• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನಿತ್ಯಾನಂದ ಪ್ರಕರಣ, ಅರಿಯಬೇಕಾದ ಸತ್ಯ

By * ಶ್ರೀಧರ ಕೆದ್ಲಾಯ, ಉಡುಪಿ
|
ಕಳೆದ ಎರಡು ವಾರಗಳಿಂದ ಬಿಡದಿಯ ನಿತ್ಯಾನಂದನ ವಿರುದ್ಧ ಆರೋಪ-ಪ್ರತ್ಯಾರೋಪರೋಪಗಳು ಕೇಳಿ ಧಾರಾವಾಹಿ ರೂಪದಲ್ಲಿ ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಮೇಲೆ ಕನ್ನಡ ಪರ ಸಂಘಟನೆಗಳು, ಮಹಿಳಾ ಸಂಘಟನೆಗಳು ಹೋರಾಟದಲ್ಲಿ ಪಾಲ್ಗೊಂಡಿದ್ದವು.

ಆದರೆ, ಹಿಂದೂ ಧರ್ಮ ರಕ್ಷಕರಾದ ಪ್ರಮೋದ್ ಮುತಾಲಿಕ್ ಅವರು ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಶಾಂತವೀರ ಸ್ವಾಮೀಜಿ ಅವರನ್ನು ಹೊರತುಪಡೆಸಿ ಉಳಿದ ಎಲ್ಲಾ ಪ್ರಮುಖ ಸ್ವಾಮೀಜಿಗಳು ನಿತ್ಯಾನಂದನ ಅಸಲಿ ಸತ್ಯ ಬಹಿರಂಗಪಡಿಸಿ ಹಿಂದೂ ಧರ್ಮ ಎತ್ತಿ ಹಿಡಿಯಬೇಕಿದೆ ಎಂದಿದ್ದಾರೆ.

ಪ್ರಮೋದ್ ಮುತಾಲಿಕ್ ಮಾತ್ರ ಖಾಸಗಿ ವಾಹಿನಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ. ಹಿಂದೂ ಸ್ವಾಮೀಜಿಯ ಕೊಳಕು ತೋರಿಸಿರುವ ಸುದ್ದಿ ವಾಹಿನಿಗಳು ಅದೇ ಒಬ್ಬ ಮುಲ್ಲಾ, ಒಬ್ಬ ಪಾದ್ರಿಯ ಕಾಮಕಾಂಡವನ್ನು ಇದೇ ರೀತಿ ಸಿರೀಯಲ್ ಆಗಿ ತೋರಿಸಲಿ ನೋಡೋಣ ಎಂದು ಸವಾಲೆಸೆದಿದ್ದಾರೆ.

ಆದರೆ, ನಿತ್ಯಾನಂದನನ್ನು ನಾನು ಸಮರ್ಥಿಸುತ್ತಿಲ್ಲ. ಆತ ತಪ್ಪು ಮಾಡಿದ್ದರೆ ಕಾನೂನಿನ ಮೂಲಕ ಹೋರಾಟ ನಡೆಸಬೇಕಿದೆ ಎಂದು ಮುತಾಲಿಕ್ ಹೇಳಿದ್ದಾರೆ.

ಕಾನೂನಿನ ಕತೆ ವ್ಯಥೆ: ನಿತ್ಯಾನಂದನ ಮೇಲೆ ಅತ್ಯಾಚಾರ, ಗಲಭೆ, ಶಾಂತಿ ಭಂಗ ಮುಂತಾದ ಪ್ರಕರಣ ದಾಖಲಿಸಿದ್ದ ಪೊಲೀಸರಿಗೆ ಇದೆಲ್ಲವೂ ಜಾಮೀನು ಸಿಗಬಹುದಾದ ಕೇಸ್ ಎಂದು ತಿಳಿದಿಲ್ಲವೇ?

ಆಶ್ರಮದಲ್ಲಿ ಮಾದಕದ್ರವ್ಯ, ಕಾಂಡೋಮ್ ಸಿಕ್ಕಿದ್ದು ನಿಜವಾದರೆ, ಸರಿಯಾದ ಸಾಕ್ಷಿ ಇದ್ದು ಕೂಡಾ ಮಾದಕ ದ್ರವ್ಯ ನಿಯಂತ್ರಣ ಕಾಯ್ದೆಯಡಿಯಲ್ಲಿ ಪ್ರಕರಣ ಏಕೆ ದಾಖಲಿಸಲಿಲ್ಲ?

