ಹೆಂಡ್ತಿಗೆ ಇನ್ಮುಂದೆ ಗಂಡನೇ ಸಂಬಳ ನೀಡ್ಬೇಕು

Housewife likely to get definite amount of salary from husband
ನವದೆಹಲಿ, ಸೆ 6: ಮನೆಯ ಯಜಮಾನಿಯರಿಗೆ ಇದೊಂದು ಸಂತಸದ ಸುದ್ದಿ. ಇನ್ನು ಮುಂದೆ ಗಂಡಂದಿರು ತಮ್ಮ ಪತ್ನಿಯರಿಗೆ ಕಡ್ಡಾಯವಾಗಿ ಮಾಸಿಕ ಲೆಕ್ಕಾಚಾರದಲ್ಲಿ ಸಂಬಳ ನೀಡುವ ಪದ್ದತಿ ಸದ್ಯದಲ್ಲೇ ಜಾರಿಗೆ ಬರಬಹುದು.

ಈ ಸಂಬಂಧ, ಕೇಂದ್ರ ಮಹಿಳಾ ಮತ್ತು ಮಕ್ಕಳ ಇಲಾಖೆ ಈ ಪದ್ಧತಿ ಜಾರಿಗೆ ತರುವಂತೆ ಕೇಂದ್ರ ಸಚಿವ ಸಂಪುಟಕ್ಕೆ ಶಿಫಾರಸು ಮಾಡಿದೆ.

ಮನೆ ಗೃಹಿಣಿಯರು ಗಂಡ ಹೊರಗೆ ದುಡಿದು ಬಂದರೆ ಇವರು ಮನೆಯ ಕೆಲಸ ಕಾರ್ಯಗಳಲ್ಲಿ ಕಷ್ಟ ಪಟ್ಟು ದುಡಿಯುತ್ತಾರೆ. ಅಲ್ಲದೆ ಗಂಡನ ಎಲ್ಲಾ ಅಗತ್ಯಗಳನ್ನು ಪೂರೈಸುತ್ತಾರೆ. ಹೀಗಿರುವಾಗ ಹೆಂಡತಿಯರಿಗೆ ಗಂಡನೇ ತಿಂಗಳು ತಿಂಗಳು ಸಂಬಳ ನೀಡಬೇಕೆಂದು ಶಿಫಾರಸಿನಲ್ಲಿ ತಿಳಿಸಿದೆ.

ಇದಕ್ಕಾಗಿ ಹೊಸದೊಂದು ಮಸೂದೆಯನ್ನು ಸಿದ್ದಪಡಿಸಿರುವ ಇಲಾಖೆ ಮಸೂದೆಯ ಕರಡು ಪ್ರತಿಯನ್ನು ಈಗಾಗಲೇ ಸಿದ್ದಪಡಿಸಿಕೊಂಡಿದೆ. ಶೀಘ್ರದಲ್ಲೇ ಇದನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಮಸೂದೆಯನ್ನು ಮುಂದಿಡಲಿದೆ ಎಂದು ವರದಿಯಾಗಿದೆ.

ಪ್ರತಿ ತಿಂಗಳು ಗಂಡ, ಹೆಂಡತಿಯ ಅಕೌಂಟ್ ಗೆ ತನ್ನ ಸಂಬಳದ ಶೇ.10 ರಿಂದ 20ರಷ್ಟು ಠೇವಣಿ ರೂಪದಲ್ಲಿ ಜಮಾ ಮಾಡಬೇಕು. ಜವಾನನಿಂದ ಹಿಡಿದು ಮಾಲೀಕರ ವರೆಗೆ ಎಲ್ಲಾ ವರ್ಗದ ಪುರುಷರು ಇದನ್ನು ಪಾಲಿಸಬೇಕು. ಹೆಂಡತಿಯ ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆ ತೆರೆಯಬೇಕೆಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳೆಯರ ಅಭಿವೃದ್ದಿ ಇಲಾಖೆಯ ಆದ್ಯ ಕರ್ತವ್ಯ. ಸರಕಾರ ಈ ಬಗ್ಗೆ ಚಿಂತಿಸುತ್ತಿದೆ, ಕೇಂದ್ರ ಮಹಿಳಾ ಮತ್ತು ಮಕ್ಕಳ ಆಯೋಗ ಕರಡು ಪ್ರತಿ ಸಿದ್ದ ಪಡಿಸಿದೆ. ಆದಷ್ಟು ಬೇಗ ಈ ಮಸೂದೆಗೆ ಸಚಿವ ಸಂಪುಟದಿಂದ ಅಂಗೀಕಾರ ಪಡೆಯಲಾಗುವುದು ಎಂದು ಇಲಾಖೆಯ ಸಚಿವ ಕೃಷ್ಣ ತಿರತ್ ಹೇಳಿಕೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+