ಹೆಂಡತಿಗೆ ಸಂಬಳ : ದುಡಿಯುವ ಗಂಡಂದಿರ ತಳಮಳ

ಈ ಕುರಿತು ಪ್ರಕಟವಾದ ಲೇಖನಕ್ಕೆ ವ್ಯಂಗ್ಯ, ಆಕ್ರೋಶ, ತಮಾಷೆಭರಿತ ಪ್ರತಿಕ್ರಿಯೆಗಳನ್ನು ನೀಡಿರುವ ಓದುಗರು, ಕೇಂದ್ರ ಸರಕಾರವನ್ನು ತುಘಲಕ್ ಸರಕಾರಕ್ಕೆ ಹೋಲಿಸಿದ್ದು, ಇಂಥ ಕಾನೂನ್ನು ಕೇಂದ್ರ ಯುಪಿಎ ಸರಕಾರವೇನಾದರೂ ತಂದರೆ ಅದರ ಬುಡಕ್ಕೆ ಕೊಡಲಿ ಏಟು ಬೀಳಲಿದೆ ಮತ್ತು ಇದು ಸಂಸಾರವೆಂಬ ದೋಣಿಯನ್ನು ಬಿರುಗಾಳಿಗೆ ಸಿಲುಕಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಅಲ್ರೀ, ಇವರಿಗೇನಾದರೂ ತಲೆ ಇದೆ ಏನ್ರೀ. ತಿಂಗಳ ಎಲ್ಲ ಸಂಬಳವನ್ನು ತೆಗೆದುಕೊಂಡು ಹೋಗಿ ಹೆಂಡತಿ ಕೈಯಲ್ಲಿ ಕೊಡ್ತೀನಿ. ಅವಳೇ ನನಗೆ ಪಾಕೆಟ್ ಮನಿ ಅಂತ ಕೊಡ್ತಿದ್ದಾಳೆ. ಅಂಥದ್ದರಲ್ಲಿ ಅವಳಿಗೆ ಸಂಬಳ ಬೇರೆ ಕೊಡಬೇಕಾ? ಇವರೇನು ತಮಾಷೆ ಮಾಡ್ತಾ ಇದ್ದಾರಾ? ಸಂಸಾರದ ಬಗ್ಗೆ ಕಾನೂನು ರಚಿಸುವವರಿಗೇನಾದರೂ ಗೊತ್ತಾ? ಇಂಥ ಕಾನೂನು ತರುವ ಮೊದಲು ನಮ್ಮಂಥವರನ್ನು ಏನಾದರೂ ಕೇಳಿದ್ದಾರಾ?" ಅಂತ ಆಟೋ ಚಾಲಕ ನಾಗರಾಜು ಅವರು ವ್ಯಕ್ತಪಡಿಸಿದ್ದಾರೆ.
ಗಿರೀಶ್ ನಂಜನಗೂಡು ಎಂಬುವವರು, "ನಿಬಿರು (ಪ್ರಳಯ) ಬಂದ ಮೇಲೆ ಹೆಂಡತಿಗೆ ಸಂಬಳ ಕೊಟ್ಟರಾಯಿತು" ಎಂದು ವ್ಯಂಗ್ಯವಾಗಿ ಹೇಳಿದ್ದರೆ, ಸುರೇಶ್ ನಟರಾಜನ್ ಎಂಬುವವರು, "ಇಂಥ ಕೆಲಸಕ್ಕೆ ಬಾರದ ಕಾನೂನು ತರಲು ಸರಕಾರಕ್ಕೆ ಸಮಯವಿದೆ. ಆದರೆ, ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಸಹಾಯವಾಗುವ ಲೋಕಪಾಲ ಮಸೂದೆ ಮಂಡಿಸಲು ಸಮಯವಿಲ್ಲ" ಎಂದು ವ್ಯಂಗ್ಯಭರಿತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರವಿ ಎಂಬುವವರು, "ಇಂದಿನ ದಿನದಲ್ಲಿ ಹೆಂಡತಿ ಪೂರ್ತಿಯಾಗಿ ಮನೆಗೆಲಸ ಎಲ್ಲಿ ಮಾಡ್ತಾಳೆ. ಮನೆಗೆಲಸದವರನ್ನು ಇಟ್ಟುಕೊಂಡಿರುತ್ತಾರೆ. ಅಡುಗೆಮನೆ ಕೆಲಸ ಮಾಡಲು ಅತ್ತೆ (ಅಮ್ಮ) ಇರುತ್ತಾಳೆ. ಇನ್ನು ಹೆಂಡತಿ ಪಿಚ್ಚರು, ಕ್ಲಬ್ಬು, ಪಾರ್ಟಿಗಳಂತ ಟೈಂ ಪಾಸ್ ಮಾಡುತ್ತಿರುತ್ತಾರೆ. ಸಂಬಳ ಕೊಡಬೇಕಿದ್ದರೆ ಅಮ್ಮನಿಗೆ ಕೊಡಬೇಕೇ ಹೊರತು ಹೆಂಡತಿಗಲ್ಲ" ಎಂದು ಎಲ್ಲ ಗಂಡಂದಿರ ಪ್ರತಿನಿಧಿಯಂತೆ ಮಾತನಾಡಿದ್ದಾರೆ.