ಅತ್ಯಾಚಾರ ಪ್ರಕರಣ ಬದಲು, ಆರತಿ ರಾವ್ ಅವರ ಹೇಳಿಕೆ ಆಧಾರದ ಮೇಲೆ ಅತ್ಯಾಚಾರ ಪ್ರಯತ್ನ ಪ್ರಕರಣ ಏಕೆ ದಾಖಲಿಸಲಿಲ್ಲ?

ಅಸಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರತಿ ರಾವ್ ಅವರನ್ನು ಇನ್ನೂ ಏಕೆ ವಿಚಾರಣೆಗೆ ಒಳಪಡಿಸಿಲ್ಲ. ನಾಪತ್ತೆಯಾದ ಆರತಿ ರಾವ್ ಖಾಸಗಿ ವಾಹಿನಿ ಸ್ಟುಡಿಯೋ ದಾರಿ ಮಾತ್ರ ಮರೆತಿಲ್ಲ.

ಐದಾರು ವರ್ಷ ಮನೆ, ಗಂಡ ಬಿಟ್ಟು, ನಿತ್ಯಾನಂದನ ಆಶ್ರಮ ಸೇರಿದ ಆರತಿ ಅವರ ಹೇಳಿಕೆ ನಂಬುವುದಾದರೂ ಹೇಗೆ? ಎಷ್ಟು ಕಾಲ ಸುಮ್ಮನಿದ್ದದ್ದು ಏಕೆ? ಪೊಲೀಸರಿಗೆ ದೂರು ನೀಡಲು ಭಯ ಕಾರಣವೇ?

ಈ ನಡುವೆ ಕೋರ್ಟಿನಲ್ಲೂ ನಿತ್ಯಾನಿಗೆ ಕೊನೆಗೂ ಜಾಮೀನು ಮಂಜೂರಾಗಿದೆ. ಮಧುರೈಗೆ ತೆರಳಿದ ನಿತ್ಯಾಗೆ ಅಧೀನಂ ಪೀಠದಲ್ಲಿ ಭರ್ಜಯಾಗಿ ಸ್ವಾಗತಿಸಲಾಗಿದೆ. 'ಒಂದು ವರ್ಷದವರೆಗೆ ಇಲ್ಲಿ ಶಾಂತಿ ಕದಡುವ ಕೆಲಸ ಮಾಡಬಾರದು' ಎಂದು ಷರತ್ತು ವಿಧಿಸಲಾಗಿದೆ. ನಂತರ ಗಲಾಟೆ ಮಾಡಿದರೆ ಏನು ಕತೆ?

ತಮಿಳುನಾಡು ಮೂಲದ ನಿತ್ಯಾನಂದ ಅಲಿಯಾಸ್ ರಾಜಶೇಖರ ಎಂಬ ವ್ಯಕ್ತಿ ಸುಮಾರು 6 ಕೋಟಿಗೂ ಅಧಿಕ ಕನ್ನಡಿಗರ ಪ್ರತಿನಿಧಿಯಾಗಿರುವ ಮುಖ್ಯಮಂತ್ರಿ ಸದಾನಂದ ಗೌಡರ ವಿರುದ್ಧವೇ ಮಾನನಷ್ಟ ಮೊಕದ್ದಮೆ ಹೂಡುವುದೆಂದರೆ ಸ್ವಾಭಿಮಾನಿ ಕನ್ನಡಿಗರಿಗೆ ಸಹಿಸಲು ಅಸಾಧ್ಯ.

ರಾಜ್ಯದಲ್ಲಿ ಇಂತಹ ಸನ್ಯಾಸಿಗಳು ಇವನೊಬ್ಬನೇ ಅಲ್ಲ, ಇನ್ನೂ ಕೆಲವರಿದ್ದಾರೆ. ಆದರೆ, ಇಂಥ ಕಪಟಿಗಳ ಬೆನ್ನ ಹಿಂದೆ ರಾಜಕಾರಣಿಗಳ ನೆರವಿನ ಹಸ್ತ ಸದಾ ಇರುತ್ತದೆ ಎಂಬುದು ಮರೆಯುವಂತಿಲ್ಲ.ಆದರೆ, ಪೊಲೀಸರೂ ಕೂಡಾ ಕಾನೂನಿನ ನೆರವಿಲ್ಲದೆ ಪ್ರಭಾವಿ ಸ್ವಾಮೀಜಿಗಳನ್ನು ಮಟ್ಟ ಹಾಕಲು ಸಾಧ್ಯವಿಲ್ಲ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಸ್ವಾಮಿ ನಿತ್ಯಾನಂದ ಸುದ್ದಿಗಳುView All

English summary
Swami Nithyananda is a fake Godman and he should be given capital punishment so that other Dongi swamiji's will learn a lesson or two. Police probe has become so weak that Nithyananda dare to challenge chief Minister of Karnataka.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more