• search
For Quick Alerts
ALLOW NOTIFICATIONS  
For Daily Alerts

  ಶೀಘ್ರದಲ್ಲೇ ಸಂಪುಟ ವಿಸ್ತರಣೆ ಎಂಬ ಸುಳ್ಳು ಸುದ್ದಿ

  By * ಶ್ರೀಧರ ಕೆದ್ಲಾಯ, ಉಡುಪಿ
  |
  ಶೀಘ್ರದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುವುದು ಎಂಬುದಾಗಿ ರಾಜ್ಯದ ಮುಖ್ಯಮಂತ್ರಿ ಡಿವಿಎಸ್ ಕಳೆದ 3-4 ತಿಂಗಳುಗಳಿಂದ ಹೇಳುತ್ತಾ ಬಂದಿದ್ದಾರೆ. ಆದರೆ ಇಷ್ಟರತನಕ ಸಂಪುಟ ವಿಸ್ತರಣೆ ಆಗಿಲ್ಲದಿರುವುದು ನಿಜಕ್ಕೂ ವಿಪರ್‍ಯಾಸ. ರಾಜ್ಯದ ಆಡಳಿತ ಯಂತ್ರ ಚಲಿಸಲು ಈಗಲೂ ಮಾಜಿ ಮುಖ್ಯಮಂತ್ರಿಗಳ ಮೇಲೆ ಆಧಾರವಾಗಿರುವುದು ಎಷ್ಟರಮಟ್ಟಿಗೆ ಸರಿ?

  ಚಿಕ್ಕಮಗಳೂರು ಕ್ಷೇತ್ರ ಚುನಾವಣೆ ಮುಗಿದ ನಂತರ ಪಕ್ಷದ ಹೈಕಮಾಂಡ್ ಜತೆ ಚರ್ಚೆ ನಡೆಸಲಾಗುವುದು ಮತ್ತು ಸಂಪುಟ ವಿಸ್ತರಣೆಮಾಡಲಾಗುವುದು ಎಂದು ಹೇಳಿದ್ದರು. ಇಷ್ಟರ ತನಕ ನೆರವೇರಲಿಲ್ಲ. ಕಾರಣ ಬಿಜೆಪಿಯಲ್ಲಿ ನಾಯಕತ್ವ ಬಿಕ್ಕಟ್ಟು ಹಾಗೂ ಇನ್ನಿತರ ಸಮಸ್ಯೆಗಳಿಂದ ಎಂದು ಹೇಳಿದರೂ ತಪ್ಪಿಲ್ಲ.

  ಮುಖ್ಯಮಂತ್ರಿ ಸದಾನಂದ ಗೌಡರು ಒಟ್ಟು 20ಕ್ಕೂ ಅಧಿಕ ಖಾತೆಗಳ ಭಾರ ಹೊರೆಲಾರದೆ ಹೈಕಮಾಂಡ್ ಮೊರೆ ಹೋದರೂ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕೋರ್ಟ್ ವ್ಯಾಜ್ಯಗಳು ಮುಗಿದ ಮೇಲೆ ಸಂಪುಟ ವಿಸ್ತರಣೆ ಎಂದು ವರಿಷ್ಠರು ಹೇಳಿರುವುದು ಅಚ್ಚರಿ ಮೂಡಿಸುತ್ತದೆ.

  ಏ.27ಕ್ಕೆ ಸಚಿವ ಸಂಪುಟ ವಿಸ್ತರಣೆಯಂತೆ ಎಂದು ಹೇಳಿದ್ದರು. ಆದ್ರೆ, ಅದೂ ಸಾಧ್ಯವಾಗಿಲ್ಲ. ಅತ್ತ ಲೋಕಾಯುಕ್ತ ಉಪಲೋಕಾಯುಕ್ತ ನೇಮಕಾತಿಯ ಪರಿಸ್ಥಿತಿಯೂ ಹಾಗೆ. ಎಲ್ಲಾ ವಿಳಂಬವೇ. ನಿವೃತ್ತ ನ್ಯಾಯಾಧೀಶರುಗಳ ಪೈಕಿ ಹೈಕೋರ್ಟ್ ರಚಿಸಿರುವ ನೂತನ ಮಾನದಂಡಗಳಂತೆ ಅರ್ಹವಾದ ಲೋಕಾಯುಕ್ತ ನೇಮಿಸಲು ಸಾಧ್ಯವಿಲ್ಲವೇ?

  ಸರ್ಕಾರದ ವಿಳಂಬ ನೀತಿ ಯಾಕೆ ? ಪಕ್ಷದ ಆಂತರಿಕ ಸಮಸ್ಯೆಗಳಿಗೆ ಜನಸಾಮಾನ್ಯರಿಗೆ ಏಕೆ ಅನ್ಯಾಯ ಮಾಡಬೇಕು. ಹಲವು ತಿಂಗಳುಗಳಿಂದ ನಮ್ಮ ಮಂತ್ರಿಮಂಡಲದ ಸ್ಥಾನಗಳು ಕುಗ್ಗಿ ಮುಖ್ಯಮಂತ್ರಿ ಅವರ ಹಿಡಿತದಲ್ಲಿ ಹಲವಾರು ಮುಖ್ಯವಾದ ಖಾತೆಗಳಿವೆ. ಇವೆಲ್ಲವನ್ನು ಹಂಚಿ ತಾನು ಆ ಎಲ್ಲಾ ಜವಾಬ್ದಾ ರಿ ಗಳಿಂದ ಮುಕ್ತಿ ಹೊಂದಿ ರಾಜ್ಯದ ಜನರಿಗೆ ಉತ್ತಮ ಆಡಳಿತವನ್ನು ಒದಗಿಸುವುದು ನ್ಯಾಯಸಮ್ಮತವಲ್ಲವೇ ?

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Why DV Sadananda Gowda and BJP is depended on SC verdict on Yedddyurappa. How it is related to Karnataka cabinet expansion? Ultimately public are suffering from BJP crisis and internal chaos

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more