ಡಿ.ಪಿ. ಕೋಡಿ ಎಂಬ ಫೇಸ್ ಬುಕ್ ಸ್ನೇಹಿತರು, "ಈ ಕಾನೂನು ಜಾರಿಗೆ ತಂದರೆ ದಾಂಪತ್ಯದಲ್ಲಿ ಬಿರುಕು ಬೀಳುವುದರಲ್ಲಿ ಸಂದೇಹವಿಲ್ಲ. ಇದರಿಂದಾಗಿ ವಿಚ್ಛೇದನಕ ಕೇಸುಗಳು ಕೂಡ ಜಾಸ್ತಿಯಾಗುವ ಸಾಧ್ಯತೆಯಿದೆ. ಇದು ಹುಚ್ಚಾಟಿಗೆಯ ಕಾನೂನು. ಇದನ್ನು ನಾನು ಸರ್ವಥಾ ಒಪ್ಪುವುದಿಲ್ಲ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜೋಕ್ ಮಾಡುತ್ತಿಲ್ಲ ತಾನೆ? ಸಂಸಾರ ಹೇಗೆ ಸಾಗಿಸಿಕೊಂಡು ಹೋಗಬೇಕು ಎಂಬುದನ್ನು ಅವರವರಿಗೇ ಬಿಡಬೇಕೇ ಹೊರತು ಸರಕಾರ ಮೂಗು ತೂರಿಸಬಾರದು." ಎಂದು ಚಾಟಿ ಬೀಸಿದ್ದಾರೆ.
"ಮನೆಯಲ್ಲಿ ದುಡಿಯುವ ಹೆಂಡತಿಗೆ ಬೇಕಾದಷ್ಟು ಹಣವನ್ನು ಕೊಡಬೇಕಾಗಿರುವುದು ಗಂಡನ ಧರ್ಮ. ಅದನ್ನು ನಾವು ಕೊಟ್ಟೇ ಕೊಡುತ್ತೇವೆ. ಸರಕಾರ ಹೇಳಿದ್ದಕ್ಕಿಂತ ಹೆಚ್ಚಿಗೆಯೇ ಕೊಡುತ್ತೇವೆ. ಆದರೆ, ಈ ಕಾನೂನಿನ ಹಿಂದೆ ಯಾವುದೇ ತರ್ಕವಿಲ್ಲ. ಇದು ಪ್ರಾಕ್ಟಿಕಲ್ ಕೂಡ ಅಲ್ಲ. ಇದರಿಂದ ಅನವಶ್ಯಕ ಭಿನ್ನಾಭಿಪ್ರಾಯಗಳು ಉದ್ಭವವಾಗುವುದರಲ್ಲಿ ಸಂದೇಹವಿಲ್ಲ" ಎಂದು ವಿನಯ್ ಶಿರಸಿ ಎಂಬ ಸ್ನೇಹಿತರೊಬ್ಬರು ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೇಂದ್ರ ಸರಕಾರಕ್ಕೆ ಗಂಡ ಹೆಂಡತಿಗೆ ಸಂಬಳದ ಶೇ.10ರಿಂದ 20ರಷ್ಟು ಹಣವನ್ನು ಸಂಬಳವಾಗಿ ನೀಡಬೇಕು ಎಂದು ಶಿಫಾಸರು ಮಾಡಿದೆ. ಕೇಂದ್ರ ಸಚಿವ ಸಂಪುಟದ ಮುಂದೆ ಈ ಕರಡುಪ್ರತಿ ಮಂಡನೆಗೆ ಸಿದ್ಧವಾಗಿದೆ. ಸಂಬಳವನ್ನು ಹೆಂಡತಿಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಶಿಫಾಸರು ಮಾಡಿದೆ.
ಹೊರಗಡೆ ಕೆಲಸ ಮಾಡುವ ಅನೇಕ ಗಂಡಂದಿರು ಮನೆಯಲ್ಲಿ ಕೆಲಸ ಮಾಡುವ ತಮ್ಮ ಹೆಂಡತಿಗೆ ಅಗತ್ಯವಿದ್ದಷ್ಟು ಹಣವನ್ನು ನೀಡುವುದು ಎಷ್ಟು ನಿಜವೋ, ಅಗತ್ಯವಿದ್ದಷ್ಟು ಹಣ ನೀಡದೆ ಹೆಂಡತಿಯನ್ನು ಸತಾಯಿಸಿ ಆಕೆಯ ಜೀವನವನ್ನು ನಾಯಿಪಾಡು ಮಾಡುವ ಗಂಡಂದಿರು ಇರುವುದೂ ಅಷ್ಟೇ ಸತ್ಯ. ಹಣವನ್ನೂ ಉಳಿಸಿಕೊಳ್ಳುತ್ತ ಸಂಸಾರವನ್ನು ಸುಗಮವಾಗಿ ಸಾಗಿಸಿಕೊಂಡು ಹೋಗುವ ಜಾಣ್ಮೆ ಗಂಡಸಿಗಿಂತ ಹೆಂಡತಿಗೆ ಜಾಸ್ತಿ ಎಂಬುದನ್ನು ಅನೇಕರು ಒಪ್ಪುತ್ತಾರೆ. ಆದರೆ, ಸರಕಾರ ತರಲು ಉದ್ದೇಶಿಸಿರುವ ಕಾನೂನಿನಿಂದ ಸಂಸಾರದ ತೊಡಕುಗಳಿಗೆ ಪರಿಹಾರ ದೊರಕಿಸಿಕೊಡಲು ಸಾಧ್ಯವೆ? ಇದಕ್ಕೆ ಮನೆಯಲ್ಲಿ ದುಡಿಯುವ ಹೆಂಡತಿಯರು ಏನು ಹೇಳುತ್ತಾರೆ?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications