ಅಡ್ವಾಣಿ ರಾಜೀನಾಮೆಗೆ ನಮ್ಮ ಓದುಗರು ಏನಂತಾರೆ?

'ಲೋಹದ ಪುರುಷ' ಎಂದು ಎಲ್ಲರಿಂದ ಪ್ರಶಂಸೆಗೆ ಪಾತ್ರರಾಗಿದ್ದ ಲಾಲ್ ಕೃಷ್ಣ ಅಡ್ವಾಣಿ 85ನೇ ವಯಸ್ಸಿನಲ್ಲಿ ತಮ್ಮ ಪಕ್ಷವನ್ನೇ ಅಲ್ಲೋಲಕಲ್ಲೋಲ ಮಾಡಿರುವುದು ದೇಶದಲ್ಲಿ ಇಂದು ತಂಪುತಂಪು ಮಳೆಯಲ್ಲಿ ಬಿಸಿಬಿಸಿ ಚರ್ಚೆಯ ವಸ್ತುವಾಗಿದೆ. ವಿರೋಧ ಪಕ್ಷದ ನಾಯಕರು ಕೂಡ ಅಚ್ಚರಿ ವ್ಯಕ್ತಪಡಿಸಿ, ಅಡ್ವಾಣಿಯವರಿಗೆ ಅವರ ಪಕ್ಷದಲ್ಲೇ ಹೀಗಾಗಬಾರದಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಆದರೆ, ಈ ಡ್ರಾಮಾವನ್ನು ದೂರದಿಂದಲೇ ನೋಡುತ್ತಿರುವ ಶ್ರೀಸಾಮಾನ್ಯರು, ನೆಟ್ಟಿಗರು ಈ ವಿದ್ಯಮಾನದ ಬಗ್ಗೆ ಏನು ಹೇಳುತ್ತಾರೆ ಎಂಬುದೇ ಕುತೂಹಲದ ಸಂಗತಿ. ಅಚ್ಚರಿಯ ಸಂಗತಿಯೆಂದರೆ, ಶೇಕಡಾ 90ರಷ್ಟು ಅಭಿಪ್ರಾಯಗಳು, ಅನಿಸಿಕೆಗಳು ನರೇಂದ್ರ ಮೋದಿ ಅವರನ್ನು ಬೆಂಬಲಿಸಿವೆ. ವಯಸ್ಸಾಗಿರುವ ಅಡ್ವಾಣಿ ಯುವಪೀಳಿಗೆಗೆ ದಾರಿಮಾಡಿಕೊಡುವುದೇ ಲೇಸೆಂದು ಓದುಗರು ಇಂಗಿತ ವ್ಯಕ್ತಪಡಿಸಿದ್ದಾರೆ.

ಸ್ವಯಂನಿವೃತ್ತಿ ಪಡೆದಿರುವ ಅಡ್ವಾಣಿಯವರು ನಿವೃತ್ತರಾಗೂ ಇಲ್ಲ, ರಿಟೈರ್ಡ್ ಹರ್ಟ್ ಆಗೂ ಇಲ್ಲ, ಅವರು ಹಿಟ್ ವಿಕೆಟ್ ಆಗಿದ್ದಾರೆ ಎಂದು ತಮಾಷೆಯ ಸಂದೇಶವನ್ನು ಟ್ವೀಟಿಸಿದ್ದಾರೆ. ಒನ್ಇಂಡಿಯಾದಲ್ಲಿ, ಇನ್ನು ಬಿಜೆಪಿ ಗತಿಯೇನು ಎಂದು ಕೇಳಿದ ಪ್ರಶ್ನೆಗೆ, ಏನೂ ಆಗಲ್ಲ, ಬಿಜೆಪಿಗೆ ಒಳ್ಳೆಯದೇ ಆಗುತ್ತದೆ ಎಂಬ ಉತ್ತರ ನೀಡಿದ್ದಾರೆ. ಏಕಾಂಗಿಯಾಗಿರುವ ಅಡ್ವಾಣಿಯವರಿಗೆ ಬೆಂಬಲವೂ ಸಿಕ್ಕಿಲ್ಲ, ಅನುಕಂಪವೂ ದೊರೆತಿಲ್ಲ. ಅಡ್ವಾಣಿಯವರು ಯುದ್ಧಕಣದಲ್ಲಿ ಶಸ್ತ್ರಾಸ್ತ್ರ ತ್ಯಾಗ ಮಾಡಿರುವ ಯೋಧನಂತೆ ಕಾಣುತ್ತಿದ್ದಾರೆ.

ಅಡ್ವಾಣಿಯಿಲ್ಲದೆ ಬಿಜೆಪಿ ಇನ್ನೂ ಬಲಿಷ್ಠ

ಅಡ್ವಾಣಿಯಿಲ್ಲದೆ ಬಿಜೆಪಿ ಇನ್ನೂ ಬಲಿಷ್ಠ

ಒನ್ಇಂಡಿಯಾದಲ್ಲಿ, "ಅಡ್ವಾಣಿ ರಾಜೀನಾಮೆಯಿಂದ ಬಿಜೆಪಿ ಕಥೆ ಏನಾಗಲಿದೆ?" ಎಂದು ಕೇಳಿದ ಪ್ರಶ್ನೆಗೆ ಉತ್ತರಗಳು ಕೆಳಗಿನಂತಿವೆ

ಕಥೆ ಅಧೋಗತಿ (ಶೇ.23)
ಇನ್ನೂ ಬಲಿಷ್ಠವಾಗಲಿದೆ (ಶೇ.32)
ಏನೂ ಆಗಲ್ಲ (ಶೇ.45)

ದೇಶವೆ ಮೋದಿಯನ್ನು ಬೆ೦ಬಲಿಸುತ್ತಿರುವಾಗ...

