• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೆಂಗಳೂರಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಲ್ಲ

By * ಅಮರನಾಥ್ ಶಿವಶಂಕರ್, ಬೆಂಗಳೂರು
|
Kannadigas Population Bangalore
ಕರ್ನಾಟಕದ ರಾಜಧಾನಿಯಲ್ಲಿ ಕನ್ನಡಿಗರು ಕಮ್ಮಿ, ಕನ್ನಡ ಮಾತನಾಡುವವರ ಸಂಖ್ಯೆ ಕಮ್ಮಿ ಎನ್ನುವ ಮಾತುಗಳು ಬಹಳಷ್ಟು ಬಾರಿ ಚರ್ಚೆಗೆ ಒಳಗಾಗಿದ್ದುಂಟು. ನಮ್ಮ ಬುದ್ದಿಜೀವಿಗಳೂ ಬೆಂಗಳೂರಿನಲ್ಲಿ ಶೇಕಡವಾರು 30ರಷ್ಟು ಮಾತ್ರ ಕನ್ನಡಿಗರು ಎನ್ನುವ ಮಾತನ್ನೂ ಆಡಿದ್ದುಂಟು.

ಎಲ್ಲರೂ ಶೇಕಡಾ ಲೆಕ್ಕಾಚಾರದ ಮೂಲಕ ಈ ಮಾತು ಹೇಳುವುದಕ್ಕೆ ಕಾರಣ ಇಲ್ಲದ್ದಿಲ್ಲ. ಅದು 2001ರಲ್ಲಿ ನಡೆದ ಭಾಷಾವಾರು ಜನಗಣತಿ. ನಮ್ಮ ಭಾರತ ದೇಶದ ಜನಗಣತಿ, ಕೇಂದ್ರ ಅಥವಾ ರಾಜ್ಯ ಸರಕಾರ ನಡೆಸುವ ಸಮೀಕ್ಷೆಗಳು ಎಷ್ಟರ ಮಟ್ಟಿಗೆ ಕರಾರುವಾಕ್ ಆಗಿ ಇರುತ್ತದೆ ಎನ್ನುವುದು ನಮಗೆಲ್ಲಾ ತಿಳಿದ ವಿಚಾರ.

ಹಾಗಾದರೆ ಬೆಂಗಳೂರು ಮಾರುಕಟ್ಟೆಯಲ್ಲಿ ಕನ್ನಡದ ಸ್ಥಿತಿಗತಿ ಹೇಗಿದೆ, ಕನ್ನಡದ ಬಳಕೆ ಹೇಗಿದೆ, ಅಂಕಿ ಅಂಶಗಳು ಕನ್ನಡದ ಪರವಾಗಿ ಇದೆಯೋ ಇಲ್ಲವೋ ಎನ್ನುವುದನ್ನು ಎರಡು ರೀತಿಯ ವೈಜ್ಞಾನಿಕ ಸರ್ವೇ ಮೂಲಕ ಕಂಡುಕೊಳ್ಳಬಹುದು ಎನ್ನುವುದು ನನ್ನ ವಾದ. ಅದು ಹೇಗೆಂದರೆ

1.ರೇಡಿಯೋ ಕೇಳುಗರ ಸಂಖ್ಯೆ

ಇತ್ತೀಚಿನ ಮಾಹಿತಿ ಪ್ರಕಾರ ನಗರದಲ್ಲಿ ಸುಮಾರು 11 ರೇಡಿಯೋ ಸ್ಟೇಶನ್ ಗಳಿವೆ. ಅದರಲ್ಲಿ ಕನ್ನಡ ಹಾಡುಗಳ ಪ್ರಸಾರಕ್ಕಾಗಿ ಮಾತ್ರ ಮೀಸಲಾಗಿರುವ ಸ್ಟೇಶನ್ ಗಳೆಂದರೆ ರೇಡಿಯೋ ಸಿಟಿ, ರೇಡಿಯೋ ಮಿರ್ಚಿ, ಬಿಗ್ ಎಫ್.ಎಂ ಮತ್ತು ರೆಡ್ ಎಫ್.ಎಂ. ಇನ್ನು ಸರಕಾರ ಸ್ವಾಮ್ಯದ ಎರಡು ರೇಡಿಯೋ ಸ್ಟೇಶನ್ ಗಳಾದ ರೈನ್ ಬೋ ಮತ್ತು ವಿವಿಧಭಾರತಿ ದಿನದ ಅರ್ಧದಷ್ಟು ಕನ್ನಡ ಪ್ರೋಗ್ರಾಮ್ ಗಾಗಿ ಮೀಸಲಾಗಿರುತ್ತವೆ.

