇಳಿಸದು

ಡೆಲ್ಲಿಯ ಸರ್ಕಾರಗಳಿಗೆ ಈ ತರದ ಆಕ್ರಂದನಗಳು ಕೇಳಿಸದು! ಕಾರಣ ವಿವಿಧ ಭಾಷೆ ಸಂಸ್ಕೃತಿಗಳನ್ನ ಎಂದೋ ಮರೆತಾಗಿದೆ. ಜೊತೆಗೆ ನಮ್ಮ ಜನಗಳೇ ಇದನ್ನ ಅಷ್ಟಾಗಿ ಕೇಳುವುದಿಲ್ಲ ಎಂಬುದು ಅವರಿಗೆ ತಿಳಿದಿದೆ, ನಮ್ಮ ರಾಜಕಾರಣಿಗಳು ಅವರ ಗುಲಾಮರಾಗಿ ನಮ್ಮೆಲ್ಲರ ಸ್ವಾಭಿಮಾನ ಮೂಲೆ ಗುಂಪಾಗಿ ಯಾವುದೋ ಕಾಲವಾಗಿದೆ.

ಇನ್ನಾದರೂ ನಾವು ಜಾಗೃತವಾಗಬೇಕಿದೆ , ಜಾತಿ ಮತಗಳನ್ನ ಕಿತ್ತೊಗೆದು ಕನ್ನಡಿಗರ ಏಳ್ಗೆಗೆ ಎಲ್ಲರು ಕೈ ಜೋಡಿಸಬೇಕಿದೆ, ಮತ್ತೊಂದು ಬೈನಾ ತೀರದ ನೋವಿನ ಧ್ವನಿ ನಾಡೊಳಗೆ ಕೇಳಿಸದ ಹಾಗೆ ಮಾಡಬೇಕಿದೆ

English summary
Goa government not only evacuated the Kannadigas from Baina beach, they have demolished their dreams also. The Kannadigas were staying at Baina beach for the past 4 decades.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X