ದೇಶವೆ ಮೋದಿಯನ್ನು ಬೆ೦ಬಲಿಸುತ್ತಿರುವಾಗ...

ಹೌದು, ಹೊಸಬರಿಗೆ ಅವಕಾಶ ಕೊಡಬೇಕು... ದೇಶವೆ ಮೋದಿಯನ್ನು ಬೆ೦ಬಲಿಸುತ್ತಿರುವಾಗ ಇವರೊಬ್ಬರು ವಿರೋಧಿಸುವುದು ಸರಿಯಲ್ಲ..... (ಅಕ್ಷಯ್ ಕೆ.ಕೆ.)

ಹೊಸ ಚಿಗುರು ಹಳೇ ಬೇರು ಕೂಡಿರಲು

ಹೊಸ ಚಿಗುರು ಹಳೇ ಬೇರು ಕೂಡಿರಲು

ಖ೦ಡಿತ ಅದು ತಪ್ಪು ಹಿರಿಯರಾದ ಅಡ್ವಾಣಿ ಜೀ ದುಡುಕಬಾರದು ಯೋಚಿಸಿ ನಿಧಾ೯ರ ತೆಗೆದುಕೊಳ್ಳಬೇಕು. ನಮಗೆ ಅಡ್ವಾಣಿಯೂ ಬೇಕು ಮೋದಿಯೂ ಬೇಕು. ಹೊಸಬರಿಗೆ ಅವಕಾಶ ತಪ್ಪು ಎ೦ದು ನಾನು ಹೇಳುತ್ತಿಲ್ಲ. ಆದರೆ ಹಿರಿಯರ ಮಾಗ೯ದಶ೯ನ ಅಗತ್ಯ ಅಲ್ಲವೇ? ಡಿ.ವಿ.ಜಿ. ಅವರೇ ಹೇಳಿಲ್ಲವೇ "ಹೊಸ ಚಿಗುರು ಹಳೇ ಬೇರು ಕೂಡಿರಲು ಮರ ಸೊಬಗು" ಎ೦ದು. (ನಾಗಾನಂದ ಪಿ.ಎಸ್.)

ಒಳ್ಳೇದು ಆಗ್ಬೇಕು ಅಂದ್ರೆ ಆಗೇ ಆಗತ್ತೆ

ಒಳ್ಳೇದು ಆಗ್ಬೇಕು ಅಂದ್ರೆ ಆಗೇ ಆಗತ್ತೆ

ಇದರಿಂದ ಪಕ್ಷಕ್ಕೆ (ಬಿಜೆಪಿಗೆ) ಒಳ್ಳೆಯದಾಗುವುದಿಲ್ಲ. ಆದರೆ ಹೇಳ್ತೀನಿ, ಒಳ್ಳೇದು ಆಗ್ಬೇಕು ಅಂದ್ರೆ ಒಳ್ಳೇದು ಆಗೇ ಆಗುತ್ತದೆ. ಸೋ, ಮೋದಿಯನ್ನು ಬೆಂಬಲಿಸಿ (ಭಾಸ್ಕರ್ ಸಿ.ಪಿ.)

ಅಡ್ವಾಣಿಜೀ ಈ ರೀತಿ ನಾಟಕವಾಡಬಾರದಿತ್ತು

ಅಡ್ವಾಣಿಜೀ ಈ ರೀತಿ ನಾಟಕವಾಡಬಾರದಿತ್ತು

ಮಹಾನ್ ಮೇದಾವಿಯೆಂದು ದೇಶದ ಜನರಿಂದ ಹೊಗಳಿಸಿಕೊಂಡಿದ್ದ ಅಡ್ವಾಣಿಜೀ ಈ ರೀತಿಯ ನಾಟಕವಾಡಬಾರದಿತ್ತು. ಇದು ಅವರ ಅವಿವೇಕತನವನ್ನು ತೋರಿಸುತ್ತದೆ. ಆದರೂ ಕನಸುಗಾರ ಪ್ರಗತಿ ಸಾಧಕನಾದ ಮೋದಿಗೆ ಯಾವುದೇ ಹಿನ್ನಡೆಯಾಗದು. (ಧರ್ಮರಾಜ್, ತುಮಕೂರು)

ಉಬ್ಬು ಹಲ್ಲಿನವನ ಮಾತು ಕೇಳಿ...

ಉಬ್ಬು ಹಲ್ಲಿನವನ ಮಾತು ಕೇಳಿ...

ಅಡ್ವಾಣೀಜಿ .. ನೀವು ಉಬ್ಬು ಹಲ್ಲಿನವನ ಮಾತು ಕೇಳಿ ಯಡಿಯೂರಪ್ಪಗೆ ಹಿಂಸೆ ಕೊಟ್ಟು ಇಳಿಸಿದಿರಿ.. ಈಗ ಅದರ ಫಲ ಉಣ್ಣಿ.. ಮೋದಿ ವಿಷಯದಲ್ಲೂ ಹಾಗೆ ಮಾಡಬೇಡಿ, ದೇಶಕ್ಕೆ ಒಬ್ಬ ಒಳ್ಳೆಯ ಪಿಎಂ ಸಿಗುವ ಅವಕಾಶ ತಪ್ಪಿಸಬೇಡಿ. (ಪ್ರಮೋದ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+