ಇದರಲ್ಲಿ ಕನ್ನಡ ಹಾಡುಗಳನ್ನೇ ಪ್ರಸಾರ ಮಾಡುವ ಸ್ಟೇಶನ್ ಗಳ RAM ರೇಟಿಂಗ್ ಶೇ.78 .5 ಮತ್ತು ಇತರ ಎರಡು ವಾಹಿನಿಗಳ RAM ಶೇ.5ರಷ್ಟು ಅಂದರೆ ಒಟ್ಟಾರೆ ಕನ್ನಡ ಹಾಡುಗಳನ್ನು ಕೇಳುವವರ ಸಂಖ್ಯೆ ಶೇ. 82ರಷ್ಟು.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ:

2. ದಿನಪತ್ರಿಕೆ ಓದುಗರ ಸಂಖ್ಯೆ

ಬೆಂಗಳೂರಿನಲ್ಲಿ ಮಾರಾಟವಾಗುವ ಪ್ರಮುಖ ದಿನಪತ್ರಿಕೆಗಳ ಸರ್ಕ್ಯುಲೇಶನ್ ಲೆಕ್ಕಕ್ಕೆ ತೆಗೆದುಕೊಂಡರೆ ಶೇ. 61 ಮಂದಿ ಕನ್ನಡ ದಿನಪತ್ರಿಕೆ ಓದುವವರಿದ್ದಾರೆ. ಪ್ರಮುಖ ದೈನಿಕಗಳಾದ ವಿಜಯ ಕರ್ನಾಟಕ, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿ ಪತ್ರಿಕೆಗಳ ಒಟ್ಟಾರೆ ಓದುಗರ ಸಂಖ್ಯೆ ಸುಮಾರು 16 ಲಕ್ಷ.

ಇಂಗ್ಲಿಷ್ ಓದುಗರ ಸಂಖ್ಯೆ ಸುಮಾರು 9 ಲಕ್ಷ. ಈ 9 ಲಕ್ಷದಲ್ಲಿ ಇಂಗ್ಲಿಷ್ ಪೇಪರ್ ಓದುವ ಹವ್ಯಾಸ ಇಟ್ಟುಕೊಂಡಿರುವ ಕನ್ನಡಿಗರೂ ಇದ್ದಾರೆ ಎನ್ನುವುದು ಗಮನಿಸ ಬೇಕಾದ ಅಂಶ.

ಈ ಎರಡು ಲೆಕ್ಕಾಚಾರವನ್ನು ಗಣನೆಗೆ ತೆಗೆದುಕೊಂಡರೆ ಬೆಂಗಳೂರಿನಲ್ಲಿ ವಾಸವಾಗಿರುವವರು ಹೆಚ್ಚಿನವರು ಕನ್ನಡಿಗರೇ ಹೊರತು ವಲಸಿಗರಲ್ಲ. ಇನ್ನು ಐಟಿ ಉದ್ಯೋಗಕ್ಕಾಗಿ ಬಂದಿರುವ ವಲಸಿಗರು ನೆಲೆಸಿರುವ ಕೆಲವು ಬಡಾವಣೆಗಳನ್ನು ಹೊರತುಪಡಿಸಿದರೆ ಬೆಂಗಳೂರಿನಲ್ಲಿ ಕನ್ನಡಿಗರೇ ಡಾಮಿನೇಟೆಡ್.

ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ: (ಸೆಪ್ಟಂಬರ್ 30, 2011ರ ವರೆಗಿನ ಮಾಹಿತಿಯ ಪ್ರಕಾರ)
ಸಿರಿಗನ್ನಡಂ ಗೆಳ್ಗೆ, ಸಿರಿಗನ್ನಡಂ ಬಾಳ್ಗೆ.. ಜೈ ಭುವನೇಶ್ವರಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಕನ್ನಡ ಸುದ್ದಿಗಳುView All

English summary
Nearly 70 per cent of the population in Bangalore is from other states. They all could unite and easily take over the capital, if they wish to and make Kannadigas a minority once MM Chandru but that is not true says this report by Amarnath Shivashankar

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more